Asianet Suvarna News Asianet Suvarna News

ಲೈಂಗಿಕಾಸಕ್ತಿ ಕಡಿಮೆಯಾಗ್ತಾ ಇದೆಯಾ? ಹಾಗಾದ್ರೆ ಇದನ್ನು ಬಿಡಿ!

ದಾಂಪತ್ಯದ ಬಂಧ ಗಟ್ಟಿಗೊಳ್ಳುವಲ್ಲಿ ಲೈಂಗಿಕ ಕ್ರಿಯೆ ಪ್ರಮುಖ ಪಾತ್ರವಹಿಸುತ್ತದೆ. ಆದರೆ, ಕೈಯಲ್ಲೊಂದು ಮೊಬೈಲ್, ರಿಮೋಟ್‌ನಿಂದ ಎಲ್ಲ ಸಂಬಂಧಗಳೂ ಅರ್ಥ ಕಳೆದುಕೊಳ್ಳುತ್ತಿವೆ. ಅದೇ ರೀತಿ ಲೈಂಗಿಕಾಸಕ್ತಿಯೂ...

Couples who own a television are less likely to have sex: study
Author
Bengaluru, First Published Sep 24, 2018, 4:34 PM IST

ದಾಂಪತ್ಯದಲ್ಲಿ ಲೈಂಗಿಕ ಕ್ರಿಯೆಯೊಂದು ಪ್ರಮುಖ ಭಾಗ. ಬದಲಾದ ಜೀವನಶೈಲಿಯಿಂದ ಮನುಷ್ಯನಿಗೆ ಲೈಂಗಿಕ ಸಂಬಂಧಿ ಸಮಸ್ಯೆಗಳು ಸಾವಿರವಾಗಿವೆ.  ಬಂಜೆತನವೂ ಇದರದ್ದೇ ಫಲಿತಾಂಶ. ಆದರೆ, ಕೈಯಲ್ಲೊಂದು ಮೊಬೈಲ್, ಟಿವಿಗೊಂದು ರಿಮೋಟ್ ಬಂದಿದ್ದು, ಎಲ್ಲ ಸಂಬಂಧಗಳೂ ಅರ್ಥ ಕಳೆದುಕೊಳ್ಳುತ್ತಿವೆ. 

ಈ ಮೊದಲು ಟಿವಿ ಬಂದು, ಮನುಷ್ಯ ಸಮಾಜಮುಖಿ ಕಾರ್ಯಗಳಲ್ಲಿ ತೊಡಗುವುದು ಕಡಿಮೆಯಾಗಿತ್ತು. ಆದರೀಗ ಮೊಬೈಲ್ ಆ ಸ್ಥಾನವನ್ನು ಆಕ್ರಮಿಸಿಕೊಂಡಿದೆ. ಇದು ಮನಸ್ಸಿನ ಮೇಲೆ ಸಾಕಷ್ಟು ವ್ಯತಿರಿಕ್ತ ಪರಿಣಾಮ ಬೀರುವುದಲ್ಲದೇ, ಲೈಂಗಿಕಾಸಕ್ತಿಯನ್ನು ಕುಂದಿಸುತ್ತಿದೆಯಂತೆ!

ಮನೆಯಲ್ಲಿ ಟಿವಿ ಇರೋ ದಂಪತಿ ನಡುವೆ ಲೈಂಗಿಕ ಸಂಬಂಧವೂ ಅರ್ಥ ಕಳೆದುಕೊಂಡಿರುತ್ತದೆ. ಸಾಮಾನ್ಯ ದಂಪತಿಗಿಂತ ಶೇ.6ರಷ್ಟು ಕಡಿಮೆ ಲೈಂಗಿಕ ಕ್ರಿಯೆಯಲ್ಲಿ ಇಂಥ ಜೋಡಿ ತೊಡಗುತ್ತಂತೆ. ಅಷ್ಟೇ ಅಲ್ಲದೇ ಟಿವಿಯಲ್ಲಿ ಬರೋ ಕಾರ್ಯಕ್ರಮಗಳೂ ಪರಿಣಾಮ ಬೀರುತ್ತದೆ, ಎಂದು ಸಂಶೋಧನೆಯೊಂದು ದೃಢಪಡಿಸಿದೆ.

ದಂಪತಿ ಒಬ್ಬರಿಗೊಬ್ಬರು ಸರಸ-ಸಲ್ಲಾಪ ನಡೆಸುವ ಬದಲು, ಟಿವಿ ಕಾರ್ಯಕ್ರಮದಲ್ಲಿಯೇ ತಲ್ಲೀನರಾಗಿರುತ್ತಾರೆ. ಇದರಿಂದ ಈ ಇಬ್ಬರ ನಡುವಿನ ಬಾಂಧವ್ಯ ಗಟ್ಟಿಗೊಳ್ಳುವ ಅವಕಾಶವೇ ಇಲ್ಲವಾಗುತ್ತದೆ. ಅದೂ ಅಲ್ಲದೇ ಅನುಮಾನಗಳನ್ನೇ ಹೆಚ್ಚಿಸುವ ಧಾರಾವಾಹಿಗಳನ್ನು ನೋಡುವುದರಿಂದ ಒಬ್ಬರಿಗೊಬ್ಬರ ಮೇಲೆ ನಂಬಿಕೆ ಹುಟ್ಟೋ ಬದಲು, ಅನುಮಾನವೇ ಹೆಚ್ಚು ಕಾಡುತ್ತಂತೆ. ದಾಂಪತ್ಯಕ್ಕೆ ಅಗತ್ಯವಿರೋ ಭಾವನೆಗಳೇ ಕಮ್ಮಿಯಾಗೋದ್ರಿಂದ ಲೈಂಗಿಕಾಸಕ್ತಿಯೂ ಕುಂದುತ್ತದೆ ಎಂಬುವುದು ಈ ಅಧ್ಯಯನ ಸ್ಪಷ್ಟಪಡಿಸಿದೆ.

ಅಲ್ಲದೇ ಟಿವಿ, ಮೊಬೈಲ್ ನೋಡ್ತಾ, ಮಲಗೋದೂ ತಡವಾಗುತ್ತದೆ. ಜತೆಯಾಗಿ, ರಸಮಯವಾಗಿ ಕಳೆಯೋ ಸಮಯವೂ ಕಳೆದು ಹೋದರೆ, ದಾಂಪತ್ಯದಲ್ಲಿ ಮಾಧುರ್ಯ ಮೂಡಲು ಹೇಗೆ ಸಾಧ್ಯ? ಸಂಬಂಧಕ್ಕೊಂದು ಅರ್ಥ ಬರಬೇಕೆಂದರೆ, ಬಾಂಧವ್ಯ ಸುಧಾರಿಸಬೇಕೆಂದರೆ ಮೊಬೈಲ್, ಟಿವಿ ನೋಡುವುದ ಕಡಿಮೆ ಮಾಡಿ.

Follow Us:
Download App:
  • android
  • ios