ಮನೆಯನ್ನು ಸರಿಯಾಗಿ ಪೇಂಟ್ ಮಾಡದಿದ್ದರೆ, ಭವಿಷ್ಯದಲ್ಲಿ ಅದು ಕಿತ್ತು ಬರುವ ಸಾಧ್ಯತೆ ಹೆಚ್ಚು. ಪೇಂಟ್ ಮಾಡುವಾಗ ಈ ತಪ್ಪುಗಳನ್ನು ತಪ್ಪಿಸಬಹುದು.
ಪೇಂಟ್ ಅನ್ನು ಅತಿಯಾಗಿ ಬಳಸಬೇಡಿ. ಇದಕ್ಕೆ ನಿಖರವಾದ ಅಳತೆ ಇರಬೇಕು. ಟೆಕ್ಸ್ಚರ್ ಸರಿಯಾಗಿಲ್ಲದಿದ್ದರೆ ಪೇಂಟ್ ಕಿತ್ತು ಹೋಗುವ ಸಾಧ್ಯತೆಯಿದೆ.
ಸರಿಯಾದ ರೀತಿಯಲ್ಲಿ ಪೇಂಟ್ ಮಾಡಲು, ಅದಕ್ಕೆ ಬೇಕಾದ ಉಪಕರಣಗಳು ಇರಬೇಕು. ಬ್ರಷ್, ರೋಲರ್ ಸೇರಿದಂತೆ ಎಲ್ಲಾ ಉಪಕರಣಗಳು ಇವೆಯೇ ಎಂದು ಖಚಿತಪಡಿಸಿಕೊಳ್ಳಿ.
ಚೆನ್ನಾಗಿ ಬೆಳಕಿರುವ ಸಮಯದಲ್ಲಿ ಮಾತ್ರ ಪೇಂಟ್ ಮಾಡಬೇಕು. ಪೇಂಟ್‌ನ ಬಣ್ಣವು ನೈಸರ್ಗಿಕ ಬೆಳಕಿನಲ್ಲಿ ಕಾಣುವಂತೆ ಕೃತಕ ಬೆಳಕಿನಲ್ಲಿ ಕಾಣುವುದಿಲ್ಲ.
ಎಲ್ಲಾ ಭಾಗಗಳನ್ನು ಒಟ್ಟಿಗೆ ಪೇಂಟ್ ಮಾಡಲು ಗಮನಹರಿಸಿ. ಇಲ್ಲದಿದ್ದರೆ ಇದು ಮನೆಗೆ ಅಂದಗೆಡಿಸಬಹುದು.
ಮೊದಲ ಕೋಟ್ ಪೇಂಟ್ ಸಂಪೂರ್ಣವಾಗಿ ಒಣಗುವ ಮೊದಲು ಎರಡನೇ ಕೋಟ್ ಹಚ್ಚಬೇಡಿ. ಇದು ಪೇಂಟ್ ಸರಿಯಾಗಿ ಅಂಟಿಕೊಳ್ಳುವುದನ್ನು ತಡೆಯುತ್ತದೆ.
ಸರಿಯಾಗಿ ಸ್ವಚ್ಛಗೊಳಿಸದೆ ಗೋಡೆಗೆ ಪೇಂಟ್ ಮಾಡುವುದನ್ನು ತಪ್ಪಿಸಿ. ಭವಿಷ್ಯದಲ್ಲಿ ಪೇಂಟ್ ಕಿತ್ತು ಬರಲು ಇದು ಕಾರಣವಾಗಬಹುದು.
ಸಣ್ಣ ತಪ್ಪುಗಳು ಕೂಡ ಪೇಂಟ್ ಕಿತ್ತು ಬರಲು ಕಾರಣವಾಗುತ್ತವೆ. ಆದ್ದರಿಂದ ಫಿನಿಶಿಂಗ್ ಮಾಡುವಾಗ ವಿಶೇಷ ಗಮನ ಹರಿಸಬೇಕು. ಉತ್ತಮ ಪೇಂಟ್ ಫಿನಿಶ್‌ಗಳನ್ನು ಆಯ್ಕೆ ಮಾಡಿ.
ರಾತ್ರಿ ಬೆಡ್ ಸಮಸ್ಯೆ ಅರ್ಥಮಾಡುತ್ತಿಲ್ಲ ಬಾಯ್‌ಫ್ರೆಂಡ್, ಪರಿಹಾರ ಕೇಳಿದ ಯುವತಿ
ರಾತ್ರಿ ಚೆನ್ನಾಗಿ ನಿದ್ರೆ ಬರಲು ಇಲ್ಲಿವೆ 6 ಸೂಪರ್ ಫುಡ್ಸ್!
ಪ್ರತಿ ಸೀರೆಗೂ ಸ್ಟೈಲಿಶ್, ಫ್ಯಾಶನಬಲ್ ಲುಕ್ ನೀಡುವ ಬ್ಯಾಕ್ ಬ್ಲೌಸ್ ಡಿಸೈನ್ಸ್
ಸ್ವೀಟ್ ಬಾಕ್ಸ್‌ಗೆ ಇರುವೆ ಮುತ್ತಿಕೊಂಡ್ರೆ ಓಡಿಸಲು ಇಲ್ಲಿದೆ ಸಿಂಪಲ್ ಟ್ರಿಕ್ಸ್