ಗೂಗಲ್ ಸಿಇಒ ಸುಂದರ್ ಪಿಚೈ ಬೆಸ್ಟ್ ವರ್ಕ್ ಪಾರ್ಟ್ನರ್ ಇವರೇ ನೋಡಿ!
ಗೂಗಲ್ ಸಿಇಒ ಸುಂದರ್ ಪಿಚೈ ಇತ್ತೀಚೆಗಷ್ಟೇ ವರ್ಕ್ ಆ್ಯನಿವರ್ಸಿ ಆಚರಿಸಿಕೊಂಡಿದ್ದಾರೆ. ಗೂಗಲ್‌ನಲ್ಲಿ 20 ವರ್ಷ ಪೂರೈಸಿದ ಪಿಚೈ ಅವರ ಬೆಸ್ಟ್ ವರ್ಕ್ ಪಾರ್ಟ್ನರ್ ಯಾರು ಗೊತ್ತಾ?
ಸಿಇಒ ಸುಂದರ್ ಪಿಚೈ ಗೂಗಲ್‌ನಲ್ಲಿ ಇತ್ತೀಚೆಗಷ್ಟೇ 20 ವರ್ಷ ಪೂರೈಸಿದ್ದಾರೆ. ಈ ಸಂಭ್ರಮವನ್ನು ಹಂಚಿಕೊಂಡಿದ್ದರು. ಟೆಕ್ ದಿಗ್ಗಜ ಕಂಪನಿಯನ್ನು ಮುನ್ನಡೆಸುತ್ತಿರುವ ಸುಂದರ್ ಪಿಚೈ ಕಳೆದ 20 ವರ್ಷದಲ್ಲಿ ಗೂಗಲ್‌ನಲ್ಲಿ ಹಲವು ಬದಲಾವಣೆ ತಂದು ವಿಶ್ವದ ಅತೀ ದೊಡ್ಡ ಕಂಪನಿಯಾಗಿ ಬೆಳೆಸಿದ್ದಾರೆ.
ಸುಂದರ್ ಪಿಚೈ ಕುರಿತು ಹಲವು ರೋಚಕ ಹಾಗೂ ಕುತೂಹಲ ಮಾಹಿತಿ ಬಯಲಾಗಿದೆ. ಇದೀಗ ಅವರ ಬೆಸ್ಟ್ ವರ್ಕ್ ಪಾರ್ಟ್ನರ್ ಕುರಿತು ಬಾಯ್ಬಿಟ್ಟಿದ್ದಾರೆ. ತಾವು ಮುದ್ದಾಗಿ ಸಾಕಿರುವ ನಾಯಿ ಜೆಫ್ರಿ, ಸುಂದರ್ ಪಿಚೈ ಅವರ ಬೆಸ್ಟ್ ವರ್ಕ್ ಪಾರ್ಟ್ನರ್.
ಹಲವು ಟೆಕ್ ಕಂಪನಿಗಳಲ್ಲಿ ತಮ್ಮ ಮುದ್ದಿನ ಸಾಕು ನಾಯಿ, ಬೆಕ್ಕನ್ನು ಕಚೇರಿಗೆ ತರಲು ಅವಕಾಶವಿದೆ. ಇದರಂತೆ ಗೂಗಲ್ ಕೂಡ ಪ್ರಾಣಿ ಪ್ರಿಯರಿಗೆ ನಿರಾಸೆ ಮಾಡಿಲ್ಲ.
ಸುಂದರ್ ಪಿಚೈ ಕೂಡ ತಮ್ಮ ಮುದ್ದಿನ ಜೆಫ್ರಿಯನ್ನು ಕಚೇರಿಗೆ ಕರೆ ತರುತ್ತಾರೆ. ಪಿಚೈಯಂತೆ ಪ್ರತಿ ದಿನ ಜೆಫ್ರಿ ಕೂಡ ಗೂಗಲ್ ಕೇಚೆರಿಗೆ ಆಗಮಿಸಿ ಕಾಲ ಕಳೆಯುತ್ತದೆ. ಕೆಲಸದ ನಡುವೆ ಸುಂದರ್ ಪಿಚೈ ನಾಯಿ ಜೊತೆಗೂ ಕೆಲ ಹೊತ್ತು ಕಳೆಯುತ್ತಾರೆ. ಅದರ ಜೊತೆಗೆ ಆಟವಾಡುತ್ತಾರೆ.
ಜೆಫ್ರಿ ಇದೀಗ ಗೂಗಲ್ ಕಚೇರಿಯಲ್ಲಿ ಸೆಲೆಬ್ರೆಟಿ. ಪ್ರತಿ ದಿನ ಕಚೇರಿಗೆ ಆಗಮಿಸುವ ಜೆಫ್ರಿ, ಇತರ ಸಹದ್ಯೋಗಿಗಳ ಜೊತೆಗೆ ಆಗಮಿಸುವ ಸಾಕು ನಾಯಿಗಳ ಜೊತೆಗೂ ಕಾಲಕಳೆಯುತ್ತದೆ.
ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಫೋಟೋ ಹಂಚಿಕೊಂಡಿರುವ ಸುಂದರ್ ಪಿಚೈ, ಬೆಸ್ಟ್ ವರ್ಕ್ ಪಾರ್ಟ್ನರ್ ಎಂದು ಹೇಳಿಕೊಂಡಿದ್ದಾರೆ. ಪಿಚ್ ಪೋಸ್ಟ್‌ಗೆ ಭಾರಿ ಲೈಕ್ಸ್ ಹಾಗೂ ಕಮೆಂಟ್ ವ್ಯಕ್ತವಾಗಿದೆ.
ಸುಂದರ್ ಪಿಚೈಗೆ ನಾಯಿ ಮೇಲೆ ಎಲ್ಲಿಲ್ಲದ ಪ್ರೀತಿ. ಹೀಗಾಗಿ ಲ್ಯಾಬ್ರಡೂಡಲ್ ತಳಿಯ ನಾಯಿಯನ್ನು ಮುದ್ದಾಗಿ ಸಾಕಿದ್ದಾರೆ. ಪಿಚೈ ಜೊತೆಗೆ ಇರುವ ನಾಯಿ, ಎಲ್ಲೆ ಹೋದರೂ ಜೊತೆಗಿರುತ್ತದೆ.
ನ್ಯಾಷನಲ್ ಡಾಗ್ ಡೇ ಸಂದರ್ಭದಲ್ಲಿ ಗೂಗಲ್ ಕಚೇರಿಯಲ್ಲಿ ಬಹುತೇಕರು ತಮ್ಮ ಮುದ್ದಿನ ನಾಯಿಗಳನ್ನು ಕರೆ ತರುತ್ತಾರೆ. ಬಳಿಕ ನಾಯಿಗಳಿಗೆ ವಿಶೇಷ ಖಾದ್ಯಗಳನ್ನು ನೀಡಲಾಗುತ್ತದೆ.