ಮನ, ಮನೆ ಸ್ವಚ್ಛತೆಯೇ ಸುಖಕ್ಕೆ ಸೋಪಾನ...
ಸೆಕ್ಸ್ ಆಸಕ್ತಿ ಕುಂದಲು ಹಲವು ಕಾರಣಗಳಿರುತ್ತವೆ. ಅದರಲ್ಲಿಯೂ ಮಾನಸಿಕ ಸ್ವಾಸ್ಥ್ಯದ ಮೇಲೆ ಲೈಂಗಿಕ ಜೀವನ ಅವಲಂಬಿತವಾಗಿರುತ್ತದೆ. ಆದರೆ, ಇಂಥ ತಪ್ಪು ಕಲ್ಪನೆಗಳು ಇರದಿದ್ದರೆ ಒಳಿತು...
ಕೆಲವರಿಗೆ ಎಲ್ಲಾ ಸಮಯದಲ್ಲೂ ಸೆಕ್ಸ್ ಮಾಡುವ ಮನಸ್ಸಿರುವುದಿಲ್ಲ. ಅದಕ್ಕೆ ಹಲವು ಕಾರಣಗಳಿರುತ್ತವೆ. ಕೆಲವರೂ ಸೆಕ್ಸ್ ಮೇಲೆ ಸಂಪೂರ್ಣ ಆಸಕ್ತಿ ಕಳೆದುಕೊಳ್ಳುತ್ತಾರೆ. ಅದಕ್ಕೆ ಅರೋಗ್ಯ ಸಮಸ್ಯೆ, ಆಹಾರ ಸೇವನೆಯೂ ಕಾರಣವಾಗಬಲ್ಲದು. ಸೆಕ್ಸ್ ಆಸಕ್ತಿ ಕಡಿಮೆಯಾಗಲು ಇವೂ ಕಾರಣವಾಗಿರಬಹುದು...
- ಒತ್ತಡ ಹೆಚ್ಚಾದರೆ ಸೆಕ್ಸ್ ಮೇಲೆ ಆಸಕ್ತಿ ಕಡಿಮೆಯಾಗುತ್ತದೆ. ಭಾವನಾತ್ಮಕ ಒತ್ತಡ ಶರೀರದ ಹಲವಾರು ಕೆಲಸಗಳಿಗೆ ಮಾರಕವಾಗಿದೆ. ಹೆಚ್ಚು ಒತ್ತಡ ಉಂಟಾದರೆ ಅದರಿಂದ ಸೆಕ್ಸ್ ಆಸಕ್ತಿ ಕುಂದುತ್ತದೆ.
- ಪತಿ -ಪತ್ನಿ ನಡುವೆ ಹೊಂದಾಣಿಕೆ ಇದ್ದರೆ ಮಾತ್ರ ಸೆಕ್ಸ್ ಲೈಫ್ ಚೆನ್ನಾಗಿರುತ್ತದೆ. ಆದರೆ ದಾಂಪತ್ಯದಲ್ಲಿ ವಿರಸ ಉಂಟಾದರೆ ಸೆಕ್ಸ್ ಲೈಫ್ ಸಹ ಎಕ್ಕುಟ್ಟು ಹೋಗುತ್ತದೆ.
- ಹೆಚ್ಚು ಡ್ರಿಂಕ್ಸ್ ಮಾಡುವುದರಿಂದಸೂ ಸೆಕ್ಸುಯಲ್ ಹಾರ್ಮೋನ್ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಕಾಮಾಸಕ್ತಿ ಕುಂಠಿತವಾಗುತ್ತದೆ.
- ದಿನದಲ್ಲಿ ಹೆಚ್ಚು ಹೊತ್ತು ಕೆಲಸ ಮಾಡುವುದರಿಂದ ದೇಹಕ್ಕೆ ಸೂಕ್ತ ಆರಾಮ ಬೇಕು. ಸರಿಯಾಗಿ ನಿದ್ರೆಯಾಗದಿದ್ದರೆ ನಿರಾಸಕ್ತಿ ಹೆಚ್ಚುತ್ತದೆ.
- ಮಕ್ಕಳಾದ ನಂತರ ಹೆಚ್ಚಿನ ಮಹಿಳೆಯರ ಆತ್ಮವಿಶ್ವಾಸ ಕಡಿಮೆಯಾಗುತ್ತದೆ. ತಮ್ಮ ಶೇಪ್ ಕಳೆದುಕೊಳ್ಳುತ್ತಾರೆ, ಹಾಗೂ ಮಕ್ಕಳ ಲಾಲನೆ ಪಾಲನೆಯಲ್ಲಿಯೇ ಮುಳುಗುತ್ತಾರೆ. ಸೆಕ್ಸ್ ಬಗ್ಗೆ ಆಸಕ್ತಿ ಕಡಿಮೆಯಾಗುತ್ತದೆ.
- ಶೀಘ್ರ ಸ್ಖಲನ ಸಮಸ್ಯೆಯಿಂದಲೂ ಸೆಕ್ಸ್ ಲೈಫ್ ಮೇಲೆ ಪರಿಣಾಮ ಬೀರುತ್ತದೆ. ಈ ಸಮಸ್ಯೆ ಕಂಡು ಬಂದರೆ ವೈದ್ಯರನ್ನು ಸಂಪರ್ಕಿಸಿ. ಅಲ್ಲದೇ ಸ್ವಚ್ಛತೆಯಂಥ ಸಮಸ್ಯೆಗಳೂ ಲೈಂಗಿಕಾಸಕ್ತಿ ಕುಂದಲು ಕಾರಣವಾಗಬಲ್ಲದು. ದೈಹಿಕ ಸ್ವಚ್ಛತೆಯೊಂದಿಗೆ, ಮಲಗೋ ಕೋಣೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅತ್ಯಗತ್ಯ. ಸುಖಾ ಸುಮ್ಮನೆ ಬೇಡದ್ದನ್ನು ಆಲೋಚಿಸುವ ಬದಲು ಕೆಲವು ವಿಷಯಗಳ ಬಗ್ಗೆ ಹೆಚ್ಚಿನ ಗಮನ ಹರಿಸಿದರೆ, ಜೀವನ ಸುಂದರವಾಗಿರುತ್ತದೆ.
ಸ್ಟ್ರೆಸ್ ದೂರವಾಗಿಸಲು ಬೆಸ್ಟ್ ಮದ್ದು ಕಿಸ್...!