ಪ್ರತಿ ದಿನ ಮನೆ ಸ್ವಚ್ಚಗೊಳಿಸಿದರೂ ಮನೆ ಮೂಲೆಗಳಲ್ಲಿ ಬಲೆಗಳು, ಧೂಳು ಸೇರಿಕೊಳ್ಳುತ್ತಿದೆಯಾ? ಹಾಗಾದರೆ ಸಿಂಪಲ್ ಟ್ರಿಕ್ ಮೂಲಕ ಮನೆಯೊಳಗೆ ಬಲೆ ಕಟ್ಟಿಕೊಳ್ಳದಂತೆ, ಧೂಳು ಹಿಡಿಯದಂತೆ ಮಾಡಲು ಸಾಧ್ಯವಿದೆ.
ಮನೆ ದೊಡ್ಡದಾಗಿರಲಿ, ಚಿಕ್ಕದಾಗಿರಲಿ ಸ್ವಚ್ಚವಾಗಿಟ್ಟುಕೊಳ್ಳುವುದು ಸವಾಲು. ಧೂಳು, ಕೀಟಗಳು, ಜೇಡರ ಬಲೆ ಸೇರಿದಂತೆ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತಲೇ ಇರುತ್ತದೆ. ಪ್ರತಿ ದಿನ ಮನೆಯನ್ನು ಹಲವು ಕ್ಲೀನರ್ ಬಳಸಿ ಶುಚಿಗೊಳಿಸಿದರೂ ಸಮಸ್ಯೆ ಮುಗಿಯುತ್ತಿಲ್ಲ ಅನ್ನೋದು ಹಲವರ ಚಿಂತೆ. ಇದಕ್ಕೆ ಸುಲಭ ಪರಿಹಾರವಿದೆ. ಮನೆಯನ್ನು ಸ್ವಚ್ಚವಾಗಿಡುವುದಲ್ಲದೆ, ಬಲೆ, ಧೂಳಿನಿಂದ ಮುಕ್ತವಾಗಿಸುತ್ತದೆ. ಇದರಿಂದ ಉತ್ತಮ ಆರೋಗ್ಯ ಕಾಪಾಡಲು ಸಾಧ್ಯವಿದೆ.
ಮನೆಯೊಳಗೆ ಸರಿಯಾಗಿ ಗಾಳಿ ಬೆಳಕು ಬೇಕು
ಮನೆಯೊಳಗೆ ಧೂಳು ಸೇರಿಕೊಳ್ಳುವುದು, ಬಲೆ ಕಟ್ಟಿಕೊಳ್ಳುವುದು ಸಾಮಾನ್ಯ. ಪ್ರಮುಖವಾಗಿ ಕೆಲ ಮುನ್ನಚ್ಚರಿಕೆ ವಹಿಸಿದರೆ ಈ ಸಮಸ್ಯೆಯಿಂದ ದೂರವಿರಲು ಸಾಧ್ಯವಿದೆ. ಮನೆಯ ಹೊರಗಿನಿಂದ ಬರವು ಧೂಳು, ಮನೆಯೊಳಗಿನ ಫರ್ನೀಟರ್ ಸೇರಿದಂತೆ ಇತರ ವಸ್ತುಗಳಿಂದ ಧೂಳು ಸೇರಿಕೊಳ್ಳುತ್ತದೆ. ಇನ್ನು ಸಣ್ಣ ಕೀಟಗಳು, ಕಣ್ಣಿಗೆ ಕಾಣದಂತೆ ಕೀಟಗಳು ಮನೆಯೊಳಗೆ ಸೇರಿಕೊಳ್ಳುತ್ತದೆ. ಇದರಿಂದ ಜೇಡಗಳು ಬಲೆ ಕಟ್ಟಿಕೊಳ್ಳುತ್ತದೆ. ಇದಕ್ಕೆ ಪ್ರಮುಖವಾಗಿ ಮನೆಯೊಳಗೆ ಸಾಕಷ್ಟು ಗಾಳಿ ಬೆಳಕು ಬೀಳುವಂತೆ ಮಾಡಬೇಕು. ಸೂರ್ಯನ ಬೆಳಕು ಸರಿಯಾದ ಪ್ರಮಾಣದಲ್ಲಿ ಬೀಳಬೇಕು. ಮನೆಯ ಎಲ್ಲಾ ಕೋಣೆಗಳಿಗೆ ಬೆಳಕು ಬೀಳುವಂತಿದ್ದರೆ ಅರ್ಧ ಸಮಸ್ಯೆಗೆ ಪರಿಹಾರ ಸಿಗಲಿದೆ.
ಮೊದಲು ಧೂಳು ನಿವಾರಣೆ ಮಾಡಬೇಕು
ಮನೆಯೊಳಗೆ ಧೂಳು ಸೇರಿಕೊಳ್ಳದಂತೆ ಎಚ್ಚರವಹಿಸಬೇಕು. ಮನೆಯ ಫ್ಯಾನ್, ಗೋಡೆಗಳು ಸೀಲಿಂಗ್ ಮೇಲೆ ಅಂಟಿಕೊಂಡಿರುವ ಧೂಳನ್ನು ತೆಗೆಯಬೇಕು. ಬಳಿಕ ಟಿಪಾಯ್, ಟೇಬಲ್, ಫ್ಲೋರ್ ಸೇರಿದಂತೆ ಮನೆಯ ಪ್ರತಿ ಮೂಲೆ ಮೂಲೆಯನ್ನು ಕ್ಲೀನ್ ಮಾಡಬೇಕು. ಸ್ವಚ್ಚಗೊಳಿಸುವಾಗ ಮೈಕ್ರೋಫೈಬರ್ ಬಟ್ಟೆ ಬಳಸಿದರೆ ಉತ್ತಮ. ಬಟ್ಟೆಯನ್ನು ಸ್ವಲ್ಪ ಒದ್ದೆ ಮಾಡಿ ಒರೆದರೆ ಶುಚಿಯಾಗಲಿದೆ.
ಮನೆಯಲ್ಲಿ ಅನಗತ್ಯ ವಸ್ತುಗಳ ತುಂಬಬೇಡಿ
ಕೀಟಗಳನ್ನು ಹುಡುಕಿಕೊಂಡು ಅಥವಾ ಮನೆಯೊಳಗೆ ಸೇರಿರುವ ಕೀಟಗಳಿಗಾಗಿ ಜೇಡ ಹಾಗೂ ಜೇಡರ ದಾತಿಗೆ ಸೇರಿದಂತ ಹಲವು ಕೀಟಗಳು ಮನೆಯೊಳಗೆ ಸೇರಿಕೊಳ್ಳುತ್ತದೆ. ಇವು ಪ್ರತಿ ದಿನ ಬಲೆ ಕಟ್ಟಿ ಆಹಾರ ಬೇಟೆಯಾಡುತ್ತದೆ. ಹೀಗಾಗಿ ಕೀಟಗಳು ಒಳಗೆ ಬರದಂತೆ ಎಚ್ಚರಿಕೆ ವಹಿಸಬೇಕು. ಮನೆಯಲ್ಲಿ ಅನಗತ್ಯ ವಸ್ತುಗಳನ್ನು ಸಂಗ್ರಹಿಸುವುದು ತಪ್ಪಿಸಿ. ಮನೆ ಪ್ರತಿ ಕೋಣೆಯಲ್ಲಿ ವಸ್ತುಗಳನ್ನು ತುಂಬಬೇಡಿ. ಗಾಳಿ, ಬೆಳಕು ಬೀಳುವಂತೆ, ಹೆಚ್ಚಿನ ಸ್ಥಳವಕಾಶ ಇರುವಂತೆ ನೋಡಿಕೊಳ್ಳಿ.
ವಿನಿಗರ್ ಸೇರಿದಂತೆ ಇತರ ನೈಸರ್ಗಿಕ ವಸ್ತು ಬಳಸಿ
ಅರ್ಧ ಭಾಗ ವಿನಿಗರ್ ಹಾಗೂ ಅರ್ಧ ನೀರು ಮಿಶ್ರಣ ಮಾಡಿ ಸ್ಪ್ರೇ ಬಾಟಲಿ ಮೂಲಕ ಮನೆಯ ಮೂಲೆ ಮೂಲೆಯಲ್ಲಿ ಸ್ಪ್ರೇ ಮಾಡಿ. ವಿನಿಗರ್ ಮಿಶ್ರಣದ ಸ್ಪ್ರೇಗೆ ಜೇಡರ ಬಲೆಗಳು ದೂರವಾಗುತ್ತದೆ. ಪೆಪ್ಪರ್‌ಮಿಂಟ್ ಎಸೆನ್ಶಿಯಲ್ ಆಯಿಲ್ ನೀರಿಗೆ ಬೆರೆಸಿ ಸ್ಪ್ರೇ ಮಾಡಿದರೂ ಬಲೆ ಕಟ್ಟುುವುದು ಕಡಿಮೆಯಾಗುತ್ತದೆ. ಲವಂಗದ ಎಣ್ಣೆ, ಸಿಟ್ರಸ್ ತುಂಬಿರುವ ಹಣ್ಣಿನ ಸಿಪ್ಪೆ ವಾಸನೆಗೆ ಜೇಡಗಳು ದೂರವಾಗುತ್ತದೆ.

