Asianet Suvarna News Asianet Suvarna News

ಕೂಲಿ ಹೊರುತ್ತಿದ್ದ ವ್ಯಕ್ತಿ ಯುಪಿಎಸ್‌ಸಿ ಪರೀಕ್ಷೆ ಪಾಸಾಗಲು ನೆರವಾಯ್ತು ರೈಲು ನಿಲ್ದಾಣದ ಉಚಿತ ಇಂಟರ್‌ನೆಟ್‌

ಕಷ್ಟಪಟ್ಟು ಕೆಲಸ ಮಾಡಿದರೆ ಖಂಡಿತ ಯಶಸ್ಸು ಸಿಗುತ್ತದೆ ಎಂಬುದಕ್ಕೆ ಕೇರಳದ ಕೂಲಿ ಕಾರ್ಮಿಕನೇ ಇದಕ್ಕೆ ಸಾಕ್ಷಿ. ಕೇರಳದ ಮುನ್ನಾರ್‌ನ ಶ್ರೀನಾಥ್ ಕೆ. ಈ ಹಿಂದೆ ಮುನ್ನಾರ್ ರೈಲು ನಿಲ್ದಾಣದಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಆಗ ಉಚಿತ ವೈಫೈ ಮೂಲಕ ಪರೀಕ್ಷೆಗೆ ತಯಾರಿ ನಡೆಸಿದರು.

Journey From Coolie To IAS Officer Sreenath K who worked as coolie cracked UPSC exam using Railway  Wi-Fi gow
Author
First Published Sep 20, 2023, 7:23 PM IST

ಕಷ್ಟಪಟ್ಟು ಕೆಲಸ ಮಾಡಿದರೆ ಖಂಡಿತ ಯಶಸ್ಸು ಸಿಗುತ್ತದೆ ಎಂಬುದಕ್ಕೆ ಕೇರಳದ ಕೂಲಿ ಕಾರ್ಮಿಕನೇ ಇದಕ್ಕೆ ಸಾಕ್ಷಿ. ಯುಪಿಎಸ್‌ಸಿ ಪರೀಕ್ಷೆಯನ್ನು ಭೇದಿಸುವುದು ಅಷ್ಟು ಸುಲಭದ ಮಾತಲ್ಲ. ಅದಕ್ಕೆ ವರ್ಷಗಳ ಸತತ ಪ್ರಯತ್ನ, ಪರಿಶ್ರಮ ಬೇಕು.  ಎಲ್ಲಾ ಸಂಪನ್ಮೂಲ ಹೊಂದಿದ್ದರೂ ಯುಪಿಎಸ್‌ ಪಾಸಾಗದೇ ಇರುವವರೂ ಅದೆಷ್ಟೋ ಮಂದಿ ಇದ್ದಾರೆ. ಅಂತವರಲ್ಲಿ  ಯಾವುದೇ ಸೌಲಭ್ಯ ಇಲ್ಲದೆ ಯುಪಿಎಸ್‌ ಬರೆದು ಪಾಸಾಗಿ ಸಾಧನೆ ಮಾಡಿರುವುದು ಕೇರಳದ  ಶ್ರೀನಾಥ್ ಕೆ. ಇಂದು ಇವರ ಅದೆಷ್ಟೋ ಮಂದಿಗೆ ಮಾದರಿಯಾಗಿದ್ದಾರೆ.

ದೇಶದ ಅತ್ಯಂತ ಕಠಿಣ ಎಂದು ಪರಿಗಣಿಸಲಾದ ಪರೀಕ್ಷೆಯನ್ನು ಐಎಎಸ್ ಅಧಿಕಾರಿ ಶ್ರೀನಾಥ್ ಕೆ ಭೇದಿಸಲು ಅವರಿಗೆ ನೆರವಾಗಿದ್ದು, ಭಾರತೀಯ ರೈಲ್ವೆಯ ವೈಫೈ ಸೇವೆ.  ಏಕೆಂದರೆ ಶ್ರೀನಾಥ್ ಯಾವುದೇ ಕೋಚಿಂಗ್ ತೆಗೆದುಕೊಳ್ಳಲಿಲ್ಲ. ಅವರ ಕುಟುಂಬ ಆರ್ಥಿಕವಾಗಿ ಅಷ್ಟೊಂದು ಸದೃಢವಾಗಿರಲಿಲ್ಲ.

ಯುಎಸ್ ಮೂಲದ ಕಂಪೆನಿಯಿಂದ 1.35 ಕೋಟಿ ರೂ. ಪ್ಯಾಕೇಜ್ ಉದ್ಯೋಗ ಪಡೆದು ಬೆಂಗಳೂರು ಯುವಕ ಐತಿಹಾಸಿಕ ಸಾಧನೆ

ಕೇರಳದ ಮುನ್ನಾರ್‌ನ ಶ್ರೀನಾಥ್ ಕೆ. ಈ ಹಿಂದೆ ಮುನ್ನಾರ್ ರೈಲು ನಿಲ್ದಾಣದಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಎರ್ನಾಕುಲಂನಲ್ಲಿ ಕೂಲಿ ಕೆಲಸ ಮಾಡುವ ಮೂಲಕ ಕುಟುಂಬವನ್ನು ಪೋಷಿಸಿದರು. ಅವರು ಅತ್ಯಂತ ಬದ್ಧತೆಯ ಕೆಲಸಗಾರರಾಗಿದ್ದರು, ಏಕೆಂದರೆ ಅವರು ಕುಟುಂಬದ ಏಕೈಕ ದುಡಿಯುವ ಕೈಯಾಗಿತ್ತು. ಎರಡು ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ಅವರು ದಿನಕ್ಕೆ 400-500 ರೂ ದುಡಿಯುತ್ತಿದ್ದರು.  ಬಡತನದಲ್ಲಿ ಬದುಕುತ್ತಿದ್ದ ತನ್ನ ಕುಟುಂಬದ ಆರ್ಥಿಕ ಸ್ಥಿತಿಯನ್ನು ಬದಲಾಯಿಸಬೇಕೆಂಬ ಬಲವಾದ ಗುರಿ  ಶ್ರೀನಾಥ್ ಅವರದ್ದಾಗಿತ್ತು. ಅದಕ್ಕಾಗಿಯೇ ಅವರು ಸರ್ಕಾರಿ ಪರೀಕ್ಷೆಗೆ ಹಾಜರಾಗಲು ನಿರ್ಧರಿಸಿದರು.  ಈ ಮೂಲಕ ಖಾಯಂ ಸರ್ಕಾರಿ ಉದ್ಯೋಗ ಪಡೆಯುವ ಇರಾದೆ ಹೊಂದಿದ್ದರು.

ಸರ್ಕಾರಿ ಕಛೇರಿಯಲ್ಲಿ ಒಳ್ಳೆಯ ಕೆಲಸ ಗಿಟ್ಟಿಸಿಕೊಳ್ಳುವ ಇರಾದೆ ಇದ್ದರೂ ಶ್ರೀನಾಥನಿಗೆ ಅನುಕೂಲವಾಗಲಿಲ್ಲ. ಕುಟುಂಬದ ಜವಾಬ್ದಾರಿಗಳು ತನ್ನ ಹೆಗಲ ಮೇಲೆ ಇತ್ತು. ಹೀಗಾಗಿ ಕೂಲಿಯಾಗಿಯೂ ಕೆಲಸ ಮಾಡಬೇಕಾಗಿತ್ತು, ಇದರಿಂದಾಗಿ ಅವರು ಅಧ್ಯಯನಕ್ಕಾಗಿ ಸಾಕಷ್ಟು ಸಮಯವನ್ನು ಕಳೆಯಲು ಸಾಧ್ಯವಾಗುತ್ತಿರಲಿಲ್ಲ.

 ಬರೋಬ್ಬರಿ 35 ಬಾರಿ ರಿಜೆಕ್ಟ್ ಆದ ಮಾಜಿ ಗೂಗಲ್‌ ಉದ್ಯೋಗಿಗೆ ಕೊನೆಗೂ ಸಿಕ್ತು 1.9 ಕೋಟಿ ರೂ

ಇದಲ್ಲದೆ, ಕೋಚಿಂಗ್ ತರಗತಿಗಳಿಗೆ ದಾಖಲಾಗಲು ಅಥವಾ ದುಬಾರಿ ಪುಸ್ತಕಗಳನ್ನು ಖರೀದಿಸಲು ಅವರ ಬಳಿ ಸಾಕಷ್ಟು ಹಣವಿರಲಿಲ್ಲ. ಆಗ ಅವರ ಕನಸಿಗೆ ಕನ್ನಡಿಯಾಗಿದ್ದೇ ರೈಲ್ವೆಯ ಉಚಿತ ಇಂಟರ್‌ನೆಟ್‌ ಸೌಲಭ್ಯ. 

ರೈಲ್ವೇ ಇಲಾಖೆಯು ಪ್ರಯಾಣಿಕರಿಗೆ ಉಚಿತ ವೈ-ಫೈ ಅನ್ನು ಮೊದಲು ಪ್ರಾರಂಭಿಸಿದ ಕೆಲವೇ ನಿಲ್ದಾಣಗಳಲ್ಲಿ ಮುನ್ನಾರ್ ಕೂಡ ಒಂದಾಗಿದೆ. ಶ್ರೀನಾಥ್ ಈ ಸೌಲಭ್ಯದ ಸಂಪೂರ್ಣ ಪ್ರಯೋಜನವನ್ನು ಪಡೆದರು ಮತ್ತು ಅವರು ತಮ್ಮ ಮೊಬೈಲ್ ಸಹಾಯದಿಂದ ಪರೀಕ್ಷೆಗಳಿಗೆ ಬೇಕಾದ ಮುಖ್ಯವಾದ ಎಲ್ಲಾ ವೀಡಿಯೊಗಳು, ಅಧ್ಯಯನ ಸಾಮಗ್ರಿಗಳು ಮತ್ತು ಆಡಿಯೊಗಳನ್ನು ಡೌನ್‌ಲೋಡ್ ಮಾಡಿಕೊಂಡರು.

ಅವರು ಮೊದಲು ಕೆಪಿಎಸ್‌ಸಿ ಪರೀಕ್ಷೆಗೆ ರಾಜ್ಯ ಮಟ್ಟದಲ್ಲಿ ಹಾಜರಾಗಿ ಉತ್ತಮ ಶ್ರೇಣಿಯನ್ನು ಗಳಿಸಿದರು. ಆದರೆ ಅವರು ಅಷ್ಟಕ್ಕೇ ಸುಮ್ಮನಾಗಲಿಲ್ಲ. ಐಎಎಸ್ ಅಧಿಕಾರಿಯಾಗುವುದು ಶ್ರೀನಾಥ್ ಅವರ ಮುಖ್ಯ ಗುರಿಯಾಗಿತ್ತು ಮತ್ತು ಆದ್ದರಿಂದ ಅವರು ಯುಪಿಎಸ್‌ಸಿ ಪರೀಕ್ಷೆಗಳಿಗೆ ತಯಾರಿ ಮುಂದುವರೆಸಿದರು. ತಮ್ಮ ನಾಲ್ಕನೇ ಪ್ರಯತ್ನದಲ್ಲಿ ಉತ್ತಮ ರ್ಯಾಂಕ್ ಗಳಿಸಿ ಐಎಎಸ್ ಅಧಿಕಾರಿಯಾದರು.

ನಿಮ್ಮ ಪರಿಸ್ಥಿತಿ ಮತ್ತು ಆರ್ಥಿಕ ಸ್ಥಿತಿ ಏನೇ ಇರಲಿ ಕಷ್ಟಪಟ್ಟು ದುಡಿಯುವ ಹಂಬಲವಿದ್ದರೆ ಖಂಡಿತ ನಿಮ್ಮ ಗುರಿ ತಲುಪಬಹುದು ಎಂಬುದಕ್ಕೆ ಶ್ರೀನಾಥ್ ಅವರ ಪ್ರಯಾಣವೇ ಸಾಕ್ಷಿ.

Follow Us:
Download App:
  • android
  • ios