ಮೀನು ಖರೀದಿಸುವಾಗ ಕೆಲ ಸೂಚನೆಗಳು ನಿಮ್ಮ ತಲೆನೋವು ಕಡಿಮೆ ಮಾಡುತ್ತದೆ. ಅದರಲ್ಲೂ ಸುಲಭವಾಗಿ, ಯಾವುದೇ ಆತಂಕವಿಲ್ಲದೆ ಮೀನು ಖರೀದಿಸಲು ಮೂರು ಸೂಚನೆಗಳನ್ನು ಪರಿಗಣಿಸಿ. 3 ಸೂಚನೆಗಳಿದ್ದರೆ ಕಣ್ಮುಚ್ಚಿ ಖರೀದಿಸಿ.

ಮೀನು ಆಹಾರ ಉತ್ತಮ ಪೌಷ್ಠಿಕಾಂಶಗಳನ್ನು ಹೊಂದಿರುವುದು ಮಾತ್ರವಲ್ಲ, ಆರೋಗ್ಯಕ್ಕೂ ಉತ್ತಮ. ಸಮುದ್ರ ಮೀನುಗಳು ಸೇವನೆ ಉತ್ತಮ. ಆದರೆ ಸಮುದ್ರ ಮೀನುಗಳು ಕರಾವಳಿ ತೀರ ಪ್ರದೇಶಗಳಲ್ಲಿ ಬೇಗನೆ ಸಿಕ್ಕರೆ, ದೂರದ ಪ್ರದಶಗಳಿಗೆ ಮೀನು ತುಲುಪುವಾಗ ಕೆಲ ದಿನಗಳು ಬೇಕಾಗುತ್ತದೆ. ಐಸ್ ಹಾಕಿ ಮೀನುಗಳನ್ನು ಸಾಗಿಸಲಾಗುತ್ತೆದೆ, ಫ್ರೀಜರ್‌ನಲ್ಲಿ ಇಡಲಾಗುತ್ತದೆ. ಮೀನುಗಳು ಫ್ರೆಶ್ ಇದೆಯಾ ಎಂದು ಪರಿಶೀಲಿಸುವುದು ರಾಕೆಟ್ ಸೈನ್ಸ್ ಅಲ್ಲ. ಅತ್ಯಂತ ಸುಲಭವಾಗಿ ಮೀನು ತಾಜಾ ಇದೆಯಾ ಅನ್ನೋದು ಪರಿಶೀಲಿಸಬಹುದು. ಸುಲಭವಾದ ಮೂರು ಸೂಚನೆಗಳಿದ್ದರೆ ಯಾವುದೇ ಆತಂಕವಿಲ್ಲದೆ ಮೀನು ಖರೀದಿಸಬುಹುದು.

ಮೀನಿನ ಕಣ್ಣು

ಮೀನು ಖರೀದಿಸುವಾಗ ಫ್ರೆಶ್ ಇದೆಯಾ ಎಂದು ಪರಿಶೀಲಿಸಲು ಸರ್ಕಸ್ ಮಾಡಬೇಕಿಲ್ಲ. ಮೀನಿನ ಕಣ್ಣು ಕಪ್ಪಗಿದ್ದರೆ ಫ್ರೆಶ್ ಎಂದರ್ಥ. ಅದೇ ಮೀನಿನ ಕಣ್ಣು ಕಪ್ಪು ಬಣ್ಣ ಮಾಸಿ ಗ್ರೇ ಅಥವಾ ಮಾಸಿ ಹೋಗಿದ್ದರೆ ಮೀನು ತಾಜಾ ಅಲ್ಲ ಎಂದರ್ಥ. ತಾಜಾ ಮೀನು ಸವಿಯಲು ಬಯಸುವ ಮಂದಿಗೆ ಮೀನಿನ ಕಣ್ಣು ಪರಿಶೀಲನೆ ಮುಖ್ಯ. ಮೀನು ಮುಟ್ಟದೆ, ಹೆಚ್ಚಿನ ಸರ್ಕಸ್ ಮಾಡದೇ ಮೀನು ತಾಜಾ ಇದೆಯಾ ಅನ್ನೋದು ಪರಿಶೀಲಿಸಲು ಸಾಧ್ಯವಿದೆ.

ಮೀನಿನ ಕಿವಿರು

ಮೀನಿನ ಕಿವಿರು ಕೆಂಪು ಬಣ್ಣದಲ್ಲಿದ್ದರೆ ಅಂದರೆ ರಕ್ತ ಚಲನೆಯಿಂದ ಕೂಡಿದ ಕಿವಿರು. ಕಿವಿರು ಕೆಂಪು ಬಣ್ಣದಲ್ಲಿದ್ದರೆ ಮೀನು ತಾಜಾ ಎಂದರ್ಥ. ಆದರೆ ಮೀನಿನ ಕಿವಿರು ಕಂದು ಅಥವಾ ಮಸುಕಾಗಿದ್ದರೆ ಮೀನು ಫ್ರೆಶ್ ಇಲ್ಲ ಎಂದರ್ಥ. ಮೀನು ಬಲೆಗೆ ಬಿದ್ದು ಬೋಟಿಗೆ ಹಾಕಿದ ಬಳಿಕ ದಡಕ್ಕೆ ತರಲಾಗುತ್ತದೆ. ಐಸ್ ಹಾಕಿ ಮೀನು ಹಾಳಾಗದಂತೆ ಇಡಲಾಗುತ್ತದೆ. ಆದರೆ ಹೆಚ್ಚು ದಿನ ಕಳೆದರೆ ಕೆಂಪು ಬಣ್ಣದಲ್ಲಿರುವ ಕಿವಿರು ಬಣ್ಣ ಮಸುಕಾಗುತ್ತದೆ.

ಮೀನಿನ ಶೈನಿಂಗ್

ಮೀನಿನ ದೇಹದ ಮೇಲೆ ಹೊಳೆಯುವ ಶಲ್ಕ ಅಥವಾ ಹುರುಪೆಗಳನ್ನು ಗಮನಿಸಬೇಕು. ಶಲ್ಕಗಳು ಹೊಳೆಯುವಂತಿದ್ದರೆ ತಾಜಾ ಮೀನು ಎಂದರ್ಥ. ಆದರೆ ಮೀನಿನ ಶಲ್ಕಗಳು ಶೈನಿಂಗ್ ಇಲ್ಲದಿದ್ದರೆ ತಾಜಾ ಇಲ್ಲ ಎಂದರ್ಥ. ಮೀನಿನ ಶಲ್ಕ ಎಷ್ಟು ಹೊಳೆಯುತ್ತದೋ ಅಷ್ಟು ತಾಜಾ ಎಂದರ್ಥ ಆದರೆ ತುನಾ ಸೇರಿದಂತೆ ಕೆಲ ಮೀನುಗಳಲ್ಲಿ ಶಲ್ಕ ಇರುವುದಿಲ್ಲ, ಆದರೆ ದೇಹದಲ್ಲಿ ಶೈನಿಂಗ್ ಇರುತ್ತೆ. ಶೈನಿಂಗ್ ಉತ್ತಮವಾಗಿದ್ದರೆ ತಾಜಾ ಇದೆ ಎಂದರ್ಥ.

ಈ ಮೂರು ಸೂಚನೆಗಳನ್ನು ಸುಲಭವಾಗಿ ಗಮನಿಸಬಹುದು. ಈ ಮೂರು ಸೂಚನೆಗಳಿದ್ದರೆ ನೀವು ಯಾವುದೇ ಅಡ್ಡಿ ಆತಂಕವಿಲ್ಲದೆ ಮೀನು ಖರೀದಿಸಬಹುದು. ಅದು ಉತ್ತಮ ತಾಜಾ ಮೀನು ಆಗಿರುತ್ತದೆ. ತಾಜಾ ಮೀನು ರುಚಿ ಹೆಚ್ಚು, ಜೊತೆಗೆ ಆರೋಗ್ಯಕ್ಕೂ ಉತ್ತಮ.