Asianet Suvarna News Asianet Suvarna News

ಈ ನಾಲ್ಕು ಗುಣಗಳು ನಿಮ್ಮ ಗೆಳೆಯ/ ಗೆಳತಿಯಲ್ಲಿದ್ದರೆ ಅವರು ಸೈಕೋಪಾತ್!

ನಮ್ಮ ಸುತ್ತಮುತ್ತಲೂ ಸೈಕೋಪಾತ್‌ಗಳು ಇದ್ದಾರಾ? ಇದ್ದರೆ ಅವರನ್ನು ಗುರುತಿಸೋದು ಹೇಗೆ- ಎಂಬುದು ಮುಖ್ಯ. ಅಂಥವರನ್ನು ಈ ನಾಲ್ಕು ಗುಣಗಳ ಮೂಲಕ ಗುರುತಿಸಬಹುದು ಅನ್ನುತ್ತಾರೆ ಎಕ್ಸ್‌ಪರ್ಟ್‌ಗಳು. ಇದನ್ನು ಆಂಟಿ ಸೋಶಿಯಲ್‌ ಪರ್ಸನಾಲಿಟಿ ಡಿಸಾರ್ಡರ್‌ (ಎಎಸ್‌ಪಿಡಿ) ಅಂತ ಮನೋತಜ್ಞರು ಗುರುತಿಸ್ತಾರೆ.

Are you living with a psychopath?
Author
Bengaluru, First Published Jan 16, 2020, 3:26 PM IST
  • Facebook
  • Twitter
  • Whatsapp

ಸೈಕೋಪಾತ್‌ ಅಂದ ಕೂಡಲೇ ನಿಮಗೆ ಭಯವಾಗಿಬಿಡಬಹುದು. ಅದಕ್ಕೆ ಕಾರಣ ಪಾಪ್ಯುಲರ್‌ ಸಿಎಮಾಗಳಲ್ಲಿ ಸೈಕೋಪಾತ್‌ಗಳನ್ನು ಚಿತ್ರಿಸಿರೋ ರೀತಿ. ಅಲ್ಲಿ ಅವರು ಕೈಯಲ್ಲಿ ಒಂದು ಚೂರಿ ಹಿಡಿದುಕೊಂಡು ಗೆಳತಿಯ ಅಥವಾ ಗೆಳೆಯನ ಕತ್ತು ಕತ್ತರಿಸಲು ಸಮಯ ಕಾಯ್ತಿರೋ ರೀತಿ ಚಿತ್ರೀಕರಿಸಲಾಗಿರುತ್ತೆ. ಆದರೆ ಸೈಕೋಪಾತ್‌ ಅಂದ್ರೆ ಹಾಗೆಯೇ ಇರಬೇಕಿಲ್ಲ. ಮಾನಸಿಕ ತಜ್ಞರು, ಮನಶ್ಶಾಸ್ತ್ರಜ್ಞರ ಪ್ರಕಾರ, ಸೈಕೋಪಾತ್‌ ಅಂದರೆ ನಾರ್ಮಲ್‌ ಗಿಂತ ಬೇರೆ ರೀತಿ, ಇನ್ನೊಬ್ಬರ ಬಗ್ಗೆ ಯಾವುದೇ ಕಾಳಜಿಯಿಲ್ಲದ ರೀತಿ ಬೆಳೆದು, ಅದೇ ರೀತಿ ಸಂಬಂಧಗಳನ್ನು ಕಾಣೋ ಮನುಷ್ಯ ಅಂತ. ಸೈಕೋಪಾತ್‌ ಅನ್ನಿಸಿಕೊಳ್ಳಲು ಕೊಲೆ ಮಾಡಬೇಕಿಲ್ಲ, ಅಥವಾ ರೇಪ್‌ ಮಾಡಬೇಕಿಲ್ಲ. ಆದರೆ ಸಂದರ್ಭ ಒದಗಿದರೆ ಅದನ್ನು ಮಾಡಲೂ ಅವರ ಸಿದ್ಧವಾಗಿರುತ್ತಾರೆ! ಅದಕ್ಕೆ ಸೈಕಾಲಜಿಯಲ್ಲಿ ಹಲವು ಕಠಿಣ ಡೆಫಿನಿಷನ್‌ಗಳು ಇವೆ. ಆದರೆ ಅವೆಲ್ಲಾ ಇಲ್ಲಿ ಬೇಕಿಲ್ಲ. ನಮಗೆ ಬೇಕಿರೋದು, ನಮ್ಮ ಸುತ್ತಮುತ್ತಲೂ ಅಂಥ ಸೈಕೋಪಾತ್‌ಗಳು ಇದ್ದಾರಾ? ಇದ್ದರೆ ಅವರನ್ನು ಗುರುತಿಸೋದು ಹೇಗೆ- ಎಂಬುದು ಮುಖ್ಯ. ದೇವರ ದಯೆ, ಅಂಥವರನ್ನು ಈ ನಾಲ್ಕು ಗುಣಗಳ ಮೂಲಕ ಗುರುತಿಸಬಹುದು ಅನ್ನುತ್ತಾರೆ ಎಕ್ಸ್‌ಪರ್ಟ್‌ಗಳು. ಇದನ್ನು ಆಂಟಿ ಸೋಶಿಯಲ್‌ ಪರ್ಸನಾಲಿಟಿ ಡಿಸಾರ್ಡರ್‌ (ಎಎಸ್‌ಪಿಡಿ) ಅಂತ ಮನೋತಜ್ಞರು ಗುರುತಿಸ್ತಾರೆ.

ನವರಾತ್ರಿ ಆಚರಣೆಗೂ ಮನುಷ್ಯನ ಮನಃಶಾಸ್ತ್ರಕ್ಕೂ ಏನು ಸಂಬಂಧ?

ಉಳಿದವರಿಗೆ ನೋವಾದರೂ ಚಿಂತಿಲ್ಲ

ಇವರಿಗೆ ಇನ್ನೊಬ್ಬರಿಗೆ ಬೇಜಾರಾಗಬಹುದು, ತೊಂದರೆಯಾಗಬಹದು ಅಥವಾ ನೋವಾಗಬಹುದು ಎಂದು ಅನಿಸುವುದೇ ಇಲ್ಲ. ತಾನು ಮಾಡುವ ಕೆಲಸದಿಂದ ತನಗೆ ಲಾಭವಾಗುತ್ತದಾ ಎಂದು ಮಾತ್ರ ಇವರ ಗಮನ. ಅದರಿಂದಾಚೆಗೆ ಏನನ್ನೂ ಯೋಚಿಸುವುದಿಲ್ಲ. ತಮಗೆ ಉಪಯೋಗ ಆಗುವುದಾದರೆ ಏನು ಬೇಕಾದರೂ ಮಾಡಲು ತಯಾರು. ಇಂಥವರು ಗುಂಪು ಸೇರಿ ಕ್ರೈಮ್ ಮಾಡಲು ಹಿಂಜರಿಯುವುದಿಲ್ಲ, ನಿರ್ಭಯಾ ಪ್ರಕರಣ, ಹೈದರಾಬಾದಿನ ಪಶುವೈದ್ಯೆ ಮೇಲಿನ ಅತ್ಯಾಚಾರ ಇವುಗಳೆಲ್ಲ ಇಂಥವರ ಹೀನ ಕೃತ್ಯಗಳಿಗೆ ಉದಾಹರಣೆ. ಇವರು ಸೈಕೋಪಾತ್‌ಗಳೆಂದು ನಿಸ್ಸಂಶಯವಾಗಿ ಹೇಳಬಹುದು.

ಸ್ವಂತ ಲಾಭಕ್ಕಾಗಿ ಮಾತ್ರ

ಇವರು ಏನನ್ನು ಮಾಡುವುದಿದ್ದರೂ ಸ್ವಂತ ಲಾಭ ಅಥವಾ ಪ್ರಯೋಜನಕ್ಕಾಗಿ ಮಾತ್ರ. ಈ ವಿಚಾರದಲ್ಲಿ ಸ್ವಂತ ಸಂಗಾತಿಗಳನ್ನೂ ವಂಚಿಸಲು ಇವರು ಹಿಂಜರಿಯುವುದಿಲ್ಲ. ದಾಂಪತ್ಯದಲ್ಲಿ ವಂಚನೆ ಎಸಗುವವರು ಮತ್ತು ಅದಕ್ಕಾಗಿ ಯಾವ ಪಾಪಪ್ರಜ್ಞೆಯನ್ನೂ ಹೊಂದದವರು ಈ ವರ್ಗಕ್ಕೆ ಸೇರುತ್ತಾರೆ. ಮಕ್ಕಳನ್ನೂ ವಂಚಿಸಲು ಇವರು ಹಿಂಜರಿಯುವುದಿಲ್ಲ. ಸುಳ್ಳು ಹೇಳುವುದು, ವಂಚಿಸುವುದು, ದಾರಿ ತಪ್ಪಿಸುವುದು, ಕದಿಯುವುದು ಇದೆಲ್ಲ ಇವರ ಕೆಲಸವೇ ಆಗಿರುತ್ತೆ.

ಸುಳ್ಳುಗಾರನ ಗುಟ್ಟು ರಟ್ಟು ಮಾಡಫದು ಹೇಗೆ ಗೊತ್ತಾ?

ಸಹಾನುಭೂತಿ ಇರೋಲ್ಲ

ಇವರಿಗೆ ಇನ್ನೊಬ್ಬರ ಮೇಲೆ ಸಹಾನುಭೂತಿ ಇರೋಲ್ಲ. ತಮ್ಮ ಮಕ್ಕಳಿಗೆ ನೋವಾದರೂ ಇವರಿಗೆ ಏನೂ ಅನಿಸೋಲ್ಲ. ಸಾಮಾನ್ಯವಾಗಿ ಕಠಿಣ ಹೃದಯದ ಕೊಲೆಪಾತಕಿಗಳು ಹೀಗಿರ್ತಾರೆ ಅಂತ ಸಿನೆಮಾಗಳಲ್ಲಿ ನೋಡಿರ್ತೀವಿ. ಆದರೆ ಇವರನ್ನು ಗೊತ್ತು ಮಾಡಿಕೊಳ್ಳಲು ಇವರು ಕೊಲೆಯನ್ನೇನೂ ಮಾಡಬೇಕಿಲ್ಲ. ಕೆಲವು ಸಣ್ಣಪುಟ್ಟ ಸಂಗತಿಗಳಲ್ಲಿ ಇವರ ಹೇಗೆ ವರ್ತಿಸ್ತಾರೆ ಅಂತ ನೋಡಿದ್ರೆ ಸಾಕು. ಉದಾಹರಣೆಗೆ, ಮಕ್ಕಳನ್ನು ನೋಡಿಕೊಳ್ಳುವಾಗ ಅವರ ವರ್ತನೆ ಹೇಗಿರುತ್ತೆ? ಅವರನ್ನು ಕಟುವಾಗಿ ಹಿಂಸಿಸುತ್ತಾರಾ ಇತ್ಯಾದಿ.

ಬ್ರೇಕಪ್‌ ಬಳಿಕ ಸೇಡು ಸಾಧಿಸುವ ರಾಶಿಯವರು ಇವರು

ಗುರುತಿಸೋದು ಬಹಳ ಕಷ್ಟ

ಆದರೆ ಈ ಸೈಕೋಪಾತ್‌ಗಳನ್ನು ಗುರುತಿಸೋದು ಸುಲಭವಲ್ಲ. ಯಾಕೆ ಗೊತ್ತಾ? ಇವರು ಬಹಳ ಆಕರ್ಷಕವಾಗಿರುತ್ತಾರೆ. ನೋಡೋಕೆ ಎಂದಲ್ಲ, ಅವರ ವ್ಯಕ್ತಿತ್ವವೇ ತುಂಬಾನೇ ಆಕರ್ಷಕವಾಗಿರುತ್ತೆ. ಹುಡುಗಿಯರು ಇವರ ಬಲೆಗೆ ಸುಲಭವಾಗಿ ಬೀಳಬಲ್ಲರು. ಇವರಲ್ಲಿ ಒಬ್ಬ ಸೈಕೋಪಾತ್‌ ಇದ್ದಾನೆ ಅಂತ ಗೊತ್ತೇ ಆಗದು. ಇವರು ಪ್ರೀತಿ, ಸಹಾನುಭೂತಿ ಮುಂತಾಧ ಗುಣಗಳನ್ನು ಸುಲಭವಾಗಿ ನಟಿಸಲೂ ಬಲ್ಲರು. ಹಾಗಾಗಿ ಈತನಲ್ಲಿ ಇಂಥ ಭೀಕರ ಗುಣಗಳಿವೆ ಅಂತ ಮೇಲ್ನೋಟಕ್ಕೆ ಗೊತ್ತೇ ಆಗೊಲ್ಲ. ಇದು ಸ್ಐಕೋಪಾತ್‌ಗಳನ್ನು ಗುರುತಿಸಲು ಮುನ್ನ ಎದುರಿಸುವ ಮೊದಲ ದೊಡ್ಡ ಸಮಸ್ಯೆ.

Follow Us:
Download App:
  • android
  • ios