ಬೆದರಿಸೋ ಅಪ್ಪ ಬದಲಾಗುತ್ತಿದ್ದಾನೆ, ಅಮ್ಮ ಆಗುತ್ತಿದ್ದಾನೆ ಈಗಿನ ಡ್ಯಾಡ್...
1982ರ ಸಮಯದಲ್ಲಿ ಶೇ.43ರಷ್ಟು ತಂದೆಯರು ತಾವು ಎಂದಿಗೂ ಮಗುವಿನ ಚಡ್ಡಿ ಬದಲಿಸಿಲ್ಲ ಎಂದು ಒಪ್ಪಿಕೊಳ್ಳುತ್ತಾರೆ. ಈಗ ಹೀಗೆ ಡೈಪರ್ ಚೇಂಜ್ ಮಾಡದ ಅಪ್ಪಂದಿರ ಸಂಖ್ಯೆ ಶೇ.3ರಕ್ಕೆ ಇಳಿದಿದೆ. ಇದು ಬಹಳ ಸಂತಸದ ವಿಷಯ, ಏಕೆಂದರೆ ತಂದೆಯು ಮಗುವಿನ ಡೈಪರ್ ಬದಲಿಸಿ, ಬಟ್ಟೆ ಹಾಕಿ, ಸ್ನಾನ ಮಾಡಿಸುವುದರಿಂದ ತಂದೆ ಹಾಗೂ ಮಗುವಿನ ಸಂಬಂಧ ಚೆನ್ನಾಗಿರುತ್ತದೆ.
ಹಿಂದಿನ ಅಪ್ಪಂದಿರ ಐಡೆಂಟಿಟಿ ಇದ್ದದ್ದೇ ಅಷ್ಟು, ಹುಟ್ಟಿಸುವುದು ಬಿಟ್ಟರೆ ದುಡಿದು ತಂದು ಹಾಕುವುದು. ಮಕ್ಕಳೊಂದಿಗೆ ಆಡುವ ಅಪ್ಪನಿಗಿಂತ, ಮಕ್ಕಳನ್ನು ಹೆದರಿಸುವ, ಹೊಡೆಯುವ ಅಪ್ಪನೇ ಹಲವು ಮಧ್ಯವಯಸ್ಕರ ನೆನಪಿನಲ್ಲಿರುವುದು. ತಮ್ಮೊಂದಿಗೆ ಅಪ್ಪ ಆಡಿದ, ಹಾಡಿದ, ಹರಟಿದ, ಕಲಿಸಿದ ನೆನಪು ಅಪರೂಪವೇ ಸರಿ. ಆದರೆ, ಈಗಿನ ಅಪ್ಪಂದಿರು ಹಾಗಲ್ಲ. ಅವರು ಹಿಂದಿನವರಿಗಿಂತ ಮೂರು ಪಟ್ಟು ಹೆಚ್ಚಾಗಿ ಮಕ್ಕಳೊಂದಿಗೆ ಸಮಯ ಕಳೆಯುತ್ತಾರೆ ಎಂದು ಸಂಶೋಧನೆ ತಿಳಿಸಿದೆ. ಇದರಿಂದ ಮಕ್ಕಳು ಪ್ರಪಂಚವನ್ನು ನೋಡುವ ದೃಷ್ಟಿ, ತಮ್ಮನ್ನು ತಾವು ನೋಡಿಕೊಳ್ಳುವ ದೃಷ್ಟಿಕೋನ ಕೂಡಾ ಬದಲಾಗಿದೆ. ಇಂದಿನ ತಂದೆಯರು ಬೆಸ್ಟ್ ಅಷ್ಟೇ ಅಲ್ಲ, ಅವರು ಇಷ್ಟ ಬಂದ ರೀತಿಯ ತಂದೆಯಾಗಲು ಸಮಾಜವೂ ಅವಕಾಶ ಮಾಡಿಕೊಟ್ಟಿದೆ.
ತಾಯಿಯಷ್ಟೇ ಸಮಾನ ಸ್ಥಾನದ ಬಯಕೆ
ಎರಡು ತಲೆಮಾರಿನ ಹಿಂದಿನ ತಂದೆಯರಿಗಿಂತ ಇಂದಿನ ತಂದೆಯರು ಪೇರೆಂಟಿಂಗ್ ಜವಾಬ್ದಾರಿಯನ್ನು ಹೆಚ್ಚು ಗಂಭೀರವಾಗಿ ಪರಿಗಣಿಸಿದ್ದು, ಮಕ್ಕಳೊಂದಿಗೆ ಮೂರು ಪಟ್ಟು ಹೆಚ್ಚು ಸಮಯ ಕಳೆವ ಜೊತೆಗೆ, ತಾಯಿಯಂತೆ ಮಕ್ಕಳ ಕೆಲಸಗಳನ್ನೂ ಮಾಡುತ್ತಾರೆ. ಹಾಗಾಗಿ, ಅವರು, ತಾಯಿಯಷ್ಟೇ ಸಮಾನ ಸ್ಥಾನವನ್ನು ಮಕ್ಕಳಿಂದ ಬಯಸುತ್ತಾರೆ. 1982ರ ಸಮಯದಲ್ಲಿ ಶೇ.43ರಷ್ಟು ತಂದೆಯರು ತಾವು ಎಂದಿಗೂ ಮಗುವಿನ ಚಡ್ಡಿ ಬದಲಿಸಿಲ್ಲ ಎಂದು ಒಪ್ಪಿಕೊಳ್ಳುತ್ತಾರೆ. ಈಗ ಹೀಗೆ ಡೈಪರ್ ಚೇಂಜ್ ಮಾಡದ ಅಪ್ಪಂದಿರ ಸಂಖ್ಯೆ ಶೇ.3ರಕ್ಕೆ ಇಳಿದಿದೆ. ಇದು ಬಹಳ ಸಂತಸದ ವಿಷಯ, ಏಕೆಂದರೆ ತಂದೆಯು ಮಗುವಿನ ಡೈಪರ್ ಬದಲಿಸಿ, ಬಟ್ಟೆ ಹಾಕಿ, ಸ್ನಾನ ಮಾಡಿಸುವುದರಿಂದ ತಂದೆ ಹಾಗೂ ಮಗುವಿನ ಸಂಬಂಧ ಚೆನ್ನಾಗಿರುತ್ತದೆ. ಅದು ಇಂದಿನ ಅಪ್ಪಂದಿರಿಗೂ ಗೊತ್ತು. ಆದರೂ ಕೂಡಾ ತಾಯಿಯಷ್ಟು ಸಮಯ ನೀಡಲಾಗುತ್ತಿಲ್ಲ ಎಂಬುದನ್ನು ಒಪ್ಪಿಕೊಳ್ಳುವ ಇಂದಿನ ಅಪ್ಪಂದಿರು, ತಮ್ಮ ಅಪ್ಪಂದಿರು ತಮಗೆ ನೀಡಿದ್ದಕ್ಕಿಂತ ಶೇ.30ರಷ್ಟು ಹೆಚ್ಚಿನ ಸಮಯವನ್ನು ಮಕ್ಕಳಿಗಾಗಿ ನೀಡುತ್ತಿದ್ದಾರೆ. ಶೇ.30ರಷ್ಟು ಹೆಚ್ಚಿಗೆ ಮಕ್ಕಳ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.
ತಂದೆ ತೀರಿಕೊಂಡಿದ್ದು ತಿಳಿದರೂ ಶೂಟಿಂಗ್ ಮುಗಿಸಿಕೊಟ್ಟ ಗಣೇಶ್
ಸಮಾನತೆ ಕಲಿಸುತ್ತಿದ್ದಾರೆ
ಇದೆಲ್ಲಕ್ಕಿಂತ ಸಂತೋಷದ ವಿಷಯವೆಂದರೆ ನವ ಅಪ್ಪಂದಿರು ತಮ್ಮ ಮಗಳಿಗೆ ಹುಡುಗರಿಗಿಂತ ಆಕೆ ಏನೂ ಕಡಿಮೆ ಇಲ್ಲ ಎಂದು ಹೇಳಿಕೊಟ್ಟರೆ, ಗಂಡುಮಕ್ಕಳಿಗೆ ಪಾತ್ರೆ ತೊಳೆಯುವುದು, ಬಟ್ಟೆ ಒಗೆಯುವುದು ಮಾಡುವುದರಿಂದ ಅವರ ಗೌರವ ಕುಂದುವುದಿಲ್ಲ, ಅವೆಲ್ಲವೂ ದೊಡ್ಡವರ ದೈನಂದಿನ ಚಟುವಟಿಕೆಗಳ ಭಾಗ ಎಂದು ಹೇಳಿಕೊಡುತ್ತಿದ್ದಾರೆ. ಹೀಗೆ, ಮಕ್ಕಳ ಕೆಲಸದಲ್ಲಿ ಅಪ್ಪಂದಿರು ಹೆಚ್ಚಾಗಿ ಸಮಯ ನೀಡುವುದರ ಲಾಭ ಕೇವಲ ಮಕ್ಕಳಿಗಲ್ಲ, ಪತ್ನಿಗೂ ಸಿಗುತ್ತದೆ. ಇದರಿಂದ ವಿವಾಹ ಸಂಬಂಧವೂ ಸುಧಾರಿಸುತ್ತಿದೆ.
ಅಪ್ಪಂದಿರಿಗೂ ಬೆಂಬಲ ಬೇಕು
ಬ್ರಿಗ್‌ಹ್ಯಾಮ್ ಯಂಗ್ ಯೂನಿವರ್ಸಿಟಿಯ ಸೋಷಿಯಾಲಜಿ ಪ್ರೊಫೆಸರ್ ಕೆವಿನ್ ಶಫರ್ ಹೇಳುವ ಪ್ರಕಾರ, ಅವರ ಸಂಶೋಧನೆ ಸಂದರ್ಭದಲ್ಲಿ ಬಹುತೇಕ ಅಪ್ಪಂದಿರು ತಾವು ಪೋಷಕ ಜವಾಬ್ದಾರಿಯಲ್ಲಿ ಇನ್ನೂ ಹೆಚ್ಚು ತೊಡಗಿಸಿಕೊಳ್ಳಬೇಕೆಂಬ ಆಶಯವನ್ನು ಪದೇ ಪದೆ ವ್ಯಕ್ತಪಡಿಸಿದ್ದಾರೆ. ಆದರೆ, ಉದ್ಯೋಗ ಸಂಸ್ಥೆಗಳು ಅವರಿಗೆ ಅವಕಾಶ ಮಾಡಿಕೊಡಬೇಕಷ್ಟೇ. ತಂದೆ ತಾಯಿ ಇಬ್ಬರಿಗೂ ಪೇಯ್ಡ್ ಪೇರೆಂಟಲ್ ಲೀವ್ ನೀಡುವುದನ್ನು ಉದ್ಯೋಗ ಸಂಸ್ಥೆಗಳು ಅಳವಡಿಸಿಕೊಳ್ಳಬೇಕು. ಏಕೆಂದರೆ, ಅವರ ಸಂಶೋಧನೆಯ ಪ್ರಕಾರ, ಕಚೇರಿಯು ಕುಟುಂಬದ ಕುರಿತ ಕಾಳಜಿ ವ್ಯಕ್ತಪಡಿಸುವಂಥ ಪಾಲಿಸಿಗಳನ್ನು ಹೊಂದಿದ್ದರೆ ಅಂಥ ಸಂಸ್ಥೆಯಲ್ಲಿ ಕೆಲಸ ಮಾಡುವ ತಂದೆಯು ಮಕ್ಕಳ ಜವಾಬ್ದಾರಿಯನ್ನು ಹೆಚ್ಚಾಗಿ ವಹಿಸಿಕೊಂಡು, ಭಾವನಾತ್ಮಕವಾಗಿ ಅವರೊಂದಿಗೆ ಹೆಚ್ಚು ಕನೆಕ್ಟ್ ಆಗಿರುತ್ತಾರೆ.
ತಂದೆಯು ಈ ದಿನಗಳಲ್ಲಿ ಹೆಚ್ಚಾಗಿ ಪೋಷಣೆಯಲ್ಲಿ ಭಾಗಿಯಾಗುತ್ತಿದ್ದಾನೆ. ಅದನ್ನು ಬೆಂಬಲಿಸುವ ಕೆಲಸವನ್ನು ಸಮಾಜ ಮಾಡಬೇಕು. ಏಕೆಂದರೆ, ಇಂದಿನ ಪೋಷಕರು ಕೆಲಸದಲ್ಲೂ ಉನ್ನತ ಹುದ್ದೆಗೇರಲು ಬಯಸುತ್ತಾರೆ, ಜೊತೆಗೆ ಮಕ್ಕಳೇ ಅವರ ಟಾಪ್ ಪ್ರಿಯಾರಿಟಿ ಕೂಡಾ. ಇದನ್ನು ಬ್ಯಾಲೆನ್ಸ್ ಮಾಡುವಲ್ಲಿ ಒತ್ತಡಕ್ಕೊಳಗಾಗುತ್ತಾರೆ. ಇದಕ್ಕಾಗಿ ವರ್ಕ್‌ಪ್ಲೇಸ್ ಪಾಲಿಸಿಗಳು ಬದಲಾಗಲೇಬೇಕು ಎನ್ನುತ್ತಾರೆ ಕೆವಿನ್.
4ನೇ ತರಗತಿ ಪುತ್ರನಿಂದ ಅಪ್ಪನ ಬ್ಯಾಂಕ್ ಖಾತೆಗೇ ಕನ್ನ
ಒಟ್ಟಿನಲ್ಲಿ ಇಂದು ನಮ್ಮ ಸುತ್ತಮುತ್ತವೇ ತಂದೆಯ ಪಾತ್ರ ಬದಲಾಗುತ್ತಿರುವುದು ಸಂತಸದ ವಿಷಯ. ಸೆಲೆಬ್ರಿಟಿ ಡ್ಯಾಡ್‌ಗಳು ಕೂಡಾ ತಮ್ಮ ಮಗುವಿನ ಪೋಷಣೆಯಲ್ಲಿ ತಮ್ಮ ಪಾತ್ರವನ್ನು ತೋರಿಸುವ ಫೋಟೋಗಳನ್ನು, ವಿಡಿಯೋಗಳನ್ನು ಸೋಷ್ಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುವ ಮೂಲಕ ಮಾದರಿಯಾಗುತ್ತಿದ್ದಾರೆ.