ಭಾರತದಲ್ಲಿ ವಾಸಿಸೋಕೆ ಅತ್ಯುತ್ತಮ ನಗರ ಯಾವುದು? ಬೆಂಗಳೂರಿಗೆ ಎಷ್ಟನೇ ಸ್ಥಾನ?
ಭಾರತದಲ್ಲಿ ಮುಂಬೈ, ದೆಹಲಿ, ಬೆಂಗಳೂರು, ಚೆನ್ನೈ, ಕೊಚ್ಚಿ, ಹೈದರಾಬಾದ್ ಹೀಗೆ ಹಲವಾರು ನಗರಗಳಿವೆ. ಆದರೆ ಜನರ ಪಾಲಿಗೆ ವಾಸಯೋಗ್ಯವೆನಿಸಿದ ಬೆಸ್ಟ್ ನಗರ ಯಾವುದು? ಇಲ್ಲಿದೆ ಮಾಹಿತಿ.
ಹೈದರಾಬಾದ್: ಭಾರತದಲ್ಲಿ ಹಲವಾರು ರಾಜ್ಯಗಳಿವೆ. ಬೇರೆ ಬೇರೆ ರಾಜ್ಯಗಳಲ್ಲಿ ಹಲವು ನಗರಗಳಿದ್ದು, ತಮ್ಮದೇ ವಿಶೇಷತೆಗೆ ಹೆಸರುವಾಸಿಯಾಗಿವೆ. ಜನರು ಶಿಕ್ಷಣ, ಉದ್ಯೋಗ, ಉದ್ಯಮ ಹೀಗೆ ಹಲವು ಕಾರಣಗಳಿಗೆ ಬೇರೆ ಬೇರೆ ನಗರಕ್ಕೆ ಪ್ರಯಾಣಿಸುತ್ತಾರೆ. ತಮಗೆ ಎಲ್ಲಾ ರೀತಿಯಲ್ಲೂ ಸೂಕ್ತವೆನಿಸಿದ ನಗರದಲ್ಲಿ ಸೆಟಲ್ ಆಗುತ್ತಾರೆ. ಭಾರತದಲ್ಲಿ ಮುಂಬೈ, ದೆಹಲಿ, ಬೆಂಗಳೂರು, ಚೆನ್ನೈ, ಕೊಚ್ಚಿ, ಹೈದರಾಬಾದ್ ಹೀಗೆ ಹಲವಾರು ನಗರಗಳಿವೆ. ಆದರೆ ವಾಸಯೋಗ್ಯವೆನಿಸಿದ ಬೆಸ್ಟ್ ನಗರ ಯಾವುದು?
2023ರ ಮರ್ಸರ್ಸ್ ಕ್ವಾಲಿಟಿ ಆಫ್ ಲಿವಿಂಗ್ ಸಮೀಕ್ಷೆಯ ಪ್ರಕಾರ ಹೈದರಾಬಾದ್, ಭಾರತದಲ್ಲಿ ವಾಸಿಸಲು ಅತ್ಯುತ್ತಮ ನಗರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸತತ 6ನೇ ಬಾರಿಗೆ ಹೈದರಾಬಾದ್, ಈ ಹೆಗ್ಗಳಿಕೆಗೆ ಪಾತ್ರವಾಗಿದೆ. ಹೈದರಾಬಾದ್, ಪುಣೆ, ಬೆಂಗಳೂರು, ಚೆನ್ನೈ, ಮುಂಬೈ ಮುಂತಾದ ಭಾರತೀಯ ನಗರಗಳನ್ನು ಮೀರಿಸಿದೆ. ಜಾಗತಿಕವಾಗಿ 227 ನಗರಗಳಲ್ಲಿ 202ನೇ ಸ್ಥಾನದಲ್ಲಿದೆ. ರಾಜಕೀಯ ಸ್ಥಿರತೆ, ಆರೋಗ್ಯ ರಕ್ಷಣೆ, ಶಿಕ್ಷಣ, ಮೂಲಸೌಕರ್ಯ ಮತ್ತು ಸಾಮಾಜಿಕ-ಸಾಂಸ್ಕೃತಿಕ ಪರಿಸರದಂತಹ ಅಂಶಗಳೊಂದಿಗೆ ಕಡಿಮೆ ಜೀವನ ವೆಚ್ಚವು ಹೈದರಾಬಾದ್‌ಗೆ ಜನರನ್ನು ಆಕರ್ಷಿಸುತ್ತಿದೆ.
ದೇಶದ ಅತ್ಯಂತ ಅಸುರಕ್ಷಿತ ನಗರಗಳಿವು… ಹೋಗೋ ಮುನ್ನ ಎಚ್ಚರಿಕೆ ಇರಲಿ
ಸತತ ಆರನೇ ಬಾರಿ ಹೈದರಾಬಾದ್‌ಗೆ ಅತ್ಯುತ್ತಮ ನಗರವೆಂಬ ಹೆಗ್ಗಳಿಕೆ
ಕೋವಿಡ್ -19 ಸಾಂಕ್ರಾಮಿಕ ಹರಡುವುದಕ್ಕೂ ಮೊದಲು, ಹೈದರಾಬಾದ್ 2015 ಮತ್ತು 2019ರ ನಡುವೆ ಸತತವಾಗಿ ಐದು ಬಾರಿ ಈ ಮರ್ಸರ್ ಮಾನ್ಯತೆಯನ್ನು ಗೆದ್ದಿದೆ. ಮರ್ಸರ್ಸ್ ವರದಿಯು, ಪ್ರಪಂಚದಾದ್ಯಂತದ ಪ್ರಮುಖ ನಗರಗಳ (City) ಜೀವನ ವೆಚ್ಚವನ್ನು ಸಹ ಮೌಲ್ಯಮಾಪನ ಮಾಡುತ್ತದೆ. ಅದರ ಪ್ರಕಾರ, ಹೈದರಾಬಾದ್ ಜನರಿಗೆ ಜೀವನ (Life) ನಡೆಸಲು ಬಜೆಟ್ ಫ್ಲೆಂಡ್ಲೀ ಸಿಟಿಯಾಗಿದೆ ಎಂದು ತಿಳಿಸಲಾಗಿದೆ.
ವಾಸಿಸಲು ಅತೀ ದುಬಾರಿ (Costly)ಯಾಗಿರುವ ನಗರಗಳ ಪಟ್ಟಿಯಲ್ಲಿ ಮುಂಬೈ 147ನೇ ಸ್ಥಾನದಲ್ಲಿದೆ. ದೆಹಲಿ (169), ಚೆನ್ನೈ (184), ಬೆಂಗಳೂರು (189) ಕ್ರಮವಾಗಿ ನಂತರದ ಸ್ಥಾನದಲ್ಲಿವೆ. 2022ರಲ್ಲಿಯೂ ಸಹ, Mercers 'ಕಾಸ್ಟ್ ಆಫ್ ಲಿವಿಂಗ್' ಸಮೀಕ್ಷೆಯಲ್ಲಿ ಹೈದರಾಬಾದ್ ಜಾಗತಿಕವಾಗಿ 192ನೇ ಸ್ಥಾನದಲ್ಲಿತ್ತು. ಎಲ್ಲಾ ಇತರ ಭಾರತೀಯ ಮಹಾನಗರಗಳಿಗಿಂತ ಹೈದರಾಬಾದ್‌ನಲ್ಲಿ ವಸತಿ, ಸಾರಿಗೆ ಮತ್ತು ಆಹಾರ, ಬಟ್ಟೆ, ಗೃಹೋಪಯೋಗಿ ವಸ್ತುಗಳು ಅಗ್ಗವಾಗಿದೆ ಎಂದು ವರದಿ ಸೂಚಿಸುತ್ತದೆ.
ಇದು ಬೆಂಗಳೂರಿನ ಯಾವ ರಸ್ತೆ ಅಂತಾ ಗೆಸ್ ಮಾಡ್ತೀರಾ?
ಹೈದರಾಬಾದ್ ಎಲ್ಲರ ಫೇವರಿಟ್ ಯಾಕೆ?
ಹೈದರಾಬಾದ್ ನಗರದಲ್ಲಿ ನೆಲೆಸಿರುವ ಹಲವರು ಕೇವಲ ಅಗ್ಗ ಎನ್ನುವುದಕ್ಕೆ ಮಾತ್ರವಲ್ಲ ಆರಾಮದಾಯಕವಾಗಿದೆ ಅನ್ನೋ ಕಾರಣಕ್ಕೆ ಈ ಸಿಟಿಯನ್ನು ಆಯ್ದುಕೊಂಡಿದ್ದೇವೆ ಎಂದು ಹೇಳಿದ್ದಾರೆ. ಲೋ ಕಾಸ್ಟ್ ಆಫ್ ಲಿವಿಂಗ್ ಇರುವುದರ ಜೊತೆಗೆ ಕಂಫರ್ಟೆಬಲ್ ಲೈಫ್‌ಸ್ಟೈಲ್ ಇಲ್ಲಿದೆ ಎಂದು ವ್ಯಕ್ತಿಯೊಬ್ಬರು ತಿಳಿಸಿದ್ದಾರೆ. ದೆಹಲಿಯಿಂದ ಹೈದರಾಬಾದ್‌ಗೆ ಟ್ರಾನ್ಸ್‌ಫರ್ ಆಗಿರೋ ಸಾಫ್ಟ್‌ವೇರ್ ಡೆವಲಪರ್, 'ಈ ನಗರದಲ್ಲಿ ನಾವು ಸಾಕಷ್ಟು ಸೇವಿಂಗ್ಸ್ ಮಾಡಬಹುದು, ಹೆಚ್ಚು ಹಸಿರಾದ ಸ್ಥಳಗಳಿವೆ. ಮಾಲಿನ್ಯ ಮಟ್ಟಗಳು ದೆಹಲಿಗಿಂತ ಕಡಿಮೆಯಾಗಿದೆ' ಎಂದು ತಿಳಿಸಿದ್ದಾರೆ.
ಕೋಲ್ಕತ್ತಾದಿಂದ ಹೈದರಾಬಾದ್‌ಗೆ ಶಿಫ್ಟ್ ಆಗಿರುವ ಉದ್ಯೋಗಿಯೊಬ್ಬರು, 'ನಾವು ಕೇವಲ ಉದ್ಯೋಗದ ಕಾರಣಕ್ಕಾಗಿ ಈ ನಗರದಲ್ಲಿ ನೆಲೆಸಿಲ್ಲ. ಬದಲಿಗೆ ಈ ನಗರದಲ್ಲಿ ನಮ್ಮದೆಂಬ ಆಪ್ತತೆಯಿದೆ. ಶಿಕ್ಷಣದ ಗುಣಮಟ್ಟವೂ ಇಲ್ಲಿ ಅತ್ಯುತ್ತಮವಾಗಿದೆ' ಎಂದು ಹೇಳಿದ್ದಾರೆ. ಹೈದರಾಬಾದ್‌ಗೆ ಕೀನ್ಯಾ, ಉಗಾಂಡ, ತಜಕಿಸ್ತಾನ, ಮೊದಲಾದ ದೇಶಗಳಿಂದ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ಬರುತ್ತಾರೆ.