ಲಿಸಾ ಹೆಡೆನ್ ಅಪ್ಲೋಡ್ ಮಾಡಿರುವ ಫೋಟೋಗೆ ವಿರೋಧಮಗನ ಜೊತೆಗಿನ ಫೋಟೋಗೂ ಯಾಕಿಷ್ಟು ವಿರೋಧ?ಲಿಸಾ ಧರಿಸಿರುವ ಸ್ವಿಮ್ ಸೂಟ್ ಸರಿಯಿಲ್ವಂತೆ

ನವದೆಹಲಿ(ಜೂ.30): ನಟಿ ಲಿಸಾ ಹೆಡನ್ ಏನೇ ಮಾಡಿದ್ರೂ ಅದು ಸುದ್ದಿಯಾಗುತ್ತೆ. ಲಿಸಾ ಅಪ್ಲೋಡ್ ಮಾಡುವ ಒಂದು ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತದೆ.

ಹೌದು, ಲಿಸಾ ಇತ್ತೀಚಿಗೆ ತಮ್ಮ ಇನ್ಸಟಾಗ್ರಾಮ್‌ನಲ್ಲಿ ಫೋಟೋವೊಂದನ್ನು ಅಪ್ಲೋಡ್ ಮಾಡಿದ್ದಾರೆ. ಆದರೆ ಈ ಫೋಟೋ ಕೆಲವು ನೆಟಿಜನ್ ಗಳ ಆಕ್ರೋಶಕ್ಕೆ ತುತ್ತಾಗಿದೆ. ಅಷ್ಟಕ್ಕೂ ಲಿಸಾ ತಮ್ಮ ಒಂದು ವರ್ಷದ ಮುದ್ದಾದ ಮಗ ಜ್ಯಾಕ್ ಜೊತೆಗಿರುವ ಫೋಟೋ ಅಪ್ಲೋಡ್ ಮಾಡಿದ್ದಾರೆ.

ಆದರೆ ಈ ಫೋಟೋದಲ್ಲಿ ಲಿಸಾ ಧರಿಸಿರುವ ಬಟ್ಟೆ ಮತ್ತು ಮಗನ ಜೊತೆಗೆ ಆಕೆಯ ಭಂಗಿ ನೆಟಿಜನ್ ಗಳ ಆಕ್ರೋಶಕ್ಕೆ ಕಾರಣವಾಗಿದೆ. ಲಿಸಾ ತಮ್ಮ ಮಗ ಜ್ಯಾಕ್ ಜೊತೆ ಬೀಚ್ ನಲ್ಲಿ ಎಂಜಾಯ್ ಮಾಡುತ್ತಿರುವ ಫೋಟೋ ಅಪ್ಲೋಡ್ ಮಾಡಿದ್ದಾರೆ.

View post on Instagram

ಆದರೆ ಫೋಟೋದಲ್ಲಿ ಲಿಸಾ ಸ್ವಿಮ್ಮಿಂಗ್ ಸೂಟ್ ಧರಿಸಿರುವುದು ಮತ್ತು ಮಗುವಿನ ಜೊತೆ ಆಕೆ ಇರುವ ಭಂಗಿಯನ್ನು ಹಲವರು ಪ್ರಶ್ನಿಸಿದ್ದಾರೆ. ಮಗನ ಜೊತೆಗೂ ಈ ಭಂಗಿಯಲ್ಲಿ ಪೋಸ್ ಕೊಡುವುದು ಬೇಕಿತ್ತಾ ಎಂಬುದು ಹಲವರ ಪ್ರಶ್ನೆ.

View post on Instagram

ಇದೇ ವೇಳೆ ಲಿಸಾ ಅಪ್ಲೋಡ್ ಮಾಡಿರುವ ಫೋಟೋಗಳಿಗೆ ಕೆಲವರು ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದಾರೆ. ಮಗುವಿನ ಜೊತೆಗಿನ ತಯಿಯ ಭಾಂಧವ್ಯವನ್ನು ಲಿಸಾ ಚೆನ್ನಾಗಿಯೇ ಪ್ರಸ್ತುತಪಡಿಸಿದ್ದಾರೆ ಎಂಬುದು ಹಲವರ ಅಭಿಪ್ರಾಯ.

View post on Instagram