MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • gardening tips : ಎತ್ತರಕ್ಕೆ ಬೆಳೆದಿರುವ ಕರಿಬೇವಿನ ಗಿಡದಲ್ಲಿ ಎಲೆ ಕಾಣ್ತಿಲ್ವ? ದಟ್ಟವಾಗಿ ಎಲೆ ಬರ್ಬೇಕು ಅಂದ್ರೆ ಹೀಗೆ ಮಾಡಿ

gardening tips : ಎತ್ತರಕ್ಕೆ ಬೆಳೆದಿರುವ ಕರಿಬೇವಿನ ಗಿಡದಲ್ಲಿ ಎಲೆ ಕಾಣ್ತಿಲ್ವ? ದಟ್ಟವಾಗಿ ಎಲೆ ಬರ್ಬೇಕು ಅಂದ್ರೆ ಹೀಗೆ ಮಾಡಿ

ಮನೆ ಅಂಗಳ, ಬಾಲ್ಕನಿಯಲ್ಲಿ ಕರಿಬೇವು ಬೆಳೆಸಿರ್ತೇವೆ. ಕರಿಬೇವಿನ ಗಿಡ ಎತ್ತರಕ್ಕೆ ಬೆಳೆಯುತ್ತಿರುತ್ತೆ. ಆದ್ರೆ ಎಲೆಗಳ ಸಂಖ್ಯೆ ಬಹಳ ಕಡಿಮೆ. ಅಲ್ಲಿ ಇಲ್ಲಿ ಒಂದೆರಡು ಎಲೆ ಕಾಣಿಸ್ತಿರುತ್ತದೆ. ಆರೋಗ್ಯಕರ ಹಾಗೂ ಹೆಚ್ಚು ಎಲೆ ಕರಿಬೇವಿನ ಗಿಡದಲ್ಲಿ ಕಾಣಿಸಬೇಕು ಎಂದ್ರೆ ಏನು ಮಾಡ್ಬೇಕು?

2 Min read
Author : Roopa Hegde
Published : Oct 13 2026, 12:41 PM IST
Share this Photo Gallery
  • FB
  • TW
  • Linkdin
  • Whatsapp
16
ಕರಿಬೇವಿನ ಆರೈಕೆ ಹೇಗೆ?
Image Credit : Asianet News

ಕರಿಬೇವಿನ ಆರೈಕೆ ಹೇಗೆ?

ಕರಿಬೇವು ಗಿಡ ಚೆನ್ನಾಗಿ ಬೆಳೆಯಲು ಸೂರ್ಯನ ಬೆಳಕು ಬಹಳ ಮುಖ್ಯ. ಹಾಗಾಗಿ ಗಿಡವನ್ನು ಬೆಳಕು ಚೆನ್ನಾಗಿ ಬೀಳುವ ಜಾಗದಲ್ಲಿ ಇಡಿ. ಪ್ರತಿದಿನ ಕನಿಷ್ಠ 4 ಗಂಟೆಗಳ ಕಾಲ ಬಿಸಿಲು ಬೀಳುವಂತೆ ನೋಡಿಕೊಳ್ಳಿ. ಸಾಮಾನ್ಯವಾಗಿ 15 ರಿಂದ 35 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಗಿಡ ಚೆನ್ನಾಗಿ ಬೆಳೆಯುತ್ತದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಕರಿಬೇವು ಗಿಡಕ್ಕೆ ಎಷ್ಟು ನೀರು ಹಾಕಬೇಕು?
Image Credit : Asianet News

ಕರಿಬೇವು ಗಿಡಕ್ಕೆ ಎಷ್ಟು ನೀರು ಹಾಕಬೇಕು?

ಗಿಡದ ಬೆಳವಣಿಗೆಗೆ ನೀರು ಮುಖ್ಯ. ಆದರೆ ಅತಿಯಾಗಿ ನೀರು ಹಾಕಿದರೆ ಬೇರುಗಳು ಕೊಳೆಯುವ ಸಾಧ್ಯತೆ ಇರುತ್ತದೆ. ಹಾಗಾಗಿ ಮಣ್ಣಿನ ಮೇಲ್ಭಾಗ ಒಣಗಿದಾಗ ಮಾತ್ರ ನೀರು ಹಾಕಿ. ನೀರು ಹಾಕಿದಾಗ ಹೆಚ್ಚುವರಿ ನೀರು ಹೊರಹೋಗುವಂತೆ ನೋಡಿಕೊಳ್ಳಿ.

Related Articles

Related image1
ಮನೆಯಲ್ಲಿ ಬೆಳೆಸಿದ ಗುಲಾಬಿ ಗಿಡದಲ್ಲಿ ಹೂ ಬಾರದಿದ್ದರೆ ಈ ಸರಳ ಟಿಪ್ಸ್ ಫಾಲೋ ಮಾಡಿ
Related image2
ಮನೆಯೊಳಗೆ ಚಿಕ್ಕ ಪಾಟ್‌ನಲ್ಲಿಯೇ ಜೀರಿಗೆ ಬೆಳೆಯುವ ರಹಸ್ಯ ವಿಧಾನ
36
ಯಾವ ಗಾತ್ರದ ಕುಂಡ ಬೇಕು?
Image Credit : Asianet News

ಯಾವ ಗಾತ್ರದ ಕುಂಡ ಬೇಕು?

ಗಿಡ ಚೆನ್ನಾಗಿ ಬೆಳೆಯಲು ಕನಿಷ್ಠ 12 ಇಂಚಿನ ಕುಂಡವನ್ನು ಆಯ್ಕೆ ಮಾಡಿಕೊಳ್ಳಿ. ಮಣ್ಣಿನ ಕುಂಡ ಬಳಸುವುದು ಉತ್ತಮ. ಕುಂಡದ ಕೆಳಭಾಗದಲ್ಲಿ ನೀರು ಹೊರಹೋಗಲು ರಂಧ್ರಗಳಿರುವುದು ಮುಖ್ಯ.

46
ಮಣ್ಣಿಗೆ ಏನೇನು ಬೆರೆಸಬೇಕು?
Image Credit : Asianet News

ಮಣ್ಣಿಗೆ ಏನೇನು ಬೆರೆಸಬೇಕು?

ಕರಿಬೇವು ಗಿಡಕ್ಕೆ ನೀರು ಸರಿಯಾಗಿ ಹರಿದುಹೋಗುವ, ಗಾಳಿಯಾಡುವ ಮತ್ತು ಪೋಷಕಾಂಶಗಳಿಂದ ಕೂಡಿರುವ ಮಣ್ಣು ಬೇಕು. ಇದಕ್ಕಾಗಿ ಗಾರ್ಡನ್ ಮಣ್ಣಿಗೆ ಅರ್ಧದಷ್ಟು ಕಾಂಪೋಸ್ಟ್ ಬೆರೆಸಿ. ಎಲೆಗಳಿಂದ ತಯಾರಿಸಿದ ಕಾಂಪೋಸ್ಟ್ ಬಳಸಿದರೆ ಉತ್ತಮ. ಇದರಲ್ಲಿ ಸಾರಜನಕ ಸೇರಿದಂತೆ ಸಸ್ಯದ ಬೆಳವಣಿಗೆಗೆ ಅಗತ್ಯವಾದ ಪೋಷಕಾಂಶಗಳು ದೊರೆಯುತ್ತವೆ.ತೆಗೆದುಕೊಂಡ ಕಾಂಪೋಸ್ಟ್ನ ಅರ್ಧದಷ್ಟು ಕೊಕೊಪೀಟ್ ಸೇರಿಸಿ. ಕೊಕೊಪೀಟ್ನ ಅರ್ಧದಷ್ಟು ಮರಳನ್ನು ಸೇರಿಸಿ. ಜೊತೆಗೆ ಸ್ವಲ್ಪ ಬೇವಿನ ಹಿಂಡಿಯನ್ನು ಹಾಕಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಹೀಗೆ ಮಾಡಿದರೆ ಕರಿಬೇವು ಗಿಡಕ್ಕೆ ಸೂಕ್ತವಾದ ಮಣ್ಣಿನ ಮಿಶ್ರಣ ಸಿದ್ಧವಾಗುತ್ತದೆ.

56
ಯಾವ ಗೊಬ್ಬರ ಹಾಕಬೇಕು?
Image Credit : Asianet News

ಯಾವ ಗೊಬ್ಬರ ಹಾಕಬೇಕು?

ಗಿಡದ ಬೆಳವಣಿಗೆಗೆ ತಿಂಗಳಿಗೊಮ್ಮೆ ವರ್ಮಿಕಾಂಪೋಸ್ಟ್ ಅಥವಾ ಚೆನ್ನಾಗಿ ಕೊಳೆತ ಹಸುವಿನ ಸಗಣಿ ಗೊಬ್ಬರವನ್ನು ಸೂಕ್ತ ಪ್ರಮಾಣದಲ್ಲಿ ಹಾಕಬಹುದು. ಗಿಡದ ಎಲೆಗಳು ಹಳದಿಯಾಗುತ್ತಿದ್ದರೆ ಅಥವಾ ಬೆಳವಣಿಗೆ ನಿಂತಿದ್ದರೆ ತಕ್ಷಣ ಹೆಚ್ಚು ಗೊಬ್ಬರ ಹಾಕಬೇಡಿ. ಮೊದಲು ಸೂರ್ಯನ ಬೆಳಕು, ನೀರಿನ ಪ್ರಮಾಣ ಮತ್ತು ಮಣ್ಣಿನ ಸ್ಥಿತಿಯನ್ನು ಪರಿಶೀಲಿಸಿ.

66
ಎಲೆಗಳು ದಟ್ಟವಾಗಿ ಬರೋದು ಯಾವಾಗ?
Image Credit : Asianet News

ಎಲೆಗಳು ದಟ್ಟವಾಗಿ ಬರೋದು ಯಾವಾಗ?

ಗಿಡ ಎತ್ತರಕ್ಕೆ ಬೆಳೆಯುತ್ತಿದೆ, ಆದರೆ ಪಕ್ಕದ ಕೊಂಬೆಗಳು ಹೆಚ್ಚಾಗಿ ಬರುತ್ತಿಲ್ಲ ಎಂದಾದರೆ ಲಘುವಾಗಿ ಪ್ರೂನಿಂಗ್ ಅಥವಾ ಕತ್ತರಿಸುವಿಕೆ ಮಾಡಬಹುದು. ಗಿಡದ ಮೇಲ್ಭಾಗದಲ್ಲಿ ಬೆಳೆಯುವ ಹೊಸ ಚಿಗುರುಗಳ ತುದಿಯನ್ನು ಅಗತ್ಯವಿದ್ದಾಗ ಸ್ವಲ್ಪ ಕತ್ತರಿಸುವುದರಿಂದ ಪಕ್ಕದ ಕೊಂಬೆಗಳು ಬೆಳೆಯಲು ಉತ್ತೇಜನ ಸಿಗಬಹುದು. ಇದರಿಂದ ಗಿಡ ಹೆಚ್ಚು ದಟ್ಟವಾಗಿ ಬೆಳೆಯಲು ಸಹಾಯವಾಗುತ್ತದೆ. ಗಿಡದ ಸ್ಥಿತಿಯನ್ನು ಗಮನಿಸಿ ಸುಮಾರು 15 ದಿನಗಳಿಗೊಮ್ಮೆ ಲಘುವಾಗಿ ಕತ್ತರಿಸಬಹುದು. ಆದರೆ ಪ್ರತಿ ಬಾರಿ ಕತ್ತರಿಸುವ ಅಗತ್ಯವಿಲ್ಲ. ಗಿಡ ಆರೋಗ್ಯವಾಗಿದೆಯೇ ಮತ್ತು ಹೊಸ ಚಿಗುರುಗಳು ಬರುತ್ತಿವೆಯೇ ಎಂಬುದನ್ನು ಗಮನಿಸಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

RH
Roopa Hegde
Roopa Hegde ಮೂಲತಃ ಉತ್ತರ ಕನ್ನಡದ ಯಲ್ಲಾಪುರದವಳು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಸ್ತೂರಿ, ಸಮಯ ಹಾಗೂ ಸುವರ್ಣ ವಾಹಿನಿಯಲ್ಲಿ ಕೆಲಸ ಮಾಡಿದ್ದೇನೆ. ಈಗ ಏಷ್ಯಾನೆಟ್ ಕನ್ನಡದಲ್ಲಿ ಫ್ರೀಲಾನ್ಸರ್ ಆಗಿ ಕೆಲಸ ಮಾಡುತ್ತಿದ್ದೇನೆ. ಟ್ರೆಂಡಿಂಗ್ ನ್ಯೂಸಲ್ಲಿ ಹೆಚ್ಚು ಆಸಕ್ತಿ ಇದ್ದು, ಸಿನಿಮಾ, ಬ್ಯುಸಿನೆಸ್, ಆರೋಗ್ಯ, ಕ್ರೈಂ, ಕ್ರೀಡೆ ಸೇರಿ ಎಲ್ಲ ಕ್ಷೇತ್ರದ ಸುದ್ದಿ ಬರೆಯುತ್ತೇನೆ.
ಉದ್ಯಾನ
ಜೀವನಶೈಲಿ
 

Latest Videos
Recommended Stories
Recommended image1
“ಇದು ಭಾರತವಲ್ಲ, ಪಾಕಿಸ್ತಾನ!” ನವರಾತ್ರಿ ಆಚರಣೆಯ ವಿಡಿಯೋ ಕಂಡು ನೆಟ್ಟಿಗರು ಅಚ್ಚರಿ
Recommended image2
Navratri ಸ್ಪೆಷಲ್ ರೆಸಿಪಿ: ದುರ್ಗಾ ದೇವಿಗೆ ನೈವೇದ್ಯವಾಗಿ 'ಕೊಬ್ಬರಿ ಲಡ್ಡು' ಮಾಡಿ, ಕೆಲವೇ ನಿಮಿಷಗಳಲ್ಲಿ ರೆಡಿ!
Recommended image3
BMTCಯ ಈ ಬಸ್​ಗಳಲ್ಲಿ ಇನ್ಮುಂದೆ ಪ್ರಯಾಣಿಕರೇ ಕಂಡಕ್ಟರ್​! Tap To Pay ವ್ಯವಸ್ಥೆ ಶೀಘ್ರ ಜಾರಿ
Related Stories
Recommended image1
ಮನೆಯಲ್ಲಿ ಬೆಳೆಸಿದ ಗುಲಾಬಿ ಗಿಡದಲ್ಲಿ ಹೂ ಬಾರದಿದ್ದರೆ ಈ ಸರಳ ಟಿಪ್ಸ್ ಫಾಲೋ ಮಾಡಿ
Recommended image2
ಮನೆಯೊಳಗೆ ಚಿಕ್ಕ ಪಾಟ್‌ನಲ್ಲಿಯೇ ಜೀರಿಗೆ ಬೆಳೆಯುವ ರಹಸ್ಯ ವಿಧಾನ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved