Super Photo: ಈ ಚಿತ್ರದಲ್ಲಿ ಅಡಗಿರುವ ಪಕ್ಷಿ ಗುರುತಿಸಿ... ಅದ್ಭುತ ಪೋಟೋ!
* ಒಂದು ಪೋಟೋ ಸಾವಿರ ಪದಗಳಿಗೆ ಸಮ
* ಸೋಶಿಯಲ್ ಮೀಡಿಯಾದಲ್ಲಿ ಸಖತ್ ರೆಸ್ಪಾನ್ಸ್ ಪಡೆದುಕೊಂಡ ಪೋಟೋ
* ಈ ಚಿತ್ರದಲ್ಲಿರುವ ಹಕ್ಕಿ ಗುರುತಿಸಿ
* ಐಎಫ್ ಎಸ್ ಅಧಿಕಾರಿ ಹಂಚಿಕೊಂಡ ಚಿತ್ರ
ಒಂದು ಪೋಟೋ (Photo) ಸಾವಿರ ಪದಗಳಿಗೆ ಸಮ ಎನ್ನುವ ಮಾತಿದೆ. ಅದೇ ಒಂದು ವಿಶಿಷ್ಟ ಪೋಟೋ.. ಹತ್ತು ಸಾವಿರ ಪದಗಗಳಿಗೆ ಸಮ. ಐಎಫ್‌ಎಸ್ (IFS) ಆಫೀಸರ್ ಒಬ್ಬರು ಪೋಸ್ಟ್ ಮಾಡಿರುವ (Social Media) ಚಿತ್ರ ಅಂತಹುದೆ ಕತೆ ಹೇಳುತ್ತಿದೆ. ಇದನ್ನು ಸೆರೆಹಿಡಿದವರಿಗೆ ಒಂದು ಅಭಿನಂದನೆ ಹೇಳಲೇಬೇಕು. ಇದುವೇ ಅಲ್ಲವೇ ಸೃಷ್ಟಿಯ ಚಮತ್ಕಾರ.
ಮಾರ್ಚ್ 30 ರಂದು ಹಂಚಿಕೊಂಡ ಟ್ವೀಟ್ ಇದುವರೆಗೆ 1,400 ಲೈಕ್‌ಗಳನ್ನು ಪಡೆದುಕೊಂಡಿದೆ. "ಕಣ್ಣುಗಳನ್ನು ಮುಚ್ಚಿ ಧ್ಯಾನ ಮಾಡುವ ಗೂಬೆ. ಹೌದು ಚಿತ್ರ ಹಾಗೆ ಇದೆ. ಅದ್ಭುತ ಕ್ಯಾಒಪ್ಶನ್ ನೀಡಿ ಐಎಫ್‌ಎಸ್ ಆಫೀಸರ್ ಸುಸಂತ ನಂದಾ ಫೋಟೋ ಹಂಚಿಕೊಂಡಿದ್ದಾರೆ. ಮೂಲ ಫೋಟೋವನ್ನು ಪೋಸ್ಟ್ ಮಾಡಿದ ಖಾತೆಗೆ ಧನ್ಯವಾದವನ್ನು ಸಲ್ಲಿಸಿದ್ದಾರೆ.
ಗೂಬೆ ತನ್ನ ತುಪ್ಪಳವನ್ನು ಹೋಲುವ ಮರದ ತೊಗಟೆಯ ಮೇಲೆ ಧ್ಯಾನ ಮಾಡುತ್ತಿರುವಂತೆ ಕಣ್ಣು ಮುಚ್ಚಿ ಕುಳಿತಿರುವುದು ಕಂಡುಬರುತ್ತದೆ. ಸಾಧಾರಣಕ್ಕೆ ಚಿತ್ರದಲ್ಲಿರುವ ಗೂಗೆ ಗುರುತಿಸಲು ಸಾಧ್ಯವಿಲ್ಲ.
ಅದ್ಭುತ ಕ್ಷಣಗಳ ಚಕ್ ಅಂತ ಸೆರೆ ಹಿಡಿಯೋ ಮಾಯಗಾರ ವಿವೇಕ್ ಗೌಡ
ಪರಿಸರ ಪ್ರಿಯರು, ಪ್ರಾಣಿ ಪ್ರಿಯರು ಈ ಪೋಟೋವನ್ನು ಕೊಂಡಾಡಿದ್ದಾರೆ. ನಾನು ಈ ರೀತಿಯ ಫೋಟೋವನ್ನು ಹಿಂದೆಂದೂ ನೋಡಿಲ್ಲ, ”ಎಂದು ಟ್ವಿಟರ್ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ. "ಗೂಬೆಗಳನ್ನು ತ್ವರಿತವಾಗಿ ಗುರುತಿಸುವುದು ಸಾಮಾನ್ಯವಾಗಿ ಕಷ್ಟ" ಎಂದು ಇನ್ನೊಬ್ಬರು ಹೇಳಿದ್ದಾರೆ. ಇದು 'ಫೋಟೋದಲ್ಲಿ ಹಕ್ಕಿ ಗುರುತಿಸಿ' ಸ್ಪರ್ಧೆಗೆ ಒಳ್ಳೆಯದು. ಅರಿವಾಗಲು ಸ್ವಲ್ಪ ಸಮಯ ಹಿಡಿಯಿತು ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಅದ್ಭುತ ಪೋಟೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ರೆಸ್ಪಾನ್ಸ್ ಪಡೆದುಕೊಂಡಿದೆ.
ಕೆನಡಾದ ಕ್ಯಾಮರಾ ಕೈಚಳಕ: ಇದು ಒಂದು ಪೋಟೋದ ಕತೆ.. ಈ ಪೋಟವನ್ನು ಒಮ್ಮೆ ನೋಡಿದಾಗ ಅರ್ಥವಾಗಲು ಸುಲಭಕ್ಕೆ ಸಾಧ್ಯ ಇಲ್ಲ. ಥಾಮಸ್ ವಿಜಯನ್ ಕ್ಲಿಕ್ಕಿಸಿರುವ ಒರಾಂಗುಟನ್(ಗೊರಿಲ್ಲಾ) ಫೋಟೋ ಜಗತ್ತಿನ ಮೆಚ್ಚುಗೆಗೆ ಪಾತ್ರವಾಗಿತ್ತು. ಅವರಿಗೆ ಪ್ರಶಸ್ತಿ ಸಹ ಒಲಿದು ಬಂದಿತ್ತು.
ನೇಚರ್ ಟಿಟಿಎಲ್ Photography ತೀರ್ಪುಗಾರರು ಈ ಪೋಟೋ ಕೊಂಡಾಡಿದ್ದು ವಿಶೇಷಗಳನ್ನು ತೆರೆದಿಟ್ಟಿದ್ದಾರೆ. ಈ ಪೋಟೋದಲ್ಲಿ ಹೊಸ ಅಂಶ ಹುಡುಕುವುದು ಗ್ಯಾರಂಟಿ ಎಂದು ನೇಚರ್ ಟಿಟಿಎಲ್ ಸಂಸ್ಥಾಪಕ ವಿಲ್ ನಿಕೋಲ್ಸ್ ಹೇಳಿದ್ದರು. ಕೇರಳ ಮೂಲದ ಥಾಮಸ್ ಈ ಪೋಟೋ ಕ್ಲಿಕ್ಕಿಸಿದ್ದಕ್ಕೆ ಎಂಟು ಸಾವಿರ ಜನ ಭಾಗವಹಿಸಿದ್ದ ಸ್ಫರ್ಧೆತಲ್ಲಿ ಪ್ರಶಸ್ತಿ ತಮ್ಮದಾಗಿರಿಸಿಕೊಂಡಿದ್ದರು.
ಆಗ್ನೇಯ ಏಷ್ಯಾದ ಬೊರ್ನಿಯೊ ದ್ವೀಪದಲ್ಲಿ ಸಾಹಸ ಮಾಡಿ ಈ ಪೋಟೋ ಸೆರೆ ಹಿಡಿಯಲಾಗಿತ್ತು. ನೀರಿನಲ್ಲಿ ಬೆಳೆದು ನಿಂತ ಮರ, ಮೇಲಿನ ನೀಲಾಕಾಶ, ಬೆಳಕು ಮತ್ತು ಒರಾಂಗುಟನ್ ಎಲ್ಲವನ್ನು ಗಮನದಲ್ಲಿ ಇಟ್ಟುಕೊಂಡು ಈ ಪೋಓ ಸೆರೆ ಹಿಡಿದೆ ಎಂದು ತಿಳಿಸಿದ್ದರು.