Asianet Suvarna News

ಬ್ರೇಕಪ್ ಬಳಿಕ ಸೇಡು ಸಾಧಿಸುವ ರಾಶಿಯವರಿವರು!

ಬ್ರೇಕಪ್ ಯಾರಿಗೂ ಸುಲಭವಲ್ಲ. ಆದರೆ, ಒಮ್ಮೆ ಬ್ರೇಕಪ್ ಆದ ಮೇಲೆ ಅದರಿಂದ ಹೊರಬರುವುದು ಅನಿವಾರ್ಯ. ಹೀಗೆ ಬ್ರೇಕಪ್ ಆದಾಗ ಕೆಲವರು ಹಳೆ ಪ್ರೇಮಿ ಎಲ್ಲಿದ್ದರೂ ಚೆನ್ನಾಗಿರಲಿ ಎಂದು ಹಾರೈಸಿ ಬೇಗ ಚೇತರಿಸಿಕೊಂಡರೆ, ಮತ್ತೆ ಕೆಲವರು ಎಕ್ಸ್ ಮೇಲೆ ಹಗೆ ಸಾಧಿಸುತ್ತಾ ಕೂರುತ್ತಾರೆ. ಯಾವ ರಾಶಿಯವರು ಹೀಗೆ ಹೆಚ್ಚು ಹಗೆ ಸಾಧಿಸುತ್ತಾರೆಂದರೆ...

5 zodiac signs who are the angriest and hold a grudge after a break-up
Author
Bangalore, First Published Dec 28, 2019, 1:26 PM IST
  • Facebook
  • Twitter
  • Whatsapp

ಬ್ರೇಕಪ್ ಜೊತೆ ಡೀಲ್ ಮಾಡುವುದು ಒಬ್ಬೊಬ್ಬರದು ಒಂದೊಂದು ರೀತಿ. ಕೆಲವರು ಬಹಳ ಬೇಗ ಅದರಿಂದ ಹೊರ ಬಂದರೆ ಮತ್ತೆ ಕೆಲವರು ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ. ಕೆಲವರು ಬ್ರೇಕಪ್ ಆರಂಭದಲ್ಲಿ ಬಂದ ಆ ಸಿಟ್ಟು ಹಾಗೂ ಸೇಡನ್ನು ಬಹಳಷ್ಟು ಕಾಲ ಇಟ್ಟುಕೊಂಡರೆ ಮತ್ತೆ ಕೆಲವರು ತಕ್ಷಣ ಅವೆಲ್ಲವನ್ನು ಬಿಟ್ಟು ಜೀವನದಲ್ಲಿ ಮುಂದೆ ಸಾಗುತ್ತಾರೆ.

ಇವೆಲ್ಲವೂ ಬ್ರೇಕಪ್ ಬಳಿಕ ಉಂಟಾಗುವ ನೆಗೆಟಿವ್ ಫೀಲಿಂಗ್ಸನ್ನು ವ್ಯಕ್ತಿಯು ಹೇಗೆ ನಿಭಾಯಿಸುತ್ತಾನೆ ಎಂಬುದರ ಮೇಲೆ ನಿಂತಿದೆ. ಕೆಲವೊಂದು ರಾಶಿಯವರು ಬೇಗ ಕ್ಷಮಿಸುವ ಗುಣ ಹೊಂದಿರುವುದಿಲ್ಲ. ಯಾವೆಲ್ಲ ರಾಶಿಯವರು ಹೀಗೆ ಬ್ರೇಕಪ್ ಬಳಿಕ ಹಠ ಸಾಧಿಸುವವರು ನೋಡೋಣ.

ಈ ರಾಶಿಯವರು ಈ ಒಂದು ಕೆಟ್ಟ ಚಟ ಬಿಟ್ರೆ ಒಳ್ಳೇದು! ...

ವೃಶ್ಚಿಕ

ಈ ರಾಶಿಯವರು ಬಹಳ ಗಾಢವಾಗಿ ಪ್ರೇಮಿಸಬಲ್ಲವರು. ಇವರಿಗೆ ಪ್ರೀತಿಯ ವಿಷಯದಲ್ಲಿ ಒಪ್ಪಿಕೊಳ್ಳಲಾಗದ ಒಂದೇ ಸಂಗತಿ ಎಂದರೆ ಬ್ರೇಕಪ್. ಬ್ರೇಕಪ್ ಆಗುತ್ತಿದ್ದಂತೆಯೇ ಸಿಟ್ಟು ಹಾಗೂ ಕಿರಿಕಿರಿಯಲ್ಲಿ ಬೇಯುವ ಇವರು ನಿಧಾನವಾಗಿ ಸೇಡನ್ನು ಯೋಜಿಸುತ್ತಾರೆ. ವರ್ಷಗಳ ಕಾಲ ಇವರ ಸಿಟ್ಟು ತೀರಿರುವುದಿಲ್ಲ. ಮತ್ತೊಮ್ಮೆ ಅವರಿಗೆ ಪ್ರೀತಿ ಸಿಕ್ಕಿ ಹೊಸ ಸಂಬಂಧ ಅರಳಿದ ನಂತರವೂ ಹಳೆಯ ಸಿಟ್ಟು ಅವರ ಮನಸ್ಸಿನಲ್ಲುಳಿದೇ ಇರುತ್ತದೆ. 

ಮಕರ

ವೈಯಕ್ತಿಕ ಜೀವನವೇ ಆಗಲಿ, ವೃತ್ತಿಬದುಕೇ ಆಗಲಿ- ಎಲ್ಲವನ್ನೂ ವಿಮರ್ಶೆಗೆ ಹಚ್ಚುವ ಸ್ವಭಾವ ಇವರದು. ಇವರಿಗೆ ಪಜಲ್ಸ್ ಎಂದರೆ ಇಷ್ಟ. ಏಕೆಂದರೆ ಅವರು ಉತ್ತರ ಹುಡುಕಬಲ್ಲ ಸಾಮರ್ಥ್ಯ ಹೊಂದಿರುತ್ತಾರೆ. ಹಾಗಾಗಿ ಬ್ರೇಕಪ್ ಆದ ಬಳಿಕವೂ ತಮ್ಮ ಬಗ್ಗೆ ತಾವೇ ವಿಮರ್ಶೆಗೆ ಹಚ್ಚಿ ಕುಳಿತುಕೊಳ್ಳುತ್ತಾರೆ. ನಾನೆಲ್ಲಿ ತಪ್ಪಿದೆ, ತಮ್ಮ ಪ್ರೀತಿ ಎಲ್ಲಿ ಎಡವಿತು ಎಂದೆಲ್ಲ ಯೋಚಿಸುತ್ತಾ ಸಾಮಾನ್ಯವಾಗಿ ತಮ್ಮನ್ನು ತಾವೇ ದೂಷಿಸಿಕೊಳ್ಳುತ್ತಾರೆ. ಆದರೆ, ತಮ್ಮಷ್ಟೇ ತಮ್ಮ ಸಂಗಾತಿಯದೂ ತಪ್ಪಿದೆ ಎಂಬುದು ಅರಿವಿಗೆ ಬರುತ್ತಲೇ ಸಿಟ್ಟು ಕೆರಳುತ್ತದೆ. ಈ ಸಿಟ್ಟು ಬೆಳೆಯುತ್ತಾ ಹೋದಂತೆಲ್ಲ ಇವರ ಕಣ್ಣಿನಲ್ಲಿ ತಮ್ಮ ಎಕ್ಸ್ ಹೆಚ್ಚು ಕೆಟ್ಟವರಾಗುತ್ತಾ ಹೋಗುತ್ತಾರೆ. 

ಈ ರಾಶಿಯವರಿಗೆ ಗುರು ಬಲ ಬಂದಾಯ್ತು, ಕೂಡಿ ಬಂದಿದೆ ಕಂಕಣ ಭಾಗ್ಯ!

ತುಲಾ

ಜೀವನದಲ್ಲಿ ಬ್ಯಾಲೆನ್ಸ್ ಹಾಗೂ ನೆಮ್ಮದಿಯನ್ನು ಇವರಷ್ಟು ಬಯಸುವವರು ಇನ್ನೊಬ್ಬರಿರಲಿಕ್ಕಿಲ್ಲ. ಬ್ರೇಕಪ್ ಜೀವನದ ಬ್ಯಾಲೆನ್ಸ್ ತಪ್ಪಿಸುತ್ತದೆ. ನೆಮ್ಮದಿ ಕೂಡಾ ಹಾಳು ಮಾಡುತ್ತದೆ. ಹಾಗಾಗಿ, ತುಲಾ ರಾಶಿಯವರು ಬ್ರೇಕಪ್‌ನಿಂದ ಸಿಕ್ಕಾಪಟ್ಟೆ ಕಂಗಾಲಾಗುತ್ತಾರೆ. ಇವರಿಗೆ ಈ ಸಿಟ್ಟಿಗೆ ಕಟ್ಟುಬಿದ್ದು ತಿರುಗೇಟು ಕೊಡುವುದು ಹೇಗೆ ಎಂಬುದೂ ಚೆನ್ನಾಗಿ ಗೊತ್ತು. ತಾವು ಒಳಗೊಳಗೇ ಕುದಿಯುತ್ತಿದ್ದರೂ ಎಲ್ಲವನ್ನೂ ಮರೆತು ಮುಂದೆ ಹೋಗುತ್ತಿರುವಂತೆ ಇವರು ನಟನೆ ಮಾಡುತ್ತಾರೆ. 

ಕನ್ಯಾ

ಪ್ರೇಮಿ ಸೇರಿದಂತೆ ತನ್ನ ಪ್ರೀತಿಪಾತ್ರರನ್ನು ಖುಷಿಯಾಗಿಡುವುದಕ್ಕಾಗಿ ಕನ್ಯಾ ರಾಶಿಯವರು ಯಾವ ಮಟ್ಟಕ್ಕೆ ಬೇಕಾದರೂ ಹೋಗಬಲ್ಲರು. ಇವರು ಸಂಬಂಧದಲ್ಲಿದ್ದಾಗ ಬಹಳ ಚೆನ್ನಾಗಿ ಪ್ರೀತಿಸಿ ಕಾಳಜಿ ತೋರಬಲ್ಲರು. ಆದರೆ ಇವರ ಪ್ರೀತಿ ಎರಡು ಮೊನೆ ಖಡ್ಗದಂತೆ. ಇವರು ಸಂಗಾತಿಗೆ ಭಾವನಾತ್ಮಕವಾಗಿ ಅದೆಷ್ಟು ಅಟ್ಯಾಚ್ ಆಗುತ್ತಾರೆಂದರೆ ಬ್ರೇಕಪ್ ಆದರೆ ಅದರಿಂದ ಹೊರಬರುವುದು ಇವರಿಗೆ ಬಹುತೇಕ ಕಷ್ಟಸಾಧ್ಯ. ಬ್ರೇಕಪ್ ಬಳಿಕವಷ್ಟೇ ಅವರು ತಮ್ಮ ಎಕ್ಸ್ ಲವರ್ ಕುರಿತ ಸೀಕ್ರೆಟ್‌ಗಳನ್ನೆಲ್ಲ ಆಯುಧವಾಗಿ ಬಳಸಬಲ್ಲರು. ಇವರು ಬ್ಯಾಲೆನ್ಸ್ ಬಯಸುವುದರಿಂದ ತಾವು ಪಡುತ್ತಿರುವಷ್ಟೇ ನೋವನ್ನು ತಮ್ಮನ್ನು ತೊರೆದು ಹೋದವರೂ ಪಡಲಿ ಎಂದು ಬಯಸುತ್ತಿರುತ್ತಾರೆ. 

ಈ ರಾಶಿಯವರನ್ನು ಮದುವೆ ಆದರೆ ಲೈಫ್‌ ಜಿಂಗಾಲಾಲ!

ವೃಷಭ

ಈ ರಾಶಿಯವರಿಗೂ ಲವ್ ಎಟ್ ಫಸ್ಟ್ ಸೈಟ್‌ಗೂ ಆಗಿಬರುವುದಿಲ್ಲ. ಯಾವಾಗಲೂ ಹೆಚ್ಚು ಯೋಚಿಸುವವರು ಹಾಗೂ ಪ್ರಾಕ್ಟಿಕಲ್ ಆಗಿರುವ ಕಾರಣ ಇನ್ನೊಬ್ಬ ವ್ಯಕ್ತಿಗೆ ತಮ್ಮ ಸಮಯ, ಪ್ರೀತಿ, ಎನರ್ಜಿ, ಭಾವನೆಗಳನ್ನು ನೀಡಬೇಕೆಂದರೆ ಇದಕ್ಕಾಗಿ ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ. ಹಾಗಾಗಿ, ಇವರು ಪ್ರೀತಿಗೆ ಬಿದ್ದರೆಂದರೆ ಅದು ಕಡೆತನಕ ಎಂಬ ಯೋಚನೆಯಲ್ಲೇ ಬಿದ್ದಿರುತ್ತಾರೆ. ಹಾಗಾಗಿ, ಬ್ರೇಕಪ್ ಇವರಿಗೆ ಎಂದಿಗೂ ಈಸಿಯಾಗಲು ಸಾಧ್ಯವಿಲ್ಲ. ಹಾರ್ಟ್‍‌ಬ್ರೇಕ್‌ನಿಂದ ಗುಣಮುಖರಾಗಲು ಬಹಳಷ್ಟು ಸಮಯ ತೆಗೆದುಕೊಳ್ಳುವ ಇವರು, ಈ ಸಂದರ್ಭದಲ್ಲಿ ತಮ್ಮ ಎಕ್ಸ್ ಜೀವನದಲ್ಲಿ ಏನೇನಾಗುತ್ತಿದೆ ಎಂದು ತಿಳಿದುಕೊಳ್ಳಲು ಸಾಧ್ಯವಾದ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಾರೆ. ಸಮಯ ಹೋದಂತೆಲ್ಲ ಇವರ ಸಿಟ್ಟು ಹೆಚ್ಚುತ್ತಲೇ ಹೋಗುತ್ತದೆ. 

Follow Us:
Download App:
  • android
  • ios