Asianet Suvarna News Asianet Suvarna News

Personality Tips:ಬದಲಾವಣೆ ಒಪಿಕ್ಕೊಳ್ಳಬಹುದು ಅಂದ್ರೆ ಈ ಗುಣಗಳಿರುತ್ತೆ ನಿಮ್ಮಲ್ಲಿ!

ಬದಲಾವಣೆಯನ್ನು ಸುಲಭವಾಗಿ ಸ್ವೀಕಾರ ಮಾಡುವುದು ಎಲ್ಲರಿಂದಲೂ ಸಾಧ್ಯವಿಲ್ಲದ ಮಾತು. ಈಸಿಯಾಗಿ ಬದಲಾವಣೆ ಒಪ್ಪಿಕೊಳ್ಳುವುದಕ್ಕೂ ಒಂದಿಷ್ಟು ದೊಡ್ಡತನ ಬೇಕು. ಹಾಗೂ ಅದರಿಂದ ನೆಮ್ಮದಿಯೂ ಲಭಿಸುತ್ತದೆ. 
 

People who have adoptable mind to change have these qualities
Author
First Published Jul 19, 2023, 6:01 PM IST

“ಬದಲಾವಣೆ ಜಗದ ನಿಯಮʼ ಎಂದು ಶ್ರೀಕೃಷ್ಣ ಪರಮಾತ್ಮ ಗೀತೋಪದೇಶದಲ್ಲಿ ಹೇಳಿದ್ದಾನೆ. ಆದರೇನು ಮಾಡುವುದು? ಬದಲಾವಣೆಯನ್ನು ಸುಲಭದಲ್ಲಿ ಒಪ್ಪಿಕೊಳ್ಳಲು ಸಾಧ್ಯವೇ ಆಗುವುದಿಲ್ಲ. ಕೆಲವರಂತೂ ಶತಾಯಗತಾಯ ಬದಲಾವಣೆಯನ್ನು ಒಪ್ಪಿಕೊಳ್ಳುವುದಿಲ್ಲ. ಬದಲಾಗುತ್ತ ಸಾಗುವುದು ತೀರ ಅನಿವಾರ್ಯವೆಂದಾಗ ಮಾತ್ರ ಅದನ್ನು ಅನುಸರಿಸುತ್ತಾರೆಯೇ ಹೊರತು ಬದಲಾಗುತ್ತ ನಾವೂ ಬೆಳೆಯೋಣ ಎಂದು ಯೋಚಿಸುವುದಿಲ್ಲ. ದೊಡ್ಡ ಗಾತ್ರದ ಫೈಲ್‌ ಗಳಲ್ಲಿ ಬರೆದುಕೊಳ್ಳುವ ಪದ್ಧತಿ ಹೋಗಿ ಕಂಪ್ಯೂಟರ್‌ ಗಳಲ್ಲಿ ಟೈಪಿಸುವ ಕಾಲ ಬಂದಾಗ ಬೈದುಕೊಳ್ಳುತ್ತ ಕೆಲಸ ಮಾಡುತ್ತಿದ್ದರಲ್ಲ, ಅವರಂತೆಯೇ ಇಂದಿಗೂ ಸಾಕಷ್ಟು ಜನ ಕಾಣಲು ಸಿಗುತ್ತಾರೆ. ಅಷ್ಟೇ ಏಕೆ? ನಾವೂ ಸಹ ಎಷ್ಟೋ ಬದಲಾವಣೆಗಳನ್ನು ಈಸಿಯಾಗಿ ಒಪ್ಪುವುದಿಲ್ಲ. ಮನೆಯ ವ್ಯವಸ್ಥೆಯಿಂದ ಹಿಡಿದು, ವ್ಯಕ್ತಿತ್ವ, ಸಮಯದ ಪರಿಪಾಲನೆಯವರೆಗೆ ಎಲ್ಲವೂ ಹೇಗಿರೋಬೇಕೋ ಹಾಗಿರಬೇಕು ಎನ್ನುತ್ತೇವೆ. ಅಂದರೆ, ಬದಲಾವಣೆಯನ್ನು ಸ್ವೀಕಾರ ಮಾಡುವ ಮನಸ್ಥಿತಿ ಕೂಡ ಮಹೋನ್ನತವಾಗಿರುವಂತಹುದು. ಅದಕ್ಕೆ ಭಾರೀ ಸಾಮರ್ಥ್ಯ ಬೇಕು. ಶಕ್ತಿಶಾಲಿಯಾದ ಆತ್ಮಸ್ಥೈರ್ಯ, ಉನ್ನತ ವಿಚಾರಗಳು ಬೇಕು. ಹೀಗಾಗಿ, ಬದಲಾವಣೆಯನ್ನು ಒಪ್ಪಿಕೊಳ್ಳುವವರಲ್ಲಿ ಸಾಮಾನ್ಯವಾಗಿ ಕೆಲವು ಉನ್ನತ ಗುಣಗಳು ಕಂಡುಬರುತ್ತವೆ. ನೀವೂ ಈ ಸಾಲಿಗೆ ಸೇರಿದ್ದೀರಾದರೆ ಭಾರೀ ಉತ್ತಮ.

•    ಹೊಸ ಅವಕಾಶಕ್ಕೆ (New Opportunity) ತೆರೆದ ಮನಸ್ಸು
ಸಾಕಷ್ಟು ಜನ ಬದಲಾವಣೆಯನ್ನು (Change) ಬಯಸುತ್ತಾರೆ. ಹೊಸ ಅವಕಾಶಗಳಿಗೆ ಸದಾ ಮುಕ್ತ ಮನಸ್ಥಿತಿ ಹೊಂದಿರುತ್ತಾರೆ. ಇದ್ದಲ್ಲಿಯೇ ಸಿಲುಕದೆ ಹೊಸ ಅವಕಾಶಗಳಿಗೆ ಸಾಗುವುದು ಪ್ರಗತಿಗೆ (Development) ಅಗತ್ಯ ಎನ್ನುವುದನ್ನು ಅರಿತಿರುತ್ತಾರೆ. ಕಳೆದುಹೋದ ದಿನಗಳನ್ನೇ ಮೆಲುಕು ಹಾಕುತ್ತ ಕೂರುವುದು ಅಪಾಯಕಾರಿ ಎನ್ನುವುದನ್ನು ಅರಿತಿರುತ್ತಾರೆ.

Personality Tips: ಭಾರೀ ಬದಲಾವಣೆಗೆ ನಿಮ್ ಮನಸ್ಸು ಸಿದ್ಧವಾಗಿದ್ಯಾ? ಅದನ್ನ ಅರಿಯೋದು ಹೇಗೆ?

•    ಸೋಲನ್ನು ಸಕಾರಾತ್ಮಕವಾಗಿ (Healthy) ನೋಡುವುದು
ಹಲವು ಜನ ಬದಲಾವಣೆಯನ್ನು ಯಾಕಾಗಿ ಸ್ವೀಕಾರ ಮಾಡುವುದಿಲ್ಲ ಎಂದರೆ, ಅವರಲ್ಲಿ ಸೋಲಿನ (Failure) ಭಯ (Fear) ಅಗಾಧವಾಗಿರುತ್ತದೆ. ಹಿನ್ನಡೆಯ ಹಿಂಜರಿಕೆ ಕಾಡುತ್ತದೆ. ಆದರೆ, ಬದಲಾವಣೆಗೆ ಸಿದ್ಧವಾಗಿರುವ ಜನರಲ್ಲಿ ಈ ಭಯ ಕಾಣುವುದಿಲ್ಲ. ತಮ್ಮ ಸೋಲನ್ನೂ ಸಹ ಅವರು ಸಕಾರಾತ್ಮಕವಾಗಿ ಪರಿಗಣಿಸುವ ಬುದ್ಧಿ ಹೊಂದಿರುತ್ತಾರೆ. ಒಂದೊಮ್ಮೆ ಸೋಲಾದರೆ, ಮತ್ತೊಂದು ಅವಕಾಶಕ್ಕಾಗಿ ನೋಡುತ್ತಾರೆಯೇ ಹೊರತು ಹಿಂದೇಟು ಹಾಕುವುದಿಲ್ಲ.

•    ಪರಿಹಾರ (Solutions) ಹುಡುಕುವುದರಲ್ಲಿ ಸಂತಸ
ಸಮಸ್ಯೆಗಳ (Problems) ಬಗ್ಗೆಯೇ ಮಾತನಾಡುತ್ತಿರುವುದಕ್ಕಿಂತ ಪರಿಹಾರ ಕ್ರಮಗಳ ಬಗ್ಗೆ ಯೋಚಿಸಿ, ಅವುಗಳನ್ನು ಜಾರಿಗೆ ತರುವುದು ಹೆಚ್ಚು ಸಮಂಜಸ. ಅನೇಕ ಜನ ಈ ಧೋರಣೆ (Mentality) ಹೊಂದಿದ್ದು, ಸಮಸ್ಯೆಗಳ ಪರಿಹಾರದ ಕುರಿತು ಯೋಚಿಸುತ್ತಾರೆ. ಬೇರೆ ಮಾರ್ಗಗಳಲ್ಲಿ ಸಾಗುವುದೇ ಪರಿಹಾರವೆಂದಾದರೆ ಅದಕ್ಕೆ ಸದಾಕಾಲ ಸಿದ್ಧವಾಗಿರುತ್ತಾರೆ.

•    ಸಂಗತಿಗಳನ್ನು ವ್ಯಕ್ತಿಗತವಾಗಿ (Personally) ನೋಡುವುದಿಲ್ಲ
ಯಾರೊಂದಿಗೋ ನಿಮ್ಮ ಭೇಟಿ ನಿಗದಿಯಾಗಿದ್ದು, ಕೊನೆಯ ಕ್ಷಣದಲ್ಲಿ ಅವರು ಏಕಾಏಕಿ, ಮುನ್ಸೂಚನೆ ಕೊಡದೆ ಅದನ್ನು ಕ್ಯಾನ್ಸಲ್‌ ಮಾಡಿದರೆ ಹೇಗೆ ಭಾವಿಸುತ್ತೀರಿ? ಏನೋ ಕಸಿವಿಸಿಯಾಗುವುದು ಸಹಜ. ಆದರೆ, ಕೆಲವರು ಇದನ್ನೇ ದೊಡ್ಡದು ಮಾಡಿ, ಇನ್ನು ಯಾವತ್ತೂ ಅವರ ಭೇಟಿಗೆ ಯತ್ನಿಸುವುದಿಲ್ಲ ಎನ್ನುವ ತೀರ್ಮಾನಕ್ಕೆ ಬಂದುಬಿಡುತ್ತಾರೆ ಅಥವಾ ಅವರ ಬಗ್ಗೆ ಕೋಪಿಸಿಕೊಳ್ಳಲೂಬಹುದು. ಆದರೆ, ಬದಲಾವಣೆಯನ್ನು ಸ್ವೀಕರಿಸುವ (Accept) ಜನ ಹಾಗಲ್ಲ. “ನಾನೇನು ದೇವರಾ? ಎಲ್ಲವೂ ಅಂದುಕೊಂಡ ಹಾಗೆಯೇ ನಡೆಸುವುದಕ್ಕೆ? ಅವರಿಗೇನೋ ಸಮಸ್ಯೆ ಉಂಟಾಗಿರಬಹುದು. ಏನಾಯ್ತು ಎಂದು ಮೊದಲು ವಿಚಾರಿಸೋಣʼ ಎಂದುಕೊಂಡು ತಣ್ಣಗಿರುತ್ತಾರೆ. 

ನೀವು ತಿನ್ನೋ ಸ್ಟೈಲ್ ನಿಮ್ಮ ಪರ್ಸನಾಲಿಟಿ ಹೆಂಗಿದೆ ಅಂತ ಹೇಳುತ್ತೆ!

•    ಮುಕ್ತ ಮನಸ್ಥಿತಿ (Open Mind)
ಬಹಳಷ್ಟು ಜನ ಯಾವುದಾದರೂ ಕೆಲಸ ಮಾಡುವ ಉತ್ತಮ ಮಾರ್ಗವೊಂದನ್ನು ಗುರುತಿಸಿಕೊಂಡಿರುತ್ತಾರೆ. ಹೆಚ್ಚೆಂದರೆ ಎರಡು. ಒಂದೊಮ್ಮೆ ಮೊದಲ ಪ್ಲಾನಿಂಗ್ (Planning) ಸಾಧ್ಯವಾಗಲಿಲ್ಲವೋ ಮತ್ತೊಂದು. ಹೆಚ್ಚಿನ ಆಯ್ಕೆಗಳನ್ನು ಅವರು ಪರಿಗಣಿಸುವುದೂ ಇಲ್ಲ. ಆದರೆ, ಬದಲಾವಣೆಯನ್ನು ಒಪ್ಪಿಕೊಳ್ಳುವ ಜನ ಮುಕ್ತ ಮನಸ್ಥಿತಿ ಹೊಂದಿದ್ದು, ಹಲವಾರು ಸಾಧ್ಯತೆಗಳ ಬಗ್ಗೆ ಯೋಚನೆ ಮಾಡುತ್ತಾರೆ ಹಾಗೂ ಯಾವುದು ಸೂಕ್ತವೆನಿಸುತ್ತದೆಯೋ ಅದರಂತೆ ನಡೆಯುತ್ತಾರೆ.


 

Follow Us:
Download App:
  • android
  • ios