ಇನ್ಸ್ಟಾಗ್ರಾಮ್ ನಲ್ಲಿ ವ್ಯಕ್ತಿಯೊಬ್ಬನ ಅತಿ ಬುದ್ಧಿವಂತಿಕೆ ವೈರಲ್ ಆಗಿದೆ. ವ್ಯಕ್ತಿ ಹ್ಯಾಂಡ್ ಪಂಪ್ ಗೆ ಕರೆಂಟ್ ಕನೆಕ್ಟ್ ಮಾಡಿ ಕೈ ನೋವು ಕಡಿಮೆ ಮಾಡಿಕೊಂಡಿದ್ದಾನೆ. ಆದ್ರೆ ಆತನ ಜೇಬಿಗೆ ಮಾತ್ರ ಕತ್ತರಿ ಬೀಳೋದು ನಿಶ್ಚಿತ.
ಜನರು ಕೆಲಸವನ್ನು ಸುಲಭ ಮಾಡಿಕೊಳ್ತಿದ್ದಾರೆ. ಹಳ್ಳಿ ಹಳ್ಳಿಯಲ್ಲಿ ಜನರ ಅನುಕೂಲಕ್ಕಾಗಿ ಬೋರ್ ವೆಲ್ ಸೌಲಭ್ಯವಿದೆ. ಹ್ಯಾಂಡ್ ಪಂಪ್ ಮಾಡ್ತಿದ್ದಂತೆ ನೀರು ಬರುತ್ತೆ. ಈಗಿನ ದಿನಗಳಲ್ಲಿ ಅನೇಕ ಹ್ಯಾಂಡ್ ಪಂಪ್ ಕೆಲಸ ಮಾಡ್ತಿಲ್ಲ. ಮತ್ತೆ ಕೆಲವಕ್ಕೆ ಗಂಟೆಗಟ್ಟಲೆ ಪಂಪ್ ಮಾಡಿದ್ರೆ ಅಂತೂ ಇಂತೂ ನೀರು ಬರುತ್ತೆ. ಪಂಪ್ ಹಾಕ್ತಾ ನೀರು ಹಿಡಿದು ಬಕೆಟ್ ತುಂಬೋದು ಸಲಭವಲ್ಲ. ಇದಕ್ಕೆ ತುಂಬಾ ಸಮಯ ಬೇಕು. ಜೊತೆಗೆ ಕೈ, ಭುಜ ನೋವು ಕೂಡ ಕಾಡುತ್ತದೆ. ಈ ಕೆಲವನ್ನು ಸುಲಭಗೊಳಿಸಲು ವ್ಯಕ್ತಿಯೊಬ್ಬ ಹೊಸ ತಂತ್ರ ಕಂಡುಕೊಂಡಿದ್ದಾನೆ.
ಈಗಿನ ದಿನಗಳಲ್ಲಿ ಸಾಮಾಜಿಕ ಜಾಲತಾಣ (Social Network) ದಲ್ಲಿ ಸಾಕಷ್ಟು ಆಸಕ್ತಿದಾಯಕ ವಿಡಿಯೋಗಳು ವೈರಲ್ ಆಗ್ತಿರುತ್ತವೆ. ಕೆಲ ವಿಡಿಯೋ (Video) ಗಳನ್ನು ಜನರು ನೋಡಿ, ಅವರ ಟ್ರಿಕ್ಸ್ ಇಷ್ಟಪಡುವುದಲ್ಲದೆ ಅದನ್ನು ಫಾಲೋ ಮಾಡುವ ಪ್ರಯತ್ನ ನಡೆಸ್ತಾರೆ. ನಿಮ್ಮ ಮನೆ ಮುಂದೆ ಅಥವಾ ಮನೆಯಲ್ಲಿ ಹ್ಯಾಂಡ್ ಪಂಪ್ (Hand Pump) ಇದ್ದು, ನೀರು ತುಂಬಿಸೋಕೆ ಕಷ್ಟಪಡ್ತಿದ್ದರೆ ಈತನ ಟ್ರಿಕ್ಸ್ ಫಾಲೋ ಮಾಡ್ಬಹುದು. ಸುಲಭವಾಗಿ ನೀವು ಇದ್ರಿಂದ ನೀರು ಪಡೆಯಬಹುದು. ಆದ್ರೆ ಕರೆಂಟ್ (Current ) ಬಿಲ್ ಹೆಚ್ಚಿಗೆ ಬಂದ್ರೆ ಅದಕ್ಕೆ ನಾವು ಹೊಣೆಯಲ್ಲ.
Viral Video: ಉತ್ತರಧ್ರುವದ ಬೆಳಕಿನ ಚಿತ್ತಾರದಡಿ ಗುಜ್ಜುಸ್ ಗರ್ಬಾ ನೃತ್ಯ: ನೆಟ್ಟಿಗರು ಖುಷ್
ಇನ್ಸ್ಟಾದಲ್ಲಿ ಪೋಸ್ಟ್ ಆದ ವಿಡಿಯೋದಲ್ಲಿ ಏನಿದೆ? :
ಇನ್ಸ್ಟಾಗ್ರಾಮ್ (Instagram) ನಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ವ್ಯಕ್ತಿ ದೇಸಿ ಕೈಪಂಪ್ ಅನ್ನು ಸ್ವಯಂಚಾಲಿತ ಕೈಪಂಪ್ ಆಗಿ ಪರಿವರ್ತಿಸಿದ್ದಾನೆ. ಇದಕ್ಕಾಗಿ ಸೈಕಲ್ ಚೈನ್, ಹ್ಯಾಂಡ್ ಪಂಪ್ ಮತ್ತು ಎಲೆಕ್ಟ್ರಿಕ್ ಸ್ವಿಚ್ ಮತ್ತು ಕೆಲವು ತಂತಿಗಳನ್ನು ಬಳಸಿದ್ದಾನೆ. ಈತನ ಈ ವಿನೂತನ ಐಡಿಯಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸ್ವಿಚ್ ಹಾಕ್ತಾ ಇದ್ದಂತೆ ಪಂಪ್ ಆನ್ ಆಗುತ್ತೆ. ಹ್ಯಾಂಡ್ ಪಂಪ್ ಕರೆಂಟ್ ನಿಂದ ಪಂಪ್ ಮಾಡುತ್ತೆ. ಮುಂದೆ ನೀರು ಬರಲು ಶುರುವಾಗುತ್ತದೆ. ಉಪೇಂದ್ರ ಎನ್ ವರ್ಮಾ ಎಂಬುವವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಇಂಥ ಜಗಾಡ್ ಎಲ್ಲಾದ್ರೂ ನೋಡಿದ್ದೀರಾ ಎಂದು ಅವರು ಶೀರ್ಷಿಕೆ ಹಾಕಿದ್ದಾರೆ. ಹಳೆಯ ಸೈಕಲ್ ಚೈನ್ ಗೆ ಕರೆಂಟ್ ಪಾಸ್ ಆಗೋದ್ರಿಂದ ಪೆಡಲ್ ತಿರುಗಲು ಶುರುವಾಗುತ್ತದೆ. ಪೆಡಲ್ ನಿಂದ ಪಂಪ್ ನ ಹ್ಯಾಂಡ್ ಗೆ ಕನೆಕ್ಷನ್ ನೀಡಿರುವ ಕಾರಣ ಪಡೆಲ್ ತಿರುಗುತ್ತಿದ್ದಂತೆ ಪಂಪ್ ನ ಹ್ಯಾಂಡ್ ಮೇಲೆ ಕೆಳಗೆ ಆಗುತ್ತದೆ.
Viral Video: ಈ ಹುಡುಗೀರ ಡ್ಯಾನ್ಸ್ ನೋಡಿ ಹುಡುಗರ ಹೃದಯದ ಬಡಿತವೇ ಹೆಚ್ಚು-ಕಮ್ಮ ಆಯ್ತಂತೆ!
ಸಾಮಾಜಿಕ ಜಾಲತಾಣದಲ್ಲಿ ವೈರಲ್ ವಿಡಿಯೋಕ್ಕೆ ಚಿತ್ರವಿಚಿತ್ರ ಕಮೆಂಟ್ : ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೋ ವೈರಲ್ ಆಗಿದೆ. ಜನರು ಆತನ ಅದ್ಭುತ ಐಡಿಯಾವನ್ನು ಇಷ್ಟಪಡ್ತಿದ್ದಾರೆ. ಇದುವರೆಗೆ 24 ಲಕ್ಷ ವೀಕ್ಷಣೆಕ್ಕೂ ಹೆಚ್ಚು ಬಾರಿ ಈ ವಿಡಿಯೋವನ್ನು ವೀಕ್ಷಿಸಲಾಗಿದೆ. 1 ಲಕ್ಷ 16 ಸಾವಿರ ಲೈಕ್ ಬಂದಿದೆ. ಈ ವೀಡಿಯೊಗೆ ಜನರು ವಿಭಿನ್ನವಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಈ ಜುಗಾಡ್ ದೇಶದಿಂದ ಹೊರ ಹೋಗಬಾರದು ಎಂದು ವ್ಯಕ್ತಿಯೊಬ್ಬರು ಕಮೆಂಟ್ ಮಾಡಿದ್ದಾರೆ. ಇದಕ್ಕೆ ಉತ್ತಮ ಮೋಟಾರ್ ಹೊಂದಿಸಬಹುದಿತ್ತು ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಭಾರತದಲ್ಲಿ ಮಾತ್ರ ಇಂಥದ್ದು ಸಾಧ್ಯವೆಂದು ಮತ್ತೊಬ್ಬರು ಬರೆದಿದ್ದಾರೆ. ಮೋಸ್ಟ್ಲಿ ಕರೆಂಟ್ ಉಚಿತವಾಗಿ ಸಿಗ್ತಿದೆ. ಹಾಗಾಗಿ ಹ್ಯಾಂಡ್ ಪಂಪ್ ಗೆ ಕರೆಂಟ್ ಕನೆಕ್ಷನ್ ಕೊಟ್ಟಿದ್ದಾರೆ. ಹ್ಯಾಂಡ್ ಪಂಪನ್ನ ಕೈನಲ್ಲಿ ಮಾಡಿ. ಆಗ ನೀವೂ ಸ್ವಲ್ಪ ಫಿಟ್ ಆಗಿರ್ತೀರಾ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಇದು ಭಾರತ, ಇಲ್ಲಿ ಎಲ್ಲವೂ ಸಾಧ್ಯವೆಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.
