Trending Video : ಓಡಾಡೋವಾಗ ಮೊಬೈಲ್ ಬಳಸ್ತಿದ್ರೆ ಈ ವಿಡಿಯೋ ನೋಡ್ಲೇ ಬೇಕು!
ಮೊಬೈಲ್ ಬಳಸೋದು ಈಗ ಕಾಮನ್. ಕುಳಿತಲ್ಲಿ ನಿಂತಲ್ಲಿ ಎಲ್ಲರೂ ಮೊಬೈಲ್ ಬಳಕೆ ಮಾಡ್ತಾರೆ. ಹಾಗಂತ ಎಲ್ಲೆಲ್ಲೋ ಮೊಬೈಲ್ ಬಳಸಿದ್ರೆ ಯಡವಟ್ಟಾಗುತ್ತೆ. ಈ ವಿಡಿಯೋ ನೋಡಿದ್ರೆ ನಿಮಗೆ ಗೊತ್ತಾಗುತ್ತೆ.
ದೆಹಲಿ ಪೊಲೀಸರು ವಿವಿಧ ವಿಷಯಗಳ ಕುರಿತು ಜಾಗೃತಿ ಅಭಿಯಾನ ನಡೆಸುತ್ತಿದ್ದಾರೆ. ಪೊಲೀಸರು ಆಗಾಗ್ಗೆ ವಿಡಿಯೋ ಸಂದೇಶಗಳ ಮೂಲಕ ಜನರನ್ನು ಎಚ್ಚರಿಸುತ್ತಲೇ ಇರುತ್ತಾರೆ. ಕೆಲವು ದಿನಗಳ ಹಿಂದೆ, ದೆಹಲಿ ಸೇರಿದಂತೆ ಎನ್‌ಸಿಆರ್‌ನ ರಸ್ತೆಗಳಲ್ಲಿ ಸ್ಟಂಟ್ ಮಾಡುವ ಅನೇಕ ವೀಡಿಯೊಗಳು ವೈರಲ್ ಆಗಿದ್ದವು. ಸ್ಟಂಟ್ ಗಳಿಂದ ಏನೆಲ್ಲ ಆಪತ್ತು ಎದುರಾಗುತ್ತದೆ ಎನ್ನುವ ಬಗ್ಗೆ ದೆಹಲಿ ಪೊಲೀಸರು ವೀಡಿಯೊ ಸಂದೇಶವನ್ನು ನೀಡಿದ್ದರು. ಇದೀಗ ರಸ್ತೆಯಲ್ಲಿ ಸಂಚರಿಸುವಾಗ ಮೊಬೈಲ್ ಬಳಸುವವರಿಗಾಗಿ ಪೊಲೀಸರು ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ. 32 ಸೆಕೆಂಡ್‌ಗಳ ವಿಡಿಯೋದಲ್ಲಿ ದೆಹಲಿ ಪೊಲೀಸರು ಒಟ್ಟು 13 ಕಿರು ತುಣುಕುಗಳನ್ನು ಸೇರಿಸಿದ್ದಾರೆ.
ಮೊಬೈಲ್ (Mobile) ಬಳಕೆ ಬಗ್ಗೆ ಜಾಗೃತೆಯಿರಲಿ: ಪ್ರಸ್ತುತ, ಜನರು ತಮ್ಮ ಸ್ಮಾರ್ಟ್‌ಫೋನ್‌ನಿಂದ ಒಂದು ನಿಮಿಷ ಕೂಡ ದೂರವಿರೋದಿಲ್ಲ. ಪ್ರತಿ ನಿಮಿಷಕ್ಕೊಮ್ಮೆ ಮೊಬೈಲ್ ಸ್ಕ್ರೋಲ್ ಮಾಡಿ ನೋಡೋರಿದ್ದಾರೆ. ಮೊಬೈಲ್ ನಲ್ಲಿ ಮಹತ್ವದ ಸಂದೇಶ ಬಂದಿರಲಿ ಬಿಡಲಿ, ಸಾಮಾಜಿಕ ಜಾಲತಾಣ ವೀಕ್ಷಣೆ ಅಥವಾ ಬೇರೆಯವರೊಂದಿಗೆ ಚಾಟ್ ಮಾಡ್ತಾ ಜನರು ಸಮಯ ಮರೆಯುತ್ತಾರೆ. ಬರೀ ಸಮಯ ಮರೆತಿದ್ರೆ ಪರವಾಗಿಲ್ಲ, ಸ್ಮಾರ್ಟ್ಫೋನ್ ನಿಂದ ಜನರು ತಾವೆಲ್ಲಿದ್ದೇವೆ ಎಂಬುದನ್ನು ಕೂಡ ಮರೆತಿರುತ್ತಾರೆ.
ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್: ಇನ್ಮುಂದೆ 50 ರೂ.ಗೆ ಸಿಗುತ್ತೆ ಭರ್ಜರಿ ಊಟ, ನೀರಿಗೆ ಜಸ್ಟ್ 3 ರೂ !
ಈಗಿನ ದಿನಗಳಲ್ಲಿ ಮಕ್ಕಳಿಂದ ಹಿಡಿದು ಮಧ್ಯವಯಸ್ಸಿನ ಬಹುತೇಕ ಎಲ್ಲರೂ ಮೊಬೈಲ್ ಇಲ್ಲವೆಂದ್ರೆ ಜೀವ ಬಿಡ್ತಾರೆ. ಆಹಾರ ಸೇವಿಸುವಾಗ, ರಸ್ತೆಯಲ್ಲಿ ನಡೆಯುವಾಗ, ವಾಹನ ಚಲಾಯಿಸುವಾಗ, ವಸ್ತುಗಳ ಖರೀದಿ ವೇಳೆ, ಅಡುಗೆ ಮಾಡುವಾಗ ಹೀಗೆ ಎಲ್ಲೆಂದರಲ್ಲಿ ಮೊಬೈಲ್ ಬಳಕೆ ಮಾಡ್ತಿದ್ದಾರೆ. ಒಂದು ಕಡೆ ಕುಳಿತು ಮೊಬೈಲ್ ವೀಕ್ಷಣೆ ಮಾಡೋದು ಬೇರೆ, ರಸ್ತೆ (Road) ಯಲ್ಲಿ ನಡೆದಾಡುವಾಗ ಮೊಬೈಲ್ ಬಳಕೆ ಮಾಡೋದು ಬೇರೆ. ಮೊಬೈಲ್ ನೋಡ್ತಾ ರಸ್ತೆಯಲ್ಲಿ ಹೋಗ್ತಿದ್ದರೆ ಅಪಾಯ ಗ್ಯಾರಂಟಿ. ಮುಂದೆ ಏನಿದೆ, ಯಾರು ಬರ್ತಿದ್ದಾರೆ ಎಂಬುದು ನಮ್ಮ ಗಮನದಲ್ಲಿರೋದಿಲ್ಲ. ಹಾಗಾಗಿ ಅಪಘಾತ (Accident) ಸಂಭವಿಸುತ್ತದೆ. ನೀವೇ ಎಷ್ಟೋ ಬಾರಿ ಕಾಲು ಎಡವಿರಬಹುದು ಇಲ್ಲವೆ ಯಾರಿಗೋ ಡಿಕ್ಕಿ ಹೊಡೆದಿರಬಹುದು, ಮೊಬೈಲ್ ನೋಡುವ ಭರದಲ್ಲಿ ಅಂಗಡಿಯವನಿಂದ ಚಿಲ್ಲರೆ ಪಡೆಯದೆ ಬಂದಿರಬಹುದು, ದೆಹಲಿ ಪೊಲೀಸರು ಪೋಸ್ಟ್ ಮಾಡಿರುವ ವಿಡಿಯೋದಲ್ಲೂ ಇದೇ ವಿಷ್ಯವನ್ನು ನಾವು ಕಾಣ್ಬಹುದು.
Personality Tips:ಬದಲಾವಣೆ ಒಪಿಕ್ಕೊಳ್ಳಬಹುದು ಅಂದ್ರೆ ಈ ಗುಣಗಳಿರುತ್ತೆ ನಿಮ್ಮಲ್ಲಿ!
ದೆಹಲಿ ಪೊಲೀಸರು ಪೋಸ್ಟ್ ಮಾಡಿರುವ ವಿಡಿಯೋದ ಮೊದಲ ತುಣುಕಿನಲ್ಲಿ ಯುವಕನೊಬ್ಬ ತನ್ನ ಫೋನ್ ನೋಡುತ್ತಾ ನಡೆದುಕೊಂಡು ಹೋಗುವಾಗ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾನೆ. ಎರಡನೇ ವೀಡಿಯೋದಲ್ಲಿ ವ್ಯಕ್ತಿಯೋರ್ವ ಫೋನ್ ಬಳಸುವಾಗ ಎದುರಿಗಿದ್ದ ಗಟಾರಕ್ಕೆ ಬೀಳ್ತಾನೆ. ಮತ್ತೊಂದರಲ್ಲಿ ಇಬ್ಬರು ಡಿಕ್ಕಿ ಹೊಡೆದುಕೊಳ್ತಾರೆ. ಹೀಗೆ ಮೊಬೈಲ್ ನೋಡ್ತಾ ನಡೆಯುವ ಜನರ ಸ್ಥಿತಿ ಹೇಗೆಲ್ಲ ಆಗಿದೆ ಎಂಬ ವಿಡಿಯೋವನ್ನು ಇದು ಒಳಗೊಂಡಿದೆ. ಈ ವಿಡಿಯೋವನ್ನು ದೆಹಲಿ ಪೊಲೀಸರು ಟ್ವೀಟ್ ಮಾಡಿದ್ದಾರೆ. ದೆಹಲಿ ಪೊಲೀಸ್ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ಹೇ ಬ್ರದರ್... ಸುಮ್ಮನೆ ಇದನ್ನೊಮ್ಮೆ ನೋಡಿ, ಇಲ್ಲದಿದ್ದರೆ ಸುದ್ದಿ ಮಾತ್ರ ತಲುಪುತ್ತದೆ, ನೀವಲ್ಲ ಎಂದು ಶೀರ್ಷಿಕೆ ಹಾಕಲಾಗಿದೆ.
ಇದಕ್ಕೆ ಅನೇಕ ಬಳಕೆದಾರರು ಕಮೆಂಟ್ ಕೂಡ ಮಾಡಿದ್ದಾರೆ. ಇದು ಒಳ್ಳೆ ಸಂದೇಶವೆಂದು ಕೆಲವರು ಹೇಳಿದ್ರೆ, ಮತ್ತೆ ಕೆಲವರು ವಿಡಿಯೋ ತಮಾಷೆಯಾಗಿದೆ ಎಂದಿದ್ದಾರೆ. ಇನ್ನೂ ಅನೇಕರು ದೆಹಲಿಯಲ್ಲಿರುವ ಸಮಸ್ಯೆಗಳನ್ನು ಕಮೆಂಟ್ ಮೂಲಕ ಪೊಲೀಸರಿಗೆ ತಿಳಿಸುವ ಯತ್ನ ಮಾಡಿದ್ದಾರೆ. ಇತ್ತೀಚೆಗಷ್ಟೇ ದೆಹಲಿ ಪೊಲೀಸರು ಬೈಕ್ ಸ್ಟಂಟ್ ಮಾಡುತ್ತಿದ್ದ ವೇಳೆ ದಂಪತಿ ರಸ್ತೆಯಲ್ಲಿ ಬಿದ್ದಿರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದರು. ಸ್ಟಂಟ್ ಮಾಡಿದ್ರೆ ಜೀವ ಹೋಗಬಹುದು, ಸ್ಟಂಟ್ ಮಾಡಬೇಡಿ ಎಂದು ಮನವಿ ಮಾಡಿದ್ದರು.