ಫ್ಯಾಷನ್ ಹೆಸರಲ್ಲಿ ಮಾಡುವ ಕೆಲವು ವಿಷಯಗಳು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಅದರಲ್ಲಿ ನಾಭಿ ಪಿಯರ್ಸಿಂಗ್ ಸಹ ಒಂದು. ಏನಾಗಬಹುದು ಇದರಿಂದ?
ಕಿವಿ ಮತ್ತು ಮೂಗಿಗೆ ಆಭರಣ ಧರಿಸೋದು ಹಳೆ ಕಾಲದ ಸ್ಟೈಲ್. ತುಟಿ ಮೇಲೆ ಅಥವಾ ನಾಭಿ ಮೇಲೆ ಆಭರಣ ಚುಚ್ಚಿಸಿಕೊಳ್ಳುವುದು ಈಗಿನ ಟ್ರೆಂಡ್. ಆದರೆ, ನಾಭಿಯೊಂದು ಸೂಕ್ಷ್ಮ ಜಾಗ. ನಾಭಿ ಪಿಯರ್ಸಿಂಗ್ ಮಾಡುವಾಗ ಇನ್ಫೆಕ್ಷನ್ ಆಗಬಹುದು.
- ಪಿಯರ್ಸಿಂಗ್ ಮಾಡಿದ ಎರಡು ದಿನ ಎಲ್ಲವೂ ಸರಿಯಾಗಿದ್ದರೆ ಸರಿ. ಆದರೆ ಆ ಜಾಗದಲ್ಲಿ ಕೆಂಪು ಕಜ್ಜಿಗಳು. ಹಸಿರಾಗುವುದು, ಹಳದಿ ಕಲೆ ಕಾಣಿಸಿಕೊಂಡರೆ ಕೆಲವು ಮನೆ ಮದ್ದುಗಳನ್ನು ಮಾಡೋದು ಒಳಿತು.
- ಬಿಸಿ ಉಪ್ಪು ನೀರು ನಾಭಿ ಇನ್ಫೆಕ್ಷನ್ ಅನ್ನು ನಿವಾರಿಸಬಹುದು. ಬಿಸಿ ನೀರಿನಿಂದ ಹೊರ ಬರುವ ಬಿಸಿ ಸೋಂಕು ತಾಗಿದ ಜಾಗದಲ್ಲಿ ರಕ್ತ ಪರಿಚಲನೆ ಸರಾಗವಾಗುತ್ತದೆ.
- ಉಪ್ಪು ನೀರು ಒಂದು ಉತ್ತಮ ಕೀಟನಾಶಕ. ಒಂದು ಕಪ್ ಬಿಸಿ ನೀರಿಗೆ ಒಂದು ಚಮಚ ಉಪ್ಪು ಹಾಕಿ ಕರಗಿಸಿ. ಅದರಲ್ಲಿ ಕಾಟನ್ ಅದ್ದಿ ಸೋಂಕು ಆಗಿರುವ ಜಾಗಕ್ಕೆ ಹಚ್ಚಿದರೆ ಸೋಂಕು ನಿವಾರಣೆಯಾಗುತ್ತದೆ.
- ಆಲ್ಕೋಹಾಲ್‌ನಿಂದಲೂ ಸೋಂಕು ನಿವಾರಿಸಬಹುದು. ಇದರಲ್ಲಿರುವ ಆ್ಯಂಟಿಸೆಪ್ಟಿಕ್ ಗುಣ ಸೋಂಕು ಹರಡುವುದನ್ನು ತಡೆಯುತ್ತದೆ.
ಫಂಗಲ್ ಇನ್ಫೆಕ್ಷನ್‌ನಿಂದ ಪಾದ ರಕ್ಷಣೆ ಹೇಗೆ?
- ಟೀ ಟ್ರೀ ಎಣ್ಣೆಯಿಂದಲೂ ಉರಿ ಮತ್ತು ನೋವು ನಿವಾರಣೆಯಾಗುತ್ತದೆ. ಸೋಂಕು ಎಡಿಎ ಜಾಗಕ್ಕೆ ಆಲ್ಕೋಹಾಲ್ ಅನ್ನು ಹತ್ತಿಯಿಂದ ಹಚ್ಚಬೇಕು.
- ವೈಟ್ ವಿನೆಗರ್ : ಬಿಳಿ ವಿನೆಗರ್‌ಗೆ ಅಸಿಡಿಕ್ ಗುಣವಿದೆ. ಅಲ್ಲದೆ ಇದೂ ಸೋಂಕು ನಿವಾರಿಸುತ್ತದೆ. ಬಿಸಿ ನೀರಿನಲ್ಲಿ ವಿನೆಗರ್ ಮಿಕ್ಸ್ ಮಾಡಿ ಅದರಲ್ಲಿ ಕಾಟನ್ ಅದ್ದಿ ಸೋಂಕು ಆಗಿರುವ ಜಾಗದಲ್ಲಿ ಹಾಕಿ. ಅದು ಹತ್ತು ನಿಮಿಷಗಳ ಕಾಲ ಹಾಗೇ ಇರಲಿ. ನಂತರ ಅದನ್ನು ತೆಗೆಯಿರಿ. ಹೀಗೆ ಎರಡು ಮೂರು ಬಾರಿ ಮಾಡಿ.
