Barbie Doll ಬಾರ್ಬಿ ರೀತಿ ಕಾಣಲು 53 ಲಕ್ಷ ರೂ ಖರ್ಚು, ಸಂಬಂಧ ಮುರಿದ ಕುಟುಂಬಸ್ಥರು!

  • ಹಲವು ಸರ್ಜರಿ ನಡೆಸಿದ 21 ವರ್ಷದ ಮಾಡೆಲ್
  • ಯುವತಿ ಅವತಾರಕ್ಕೆ ಬೆಚ್ಚಿ ಬಿದ್ದ ಕುಟುಂಬ
  • ಮೊದಲ ನೋಟಕ್ಕೆ ಕ್ಲೀನ್ ಬೋಲ್ಡ್ ಆಗಬೇಕೆಂದು ಸರ್ಜರಿ
Austrian model spent Rs 53 Lakh  extreme cosmetic surgeries to look like a Barbie doll ckm

ಸಿಡ್ನಿ(ಮೇ.02): ಸೌಂದರ್ಯಕ್ಕಾಗಿ ಹಲವು ಸರ್ಜರಿಗಳನ್ನು ಮಾಡಿಸಿಕೊಂಡ ಅದೆಷ್ಟೋ ಘಟನೆಗಳು, ಉದಾಹರಣೆಗಳಿವೆ. ಏನೋ ಮಾಡಲು ಹೋಗಿ ಪ್ರಾಣ ಕಳೆದುಕೊಂಡವರ ಸಂಖ್ಯೆ ಕಡಿಮೆ ಏನಿಲ್ಲ. ಇದೀಗ ಆಸ್ಟ್ರೇಲಿಯನ್ ಮಾಡೆಲ್ ಒಬ್ಬಳು ಬಾರ್ಬಿ ಡಾಲ್ ರೀತಿ ಕಾಣಲು ಬರೋಬ್ಬರಿ 53 ಲಕ್ಷ ರೂಪಾಯಿ ಖರ್ಚು ಮಾಡಿದ್ದಾಳೆ. ಪರಿಣಾಮ ಈಕೆಯ ಅವತಾರ ನೋಡಿದ ಕುಟುಂಬಸ್ಥರು ಇದೀಗ ಸಂಬಂಧವನ್ನೇ ಕಡಿದುಕೊಂಡಿದ್ದಾರೆ. 

ಜೆಸ್ಸಿ ಬನ್ನಿ ಆಸ್ಟ್ರಿಯಾದ ಮಾಡೆಲ್. ಈಕೆಗೆ ತಾನು ಬಾರ್ಬಿ ಡಾಲ್ ರೀತಿ ಕಾಣಬೇಕು ಅನ್ನೋ ಹಂಬಲ. ಇದಕ್ಕಾಗಿ ಹಲವು ಕಾಸ್ಮೆಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾಳೆ. ಬಾರ್ಬಿ ರೀತಿ ಕಾಣಲು ಈಕೆ ತಜ್ಞರ ಬಳಿ ತನಗೆ ತುಟಿ, ಪೃಷ್ಠ ಹಾಗೂ ಸ್ತನ ದೊಡ್ಡದಾಗಬೇಕು ಎಂದಿದ್ದಾಳೆ. ಈಕೆ ಹೇಳಿದ ಸೈಜ್‌ಗೆ ಕಾಸ್ಮೆಟಿಕ್ ಸರ್ಜರಿ ತಜ್ಞರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ ಹಠ ಹಿಡಿದ ಜೆಸ್ಸಿ ಸರ್ಜರಿ ಮಾಡಿಸಿಕೊಂಡಿದ್ದಾಳೆ.

ವಿವಾಹಿತ ಮಹಿಳೆಗೆ 6 ಬಾಯ್‌ಫ್ರೆಂಡ್ಸ್, ಸತ್ಯ ತಿಳಿದ ಬೆನ್ನಿಗೇ ಕೆಲಸದಿಂದ ವಜಾಗೊಳಿಸಿದ ಬಾಸ್!

ಇದುವರೆಗೆ ಸರ್ಜರಿಗೆ £55,000 ಖರ್ಚು (52.8 ಲಕ್ಷ ರೂಪಾಯಿ) ಮಾಡಿದ್ದಾಳೆ. ಸರ್ಜರಿ ಬಳಿಕ ಈಕೆಯ ನೋಡಿದ ಕುಟುಂಬಸ್ಥರು ಬೆಚ್ಚಿ ಬಿದ್ದಿದ್ದಾರೆ. ಸ್ತನ, ತುಟಿ ಹಾಗೂ ಇಡೀ ದೇಹವೇ ಬದಲಾಗಿದೆ. ಅಸಹ್ಯ ಹಾಗೂ ಅಶ್ಲೀಲವಾಗಿ ಕಾಣಿಸಿಕೊಂಡ ಜೆಸ್ಸಿ ಜೊತೆಗಿನ ಸಂಬಂಧವನ್ನೇ ಕುಟುಂಬಸ್ಥರು ಮುರಿದುಕೊಂಡಿದ್ದಾರೆ.

 

 

ಕುಟುಂಬಸ್ಥರು ನನ್ನ ಜೊತೆಗೆ ಮಾತನಾಡುತ್ತಿಲ್ಲ. ಇದು ಬೇಸರ ತರಿಸಿದೆ.  ನನ್ನ ಸೋಹದರ ಹಾಗೂ ಅಜ್ಜನ ಜೊತೆ ಮಾತನಾಡಲು ಸಂದೇಶ ಕಳುುಹಿಸಿದ್ದೇನೆ. ಆದರೆ ಅವರಿಂದ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಜೆಸ್ಸಿ ಹೇಳಿದ್ದಾರೆ.

ಸರ್ಜರಿ ಇಷ್ಟಕ್ಕೆ ನಿಲ್ಲುವುದಿಲ್ಲ. ಮತ್ತಷ್ಟು ಆಕರ್ಷಕವಾಗಿ ಕಾಣಲು ಮತ್ತೆ ಸರ್ಜರಿ ಮಾಡುತ್ತೇನೆ. ಸದ್ಯ ದೊಡ್ಡವಾಗಿರುವ ಸ್ತನ ಸಾಕಾಗಲ್ಲ ಎಂದಿದ್ದಾಳೆ. ಮತ್ತಷ್ಟು ದೊಡ್ಡ ತುಟಿಗಳು ಬೇಕಿದೆ ಎಂದಿದ್ದಾಳೆ. ಮೊದಲ ನೋಟ ಮತ್ತೆಲ್ಲಿಯು ಸರಿಯಬಾರದು. ನನ್ನ ಮೇಲೆ ಇರಬೇಕು ಎಂದು ಜೆಸ್ಸಿ ಹೇಳಿದ್ದಾಳೆ.

ಡೌನ್ ಸಿಂಡ್ರೋಮ್ ನಡುವೆಯೂ 'ವಿಕ್ಟೋರಿಯಾಸ್ ಸೀಕ್ರೆಟ್‌' ಸಂಸ್ಥೆಯ ಪ್ರಖ್ಯಾತ ಮಾಡೆಲ್

ವಿನ್ನಿ ಹಾರ್ಲೋ ಎಂಬ ರೂಪದರ್ಶಿ ನಮಗೂ ಮಾಡೆಲ್‌
ವಿನ್ನಿ ಹಾರ್ಲೋ ಅಮೆರಿಕಾದ ಟಾಪ್‌ ಮಾಡೆಲ್‌ಗಳಲ್ಲೊಬ್ಬಳು. ಈಕೆಯ ಚಿತ್ರ ನೋಡಿದರೆ ನಿಮಗೆ ಅಚ್ಚರಿಯಾಗಬಹುದು. ಈ ಕಪ್ಪು ಹುಡುಗಿಯ ಬಾಯಿಯ ಸುತ್ತ, ಹುಬ್ಬಿನ ಮೇಲೆ ಬಿಳಿ ಪ್ಯಾಚ್‌ಗಳು. ಮೈ ಕೈ ಎಲ್ಲ ವಿಟಿಲಿಗೊ ಸಮಸ್ಯೆಯಿಂದ ಅರ್ಧ ಬಿಳುಚಿಕೊಂಡಿದೆ. ‘ವಿಟಿಲಿಗೊ ಚರ್ಮದ ಬಣ್ಣ ಬದಲಾಯಿಸುತ್ತದಷ್ಟೇ, ಬದುಕನ್ನಲ್ಲ’ ಅನ್ನೋದು ಈಕೆಯ ಪ್ರಸಿದ್ಧ ಸ್ಟೇಟ್‌ಮೆಂಟ್‌. ನಾಲ್ಕರ ಹರೆಯದಲ್ಲೇ ಶುರುವಾಯ್ತು ಈ ಚರ್ಮದ ಬದಲಾವಣೆ. ಶಾಲೆಯಲ್ಲಿ ಮಕ್ಕಳೆಲ್ಲ ‘ಜೀಬ್ರಾ, ಹಸು’ ಅಂತೆಲ್ಲ ಗೇಲಿ ಮಾಡುತ್ತಾ, ದೈಹಿಕವಾಗಿ ಮಾನಸಿಕವಾಗಿ ಕಿರುಕುಳ ನೀಡುತ್ತಾ ಈಕೆಯನ್ನು ಕುಗ್ಗಿಸುವ ಪ್ರಯತ್ನ ಮಾಡಿದರು. ತನ್ನ ಆತ್ಮವಿಶ್ವಾಸದಿಂದಲೇ ಅದೆಲ್ಲವನ್ನೂ ನಿರ್ಲಕ್ಷಿಸುತ್ತಾ ಬೆಳೆದ ಈಕೆ ಮುಂದೆ ಮಾಡೆಲಿಂಗ್‌ ಕ್ಷೇತ್ರಕ್ಕೆ ಹೋಗ್ತೀನಿ ಅಂದಾಗ ಮನೆಯವರೂ ಮುಸಿ ಮುಸಿ ನಕ್ಕರು. ಆ ಅವಹೇಳನದ ನಗು ಈಕೆ ಮತ್ತಷ್ಟುಬಲಗೊಳ್ಳುವಂತೆ ಮಾಡಿತು.

ಬಲೂನ್‌ ಮಾರುತ್ತಿದ್ದ ಯುವತಿ ಈಗ ಕೇರಳದ ಟಾಪ್‌ ಮಾಡೆಲ್‌!
ಕೇರಳದ ಹಬ್ಬಗಳಲ್ಲಿ ಬಲೂನ್‌ ಮಾರಾಟ ಮಾಡುತ್ತಿದ್ದ ಯುವತಿ ಸಾಮಾಜಿಕ ಜಾಲತಾಣದಿಂದಾಗಿ ರಾಜ್ಯದ ಅಗ್ರ ರೂಪದರ್ಶಿಯಾಗಿದ್ದಾರೆ. ಬಲೂನ್‌ ಮಾರಾಟ ಮಾಡುತ್ತಿದ್ದ ಕಿಸ್ಬು ಎಂಬ ಮಹಿಳೆಯ ಫೋಟೋವನ್ನು ತೆಗೆದಿದ್ದ ಫೋಟೋಗ್ರಾಫರ್‌ ಅರ್ಜುನ್‌ ಕೃಷ್ಣನ್‌ ಅದನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದರು. ಈ ಫೋಟೋ ಜಾಲತಾಣದಲ್ಲಿ ಸಾಕಷ್ಟುಮೆಚ್ಚುಗೆ ಪಡೆದುಕೊಂಡು ವೈರಲ್‌ ಆಗಿತ್ತು. ಈ ಕ್ರೇಜ್‌ ನಂತರ ಆಕೆಯನ್ನು ರೂಪದರ್ಶಿಯಾಗಿ ಪರಿವರ್ತಿಸಿತು. ಕಿಸ್ಬು ಈಗ ಕೇರಳದ ಟಾಪ್‌ ಮಾಡೆಲ್‌ ಆಗಿದ್ದಾರೆ. ಸಾಮಾಜಿಕ ಜಾಲತಾಣಗಳನ್ನು ಒಬ್ಬ ವ್ಯಕ್ತಿಯನ್ನು ಎಷ್ಟುಬೇಗ ಒಬ್ಬ ವ್ಯಕ್ತಿಯನ್ನು ಪ್ರಸಿದ್ಧಿ ಮಾಡುತ್ತದೆ ಎಂಬುದಕ್ಕೆ ಈ ಘಟನೆ ಸ್ಪಷ್ಟಉದಾಹರಣೆಯಾಗಿದೆ.
 

Latest Videos
Follow Us:
Download App:
  • android
  • ios