ಇದು ಬೆಂಗಳೂರಿನ ಯಾವ ರಸ್ತೆ ಅಂತಾ ಗೆಸ್ ಮಾಡ್ತೀರಾ?
ಬೆಂಗಳೂರಿನಲ್ಲಿ ಸಾಕಷ್ಟು ಪ್ರಮುಖ ರಸ್ತೆಗಳಿವೆ. ಇಂಟರ್ನೆಟ್‌ನಲ್ಲಿ ವೈರಲ್ ಆಗಿರುವ ಈ ಚಿತ್ರದಲ್ಲಿರುವ ರಸ್ತೆ ಯಾವುದು ಅನ್ನೋದನ್ನು ಗೆಸ್ ಮಾಡ್ತೀರಾ?
ಬೆಂಗಳೂರು (ಡಿ.14): ಉದ್ಯಾನಗರಿ, ಐಟಿ ಹಬ್ ಹೀಗೆ ಬೇಕಾದಷ್ಟು ಹೆಸರು ಪಡೆದುಕೊಂಡಿರುವ ಬೆಂಗಳೂರು ನಗರಕ್ಕೆ ಇತ್ತೀಚೆಗೆ ಆರ್‌ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಹೊಸ ಹೆಸರನ್ನು ನೀಡಿದ್ದಾರೆ. ಇಂದು ಭಾರತದಲ್ಲಿ ಫರ್ಸ್ಟ್ ವರ್ಲ್ಡ್ ಎಕಾನಮಿಯನ್ನು ನಡೆಸುತ್ತಿರುವ ಯಾವುದಾದರೂ ನಗರವಿದ್ದರೆ ಅದರಲ್ಲಿ ಬೆಂಗಳೂರು ಒಂದೂ ಎಂದು ಹೇಳಿದ್ದಾರೆ. ಅಂದರೆ, ದೇಶದ ನೋಯ್ಡಾ, ಗುರುಗ್ರಾಮ ಹಾಗೂ ಬೆಂಗಳೂರು ನಗರಗಳು ಫರ್ಸ್ಟ್ ವರ್ಲ್ಡ್ ಎಕಾನಮಿ ನಗರಗಳು ಎಂದು ಕರೆದಿದ್ದಾರೆ. ಅಂದಾಜು 20 ವರ್ಷಗಳ ಹಿಂದಿಂದ ಬೆಂಗಳೂರು ಈಗಿಲ್ಲ. ಅತಿಯಾದ ಪ್ರಗತಿ ಬೆಂಗಳೂರನ್ನು ಕಳೆದ 20 ವರ್ಷಗಳಲ್ಲಿಯೇ ದೇಶದ ಪ್ರಮುಖ ನಗರವನ್ನಾಗಿ ಮಾಡಿದೆ. ಅದರ ನಡುವೆ ಬೆಂಗಳೂರು ಮುಂದಿನ ಕೆಲವೇ ವರ್ಷಗಳಲ್ಲಿ ಈ ಅತಿಯಾದ ಪ್ರಗತಿಗೆ ಬಲಿಯಾಗುವ ಸಾಧ್ಯತೆ ಇದೆ. ತನ್ನೂರಿನ ಹೊಲ-ಗದ್ದೆಗಳನ್ನು ಮಾರಿ ಬೆಂಗಳೂರಿನಲ್ಲಿ ಫ್ಲ್ಯಾಟ್ ಖರೀದಿ ಮಾಡುವ ಜನರಿಗೆ ಕಾಲಕಾಲಕ್ಕೆ ನೀರು ಸಿಗುತ್ತಿಲ್ಲ. ಕಾರುಗಳು ರಸ್ತೆಗೆ ಇಳಿದರೆ, ತಾನು ಕೆಲಸ ಮಾಡುವ ಕಂಪನಿಗೆ ಹೋಗಲು ಕನಿಷ್ಠ ಎಂದರು ಒಂದು ಗಂಟೆ ಬೇಕು ಅಷ್ಟು ಟ್ರಾಫಿಕ್‌ನ ಕಿರಿಕಿರಿ. ಮಳೆಗಾಲ ಬಂತೆಂದರೆ ಸಾಕು ತಗ್ಗು ಪ್ರದೇಶಗಳಿಗೆ ಎಗ್ಗಿಲ್ಲದೆ ಹರಿಯುವ ನೀರು. ಇದರ ನಡುವೆ ಇಂಟರ್ನೆಟ್‌ನಲ್ಲಿ ಒಂದು ಫೋಟೋ ಸಖತ್ ವೈರಲ್ ಆಗಿದೆ. ಬೆಂಗಳೂರಿನ ಪ್ರಮುಖ ರಸ್ತೆಯೊಂದರ ಫೋಟೋ ಇದಾಗಿದ್ದು, ಇದು ಯಾವ ರಸ್ತೆ ಇರಬಹುದು ಅಂತಾ ಗೆಸ್ ಮಾಡ್ತೀರಾ ನೋಡಿ..
ಒಂದು ಕಾಲದಲ್ಲಿ ಬರೀ ಹಸಿರಿನಿಂದಲೇ ಕಂಗೊಳಿಸುತ್ತಿದ್ದ ಪ್ರದೇಶ ಇದು. ಇಂದು ಸಿಲ್ಕ್‌ಬೋರ್ಡ್ ಹಾಗೂ ಎಲೆಕ್ಟ್ರಾನಿಕ್ಸ್ ಸಿಟಿ ನಡುವಿನ ಪ್ರಮುಖ ರಸ್ತೆ. ಮೈ ಬೆಂಗಳೂರು ಫೇಸ್‌ಬುಕ್ ಪೇಜ್ ಹಂಚಿಕೊಂಡಿರುವ ಈ ಫೋಟೋಗೆ ಈಗಾಗಲೇ 5500 ಲೈಕ್ಸ್ ಬಂದಿವೆ. ಹೆಚ್ಚಿನವರು ಈ ಚಿತ್ರಕ್ಕೆ ಬೇಸರದಿಂದಲೇ ಕಾಮೆಂಟ್ ಹಾಕಿದ್ದಾರೆ.
ಬೆಂಗಳೂರು ತನ್ನ ಚಾರ್ಮ್ ಕಳೆದುಕೊಂಡಿದೆ ಅನ್ನೋದನ್ನು ಈ ಚಿತ್ರ ನೋಡಿದರೆ ಹೇಳಬಹುದು. ನಮ್ಮ ಸಿಟಿಯಲ್ಲಿ ಅಗತ್ಯಕ್ಕೂ ಹೆಚ್ಚಿನ ಜನರಿದ್ದಾರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದರೆ, ಇನ್ನೊಬ್ಬರು ಬೆಂಗಳೂರು ತನ್ನ ಹಸಿರನ್ನು ಕಳೆದುಕೊಳ್ಳುತ್ತಿದೆ. 90ರ ದಶಕ ನಿಜವಾದ ಶ್ರೇಷ್ಠ ಸಮಯವಾಗಿತ್ತು ಎಂದು ಬರೆದುಕೊಂಡಿದ್ದಾರೆ.
ನಾನು ಈ ರಸ್ತೆಯಲ್ಲಿ ಪ್ರತಿ ದಿನ ಸಾಗುತ್ತನೆ. ನಮ್ಮ ಕಂಪನಿ ಕೂಡ ಇದೇ ಪ್ರದೇಶದಲ್ಲಿದೆ ಎಂದು ಇನೊಬ್ಬರು ಬರೆದಿದ್ದಾರೆ. 'ಈ ರಸ್ತೆಗಳನ್ನು ಬಳಸುವ ಜನರು ಸ್ವಲ್ಪ ರಸ್ತೆ ಸುರಕ್ಷತೆ ಮತ್ತು ಲೇನ್ ಸಂಸ್ಕೃತಿಯನ್ನು ಹೊಂದಿದ್ದರೆ, ಜೀವನವು ಹೆಚ್ಚು ಆಹ್ಲಾದಕರವಾಗಿರುತ್ತಿತ್ತು. ಉತ್ತಮ ರಸ್ತೆ ಸಂಸ್ಕೃತಿಯ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗದಿದ್ದರೆ ಅಂತಹ ಮೂಲಸೌಕರ್ಯವನ್ನು ಬಳಸಲೂ ಸಾಧ್ಯವಾಗೋದಿಲ್ಲ' ಎಂದು ಮತ್ತೊಬ್ಬರು ಬರೆದಿದ್ದಾರೆ.
ಬ್ರ್ಯಾಂಡ್ ಬೆಂಗಳೂರು ರಸ್ತೆಯಲ್ಲಿ ಮತ್ತೊಂದು ಮಹಾಗುಂಡಿ: ವಾಹನ ಸವಾರರೇ ಎಚ್ಚರ!
ಈ ಚಿತ್ರ ನೋಡಲು ಮಾತ್ರವೇ ಸುಂದರ. ಸಿಗ್ನಲ್ ಮಾತ್ರ ನರಕ. ಆದ್ರೂ ನಮ್ಮ ಸಿಲ್ಕ್ ಬೋರ್ಡ್ ಇಂದ ಬೊಮ್ಮನಹಳ್ಳಿ ಸಿಗ್ನಲ್ ಕ್ರಾಸ್ ಮಾಡಿದ್ರೆ ಏನೋ ಒಂಥರಾ ಮಜಾ ಟ್ರಾಫಿಕ್ ಅಲ್ಲಿ ಎಂದು ಮತ್ತೆ ಕೆಲವರು ಬರೆದುಕೊಂಡಿದ್ದಾರೆ.
ಸಿಎಂ ಅವರೇ, ನಿಮ್ಮ ಸಚಿವರ ಇನೋವಾ ಕಾರು ಇಲ್ಲಿ ಈ ರಸ್ತೇಲಿ ಓಡಾಡೋದಿಲ್ಲ, ಬಡವ ಬಿದ್ದು ಸತ್ರೆ ನಿಮ್ಗೆ ಗೊತ್ತಾಗೋದು ಇಲ್ಲ!