ಒಂದೊಂದು ಕಾಲದಲ್ಲಿ ಒಂದು ಚರ್ಮ ಸಂಬಂಧಿ ಸಮಸ್ಯೆಗಳು ಕಾಡುತ್ತವೆ. ಒಮ್ಮೆ ದೇಹದಲ್ಲಿ ನೀರಿನಂಶ, ಜಿಡ್ಡಿನಾಂಶ ಕಡಿಮೆಯಾಗಿ ಚರ್ಮದಲ್ಲಿ ಒಡಕು ಕಂಡರೆ, ಮತ್ತೊಮ್ಮೆ ನೀರಲ್ಲಿ ಹೆಚ್ಚು ಓಡಾಡಬೇಕಾದ ಪ್ರಸಂಗ ಬರುವುದರಿಂದ ಕಾಲಿನ ಸಂದು ಕೊಳೆಯುತ್ತವೆ. ಅದರಲ್ಲಿಯೂ ಮಲೆನಾಡಿನ ಮಂದಿ ಮಳೆಗಾಲದಲ್ಲಿ ಆ ಸಮಸ್ಯೆಯಿಂದ ಬಳಲುವುದು ಹೆಚ್ಚು.

 

ಕೆಸರು, ಮಳೆ, ನೀರು, ತೇವಾಂಶದಿಂದ ಕಾಲಿನಲ್ಲಿ ಫಂಗಲ್ ಇನ್ಫೆಕ್ಷನ್ ಕಾಣಿಸಿಕೊಳ್ಳುತ್ತದೆ. ಇದಕ್ಕಾಗಿಯೇ ತ್ವಚೆ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಮುಖ್ಯ....

  • ಫಂಗಸ್‌ನಿಂದ ಕಾಡಬಹುದಾದ ಕಜ್ಜಿಗಳಿಂದ ಒಂದು ರೀತಿಯ ದ್ರವ ಹೊರ ಬರುತ್ತದೆ. ಅವುಗಳನ್ನು ಪ್ರತಿದಿನ ಕ್ಲೀನ್ ಮಾಡಬೇಕು. ಅದನ್ನು ಹಾಗೆ ಬಿಟ್ಟರೆ ಸಮಸ್ಯೆ ಉಲ್ಭಣಿಸುತ್ತದೆ.
  • ಬೆಳಗ್ಗೆ ಸ್ನಾನ ಮಾಡುವಾಗ ಕಾಲುಗಳ ಆರೋಗ್ಯದ ಬಗ್ಗೆ ವಿಶೇಷ ಗಮನವಿರಲಿ. ಪಾದಗಳನ್ನು ಚೆನ್ನಾಗಿ ತೊಳೆಯಿರಿ. ಅಲ್ಲದೆ ಒಣಗಲು ಬಿಡಿ. ಬೆರಳುಗಳ ಮಧ್ಯೆ ಟಾಲ್ಕಮ್ ಪೌಡರ್ ಸಿಂಪಡಿಸಿ. -ಚಪ್ಪಲ್ ಅಥವಾ ಓಪನ್ ಆಗಿರುವ ಸ್ಯಾಂಡಲ್ ಸಾಧ್ಯವಾದಷ್ಟು ಬಳಸಿ. ಕಾಲನ್ನು ಮುಚ್ಚುವ ಶೂಸ್ ಬಳಸುವುದಾದರೆ ಒಳಗೆ ಪೌಡರ್ ಹಾಕಲು ಮರೆಯಬೇಡಿ.
  • ಆಗಾಗ ಪೆಡಿಕ್ಯೂರ್ ಮಾಡಿಸಿಕೊಳ್ಳಿ. ಇದರಿಂದ ಪಾದ ಸ್ವಚ್ಛವಾಗಿರುತ್ತದೆ.
  • ತಣ್ಣೀರಿಗೆ ಸ್ವಲ್ಪ ಉಪ್ಪು ಹಾಕಿ, ಕಾಲನ್ನು ಅದರಲ್ಲಿ ಹಾಕಿಡಿ. ನಂತರ ಚೆನ್ನಾಗಿ ಒಣಗಲು ಬಿಡಿ. ಹೀಗೆ ಮಾಡುವುದರಿಂದ ಮಳೆಗಾಲದಲ್ಲಿ ಕಂಡು ಬರುವ ಎಥಿಲಿಟ್ ಫುಟ್ ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ.

ಈ ಸಮಸ್ಯೆಯನ್ನು ಆರಂಭದಲ್ಲಿಯೇ ಪತ್ತೆ ಹಚ್ಚಿ, ಸೂಕ್ತ ಚಿಕಿತ್ಸೆ ನೀಡಿದರೆ ಬೇಗ ಗುಣಪಡಿಸಿಕೊಳ್ಳಬಹುದು. ಆದರೆ, ನೆಗ್ಲೆಕ್ಟ್ ಮಾಡಿದರೆ ಸಮಸ್ಯೆ ಗಂಭೀರವಾಗುತ್ತದೆ. ದೊಡ್ಡ ಗಾಯ, ತುರಿಕೆ, ರಕ್ತ ಸ್ರಾವವೂ ಆಗಬಹುದು. ಅದು ವಿಪರೀತವಾದರೆ ವೈದ್ಯರ ಸಲಹೆ ಪಡೆಯುವುದು ಅನಿವಾರ್ಯ.