ಒಂದು ಕೈಲಿ ವಿಸ್ಕಿ, ಮತ್ತೊಂದು ಕೈಲಿ ಡಾಲರ್ : ನಿದ್ದೆಗೆ ಜಾರಿದ ಬಿಂದಾಸ್ ಕಿಡ್ ಫೋಟೋ ಶೂಟ್ ವೈರಲ್
ಅದೇ ರೀತಿ ಈಗ ನವಜಾತ ಶಿಶುವಿನ ವಿಭಿನ್ನ ಫೋಟೋ ಶೂಟ್ ಒಂದು ವೈರಲ್ ಆಗಿದ್ದು, ಫೋಟೋಶೂಟ್‌ಗೆ ಮಾಡಿದ ವಿಭಿನ್ನತೆಯೇ ಈಗ ವಿವಾದಕ್ಕೆ ಕಾರಣವಾಗಿದೆ.

ಇದು ಫೋಟೋ ಶೂಟ್ ಯುಗ ಮದುವೆ ಮುಂಜಿ ಸೀಮಂತದಿಂದ ಹಿಡಿದು ಆಗಷ್ಟೇ ಹುಟ್ಟಿದ ಮಗುವಿಗೂ ಈಗ ಫೋಟೋ ಶೂಟ್ ನಡೆಸುತ್ತಾರೆ. ಬೇರೆಯವರಿಗಿಂತ ನಮ್ಮ ಫೋಟೋ ಶೂಟ್ ಚೆನ್ನಾಗಿರಬೇಕು ವಿಭಿನ್ನವಾಗಿ ಹೊಸತನದಿಂದ ಕೂಡಿರಬೇಕು ಎಂದು ಈಗಿನ ಜನ ಬಯಸುತ್ತಿದ್ದಾರೆ. ಹೀಗಾಗಿ ನೀರಿನ ಮೇಲೆ ಕೆಸರಿನ ಮಧ್ಯೆ, ಹೊಂಡಗುಂಡಿಗಳಿರುವ ರಸ್ತೆಯಲ್ಲೂ ಈಗಗಾಲೇ ಹಲವು ಫೋಟೋಶೂಟ್‌ಗಳು ನಡೆದಿದ್ದು, ಅಂತಹ ಸಾಕಷ್ಟು ಫೋಟೋಶೂಟ್‌ಗಳು ಈಗಾಗಲೇ ವೈರಲ್ ಆಗಿವೆ. ಅದೇ ರೀತಿ ಈಗ ನವಜಾತ ಶಿಶುವಿನ ವಿಭಿನ್ನ ಫೋಟೋ ಶೂಟ್ ಒಂದು ವೈರಲ್ ಆಗಿದ್ದು, ಫೋಟೋಶೂಟ್‌ಗೆ ಮಾಡಿದ ವಿಭಿನ್ನತೆಯೇ ಈಗ ವಿವಾದಕ್ಕೆ ಕಾರಣವಾಗಿದೆ.
ನವಜಾತ ಶಿಶುಗಳ ಫೋಟೋ ಶೂಟ್‌ನ್ನು (Baby Photoshoot) ಈಗ ಬಹುತೇಕ ಫೋಷಕರು ಮಾಡುತ್ತಾರೆ. ಈ ಫೋಟೋಶೂಟ್‌ಗಳು ಚಿರಕಾಲದ ನೆನಪಾಗಿ ಉಳಿಯುತ್ತವೆ. ಮಗು ನಗುವ ನಿದ್ದೆಗೆ ಜಾರಿರುವ ಅಮ್ಮನ ತಬ್ಬಿರುವ , ಓರೆನೋಟ ಬೀರುವ ಹಲವು ರೀತಿಯ ಫೋಟೋ ಶೂಟ್‌ಗಳನ್ನು ನೀವು ನೋಡಿರಬಹುದು. ಆದರೆ ಇಲ್ಲೊಂದು ಕಡೆ ಪುಟ್ಟ ಮಗುವಿನ ಕೈಗೆ ವಿಸ್ಕಿ ಬಾಟಲ್ ನೀಡಲಾಗಿದೆ. ಇದೇ ವಿಚಾರ ಈಗ ಆಕ್ರೋಶಕ್ಕೆ ಕಾರಣವಾಗಿದೆ. ಮಗುವಿನ ಕಾರಣಕ್ಕೆ ವೀಡಿಯೋ ಮುದ್ದಾಗಿದ್ದರೂ, ಪುಟ್ಟ ಕಂದನ ಕೈಗೆ ವಿಸ್ಕಿ ನೀಡಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.
ಪಂಚೆಯಂತೆ ಸೀರೆ ಎತ್ತಿ ಕಟ್ಟಿ ವಧುವಿನ ಫೋಟೋಶೂಟ್; ಎಲ್ಲಾ ಕಾಣ್ತಿದ್ಯಲ್ಲಮ್ಮಾ ಎಂದ ನೆಟ್ಟಿಗರು!
ವೀಡಿಯೋದಲ್ಲೇನಿದೆ.
ಮಗುವನ್ನು ಪುಟ್ಟದಾದ ಕೌಚ್‌ನಲ್ಲಿ ಫುಲ್ ಶವರ್ ಮಾಡಿದ ನಂತರ ಟವೆಲ್ (Towel) ಸುತ್ತಿದಂತೆ ಕೂರಿಸಲಾಗಿದೆ. ಕೈಯಲ್ಲಿ vat69 ಬ್ರಾಂಡ್‌ನ ವಿಸ್ಕಿ ಬಾಟಲ್ ನೀಡಲಾಗಿದೆ. ಜೊತೆಗೆ ಪಕ್ಕದಲ್ಲೇ ಒಂದು ಪುಟ್ಟ ಟೇಬಲ್ ಇದ್ದು, ಅದರ ಪಕ್ಕದಲ್ಲೂ ಒಂದು ವಿಸ್ಕಿ ಬಾಟಲ್ ಹಾಗೂ ಗ್ಲಾಸ್ ಇದೆ. ಮಗು ಮದ್ಯ ಸೇವಿಸಿ ಅಮಲೇರಿ ಮಲಗಿರುವಂತೆ ಚಿತ್ರಿಸಲಾಗಿದ್ದು, ಮಗು ಕೈಯಲ್ಲಿ ವಿಸ್ಕಿ ಬಾಟಲ್ ಹಿಡಿದೆ ನಿದ್ದೆಗೆ ಜಾರಿದೆ. ಒಂದು ಕೈನಲ್ಲಿ ವಿಸ್ಕಿ ಬಾಟಲ್ ಇದ್ದರೆ ಮತ್ತೊಂದು ಕೈನಲ್ಲಿ ಡಾಲರ್ ಇದೆ. ಜೊತೆಗೆ ಹಿಂಭಾಗದಲ್ಲಿ ಡಾಲರ್ ಕರೆನ್ಸಿಯ ಪೋಸ್ಟರ್ ಅಂಟಿಸಲಾಗಿದೆ. ವೀಡಿಯೋ ಮಾತ್ರ ಮಗುವಿನ ಕಾರಣಕ್ಕೆ ಬಹಳ ಮುದ್ದಾಗಿದೆ. ಆದರೆ ವೀಡಿಯೋದಲ್ಲಿ ಮಗುವಿನ ಕೈಗೆ ವಿಸ್ಕಿ ಬಾಟಲ್ ನೀಡಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ.
ದೊಡ್ಡವನಾದ ಮೇಲೆ ಈ ಹುಡುಗ ವೀಡಿಯೋ ನೋಡಿದರೆ ನಿಜವಾಗಿಯೂ ಬೇಜಾರಾಗುತ್ತಾನೆ ಎಂದು ಒಬ್ಬರು ಕಾಂಮೆಂಟ್ ಮಾಡಿದ್ದಾರೆ. ಡಿ ಡ್ರಾಪ್ ಸೆಂಟರ್ ಎಂಬುವವರು ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದು, ಸೃಜನಶೀಲತೆಗೆ ಮಿತಿ ಎಂಬುದಿಲ್ಲ. ನಾವು ಈಗಾಗಲೇ ಇದೇ ರೀತಿಯ ಹಲವು ಥೀಮ್ ಅನ್ನು ಮಾಡಿದ್ದೇವೆ ಮತ್ತು ಅದು ದೊಡ್ಡ ಹಿಟ್ ಆಗಿತ್ತು ಮತ್ತು ಲಕ್ಷಾಂತರ ಜನರು ಈ ವೀಡಿಯೋವನ್ನು ವೀಕ್ಷಿಸಿದ್ದರು. ಆದರೆ ಇಂತಹ ವೀಡಿಯೋಗಳಿಗೆ ಪಾಸಿಟಿವ್ ನೆಗೆಟಿವ್ ಎರಡೂ ಕಾಮೆಂಟ್‌ಗಳು ಬಂದಿದ್ದು, ಕೆಲವರು ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರಿಂದ ನಾವು ಆ ವೀಡಿಯೋವನ್ನು ತೆಗೆದು ಹಾಕಿದೆವು. ಆದರೆ ಮತ್ತೆ ಕೆಲವರು ಈ ವೀಡಿಯೋ ಹಾಕುವಂತೆ ಮನವಿ ಮಾಡಿದ್ದರು. ಹೀಗಾಗಿ ಈ ವೀಡಿಯೋವನ್ನು ಮತ್ತೆ ಪೋಸ್ಟ್ ಮಾಡಿದ್ದು, ಮತ್ತೊಮ್ಮೆ ನಿಮ್ಮ ಪ್ರತಿಕ್ರಿಯೆಗಾಗಿ ಇಲ್ಲಿದೆ ಎಂದು ಬರೆದುಕೊಂಡಿದ್ದಾರೆ.
ಯಪ್ಪಾ..ಏನ್ ಕಾಲ ಬಂತಪ್ಪಾ, ಸ್ಮೋಕ್ ಮಾಡ್ತಾ ಸ್ಮೂಚ್ ಮಾಡಿದ ಜೋಡಿ, ಫೋಟೋಶೂಟ್‌ಗೆ ನೆಟ್ಟಿಗರ ತರಾಟೆ!
ಹಿಂದೆಲ್ಲಾ ಪುಟ್ಟ ಮಕ್ಕಳಿರುವ ಮನೆಯಲ್ಲಿ ಪೋಷಕರು ಧರ್ಮಗ್ರಂಥ, ಕತ್ತಿ, ಗನ್, ಪುಸ್ತಕ, ಪೆನ್, ಆಹಾರ ಮುಂತಾದ ವಸ್ತಗಳನ್ನು ಮಗುವಿನ ಮುಂದಿರಿಸಿ ಮಗು ಯಾವುದನ್ನು ಆಯ್ಕೆ ಮಾಡುವುದು ಎಂದು ಕುತೂಹಲದಿಂದ ನೋಡುತ್ತಾರೆ. ಈ ವೇಳೆ ಮಗು ಒಳ್ಳೆಯದನ್ನೇ ಆಯ್ಕೆ ಮಾಡಲಿ ಎಂದು ಬಹುತೇಕ ಪೋಷಕರು ಬಯಸುತ್ತಿದ್ದರು ಆದರೆ ಇಲ್ಲೇ ಪೋಷಕರು ಮಗುವಿನ ಕೈಗೆ ವಿಸ್ಕಿ ಬಾಟಲ್ ನೀಡಿದ್ದಾರೆ. ಕಾಲಕ್ಕೆ ತಕ್ಕಂತೆ ಎಲ್ಲವೂ ಬದಲಾಗುತ್ತಿದೆ. ಒಟ್ಟಿನಲ್ಲಿ ಈ ವೀಡಿಯೋವನ್ನು ಕೆಲವರು ಮೆಚ್ಚಿ ಖುಷಿ ಪಟ್ಟರೆ ಮತ್ತೆ ಕೆಲವರು ಮಗುವಿನ ಕೈಗೆ ವಿಸ್ಕಿ ಬಾಟಲ್ ನೀಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.