ಮಧ್ಯಮ ವಯಸ್ಸಿನ ಹೆಣ್ಣು ಮಕ್ಕಳ ದೊಡ್ಡ ಶತ್ರುವೆಂದರೆ ತೂಕ ಹೆಚ್ಚಾಗುವುದು. ಅದನ್ನು ಕಡಿಮೆ ಮಾಡಿ ಕೊಳ್ಳಲು ಎಲ್ಲಿಲ್ಲದ ಕಸರತ್ತು ನಡೆಸುತ್ತಾರೆ. ಯೋಗ, ವಾಕಿಂಗ್, ಜಿಮ್, ಡಯಟ್...ಒಂದೋ, ಎರಡೋ. ಏನೂ ಮಾಡಿದರೂ ತೂಕ ಮಾತ್ರ ಇಳಿಯೋಲ್ಲ. 

ಕೆಲವರಿಗೆ ಮಾಡುವ ಡಯಟ್ ವರ್ಕ್ ಔಟ್ ಆಗುತ್ತೆ. ಮತ್ತೆ ಕೆಲವರಿಗೆ ಸಿಕ್ಕಾಪಟ್ಟೆ ಬೆವರಿಳಿಸುವುದು ಹೆಲ್ಪ್ ಆಗುತ್ತೆ. ತೂಕ ಕಡಿಮೆ ಮಾಡುತ್ತೆಂದು ಜಾಹೀರಾತು ತೋರಿಸಿ ನೀಡುವ ಪುಡಿ, ಮಾತ್ರೆಗಳಿಂದ ಸೈಡ್ ಎಫೆಕ್ಟ್ ಗ್ಯಾರಂಟಿ. ಸುಖಾ ಸುಮ್ಮನೆ ದುಡ್ಡೂ ದಂಡ, ಟೈಮೂ ವೇಸ್ಟ್.

ನಿಂಬೆ-ಜೇನಿನ ರಸ, ಕೊತ್ತಂಬರಿ ಹಾಗೂ ಜೀರಾ ನೀರು ಕುಡಿದು ತೂಕ ಇಳಿಸಿಕೊಳ್ಳಬಹುದು. ಎಲ್ಲವುಕ್ಕಿಂತ ಬೆಸ್ಟ್ ಅಂದರೆ ಓಮಿನ ಕಾಳಿನ ನೀರು. ಇದನ್ನು ಕುಡಿಯುವುದರಿಂದ ಎರಡು ವಾರದಲ್ಲಿ ಆರು ಕೆ.ಜಿ ಇಳಿಸಿಕೊಳ್ಳಬಹುದು. ಇದರಿಂದ ಅನೇಕರಿಗೆ ಕಿಬ್ಬೊಟ್ಟೆಯ ಬೊಜ್ಜೂ ಕರಗಿ ಫಿಟ್‌ನೆಸ್ ಮೆಂಟೈನ್ ಆಗುತ್ತೆ.

ಕೆಲಸದ ವೇಳೆ ಮನಸ್ಸನ್ನು ಪ್ರಶಾಂತವಾಗಿಟ್ಟುಕೊಳ್ಳುವುದು ಹೇಗೆ?

ನೀರನ್ನು ಹೇಗೆ ಕುಡೀಬೇಕು? 

ಒಂದು ಟೀ ಸ್ಪೂನ್ ಓಮಿನ ಕಾಳನ್ನು ರಾತ್ರಿ ಇಡೀ ನೀರಿನಲ್ಲಿ ನೆನಸಿಡಿ. ಬೆಳಗ್ಗೆ ಕಾಳಿನೊಂದಿಗೆ ನೀರನ್ನೂ ಕುದಿಸಿ. ಅದನ್ನು ಸೋಸಿ ನೀರನ್ನು ಕುಡಿದು, ಗಂಟೆ ನಂತರ ಏನಾದರೂ ತಿನ್ನಿ.  ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸಿದರೆ ಅತ್ಯುತ್ತಮ ಫಲಿತಾಂಶವನ್ನು ಪಡೀಬಹುದು.

ಒತ್ತಡದಲ್ಲಿದ್ದಾಗ ಈ ಕೆಲಸಕ್ಕೆ ನೋ ಎನ್ನಿ