Asianet Suvarna News Asianet Suvarna News

ಸಲೂನ್ ಇಟ್ಕೊಂಡಿದ್ದ ವ್ಯಕ್ತಿಯೀಗ ಬಿಲಿಯನೇರ್‌, ರೋಲ್ಸ್‌ ರಾಯ್ಸ್‌, ಬೆಂಜ್‌ ಸೇರಿ 400 ಲಕ್ಸುರಿಯಸ್‌ ಕಾರುಗಳ ಒಡೆಯ!

ಜೀವನದಲ್ಲಿ ಸಾಧಿಸುವ ಛಲವೊಂದಿದ್ದರೆ ಸಾಕು, ಏನನ್ನಾದರೂ ಸಾಧಿಸಿಬಿಡಬಹುದು ಎಂಬುದಕ್ಕೆ ಈ ವ್ಯಕ್ತಿಯ ಜೀವನ ಅತ್ಯುತ್ತಮ ನಿದರ್ಶನ. ಪುಟ್ಟ ಕ್ಷೌರದ ಅಂಗಡಿಯಿಂದ ತೊಡಗಿ ಅತೀ ದೊಡ್ಡ ಟ್ರಾವೆಲ್‌ ಏಜೆನ್ಸಿ ಸ್ಥಾಪಿಸಿ ಯಶಸ್ವೀಯಾದ ವ್ಯಕ್ತಿಯ ಕಥೆಯಿದು.

Bengaluru Barber, One Of Indias Wealthiest, Has 400 Luxury Cars In His Fleet Vin
Author
First Published Sep 23, 2023, 12:42 PM IST

ದಿನ ಬೆಳಗಾದರೆ ಅಂಗಡಿ ಬಾಗಿಲು ತೆರೆದು ಕ್ಷೌರ ಮಾಡುವ ವ್ಯಕ್ತಿಯೊಬ್ಬ ಅಬ್ಬಬ್ಬಾ ಎಂದರೆ ಎಷ್ಟು ಸಾಧಿಸಬಹುದು. ಕೇವಲ ಹೊಟ್ಟೆ ಬಟ್ಟೆಗೆ ಸಾಕಾಗಬಹುದು ಅಷ್ಟೇ ಅಲ್ವಾ ಎಂದು ನಾವು ಅಂದುಕೊಳ್ಳಬಹುದು. ಆದರೆ ಅಸಲೀಯತ್ತು ಹಾಗಿಲ್ಲ. ಬೆಂಗಳೂರಿನಲ್ಲಿ ಕ್ಷೌರ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಈಗ ಕೋಟಿ ಕೋಟಿ ಆಸ್ತಿಯ ಒಡೆಯ. ನಾಲ್ನೂರಕ್ಕೂ ಹೆಚ್ಚು ಲಕ್ಸುರಿ ಕಾರುಗಳನ್ನು (Luxury Cars) ಹೊಂದಿದ್ದಾರೆ.  ಇಷ್ಟಕ್ಕೂ ಸಾಮಾನ್ಯ ಕ್ಷೌರದಂಗಡಿಯ ವ್ಯಕ್ತಿಯೊಬ್ಬ ಈ ಮಟ್ಟಿಗೆ ಯಶಸ್ಸು ಸಾಧಿಸಿದ್ದು ಹೇಗೆ?

ಉತ್ತಮ ಯಶಸ್ಸನ್ನು (Success) ಸಾಧಿಸುವುದು ಅಷ್ಟು ಸುಲಭವಲ್ಲ. ಇದು ಅಚಲವಾದ ಸಮರ್ಪಣೆ ಮತ್ತು ಕಠಿಣ ಪರಿಶ್ರಮವನ್ನು ಬಯಸುತ್ತದೆ. ಇದಕ್ಕೆ ಪ್ರಮುಖ ಉದಾಹರಣೆಯೆಂದರೆ ಬೆಂಗಳೂರಿನ ಕೋಟ್ಯಾಧಿಪತಿ ಕ್ಷೌರಿಕ ರಮೇಶ್ ಬಾಬು. ಅವರು ಇದೇ ರೀತಿಯ ಸಾಧನೆಯನ್ನು ಮಾಡಿದ್ದಾರೆ. ಝೀರೋದಿಂದ ತೊಡಗಿ ಕೋಟಿಯಲ್ಲಿ ಗಳಿಸುತ್ತಿದ್ದಾರೆ.

ಕೂಲಿ ಹೊರುತ್ತಿದ್ದ ವ್ಯಕ್ತಿ ಯುಪಿಎಸ್‌ಸಿ ಪರೀಕ್ಷೆ ಪಾಸಾಗಲು ನೆರವಾಯ್ತು ರೈಲು ನಿಲ್ದಾಣದ ಉಚಿತ ಇಂಟರ್‌ನೆಟ್‌

ಕಂತುಗಳಲ್ಲಿ ಕಾರು ಖರೀದಿಸಿ ಟ್ರಾವೆಲ್ ಏಜೆನ್ಸಿ ಆರಂಭ
ಬಡತನದಲ್ಲಿಯೇ ಬೆಳೆದ ರಮೇಶ್ ಬಾಬು ತಮ್ಮ ತಂದೆಯ ಮರಣದ ನಂತರ ಅನಿವಾರ್ಯವಾಗಿ ಕೆಲಸ ಮಾಡಲು ಆರಂಭಿಸಿದರು. ತಂದೆಯೊಬ್ಬರೇ ಕುಟುಂಬ ಆದಾಯದ ಮೂಲವಾಗಿದ್ದ ಕಾರಣ ತಾಯಿಯೂ ಕೆಲಸಕ್ಕೆ ಹೋಗಲು ಆರಂಭಿಸಿದರು. ಹೀಗಾಗಿ ರಮೇಶ್‌ ಬಾಬು,  ಹತ್ತನೇ ತರಗತಿಯನ್ನು ಮುಗಿಸಿದ ನಂತರ, ತನ್ನ ತಂದೆಯ ಅಂಗಡಿಯ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡರು.ಹಗಲಿರುಳು ದುಡಿದ, ಸಣ್ಣ ಕ್ಷೌರಿಕನ ಅಂಗಡಿಯನ್ನು ಟ್ರೆಂಡಿ ಮತ್ತು ಸ್ಟೈಲಿಶ್ ಹೇರ್ ಸಲೂನ್ ಆಗಿ ಪರಿವರ್ತಿಸಿಕೊಂಡರು. ಸಲೂನ್‌ ಸ್ಟೈಲಿಶ್ ಲುಕ್ ಪಡೆದುಕೊಳ್ಳುತ್ತಿದ್ದಂತೆ ಹೆಚ್ಚೆಚ್ಚು ಗ್ರಾಹಕರು ಅಂಗಡಿಗೆ ಬರಲು ಆರಂಭಿಸಿದರು.

ರಮೇಶ್ ಬಾಬು ಸಲೂನ್ ಅಭಿವೃದ್ಧಿ ಹೊಂದುತ್ತಾ ಹೋದಂತೆ 1993ರಲ್ಲಿ  ಕಂತುಗಳಲ್ಲಿ ಮಾರುತಿ ಓಮ್ನಿ ಕಾರನ್ನು ಖರೀದಿಸಿದರು. ಆದರೆ ಇವೆಲ್ಲದರ ಮಧ್ಯೆ ಹಣಕಾಸಿನ ಮುಗ್ಗಟ್ಟು ಉಂಟಾಯಿತು. ಕಂತುಗಳನ್ನು ಕಟ್ಟೋದು ಕಷ್ಟಕರವಾಗಿ ಪರಿಣಮಿಸಿತು. ಈ ಸಂದರ್ಭದಲ್ಲಿ ರಮೇಶ್ ತಾಯಿ ಕೆಲಸ ಮಾಡುತ್ತಿದ್ದ ಮನೆಯ ಮಹಿಳೆ ಕಾರನ್ನು ಬಾಡಿಗೆಗೆ ನೀಡುವಂತೆ ಸೂಚಿಸಿದರು. ರಮೇಶ್ ಕಾರನ್ನು ಬಾಡಿಗೆಗೆ ಇಡಲು ಆರಂಭಿಸಿದರು. ಇದು ಯಶಸ್ವೀಯಾಗಿ ಲಾಭವನ್ನು ಗಳಿಸಲು ಆರಂಭಿಸಿತು.

ಸರ್ಕಾರಿ ಕೆಲಸಕ್ಕೆ ರಾಜೀನಾಮೆ ನೀಡಿ ಆರ್ ಒ ಕಂಪನಿ ಸ್ಥಾಪಿಸಿದ ಐಐಟಿ ಪದವೀಧರ, ಇಂದು 1100 ಕೋಟಿ ಒಡೆಯ

ರೋಲ್ಸ್ ರಾಯ್ಸ್, ಬೆಂಜ್ ಸೇರಿ 400 ಐಷಾರಾಮಿ ವಾಹನ ಹೊಂದಿರೋ ವ್ಯಕ್ತಿ
ಕಾರನ್ನು ಬಾಡಿಗೆ ನೀಡುವುದರಿಂದ ಆರಂಭಿಸಿ ರಮೇಶ್, ಟೂರ್ಸ್ ಮತ್ತು ಟ್ರಾವೆಲ್ಸ್‌ನ್ನು ಸ್ಥಾಪಿಸಿದರು. ಭಾರತದ ವಿವಿಧ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವ ಬಾಡಿಗೆ ಸೇವೆಗಳಿಗಾಗಿ ಇವರು ಕಾರನ್ನು ಒದಗಿಸುತ್ತಾರೆ. ಇಂದು, ರಮೇಶ್ ಬಾಬು ಅವರು ತಮ್ಮ ಅಭಿವೃದ್ಧಿ ಹೊಂದುತ್ತಿರುವ ವಾಹನ ವ್ಯಾಪಾರದಲ್ಲಿ ಮುಂಚೂಣಿಯಲ್ಲಿದ್ದಾರೆ.  

ಪ್ರಸ್ತುತ ರಮೇಶ್‌ ಬಾಬು 400 ಐಷಾರಾಮಿ ವಾಹನಗಳನ್ನು ಹೊಂದಿದ್ದಾರೆ. ರೋಲ್ಸ್ ರಾಯ್ಸ್ ಘೋಸ್ಟ್, ಮರ್ಸಿಡಿಸ್ ಬೆಂಜ್, ಆಡಿಸ್ ಮತ್ತು ಹೆಚ್ಚಿನವುಗಳನ್ನು ಒಳಗೊಂಡಿರುವ ಅವರ ಐಷಾರಾಮಿ ವಾಹನಗಳ ವ್ಯಾಪಕ ಸಂಗ್ರಹವು ಅವರನ್ನು ನಗರದಲ್ಲಿ ಪ್ರಮುಖ ವ್ಯಕ್ತಿಯನ್ನಾಗಿ ಮಾಡಿದೆ. ಹೀಗಿದ್ದೂ ರಮೇಶ್‌ ಸರಳ ಜೀವನಶೈಲಿಯನ್ನು ಅನುಸರಿಸುತ್ತಾರೆ. ಗ್ರಾಹಕರಿಗೆ ಹೇರ್‌ಕಟ್‌ಗಳನ್ನು ಸಹ ಮಾಡುತ್ತಾರೆ.

Follow Us:
Download App:
  • android
  • ios