ಮದ್ವೆ ದಿನ ಬಾವನ ಸುಲಿಗೆ ಮಾಡೋ ಬಾಮೈದ: ನಮ್ಮಲ್ಲಿ ಮಾತ್ರ ಅಲ್ಲ ಅರ್ಮೇನಿಯಾದಲ್ಲೂ ಇದೇ ಈ ಆಚರಣೆ
ಮಗಳನ್ನು ಮದುವೆ ಮಾಡಿ ಕೊಡುವ ವೇಳೆ ಹೆಣ್ಣಿನ ಕಡೆಯವರು ತಮ್ಮ ಮನೆಯ ಹೊಸ ಅಳಿಯನಿಗೆ ವಿವಿಧ ರೀತಿಯ ತಮಾಷೆಯ ಆಟಗಳನ್ನು ಇರಿಸಿ ಮದುವೆಯ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸುತ್ತಾರೆ.
ಸಾಮಾನ್ಯವಾಗಿ ಮದುವೆ ಎಂದರೆ ಅಲ್ಲಿ ಸಂಭ್ರಮ ಸಡಗರ ನೆಲೆಸಿರುತ್ತದೆ. ಬಂಧು ಬಳಗ ನೆಂಟರು ಸ್ನೇಹಿತರ ಸಮಾಗಮದ ಜೊತೆಗೆ ಹಲವು ಸಂಪ್ರದಾಯಗಳಿಗೆ ಸಾಕ್ಷಿಯಾಗುತ್ತದೆ ಮದುವೆ. ಮದುವೆಗೆ ಸಂಬಂಧಿಸಿದಂತೆ ವಿವಿಧ ಕಡೆ ವಿವಿಧ ರೀತಿಯ ಆಚರಣೆಗಳಿದ್ದು, ಪ್ರದೇಶದಿಂದ ಪ್ರದೇಶಕ್ಕೆ ಈ ಆಚರಣೆಗಳು ವಿಭಿನ್ನವಾಗಿರುತ್ತದೆ. ಮಗಳನ್ನು ಮದುವೆ ಮಾಡಿ ಕೊಡುವ ವೇಳೆ ಹೆಣ್ಣಿನ ಕಡೆಯವರು ತಮ್ಮ ಮನೆಯ ಹೊಸ ಅಳಿಯನಿಗೆ ವಿವಿಧ ರೀತಿಯ ತಮಾಷೆಯ ಆಟಗಳನ್ನು ಇರಿಸಿ ಮದುವೆಯ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸುತ್ತಾರೆ. ಇನ್ನು ಮದುಮಗಳಿಗೆ ತಂಗಿ ತಮ್ಮಂದಿರಿದ್ದರೆ ಅವರ ಸಂಭ್ರಮವೇ ಬೇರೆ. ಸಿಕ್ಕಿದೆ ಛಾನ್ಸು ಅಂತ ವಸೂಲಿಗಿಳಿದೇ ಬಿಡುತ್ತಾರೆ..!
ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಡುವಾಗ ಅಳಿಯನ ಪಾದ ತೊಳೆಯುವ ಸಂಪ್ರದಾಯ ಕೆಲ ಸಮುದಾಯಗಳಲ್ಲಿದೆ. ಕೆಲವು ಕಡೆ ಮಾವ ಅಳಿಯನ ಪಾದ ತೊಳೆದರೆ ಮತ್ತೆ ಕೆಲವು ಸಮುದಾಯಗಳಲ್ಲಿ ಬಾಮೈದ ಅಂದರೆ ಹೆಂಡತಿಯ ತಮ್ಮ ಅಥವಾ ತಂಗಿ ಪಾದ ತೊಳೆಯುತ್ತಾರೆ. ಈ ವೇಳೆ ಬಾಮೈದನಿಗೆ ಬಾವ ಹಣವನ್ನು ಅಥವಾ ಇನ್ನೇನ್ನಾದರೂ ನೀಡಬೇಕು. ಅವನಿಗೆ ಇಷ್ಟ ಬಂದಷ್ಟು ಹಣ ನೀಡದೇ ಹೋದರೆ ಆತ ವರನನ್ನು(ಅಕ್ಕನ ಗಂಡನನ್ನು) ಅತ್ತೆ ಮನೆಯ ಹೊಸ್ತಿಲು ತುಳಿಯಲು ಬಿಡುವುದೇ ಇಲ್ಲ...! ಈ ವೇಳೆ ಹೊಸದಾಗಿ ಬಂದ ಬಾವ ತನ್ನ ಬಾಮೈದನಿಗೆ ಹಣ ನೀಡಿ ಒಳಗೆ ಪ್ರವೇಶ ಪಡೆಯುತ್ತಾನೆ. ಈ ರೀತಿಯ ಹಲವು ಮಜಾ ನೀಡುವ ಆಚರಣೆಗಳು ನಮ್ಮ ಭಾರತೀಯ ಸಂಪ್ರದಾಯದ ಮದುವೆಗಳಿವೆ.
ಗುಹೆಯೊಂದರಲ್ಲಿ 6 ಸಾವಿರ ವರ್ಷಗಳಷ್ಟು ಹಳೆಯ ಶೂ ಪತ್ತೆ
ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶ, ಒಂದು ಜನಾಂಗದಿಂದ ಮತ್ತೊಂದು ಜನಾಂಗಕ್ಕೆ ಈ ಸಂಪ್ರದಾಯಗಳು ವಿಭಿನ್ನ ಎನಿಸಿವೆ. ಆದರೆ ಪಾಶ್ಚಿಮಾತ್ಯ ದೇಶವೆನಿಸಿರುವ ಅರ್ಮೇನಿಯಾದಲ್ಲೂ ಭಾರತದ ಮದುವೆಯಲ್ಲಿರುವಂತೆ ಇದೊಂದು ರೀತಿಯ ಒಂದು ಆಚರಣೆ ಇದೆ ಎಂದರೆ ನೀವು ನಂಬುತ್ತೀರಾ? ಅರ್ಮೇನಿಯಾದ ಮದುವೆಯೊಂದರಲ್ಲಿ ಇದೇ ರೀತಿಯ ಆಚರಣೆಯ ವೀಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೌದು ಈ ವೀಡಿಯೋವನ್ನು ಲ್ಯಾಡ್ಬೈಬಲ್ (ladbible) ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಪೋಸ್ಟ್ ಮಾಡಲಾಗಿದೆ.
ಮತ್ತೆ ತಾಯಿಯಾಗುವ ಸುದ್ದಿ ನಿರಾಕರಿಸಿದ ಅನುಷ್ಕಾ ಶರ್ಮಾ..!
ಈ ವೀಡಿಯೋವನ್ನು ಪೋಸ್ಟ್ ಮಾಡಿರುವ ಲ್ಯಾಡ್‌ಬೈಬಲ್ ಎಂಬ ಇನ್ಸ್ಟಾಗ್ರಾಮ್ ಪೇಜ್, ಅರ್ಮೇನಿಯಾದ ಮದುವೆಗಳಲ್ಲಿ ಇದು ಸಂಪ್ರದಾಯವಾಗಿದೆ. ವಧುವಿನ ಸಹೋದರ ಮನೆಯ ನಿರ್ಗಮನ ದ್ವಾರದಲ್ಲಿ ನಿಂತು ವಧುವನ್ನು ಕರೆದುಕೊಂಡು ಹೋಗಬೇಕಾದರೆ ಹಣ ನೀಡಬೇಕು ಎಂದು ವಸೂಲಿಗಿಳಿಯುತ್ತಾನೆ ಎಂದು ಬರೆಯಲಾಗಿದೆ.
ಕಬಿನಿಯಲ್ಲಿ ಕ್ಯಾಮರಾ ಕಣ್ಣಿಗೆ ಸೆರೆಯಾದ ಕರಿಯ... ಕರಿಚಿರತೆಯ ಸುಂದರ ಫೋಟೋಗಳು
ಅಕ್ಕನೊಂದಿಗೆ ಮನೆಯಿಂದ ಹೊರಡುವ ಭಾವನ ಸುಲಿಗೆಗೆ ಇಳಿಯುವ ಬಾಮೈದ
ಆಗಷ್ಟೇ ಮದುವೆಯಾಗಿ ಅತ್ತೆ ಮನೆಯಿಂದ ಪತ್ನಿಯನ್ನು ಕರೆದುಕೊಂಡು ತನ್ನ ಮನೆಗೆ ಹೊರಡುವ ಬಾವನನ್ನು ಮನೆ ಬಾಗಿಲಲ್ಲೇ ತಡೆಯುವ ಬಾಮೈದ. ಬಾಗಿಲಲ್ಲೇ ಚಾಕು ಹಿಡಿದು ನಿಂತಿದ್ದಾನೆ.. ಬಾಗಿಲಿನ ಒಂದು ಸೈಡ್‌ನಲ್ಲಿ ನಿಂತು ಮತ್ತೊಂದು ಸೈಡ್‌ಗೆ ಚಾಕು ಹಿಡಿದು ಹಣ ನೀಡುವಂತೆ ಬಾವನಲ್ಲಿ ಕೇಳುತ್ತಾನೆ. ಈ ವೇಳೆ ಬಾವ ಮೊದಲಿಗೆ ಒಂದು ನೋಟು ತೆಗೆದು ಚಾಕುವಿನ ಮೇಲೆ ಇಡುತ್ತಾನೆ. ಇದು ಸಾಲದು ಎಂಬಂತೆ ಬಾಮೈದ ತಲೆ ಅಲ್ಲಾಡಿಸುತ್ತಾನೆ. ಹೀಗೆ ಐದು ಬಾರಿ ಆತ ನೋಟುಗಳನ್ನು ಬಾಮೈದನಿಗೆ ನೀಡಿ ದಾರಿ ಬಿಡುವಂತೆ ಕೇಳುತ್ತಾನೆ. ಐದು ನೋಟುಗಳನ್ನು ಚಾಕುವಿನ ಮೇಲೆ ಇಟ್ಟ ನಂತರವಷ್ಟೇ ಬಾಮೈದ ದಾರಿ ಬಿಡುತ್ತಾನೆ. ಒಟ್ಟಿನಲ್ಲಿ ಮದುವೆ ಮನೆಯ ಈ ಆಚರಣೆಗಳು ಮದುವೆಯ ಖುಷಿಗೆ ಮತ್ತಷ್ಟು ಸಂಭ್ರಮ ತುಂಬುತ್ತವೆ.