ಅನುಷ್ಕಾ ಶರ್ಮಾ ಗರ್ಭಿಣಿಯಾಗಿದ್ದಾರೆ ವಿರಾಟ್ ಕೊಹ್ಲಿ ಮತ್ತೆ ತಂದೆಯಾಗುತ್ತಿದ್ದಾರೆ ಎಂಬ ಸುದ್ದಿ ನಿನ್ನೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು, ಬಹುತೇಕ ಎಲ್ಲಾ ಮಾಧ್ಯಮಗಳು ಈ ಸುದ್ದಿಯನ್ನು ಪ್ರಕಟಿಸಿದ್ದವು

ಮುಂಬೈ: ಅನುಷ್ಕಾ ಶರ್ಮಾ ಗರ್ಭಿಣಿಯಾಗಿದ್ದಾರೆ ವಿರಾಟ್ ಕೊಹ್ಲಿ ಮತ್ತೆ ತಂದೆಯಾಗುತ್ತಿದ್ದಾರೆ ಎಂಬ ಸುದ್ದಿ ನಿನ್ನೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು, ಬಹುತೇಕ ಎಲ್ಲಾ ಮಾಧ್ಯಮಗಳು ಈ ಸುದ್ದಿಯನ್ನು ಪ್ರಕಟಿಸಿದ್ದವು. ಆದರೆ ಸ್ವತಃ ಅನುಷ್ಕಾ ಶರ್ಮಾ ಈ ಸುದ್ದಿಯನ್ನು ನಿರಾಕರಿಸಿದ್ದಾರೆ...! ಜೊತೆಗೆ ತಮ್ಮ ಗರ್ಭಾವಸ್ಥೆಯ ಸುದ್ದಿ ಪ್ರಕಟಿಸಿದ ಮಾಧ್ಯಮಗಳ ಕಾಲೆದಿದ್ದಾರೆ. ಆದರೆ ಈ ಸುದ್ದಿಯನ್ನು ನಿರಾಕರಿಸಿರುವುದು ರಿಯಲ್‌ ಅನುಷ್ಕಾ ಶರ್ಮಾ ಅಲ್ಲ, ಫೇಕ್ ಅನುಷ್ಕಾ..! 

ಮಾಧ್ಯಮವೊಂದರ ನ್ಯೂಸ್ ಟ್ವಿಟ್‌ ಶೇರ್ ಮಾಡಿಕೊಂಡಿರುವ ಅನುಷ್ಕಾ ಹೆಸರಿನಲ್ಲಿರುವ ಫೇಕ್‌ ಖಾತೆಯಿಂದ, ವಾವ್‌ ಈ ವಿಚಾರ ವಿರಾಟ್‌ ಕೊಹ್ಲಿ ಹಾಗೂ ನನಗಿಂತ ಮೊದಲೇ ನಿಮಗೆ ತಿಳಿದಿದೆ ಎಂದು ವ್ಯಂಗ್ಯವಾಡಿದ್ದಾರೆ. ಈ ಟ್ವಿಟ್‌ಗೆ ಅನೇಕರು ನಗುವ ಇಮೋಜಿ ಮೂಲಕ ಪ್ರತಿಕ್ರಿಯಿಸಿದ್ದಾರೆ. ಮತ್ತೊಂದು ಸೋಜಿಗವೆಂದರೆ ಈ ಫೇಕ್‌ ಟ್ವಿಟ್‌ನ್ನು 4 ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ. ಮತ್ತೆ ಕೆಲವರು ನಾನು ಇದು ಅನುಷ್ಕಾ ಅವರ ರಿಯಲ್ ಟ್ವಿಟ್ಟರ್ ಅಕೌಂಟ್ ಎಂದೇ ಭಾವಿಸಿದ್ದೇ ಎಂದು ಕಾಮೆಂಟ್ ಮಾಡಿದ್ದಾರೆ.

ಅನುಷ್ಕಾ ಶರ್ಮಾ ಪ್ರಗ್ನೆಂಟ್, ಎರಡನೇ ಮಗುವಿನ ನಿರೀಕ್ಷೆಯಲ್ಲಿ ಕಿಂಗ್ ಕೊಹ್ಲಿ..?

ಬಾಲಿವುಡ್ ನಟಿ ಅನುಷ್ಕಾ ಶರ್ಮಾ (Anushka Sharma)ಹಾಗೂ ವಿರಾಟ್ ಕೊಹ್ಲಿಗೆ ಈಗಾಗಲೇ ಒಬ್ಬಳು ಮಗಳಿದ್ದಾಳೆ. 2021ರ ಜನವರಿಯಲ್ಲಿ ವಿರಾಟ್ ಕೊಹ್ಲಿ (virat kohli) ಪತ್ನಿ ಅನುಷ್ಕಾ ಶರ್ಮಾ ವಾಮಿಕಾ ಎನ್ನುವ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆದರೆ ಇದುವರೆಗೂ ವಾಮಿಕಾ ಮುಖವನ್ನು ವಿರುಷ್ಕಾ ಜೋಡಿ ಜಗತ್ತಿಗೆ ತೋರಿಸಿಲ್ಲ ಇತ್ತ ವಿರಾಟ್ ಕೊಹ್ಲಿ, ಅನುಷ್ಕಾ ದಂಪತಿಗೆ ಜಗತ್ತಿನಾದ್ಯಂತ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಪ್ರಸ್ತುತ ವಿರಾಟ್ ಕೊಹ್ಲಿ, ಮುಂಬರುವ ವಿಶ್ವಕಪ್ ಟೂರ್ನಿಗಾಗಿ ಸಜ್ಜಾಗುತ್ತಿದ್ದಾರೆ. 

ಈ ಮಧ್ಯೆ ಮಾಧ್ಯಮಗಳಲ್ಲಿ ಅನುಷ್ಕಾ ಮತ್ತೆ ಗರ್ಭಿಣಿ, ವಿರಾಟ್ ಕೊಹ್ಲಿ ಮತ್ತೆ ತಂದೆಯಾಗುತ್ತಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಹಿಂದುಸ್ತಾನ್ ಟೈಮ್ಸ್ ವರದಿಯ ಪ್ರಕಾರ, ಅನುಷ್ಕಾ ಶರ್ಮಾ ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಕಳೆದ ಬಾರಿಯಂತೆ ಈ ಬಾರಿ ಕೂಡಾ ಅವರು ಕೊನೆಯ ಹಂತದಲ್ಲಿ ಔಪಚಾರಿಕವಾಗಿ ಈ ವಿಚಾರವನ್ನು ಬಹಿರಂಗ ಪಡಿಸಲಿದ್ದಾರೆ ಎಂದು ವರದಿ ಮಾಡಿದೆ. ಗಾಳಿಸುದ್ದಿಗಳಿಂದ ದೂರವಿರುವ ಉದ್ದೇಶದಿಂದ ಅನುಷ್ಕಾ ಶರ್ಮಾ ಸಾರ್ವಜನಿಕವಾಗಿ ಕಾಣಿಸುತ್ತಿಲ್ಲ ಎಂದು ವರದಿಯಾಗಿದೆ.

ವಮಿಕಾ ಹುಟ್ಟಿದ ಬಳಿಕ ಮೊದಲ ಬಾರಿ ಒಟ್ಟಾಗಿ ಗಣೇಶ ಹಬ್ಬ ಆಚರಿಸಿದ ವಿರುಷ್ಕಾ ಜೋಡಿ..!

ಇನ್ನು ಕೆಲವು ದಿನಗಳ ಹಿಂದಷ್ಟೇ ವಿರುಷ್ಕಾ ದಂಪತಿ ಮುಂಬೈನಲ್ಲಿರುವ ಪ್ರಖ್ಯಾತ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿದ್ದರು. ಈ ವಿಚಾರವನ್ನು ಈಗಲೇ ಬಹಿರಂಗ ಪಡಿಸುವುದು ಬೇಡ. ಕೆಲ ಸಮಯದ ಬಳಿಕ ತಾವೇ ಈ ವಿಷಯವನ್ನು ಹೊರ ಜಗತ್ತಿಗೆ ತಿಳಿಸಲಿದ್ದೇವೆ ಎಂದು ಮನವಿ ಮಾಡಿಕೊಂಡಿದ್ದರು.

Scroll to load tweet…