ಮನೆಯಲ್ಲಿರುವ ಜಿರಳೆ, ಸೊಳ್ಳೆ ಮತ್ತು ಹಲ್ಲಿಗಳ ಕಾಟದಿಂದ ಮುಕ್ತಿ ಪಡೆಯಲು ರಾಸಾಯನಿಕಗಳ ಬದಲು ನೈಸರ್ಗಿಕ ವಿಧಾನವನ್ನು ಬಳಸಬಹುದು. ಹಾಗಲಕಾಯಿ, ಡಾಂಬರ್ ಗುಳಿಗೆ, ಸಾಸಿವೆ ಎಣ್ಣೆ ಮತ್ತು ಕರ್ಪೂರವನ್ನು ಬಳಸಿ ಮಾಡುವ ಈ ಸರಳ ತಂತ್ರದಿಂದ ಕೀಟಗಳನ್ನು ಸುಲಭವಾಗಿ ಓಡಿಸಬಹುದು.

ಮನೆಯಲ್ಲಿ ಜಿರಳೆ, ಹಲ್ಲಿ, ಇರುವೆ ಸೇರಿದಂತೆ ವಿವಿಧ ಕೀಟಗಳು ಇರುವುದು ಸರ್ವೇ ಸಾಮಾನ್ಯ. ಅದರಲ್ಲಿಯೂ ಜಿರಳೆಯಿಂದ ಇನ್ನಿಲ್ಲದ ಅನಾರೋಗ್ಯ ಸಮಸ್ಯೆ ಆಗುವುದು ಉಂಟು. ಆದರೆ ನೀವು ಮನೆಯನ್ನು ಎಷ್ಟೇ ಸ್ವಚ್ಛವಾಗಿ ಇಟ್ಟುಕೊಂಡರೂ ಅದ್ಯಾವುದೋ ಗಳಿಗೆಯಲ್ಲಿ ಒಂದು ಜಿರಳೆ ಮನೆ ಸೇರಿಕೊಂಡಿತು ಎಂದರೆ, ಅದರಿಂದ ಆಗುವ ಸಮಸ್ಯೆ ಅಷ್ಟಿಷ್ಟಲ್ಲ. ಚರಂಡಿಗಳಲ್ಲಿಯೇ ಇರುವ ಜಿರಳೆಗಳು ನೀರಿನ ಪೈಪ್​ ಮೂಲಕ ಮನೆಯನ್ನು ಸೇರಿ ಅನಾರೋಗ್ಯ ಉಂಟುಮಾಡುತ್ತವೆ. ಜಿರಳೆಗಳು ತುಂಬಾ ಡೇಂಜರ್​. ಇದರಿಂದ ಭಾರಿ ಅನಾಹುತವೂ ಇದೆ. ಅದೇ ರೀತಿ ಸೊಳ್ಳೆ, ಹಲ್ಲಿಗಳ ಕಾಟದಿಂದಲೂ ಸಮಸ್ಯೆ ಇನ್ನಿಲ್ಲದಂತೆ ಕಾಡುತ್ತವೆ.

ಡೇಂಜರಸ್​ ಜಿರಳೆಗಳು

ನೀವು ಏನೆಲ್ಲಾ ಟ್ರೈ ಮಾಡಿದ್ರೂ ಇವುಗಳಿಂದ ಮುಕ್ತಿ ಹೊಂದಲು ಆಗ್ತಿಲ್ವಾ? ಹಾಗೆಂದು ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕ ತಂದು ಸ್ಪ್ರೇ ಮಾಡಿದರೆ, ಜಿರಳೆ, ಸೊಳ್ಳೆ ಏನೋ ಹೋಗಬಹುದು. ಆದರೆ ಅದು ನಿಮ್ಮ ಆರೋಗ್ಯದ ಮೇಲೆ ಡಬಲ್​ ಪರಿಣಾಮ ಉಂಟು ಮಾಡುತ್ತದೆ ಎನ್ನುವುದು ಇದಾಗಲೇ ಸಾಬೀತಾಗಿದೆ. ಹಾಗಿದ್ದರೆ ಇಲ್ಲಿ ನಿಮಗಾಗಿ ಹಾಗಲಕಾಯಿಯ ಸಿಂಪಲ್​ ಟಿಪ್ಸ್​ ಹೇಳಲಾಗಿದೆ.

ಹಾಗಲಕಾಯಿ ಟೆಕ್ನಿಕ್​

ರೌಂಡ್​ ಹಾಗಲಕಾಯಿ ಸಿಕ್ಕರೆ ತುಂಬಾ ಒಳ್ಳೆಯದು. ಅದರ ಮೇಲ್ಭಾಗದಲ್ಲಿ ಸ್ವಲ್ಪ ಕತ್ತರಿಸಿ ಒಳಗಿನ ಬೀಜವನ್ನು ತೆಗೆಯಿರಿ. ಆ ಕತ್ತರಿಸಿದ ಭಾಗದಲ್ಲಿ ಒಂದು ಡಾಂಬರ್​ ಗುಳಿಗೆ (ಇದನ್ನು ಇಂಗ್ಲಿಷ್​ನಲ್ಲಿ naphthalene ಎನ್ನುತ್ತಾರೆ. ಬಹಳಷ್ಟು ಅಂಗಡಿಗಳಲ್ಲಿ ಇದು ಲಭ್ಯ) ಅನ್ನು ಇಡಿ. ಈ ಗುಳಿಗೆಯನ್ನು ಸಾಮಾನ್ಯವಾಗಿ ಜಿರಳೆ ಕಾಟದಿಂದ ಮುಕ್ತಿ ಹೊಂದಲು ವಾರ್ಡ್​ರೋಬ್​ಗಳಲ್ಲಿ ಇಡುವುದು ಇದೆ. ಇದು ಬಟ್ಟೆಗಳನ್ನು ಘಮಘಮ ಎನ್ನಿಸುವುದೂ ಅಲ್ಲದೇ ಜಿರಳೆಗಳೂ ಬರುವುದಿಲ್ಲ.

ಈಗ ಸೊಳ್ಳೆ, ಜಿರಳೆ ಮುಂತಾದ ಕೀಟ ಮುಕ್ತಿಗೂ ಇದು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ. ಅದರ ಮೇಲೆ ಸ್ವಲ್ಪವೇ ಸ್ವಲ್ಪ ಸಾಸಿವೆ ಎಣ್ಣೆಯನ್ನು ಹಾಕಿ. ಅದರ ಮೇಲೆ ಒಂದು ಕರ್ಪೂರವನ್ನು ಇಟ್ಟು ಅದಕ್ಕೆ ಬೆಂಕಿ ಹಚ್ಚಬೇಕು. ಜಿರಳೆಗಳು ಬರುವ ಜಾಗ, ಸೊಳ್ಳೆಗಳ ಕಾಟ ಇರುವಲ್ಲಿ ಅದನ್ನು ಹಚ್ಚಬೇಕು. ಅದರಿಂದ ಹರಡುವ ಹೊಗೆಗೆ ಎಲ್ಲವೂ ಮಾಯವಾಗುತ್ತವೆ.