ಸ್ನಿಗ್ಧ ಸೌಂದರ್ಯದ ಅಂದ ಕೆಡಿಸುವಂತ ಪಿಗ್ಮೆಂಟೇಶನ್ ಸಮಸ್ಯೆ ಅನೇಕ ಹೆಣ್ಣು ಮಕ್ಕಳನ್ನು ಹೈರಾಣಗೊಳಿಸಿ ಬಿಡುತ್ತದೆ. ಇಂಥದ್ದೇ ಕಾರಣಕ್ಕೆ ಬರುತ್ತೆ ಎಂದು ಹೇಳಲಾಗದೇ ಹೋದರೂ, ಈ ಕಲೆ ಕಾಣಿಸಿಕೊಳ್ಳಲು ಹಲವು ಕಾರಣಗಳಿವೆ. ತುಸು ಹುಷಾರಾಗಿದ್ದರೆ ಪರಿಹಾರವೂ ಇದೆ.

- ಕಿರಣ್ ಪ್ರಸಾದ್ ರಾಜನಹಳ್ಳಿ
ಇದ್ದಕ್ಕಿದ್ದಂತೆ ಕೆನ್ನೆಯ ಮೇಲೆ ಕಂದು ಬಣ್ಣದ ಕಲೆಗಳು, ಕಡಿಮೆಯಾಗಬಹುದು ಅಂದುಕೊಂಡರೆ ಹೆಚ್ಚಾಗುತ್ತಲೇ ಇದೆ. ಇದು ಹೆಚ್ಚಿನ ಹೆಂಗಸರನ್ನು ಕಾಡುವ ಪಿಗ್ಮೆಂಟೇಶನ್. 

ಇದಕ್ಕೆ ಔಷಧಿ ಇದೆಯಾ?
ಇದ್ದಕ್ಕಿದ್ದಂತೆ ಕೆನ್ನೆಯ ಮೇಲೆ ಕಂದು ಬಣ್ಣದ ಕಲೆಗಳು, ಕಡಿಮೆಯಾಗಬಹುದು ಅಂದುಕೊಂಡರೆ ಹೆಚ್ಚಾಗುತ್ತಲೇ ಇದೆ. ಇದು ಹೆಚ್ಚಿನ ಹೆಂಗಸರನ್ನು ಕಾಡುವ ಪಿಗ್ಮೆಂಟೇಶನ್. 

 ಅವಳಿದ್ದದ್ದು ಹಾಗೆಯೇ, ಸ್ನಿಗ್ಧ ಸುಂದರಿ. ಒಮ್ಮೆ ಅವಳನ್ನು ನೋಡಿದವರು ಮತ್ತೆ ಮತ್ತೆ ಅವಳನ್ನು ನೋಡಬೇಕೆಂದು ಆಶಿಸುತ್ತಾರೆ. ಆಕೆಯ ಸೌಂದರ್ಯಕ್ಕೆ ಮುಖ್ಯ ಕಾರಣವೇ ಹೊಳೆಯುವ ಚರ್ಮ. ಮುಖದಲ್ಲಿ ಸಣ್ಣ ಚುಕ್ಕೆಯಂತಹ ಕಲೆಯೂ ಇಲ್ಲ. ಅಂಥವಳಿಗೆ ಇದ್ದಕ್ಕಿದ್ದಂತೆ ಕೆನ್ನೆಯ ಮೇಲೆ ಕಂದು ಬಣ್ಣದ ಕಲೆಗಳು ತೆಳುವಾಗಿ ಹರಡತೊಡಗಿದವು. ದಿನ ಕಳೆದಂತೆ ಕಲೆಗಳು ಜಾಸ್ತಿಯಾಗತೊಡಗಿದವು. ಚೆಲುವೆಗೀಗ ಆತಂಕ, ಆಘಾತ! ಆಕೆಯ ದುಃಸ್ಥಿತಿ ಯಾರಿಗೆ ಬೇಕಾದರೂ ಬರಬಹುದು. ಯಾಕೆಂದರೆ ಅವಳನ್ನು ಕಾಡುವ ಪಿಗ್ಮೆಂಟೇಶನ್ ಸಮಸ್ಯೆ ಈಗ ತೀರಾ ಸಾಮಾನ್ಯ. ಕನ್ನಡದಲ್ಲಿ ಇದಕ್ಕೆ ವರ್ಣಕತೆ ಅಥವಾ ವರ್ಣದ್ರವ್ಯ ಎನ್ನುತ್ತಾರೆ. 

ಏನಿದು ಪಿಗ್ಮೆಂಟೇಶನ್?
ಇದರ ಬಗ್ಗೆ ಸರಳವಾಗಿ ಹೇಳಬೇಕೆಂದರೆ ನಮ್ಮ ಚರ್ಮದ ಬಣ್ಣಕ್ಕೆ ಕಾರಣವಾದ ಮೆಲಾನಿನ್ ಎಂಬ ಪಿಗ್ಮೆಂಟ್‌ಗಳ ಸಂಖ್ಯೆಯಲ್ಲಿ ಏರುಪೇರಾದಾಗ ಈ ಪಿಗ್ಮೆಂಟೇಶನ್ ಎಂಬ ಸಮಸ್ಯೆ ಎದುರಾಗುತ್ತದೆ.
ಹೆಚ್ಚು ಮೆಲಾನಿನ್ ಪಿಗ್ಮೆಂಟ್ಸ್ ಉತ್ಪಾದನೆಯಾದಾಗಲೂ, ಕಡಿಮೆ ಪಿಗ್ಮೆಂಟ್ಸ್ ಉತ್ಪಾದನೆಯಾದಾಗಲೂ ಅಥವಾ ಪಿಗ್ಮೆಂಟ್‌ಗಳ ಹಂಚಿಕೆ ಸರಿಯಾಗದಿದ್ದಾಗಲೂ ಈ ಸಮಸ್ಯೆ ಉಂಟಾಗುತ್ತದೆ. ಪುರುಷರಿಗಿಂತ
ಮಹಿಳೆಯರಿಗೇ ಈ ಸಮಸ್ಯೆ ಹೆಚ್ಚಾಗಿ ಬಾಧಿಸುತ್ತದೆ ಎಂಬುದೂ ಗಮನಾರ್ಹ. ಕಲೆ ಮುಖದ ಮೇಲೆಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತೆ. ನಾಸಿಕದ ಬದಿಯಲ್ಲಿ ಎರಡೂ ಕೆನ್ನೆಗಳ ಮೇಲೆ ರೆಕ್ಕೆಗಳಂತೆ ಈ
ಕಲೆಗಳು ಹರಡಿದಾಗ ಅದನ್ನು ಬಟರ್‌ಫ್ಲೈ ಪಿಗ್ಮೆಂಟೇಶನ್ ಎಂದೂ ಕರೆಯಲಾಗುತ್ತದೆ. 

ಈ ಪಿಗ್ಮೆಂಟೇಶನ್‌ನಲ್ಲಿ ಎರಡು ವಿಧ
ಹೈಪರ್‌ಪಿಗ್ಮೆಂಟೇಶನ್ ಮತ್ತು ಹೈಪೊಪಿಗ್ಮೆಂಟೇಶನ್. ಪಿಗ್ಮೆಂಟೇಶನ್ ಪೀಡಿತರು ತೀರಾ ಹತಾಶರಾಗುವುದು ಬೇಡ. ಹೈಪರ್ ಮತ್ತು ಹೈಪೊಪಿಗ್ಮೆಂಟೇಶನ್ ಎರಡೂ ಸಮಸ್ಯೆಗಳಿಗೆ
ಚಿಕಿತ್ಸೆಯಿದೆ. ಸಂಬಂಧಪಟ್ಟ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ತೆಗೆದುಕೊಂಡರೆ ಈ ಸಮಸ್ಯೆಯಿಂದ ಮುಕ್ತರಾಗಬಹುದು.

ಮೆಲಾನಿನ್ ಪಿಗ್ಮೆಂಟ್‌ಗಳ ಸಂಖ್ಯೆ ಅಧಿಕವಾದಾಗ ಉಂಟಾಗುವ ಸಮಸ್ಯೆ ಹೈಪರ್‌ಪಿಗ್ಮೆಂಟೇಶನ್. ಇದರಿಂದಾಗುವ ತೊಂದರೆಗಳು;
- ಮುಖದ ಮೇಲೆ ಕಂದು ಬಣ್ಣದ ಕಲೆಗಳು. ಹಾರ್ಮೊನ್‌ಗಳ ವ್ಯತ್ಯಾಸದಿಂದ ಉಂಟಾಗುವ ಈ ಕಲೆಗಳು, ಸೂರ್ಯನ ಬಿಸಿಲು ಬೀಳುತ್ತಿದ್ದರೆ ಹೆಚ್ಚಾಗುತ್ತವೆ. ಹೆರಿಗೆಯ ನಂತರ ಸಹಜವಾಗಿ
ಹಾರ್ಮೊನ್‌ಗಳಲ್ಲಿ ವ್ಯತ್ಯಾಸವಾಗಿ ಈ ಸಮಸ್ಯೆ ಬರಬಹುದು. ಎಚ್ಚರಿಕೆ ತೆಗೆದುಕೊಳ್ಳದಿದ್ದಲ್ಲಿ ಕಲೆಗಳು ಜಾಸ್ತಿಯಾಗುತ್ತಾ ಹೋಗುತ್ತವೆ.
- ಕಣ್ಣಿನ ಕೆಳಗಿನ ಕಪ್ಪು ವರ್ತುಲ, ಕಣ್ಣಿಗೆ ತುಂಬಾ ಆಯಾಸವಾದಾಗ ಕಾಣುವ ಸಮಸ್ಯೆ.
- ಕಪ್ಪು ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ. 
- ಕತ್ತು, ೆನ್ನು ..ಹೀಗೆ, ಬಿಸಿಲು ಬೀಳುವ ಜಾಗದಲ್ಲೆಲ್ಲ ಕಲೆಗಳಾಗುತ್ತವೆ.
- ಗಾಯಗಳು ಮಾಯುವಾಗ, ಮೇಕಪ್ ಪ್ರಸಾದನಗಳಿಂದ ಉಂಟಾದ ಅಲರ್ಜಿಯು ಗುಣವಾಗುತ್ತಿರುವಾಗ ಬರುವ ಸಮಸ್ಯೆ.
- ಕ್ರೇಜ್ ಹೆಚ್ಚಿದೆ. ಅದೂ ಸಹ ಒಂದು ರೀತಿಯ ಪಿಗ್ಮೆಂಟೇಶನ್ನೇ. ಕೃತಕವಾಗಿ ಪಿಗ್ಮೆಂಟ್ ಗಳನ್ನು ಚರ್ಮದೊಳಗೆ ಚಿತ್ರ ಬರೆದಂತೆ ತುಂಬಲಾಗುತ್ತದೆ. ಆದ್ದರಿಂದ ಟ್ಯಾಟೂವನ್ನು
ಪಿಗ್ಮೆಂಟ್‌ಗಳ ಚಿತ್ತಾರವೆನ್ನಬಹುದು.

ಹೈಪೊಪಿಗ್ಮೆಂಟೇಶನ್: ಮೆಲಾನಿನ್ ಪಿಗ್ಮೆಂಟ್‌ಗಳ ಸಂಖ್ಯೆ ಕ್ಷೀಣಿಸಿದಾಗ ಉಂಟಾಗುವ ಸಮಸ್ಯೆ. ಇದರಿಂದಾಗುವ ತೊಂದರೆಗಳು; 
- ಫಂಗಲ್ ಇನ್‌ಫೆಕ್ಷನ್‌ನಿಂದ ಉಂಟಾದ ಹೈಪೊಪಿಗ್ಮೆಂಟೇಶನ್‌ನಿಂದ ಮುಖದ ಮೇಲೆ ಕಲೆಗಳಾಗುತ್ತವೆ .
- ಪರೆಗಳಂತಹ ಕಲೆಗಳು ದೇಹದ ಮೇಲ್ಭಾಗ ಮತ್ತು ಮುಖದ ಮೇಲೆ ಕಾಣುತ್ತದೆ.
- ಹೈಪೊಪಿಗ್ಮೆಂಟೇಶನ್‌ಗೆ ಒಳಗಾದ ಜಾಗದಲ್ಲಿ ಕಲೆಗಳು ಉಂಟಾಗುತ್ತವೆ. ಅಷ್ಟೇ ಅಲ್ಲ, ಆ ಜಾಗದಲ್ಲಿ ಇಂದ್ರಿಯಜ್ಞಾನ ಕಡಿಮೆಯಿರುತ್ತದೆ ಅಥವಾ ಸಂಪೂರ್ಣವಾಗಿ ಇರುವುದೇ ಇಲ್ಲ!
- ಮೆಲಾನಿನ್ ಕಡಿಮೆಯಾದ ಭಾಗದಲ್ಲೆಲ್ಲಾ ಇಮ್ಯುನಿಟಿಯನ್ನು ಕಳೆದುಕೊಂಡ ಪೇಲವ ಕಲೆಗಳು ಉಂಟಾಗುತ್ತವೆ.
- ಕೆಲವು ರಾಸಾಯನಿಕ ಸಂಪರ್ಕಗಳಿಂದ ಉಂಟಾಗುವ ಕಲೆಗಳು. ಹಣೆಗೆ ಬಿಂದಿಯನ್ನು ಅಂಟಿಸಿಕೊಳ್ಳುತ್ತೇವಲ್ಲಾ, ಆ ಅಂಟಿನಿಂದಲೂ ಈ ತೊಂದರೆ ಆಗಬಲ್ಲದು.
- ಕಜ್ಜಿ, ತುರಿ ಮುಂತಾದ ಚರ್ಮರೋಗಗಳು ವಾಸಿಯಾಗುತ್ತಿರುವ ಸಮಯದಲ್ಲಿ ಉಂಟಾಗುತ್ತದೆ.
- ಹುಟ್ಟಿದಾಗಿನಿಂದಲೂ ಇರುವ ಹೈಪೊಪಿಗ್ಮೆಂಟೇಶನ್ ಕಲೆಗಳು.

ಮೆಲಾನಿನ್ ಪಿಗ್ಮೆಂಟ್‌ಗಳು ಹೆಚ್ಚಾದರೂ ಕಷ್ಟ, ಕಡಿಮೆಯಾದರೂ ಕಷ್ಟ. ಆ ಸಂಖ್ಯೆ ಸಮಪ್ರಮಾಣದಲ್ಲಿ ಇರುವಂತೆ ನೋಡಿಕೊಳ್ಳಬೇಕಾದ್ದೇ ಮುಖ್ಯ. ಅದಕ್ಕಾಗಿ ಈ ಕೆಲವು ನಿಯಮಗಳನ್ನು ಪಾಲಿಸಲೇ ಬೇಕು.
ಯಾವಾಗಲೂ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಚರ್ಮಕ್ಕೆ ಹಾನಿಮಾಡುವ ಪ್ರಸಾದನಗಳ ಬಳಕೆ ಬೇಡ. ಬಳಸಿದ ಮೇಕಪ್ ಕಿಟ್, ಒಳ ಉಡುಪುಗಳನ್ನು, ಇತರ ಸಾಮಾನುಗಳನ್ನು ಉಪಯೋಗಿಸಲೇಬಾರದು. ಪೌಷ್ಟಿಕಾಂಶಯುಕ್ತ ಸತ್ವಪೂರ್ಣ ಸಮತೂಕ ಆಹಾರ ಸೇವನೆ ಅಗತ್ಯ. ಪ್ರಖರ ಬಿಸಿಲಿನಿಂದ ದೂರವಿರಿ.

ಮುತ್ತು ಆರೋಗ್ಯಕ್ಕೂ ಕುತ್ತು