ನಿಶಾಂತ ಕಮ್ಮರಡಿ

‘ಎಲ್ಲ ಸರಿ, ಆದರೆ ತೀರಾ ಪೋಲ್ಕಾ ಡಾಟ್‌ಗಳಿರುವ ಡ್ರೆಸ್‌ಗಳನ್ನು ಸೆಲೆಕ್ಟ್ ಮಾಡ್ಬೇಡಿ. ಓಬೀರಾಯನ ಕಾಲದ ಹಾಗಿರುತ್ತೆ..’

ಮೊನ್ನೆ ಮೊನ್ನೆ ಫ್ಯಾಶನ್‌ ಡಿಸೈನರ್‌ ಒಬ್ರು ಅಸಡ್ಡೆಯಿಂದ ಹೀಗಂದು ಬಾಯಿ ಮುಚ್ಚಿಲ್ಲ, ಅಷ್ಟರಲ್ಲಿ ತುಂಟ ಕಣ್ಣೋಟ ಬೀರುತ್ತಾ ಬಂದ ತರಳೆಯೊಬ್ಬರು ಪೋಲ್ಕಾ ಡಾಟ್‌ನ ಸ್ಟೈಲಿಶ್‌ ಡ್ರೆಸ್‌ ಧರಿಸಿ ಕಣ್ಹೊಡೆದು ಬಿಡೋದಾ! ಫ್ಯಾಶನ್‌ ಮಾಯೆಯೆಂದರೆ ಇದಲ್ಲದೇ ಇನ್ನೇನು, ಇಲ್ಲಿ ಯಾರು ಮುಖ್ಯರಲ್ಲ, ಯಾರೂ ಅಮುಖ್ಯರೂ ಅಲ್ಲ, ಯಾವುದೂ ಯಕಃಶ್ಚಿತವಲ್ಲ..

30ರ ದಶಕದಲ್ಲೇ ಪೋಲ್ಕಾ ಕ್ರಾಂತಿ

‘ಪೋಲ್ಕಾ ಡಾಟೆಡ್‌ ಈಸ್‌ ಲೈಟ್‌ ಹಾರ್ಟೆಡ್‌, ಸೋ ಕ್ಲಾಸಿಕ್‌..’

ಈ ಲೇಡಿ ಡಾಕ್ಟರ್ ಮೈಯಲ್ಲಿ ಮತ್ತೆ ಟ್ಯಾಟೂ ಹಾಕಿಸಿ ಕೊಳ್ಳಲು ಇಲ್ಲವೇ ಇಲ್ಲ ಜಾಗ...

ಹೀಗಂದವಳು ಯಾರು ಗೊತ್ತಾ, ನೋರ್ಮಾ ಸ್ಮಾಲ್‌ವುಡ್‌. 1926ರಲ್ಲಿ ‘ಮಿಸ್‌ ಅಮೆರಿಕಾ’ ಆಗಿದ್ದ ಬೆಡಗಿ. ಆಕೆ ಪೋಲ್ಕಾ ಡಾಟೆಡ್‌ ಸ್ವಿಮ್‌ ಸೂಟ್‌ ಧರಿಸಿ ತನ್ನ ಫ್ಯಾಶನ್‌ ಸ್ಟೇಟ್‌ಮೆಂಟ್‌ಅನ್ನು ಹೀಗೆ ಮುತ್ತು ಹಾರಿಸಿದ ಹಾಗೆ ಗಾಳಿಯಲ್ಲಿ ಹಾರಿಬಿಟ್ಟಿದ್ದಳು. ಬಳಿಕ ಈ ಸ್ಟೈಲ್‌, ಡ್ರೆಸ್‌ ಅದೆಷ್ಟುಫೇಮಸ್‌ ಆಗಿತ್ತು ಅಂದರೆ, ಮುಂದಿನ ವರ್ಷವೇ ಡಿಸ್ನಿ ಬಿಡುಗಡೆ ಮಾಡಿದ ಲೀಡಿಂಗ್‌ ಕಾರ್ಟೂನ್‌ ‘ಲೇಡಿ ಮಿನ್ನಿ ಮೌಸ್‌’ ನ ಉಡುಗೆಯೂ ರೆಡ್‌ ಪೋಲ್ಕಾ ಡಾಟ್‌ನದಾಗಿತ್ತು. 1930ರ ಹೊತ್ತಿಗೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಪೋಲ್ಕಾ ಡಾಟ್‌ನ ಕ್ರಾಂತಿಯೇ ಆಗಿ ಬಿಟ್ಟಿತು.

ಬಾಲಿವುಡ್‌ನಲ್ಲಿ 60ರ ದಶಕದಲ್ಲಿ ಪೋಲ್ಕಾ ಡ್ರೆಸ್‌ ಸಖತ್‌ ಫೇಮಸ್‌ ಆಯ್ತು. ನೂತನ್‌, ಶರ್ಮಿಳಾ ಠಾಗೋರ್‌, ಸಾಧನಾ ಮೊದಲಾದವರು ಈ ಫ್ಯಾಶನ್‌ನಲ್ಲಿ ಮಿಂಚಿದ್ರು. ಅಲ್ಲಿಂದ ಇಲ್ಲಿಯವರೆಗೂ ಕಾಲ ಕಾಲಕ್ಕೆ ಡಿಫೆರೆಂಟಾದ ಉಡುಗೆಗಳಲ್ಲಿ ಪೋಲ್ಕಾ ಡಾಟ್‌ ರಾರಾಜಿಸುತ್ತಾ ಇದೆ.

ಮತ್ತೆ ಬಂದಿದೆ ಟೀ ಲೆನ್ತ್ ಟ್ರೆಂಡ್; ಮುಜುಗರಕ್ಕೆ ಹೇಳಿ ಬೈ!

ಬಾಲಿವುಡ್‌ನಲ್ಲಿ ಪೋಲ್ಕಾ ಡಾಟ್‌

ಇತ್ತೀಚಿಗೆ ಲಂಡನ್‌ಗೆ ಹೋಗಿ ತಿಂಗಳಾನುಗಟ್ಟಲೆ ಅಲ್ಲೇ ಝಾಂಡಾ ಹೂಡಿದವರು ಸೋನಂ ದಂಪತಿ. ಅವರು ವಾಪಾಸ್‌ ಬರುವಾಗ ಏರ್‌ಪೋರ್ಟ್‌ನಲ್ಲಿ ಕ್ಯಾಮರಾ ಕಣ್ಣಲ್ಲಿ ಸೆರೆಯಾದರು. ಸೋನಂನ ಕಡುಗಪ್ಪು ಬಣ್ಣದ ತೇಲುವ ಡ್ರೆಸ್‌ನ ತುಂಬ ಬಿಳಿ ಬಣ್ಣದ ಪೋಲ್ಕಾ ಡಾಟ್‌ಗಳು. ಜೊತೆಗೆ ಟ್ರೆಂಡೀ ಓವರ್‌ಕೋಟ್‌. ಈ ಕಾಂಬಿನೇಶನ್ನೇ ಮಜಾ. ಏನ್‌ ಸಖತ್‌ ಲುಕ್‌ ಅಂತ ಜನ ನೋಡ್ತಿದ್ರೆ, ಕ್ಲಿಕ್ಕಿಸಿದ್ದಕ್ಕೂ ಸಾರ್ಥಕ ಅಂದುಕೊಂಡ ಪಾಪರಾಜಿಯೊಬ್ಬ. ಆಮೇಲೆ ಫ್ಯಾಶನ್‌ ಮ್ಯಾಗಜಿನ್‌ಗಳಲ್ಲೆಲ್ಲ ಸೋನಂ ತೊಟ್ಟಪೋಲ್ಕಾ ಡಾಟ್‌ನದೇ ಮಾತು.

ಯಾವ್ದೋ ಡಿನ್ನರ್‌ಗೆ ಗಂಡ ನಿಕ್‌ ಹಾಗೂ ಪುಟಾಣಿ ನಾಯಿಮರಿಯನ್ನೆತ್ತಿಕೊಂಡು ಹೊರಟಿದ್ದ ಪ್ರಿಯಾಂಕಾ ಕಡುಗಪ್ಪಿನಲ್ಲಿ ಬಿಳಿ ಡಾಟ್‌ಗಳಿರುವ ಮ್ಯಾಕ್ಸಿ ಧರಿಸಿದ್ದರು. ಪಾರದರ್ಶಕವಾಗಿ ಸಖತ್‌ ಸೆಕ್ಸಿಯಾಗಿದ್ದ ಈ ಡ್ರೆಸ್‌ ನ್ಯೂಯಾರ್ಕಿಗರ ಗಮನವನ್ನೂ ಸೆಳೆಯಿತು.

ಇದು ಟ್ಯೂಬ್‌ ಡ್ರೆಸ್‌ ಜಮಾನ;ನಾಚೋ ಹುಡುಗೀರಿಗಲ್ಲ ಈ ಫ್ಯಾಷನ್!

ಆಮೆ ಕತ್ತಿನ (ಟರ್ಟಲ್‌ ನೆಕ್‌) ಅರ್ಥಾತ್‌ ಕೊರಳಿಗೆ ಬಿಗಿಯಾಗಿ ನಿಲ್ಲುವ ಪೋಲ್ಕಾ ಡಾಟ್‌ ಮಿನಿ ಧರಿಸಿದ್ದ ಮಲೈಕಾ ಅರೋರ ಸಖತ್‌ ಹಾಟ್‌ ಅನಿಸಿಕೊಂಡಿದ್ದರ ಹಿಂದೆ ಈ ಸ್ಟೈಲಿಶ್‌ ಡ್ರೆಸ್‌ನ ಕೊಡುಗೆಯೂ ಇತ್ತೆನ್ನಿ.

ಕಳೆದ ಕೆಲ ದಿನಗಳ ಬಾಲಿವುಡ್‌, ಸ್ಯಾಂಡಲ್‌ವುಡ್‌ ಸೆಲೆಬ್ರಿಟಿಗಳ ಡ್ರೆಸ್‌ಗಳನ್ನು ನೋಡ್ತಿದ್ರೆ ಪೋಲ್ಕಾ ಡಾಟ್‌ನ ಹಲವು ಸಾಧ್ಯತೆಗಳ ದರ್ಶನ. ಸಾರಾ ಆಲಿಖಾನ್‌ ಅಂತೂ ಬೆಳ್ಳಕ್ಕಿಯಂಥಾ ಮೈಗೆ ಬಿಳಿ ಬಣ್ಣದ ಮೇಲೆ ಕಪ್ಪು ಡಾಟ್‌ಗಳಿದ್ದ ಡ್ರೆಸ್‌ನಲ್ಲಿ ಮಿಂಚಿದ್ದೂ ಮಿಂಚಿದ್ದೇ. ಶ್ರದ್ಧಾ ಕಪೂರ್‌ ಬಿಳಿ ಕಪ್ಪು ಪೋಲ್ಕಾ ಡಾಟ್‌ ಡ್ರೆಸ್‌ನಲ್ಲಿ ಫೋಸ್‌ ಕೊಟ್ಟರೆ, ಅಲಿಯಾ ಬಟ್‌ ಸಿಂಪಲ್ಲಾದ ಕ್ಯೂಟ್‌ ಗ್ರೀನ್‌ ವೈಟ್‌ ಪೋಲ್ಕಾ ಡ್ರೆಸ್‌ನಲ್ಲಿ ಮುಗುಳ್ನಕ್ಕರು. ಮಾನುಷಿ ಚಿಲ್ಲಾರ್‌, ಅನನ್ಯಾ ಪಾಂಡೆ, ದೀಪಿಕಾ ಹೀಗೆ ಆಲ್‌ ಮೋಸ್ಟ್‌ ಆಲ್‌ ಎಲ್ಲ ಬಿಟೌನ್‌ ಬೆಡಗಿಯರೂ ಪೋಲ್ಕಾ ಡ್ರೆಸ್‌ನಲ್ಲಿ ಮೆರವಣಿಗೆ ಹೊರಟವರೇ..

ಹಬ್ಬಕ್ಕೆ ಹೊಸ ಸೀರೆ ಬಂತು, ಬ್ಲೌಸ್‌ ಕಥೆ ಏನು?

ಪಕ್ಕದ್ಮನೆ ಹುಡುಗೀರೂ ಈ ಸ್ಟೈಲ್‌ ಮಾಡ್ಬಹುದು

ಅಫ್‌ಕೋರ್ಸ್‌, ನಮ್ಮನೆ ಹುಡುಗೀರೂ ಈ ವೆರೈಟಿಯ ಡ್ರೆಸ್‌ ಮಾಡಬಹುದು. ಏಕೆಂದರೆ ಸಖತ್‌ ಡೀಸೆಂಟಾಗಿರೋ, ಅಷ್ಟೇ ಚೆನ್ನಾದ ಲುಕ್‌ ಇರೋ ಡ್ರೆಸ್‌ ಇದು. ಸ್ವಲ್ಪ ಡೀಸೆಂಟಾಗಿ ಡ್ರೆಸ್‌ ಮಾಡೋ ಹೆಣ್ಮಕ್ಕಳು ಈಗ ಟ್ರೆಂಡಿಯಾಗಿರುವ ಪೋಲ್ಕಾ ಡಾಟ್‌ ಮ್ಯಾಕ್ಸಿ ಟ್ರೈ ಮಾಡಬಹುದು. ಇದರ ಲುಕ್ಕೇ ಲುಕ್ಕು. ಚೆಂದಕ್ಕೆ ಚೆಂದವೂ, ಎದುರಿದ್ದವನ ಕಣ್ಣು ಕುಕ್ಕುವಂತಿರದೇ ಕಕ್ಕುಲಾತಿ ಮೂಡಿಸುವಂಥಾ ಉಡುಪು. ಮ್ಯಾಕ್ಸಿ ಬಿಟ್ರೆ ಕ್ರಾಪ್‌ ಟಾಪ್‌ಗೆ ತುಸು ಮಾಡ್‌ ಆಗಿರುವ ಪೋಲ್ಕಾ ಡಾಟ್‌ ಸ್ಕರ್ಟ್‌ ತೊಡಬಹುದು. ಕಿಯಾರಾ ಅದ್ವಾನಿ, ಸಾರಾ ಆಲಿಖಾನ್‌ ಮತ್ತಿತರರು ಈ ಸ್ಟೈಲ್‌ ಮಾಡಿದ್ದಾರೆ. ಈ ವೆರೈಟಿಯಲ್ಲಿ ಸಾಂಪ್ರದಾಯಿಕ ಉಡುಗೆಯನ್ನೂ ಡಿಸೈನ್‌ ಮಾಡಿ ಕಂಟೆಪರರಿ ಸ್ಟೈಲ್‌ ಮಾಡೋರಿದ್ದಾರೆ. ಹಾಗಾಗಿ ಹೆಚ್ಚಿನ ಎಲ್ಲ ಬಗೆಯ ಉಡುಪುಗಳಿಗೂ ಪೋಲ್ಕಾ ಡಾಟ್‌ ಚೆನ್ನಾಗಿಯೇ ಕಾಣುತ್ತೆ. ಕೆಲವು ವರ್ಷಗಳ ಹಿಂದೆ ಪೋಲ್ಕಾ ಡಾಟ್‌ ಸೀರೆಗಳ ಟ್ರೆಂಡ್‌ ಸೃಷ್ಟಿಯಾಗಿತ್ತು.

ಇದಕ್ಕೆ ಕಣ್ಣು ಹೈಲೈಟ್‌ ಆಗೋ ಥರದ ಮೇಕಪ್‌ ಚೆಂದ. ಸಿಂಪಲ್‌ ಆ್ಯಕ್ಸೆಸರೀಸ್‌ ಇರಲಿ. ಉಡುಪಿಗೆ ತಕ್ಕಂಥಾ ಸ್ಯಾಂಡಲ್ಸ್‌ ಧರಿಸಿ.