ವೆಜೈನಾ ಎಂಬುದು ಬಹಳ ಸೂಕ್ಷ್ಮ. ಅಲ್ಲಿ ಉರಿ, ತುರಿಕೆ, ಸೋಂಕು ಮುಂತಾದ ಕಿರಿಕಿರಿಗಳು ಕಾಡಲು ಹೆಚ್ಚಿನ ದೊಡ್ಡ ಕಾರಣವೇನು ಬೇಡ. ಆದರೆ, ಅದನ್ನು ತೋರಿಸಿಕೊಳ್ಳುವಂತೆಯೂ ಇಲ್ಲದೆ, ತಡೆದುಕೊಳ್ಳಲೂ ಆಗದೆ ಬಹಳಷ್ಟು ಮಹಿಳೆಯರು ಪರದಾಡುತ್ತಾರೆ. ಈ ಗುಪ್ತಾಂಗದ ಸೋಂಕಿಗೆ ಕಾರಣಗಳೇನೇನು ಹಾಗೂ ಅವನ್ನು ಸರಿಪಡಿಸಿಕೊಳ್ಳುವುದು ಹೇಗೆ ಎಂಬುದನ್ನು ತಿಳಿದುಕೊಳ್ಬೇಕಂದ್ರೆ ಮುಂದೆ ಓದಿ.

- ಹಾರ್ಮೋನಿನ ಏರುಪೇರು, ವಿಶೇಷವಾಗಿ ಮುಟ್ಟು ನಿಲ್ಲುವ ಹಾಗೂ ಪೀರಿಯಡ್ಸ್ ಸಂದರ್ಭದಲ್ಲಿ.

- ಸೋರಿಯಾಸಿಸ್ ಹಾಗೂ ಎಕ್ಸಿಮಾ

ವಜೈನಲ್ ಡಿಸ್ಚಾರ್ಜ್‌ಗೆ ಬೇಡ ಚಿಂತೆ, ಆದ್ರೂ ಗೊತ್ತಿರಲಿ ಕೊಂಚ!

- ಬ್ಯಾಕ್ಟೀರಿಯಾ ಹಾಗೂ ಫಂಗಲ್ ಇನ್ಫೆಕ್ಷನ್

- ಲೈಂಗಿಕವಾಗಿ ಹರಡುವ ಕಾಯಿಲೆಗಳು

- ಅತಿಯಾದ ಕೆಮಿಕಲ್ಸ್‌ಯುತ ಹೈಜಿನ್ ಉತ್ಪನ್ನಗಳ ಬಳಕೆ

- ಒತ್ತಡ  ಹಾಗೂ  ತಗ್ಗಿದ ರೋಗ ನಿರೋಧಕ ಶಕ್ತಿ

- ಸ್ವಚ್ಛತೆಯ ಕೊರತೆ

ಯೋನಿ ಬಗ್ಗೆ ನೀವು ನಂಬಿರುವ ಸುಳ್ಳುಗಳಿವು

ಡಿಹ್ರೈಡ್ರೇಶನ್ 

 ಈ ಮೇಲಿನ ಯಾವುದೇ ಕಾರಣಗಳಿಗೂ ಗುಪ್ತಾಂಗ ಕೆಂಪಾಗುವುದು, ಉರಿ, ತುರಿಕೆ ಇತ್ಯಾದಿ ತೊಂದರೆಗಳು ಕಾಡಬಹುದು. ವೆಜೈನಾವನ್ನು ಸೋಂಕು ಮುಕ್ತವಾಗಿರಿಸಲು ಸ್ವಚ್ಛತೆ ಕಾಪಾಡುವುದು ಬಹಳ ಮುಖ್ಯ. ಹಾಗಂತ ಅತಿಯಾದ ಸೋಪು ಹಾಗೂ ಇತರೆ ಕೆಮಿಕಲ್‌ಯುಕ್ತ ವಸ್ತುಗಳ ಬಳಕೆ ಖಂಡಿತಾ ಸಲ್ಲ. ಬದಲಿಗೆ ಮನೆಯಲ್ಲೇ ಇರುವ ವಸ್ತುಗಳನ್ನು ಬಳಸಿ ವೆಜೈನಲ್ ಇನ್ಫೆಕ್ಷನ್‌ನಿಂದ ಮುಕ್ತಿ ಕಾಣಬಹುದು. 

* ಬೇವು

 ಗುಪ್ತಾಂಗದಲ್ಲಿ ಫಂಗಸ್ ಇನ್ಫೆಕ್ಷನ್ ಆಗಿದ್ದರೆ ಬೇವು ಅದಕ್ಕೆ ಅತ್ಯುತ್ತಮ ಔಷಧ. ಬೇವಿನ ಕಷಾಯ ಇನ್ಪೆಕ್ಷನ್‌ನಿಂದ ಶೀಘ್ರ ಬಿಡುಗಡೆ ನೀಡುತ್ತದೆ. ನೀರಿನಲ್ಲಿ ನಾಲ್ಕು ಕಹಿಬೇವು ಹಾಕಿ ಕುದಿಸಿ ತಣ್ಣಗಾಗಲು ಬಿಡಿ. ಈ ನೀರನ್ನು ಗುಪ್ತಾಂಗಕ್ಕೆ ಸೋಕಬೇಕು. ದಿನಕ್ಕೆರಡು ಬಾರಿಯಂತೆ ವಾರದ ಕಾಲ ಮಾಡಿ ನೋಡಿ. ಇದಲ್ಲದೆ ಬೇವಿನೆಣ್ಣೆಯನ್ನು ಬಿಸಿನೀರಿಗೆ 4 ಹನಿ ಹಾಕಿಕೊಂಡು ಅದರಿಂದ ಗುಪ್ತಾಂಗ ಸ್ವಚ್ಛಗೊಳಿಸಿದರೂ ನಡೆದೀತು.

* ಮೊಸರು

ಮೊಸರಿನಲ್ಲಿರುವ ಬ್ಯಾಕ್ಟೀರಿಯಾಗಳು ಇನ್ಪೆಕ್ಷನ್ ವಿರುದ್ಧ ಹೋರಾಡಿ ತುರಿಕೆಯನ್ನು ನಿಲ್ಲಿಸುತ್ತವೆ. ಇನ್ಫೆಕ್ಷನ್‌ಗೆ ಕಾರಣವಾದ ಯೀಸ್ಟ್ ಹಾಗೂ ಅಪಾಯಕಾರಿ ಬ್ಯಾಕ್ಟೀರಿಯಾಗಳೊಂದಿಗೆ ಫೈಟ್ ಮಾಡುವ ಮೊಸರು, ಗುಪ್ತಾಂಗಕ್ಕೆ ಅಗತ್ಯವಾದ ಒಳ್ಳೆಯ ಬ್ಯಾಕ್ಟೀರಿಯಾ ಬೆಳೆಯಲೂ ಕಾರಣವಾಗುತ್ತದೆ. 

* ಬೆಳ್ಳುಳ್ಳಿ

ಬೆಳ್ಳುಳ್ಳಿಯು ಬಹಳ ಪವರ್‌ಫುಲ್ ಆ್ಯಂಟಿ ಬ್ಯಾಕ್ಟೀರಿಯಲ್ ಏಜೆಂಟ್ ಆಗಿದ್ದು, ಅದು ಸೋಂಕು ಹರಡುವ ಯೀಸ್ಟ್ ಹಾಗೂ ಬ್ಯಾಕ್ಟೀರಿಯಾವನ್ನು ಸುಲಭವಾಗಿ ನಾಶ ಮಾಡುತ್ತದೆ. ಅಲ್ಲದೆ ಬೆಳ್ಳುಳ್ಳಿ ಸೇವನೆಯು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಗುಪ್ತಾಂಗದಲ್ಲಿ ಸೋಂಕು ಆಗದಂತೆ ನೋಡಿಕೊಳ್ಳುತ್ತದೆ. ಎರಡು ಹನಿ ಬೆಳ್ಳುಳ್ಳಿ ರಸವನ್ನು ಒಂದು ಚಮಚ ವಿಟಮಿನ್ ಇ ಎಣ್ಣೆಯೊಂದಿಗೆ ಬೆರೆಸಿ ವೆಜೈನಾಗೆ ಹಚ್ಚಿ. ಹತ್ತು ನಿಮಿಷಗಳ ಬಳಿಕ ನೀರಿನಿಂದ ತೊಳೆಯಿರಿ.  ಇದನ್ನು ದಿನಕ್ಕೆರಡು ಬಾರಿಯಂತೆ ಒಂದೆರಡು ವಾರ ಪುನರಾವರ್ತಿಸಿ. 

ಗುಪ್ತಾಂಗ ಒಣಗಿಸೋ ಗಾಂಜಾ, ಲೈಂಗಿಕ ಸುಖಕ್ಕೆ ಕುತ್ತು

* ಆ್ಯಪಲ್ ಸೈಡರ್ ವಿನೆಗರ್

ಇದು ಅತ್ಯುತ್ತಮ ಆ್ಯಂಟಿ ಫಂಗಲ್ ಹಾಗೂ ಆ್ಯಂಟಿ ಬ್ಯಾಕ್ಟೀರಿಯಲ್ ಏಜೆಂಟ್  ಆಗಿದ್ದು, ವೆಜೈನಾದಲ್ಲಿ ಸೋಂಕನ್ನು ಹೋಗಿಸಿ, ನೈಸರ್ಗಿಕ ಪಿಎಚ್ ಮಟ್ಟ ಕಾಪಾಡುವಲ್ಲಿ ಸಹಕರಿಸುತ್ತದೆ. ಎರಡು ಚಮಚ ಆ್ಯಪಲ್ ಸೈಡರ್ ವಿನೆಗರ್‌ನ್ನು ಒಂದು ಲೋಟ ನೀರಿಗೆ ಸೇರಿಸಿ ದಿನಕ್ಕೆರಡು ಬಾರಿಯಂತೆ ಎರಡು ವಾರ ಅದರಿಂದ ವೆಜೈನಾ ಸ್ವಚ್ಛಗೊಳಿಸಿ. ಜೊತೆಗೆ ಪ್ರತಿದಿನ 1 ಚಮಚ ಆ್ಯಪಲ್ ಸೈಡರ್ ವಿನೆಗರನ್ನು ಒಂದು ಚಮಚ ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸಿ. ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.
ಮತ್ತೊಂದಿಷ್ಟು ಟಿಪ್ಸ್...

- ಇನ್ಫೆಕ್ಷನ್ ಇದ್ದಾಗ ಗುಪ್ತಾಂಗದ ಸ್ವಚ್ಛತೆಯ ಬಗ್ಗೆ ಹೆಚ್ಚೇ ಗಮನ ನೀಡಿ. ಆ ಭಾಗ ಒಣಗಿರುವಂತೆ ನೋಡಿಕೊಳ್ಳಿ.

- ಯಾವಾಗಲೂ ಕಾಟನ್ ಅಂಡರ್‌ವೇರ್ ಬಳಸಿ ಹಾಗೂ ಸೋಂಕಿರುವಾಗ ದಿನಕ್ಕೆರಡು ಬಾರಿ ಬದಲಿಸಿ. 

- ಸ್ಯಾನಿಟರಿ ನ್ಯಾಪ್ಕಿನ್ ಬಳಕೆ, ಕೆಮಿಕಲ್‌ಯುಕ್ತ ವಸ್ತುಗಳ ಬಳಕೆ ಹಾಗೂ ಲೈಂಗಿಕ ಸಂಪರ್ಕ ಆ ದಿನಗಳಲ್ಲಿ ಬೇಡ.

- ಸಾರ್ವಜನಿಕ ಶೌಚಾಲಯ ಬಳಕೆ ಹಾಗೂ ಸ್ವಿಮ್ಮಿಂಗ್ ಪೂಲ್ ಬಳಕೆಯಿಂದ