ವಿಜ್ಞಾನಿಗಳು ಕೃತಕ ಬುದ್ಧಿಮತ್ತೆ (AI) ಆಧಾರಿತ ಹೊಸ ಸೆನ್ಸರ್ ಅಭಿವೃದ್ಧಿಪಡಿಸಿದ್ದು, ಇದು ಕೇವಲ 4 ನಿಮಿಷಗಳಲ್ಲಿ ಹಾವಿನ ವಿಷವನ್ನು 95% ನಿಖರತೆಯೊಂದಿಗೆ ಪತ್ತೆ ಮಾಡುತ್ತದೆ. ದ್ರವ ಹರಳುಗಳನ್ನು ಬಳಸುವ ಈ ತಂತ್ರಜ್ಞಾನವು ವೈದ್ಯರಿಗೆ ಸರಿಯಾದ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ಆದರೂ, ಇದನ್ನು ಆಸ್ಪತ್ರೆಗಳಲ್ಲಿ ಬಳಸುವ ಮುನ್ನ ಹೆಚ್ಚಿನ ಪರೀಕ್ಷೆಗಳ ಅಗತ್ಯವಿದೆ.
ಹಾವಿನ ವಿಷದ ಪ್ರಕಾರವನ್ನು ತ್ವರಿತ ಗುರುತಿಸುವುದರಿಂದ ವೈದ್ಯರು ಕಚ್ಚಿದ ನಂತರ ಸರಿಯಾದ ಚಿಕಿತ್ಸೆ ಆಯ್ಕೆ ಮಾಡಲು ಸಹಾಯ ಮಾಡುತ್ತದೆ. ಸಂಶೋಧಕರು ಕೃತಕ ಬುದ್ಧಿಮತ್ತೆ ಸಹಾಯದಿಂದ ನಾಗರಹಾವು ಮತ್ತು ವೈಪರ್ ವಿಷದ ನಡುವೆ ವ್ಯತ್ಯಾಸ ಗುರುತಿಸುವ ಪ್ರಯೋಗಾಲಯ ಉಪಕರಣವನ್ನು ಅಭಿವೃದ್ಧಿಪಡಿಸಿದ್ದಾರೆ. 4 ನಿಮಿಷಗಳ ಮಾಹಿತಿ ರವಾನಿಸಲು ತೆಗೆದುಕೊಳ್ಳುವ ಕಾಲಾವಧಿ ಎರಡು ರೀತಿಯ ವಿಷವನ್ನು ಗುರುತಿಸುವಲ್ಲಿ, ಈ ವ್ಯವಸ್ಥೆಯು 95% ನಿಖರತೆ ಸಾಧಿಸಿದೆ. ಅದು ಹೇಗೆ ಕೆಲಸ ಮಾಡುತ್ತದೆ. ಅದರ ಸಂಪೂರ್ಣ ವಿವರ ಇಲ್ಲಿದೆ.
ಕೃತಕ ಬುದ್ಧಿಮತ್ತೆ ಆಧಾರಿತ ಸೆನ್ಸರ್ ಅಭಿವೃದ್ಧಿ!
ವಿಜ್ಞಾನಿಗಳು ಹಾವು ಕಚ್ಚಿದಾಗ ಅದರ ವಿಷವನ್ನು ಪತ್ತೆಹಚ್ಚಲು ಸುಧಾರಿತ AI ಸೆನ್ಸರ್ ಒಂದನ್ನು ಅಭಿವೃದ್ಧಿಪಡಿಸಿದ್ದಾರೆ.ಈ ಹೊಸ ತಂತ್ರಜ್ಞಾನವು ಕೇವಲ 4 ನಿಮಿಷಗಳಲ್ಲಿ ಹಾವಿ ನ ವಿಷ ಯಾವುದು ಎಂಬುದನ್ನು ಪತ್ತೆ ಮಾಡುತ್ತದೆ. ಪ್ರಾಥಮಿಕ ಪ್ರಯೋಗಗಳಲ್ಲಿ ಈ ಸೆನ್ಸರ್ ನಾಗರಹಾವು ಮತ್ತು ಕೊಳಕು ಮಂಡಲ ಹಾವುಗಳ ವಿಷವನ್ನು 95% ನಿಖರತೆಯೊಂದಿಗೆ ಯಶಸ್ವಿಯಾಗಿ ಗುರುತಿಸಿದೆ.
ಕಾರ್ಯನಿರ್ವಹಿಸುವ ವಿಧಾನ (ಲಿಕ್ವಿಡ್ ಕ್ರಿಸ್ಟಲ್ಸ್)!
ಈ ಸೆನ್ಸರ್ನಲ್ಲಿ ದ್ರವ ಹರಳುಗಳನ್ನು ಬಳಸಲಾಗಿದೆ. ಸೆನ್ಸರ್ಗೆ ಹಾವಿನ ವಿಷ ತಗುಲಿದಾಗ, ಅದರಲ್ಲಿನ ಕಣಗಳ ಜೋಡಣೆ ಬದಲಾಗಿ ಸೂಕ್ಷ್ಮದರ್ಶಕದಲ್ಲಿ ವಿಶಿಷ್ಟವಾದ ಬೆಳಕಿನ ಮಾದರಿಗಳು ಗೋಚರಿಸುತ್ತವೆ. ಈ ಬದಲಾವಣೆಗಳನ್ನು AI ಮಾದರಿಯು ವಿಶ್ಲೇಷಿಸಿ ವಿಷದ ಪ್ರಕಾರವನ್ನು ಪತ್ತೆ ಮಾಡುತ್ತದೆ.
ಅತ್ಯಂತ ಕಡಿಮೆ ಪ್ರಮಾಣದ ವಿಷವೂ ಪತ್ತೆ!
ಪ್ರತಿ ಮಿಲಿ ಲೀಟರ್ಗೆ ಕೇವಲ 45 ಮೈಕ್ರೋಗ್ರಾಂನಷ್ಟು ಕಡಿಮೆ ಪ್ರಮಾಣದಲ್ಲಿ ವಿಷ ಇದ್ದರೂ ಸಹ ಇದು ಪತ್ತೆಹಚ್ಚುವ ಸಾಮರ್ಥ್ಯ ಹೊಂದಿದೆ. ಹಾವು ಕಚ್ಚಿದ ತಕ್ಷಣ ಸೂಕ್ತವಾದ ಆಂಟಿ-ವೆನಮ್ ಚಿಕಿತ್ಸೆ ನೀಡಲು ಇದು ವೈದ್ಯರಿಗೆ ನೆರವಾಗುತ್ತದೆ. ತಪ್ಪು ಚಿಕಿತ್ಸೆಯಿಂದಾಗುವ ಅಡ್ಡಪರಿಣಾಮಗಳನ್ನು ಇದು ತಪ್ಪಿಸುತ್ತದೆ. ಅಲ್ಲದೇ ಸಾಂಪ್ರದಾಯಿಕ ಪದ್ಧತಿಗಳಿಗೆ ಹೋಲಿಸಿದರೆ ಈ ಪ್ಲಾಟ್ಫಾರ್ಮ್ ಅತ್ಯಂತ ಸರಳ, ಸುಲಭ ಮತ್ತು ಕಡಿಮೆ ವೆಚ್ಚದ್ದಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಈ ಸಂಶೋಧನೆಯು ಭರವಸೆ ಮೂಡಿಸಿದ್ದರೂ, ಆಸ್ಪತ್ರೆಗಳಲ್ಲಿ ಅಥವಾ ತುರ್ತು ಚಿಕಿತ್ಸಾ ಸಂದರ್ಭಗಳಲ್ಲಿ ಅಧಿಕೃತವಾಗಿ ಬಳಸುವ ಮುನ್ನ ಇನ್ನು ಹೆಚ್ಚಿನ ವೈದ್ಯಕೀಯ ಪರೀಕ್ಷೆಗಳು ಮತ್ತು ಸುಧಾರಣೆಗಳ ಅಗತ್ಯವಿದೆ.
ಇರಾನ್ ದೇಶದ ಅಧ್ಯಯನ ವರದಿ!
ಸಂಶೋಧಕರ ಪ್ರಕಾರ ಇರಾನ್ನಲ್ಲಿ ಪ್ರತಿ ವರ್ಷ ಸುಮಾರು 4,500 ರಿಂದ 7,000 ಹಾವು ಕಚ್ಚುವ ಪ್ರಕರಣಗಳು ದಾಖಲಾಗುತ್ತವೆ. ಇಂತಹ ಗ್ರಾಮೀಣ ಮತ್ತು ಕೃಷಿ ಪ್ರಧಾನ ಪ್ರದೇಶಗಳಲ್ಲಿ ಈ ತಂತ್ರಜ್ಞಾನವು ಜೀವ ಉಳಿಸಲು ಹೆಚ್ಚು ಸಹಕಾರಿಯಾಗಲಿದೆ. ಈ ತಂತ್ರಜ್ಞಾನದ ಪ್ರಮುಖ ವಿಶಿಷ್ಟತೆಯೆಂದರೆ, ಇದು ವಿಷವನ್ನು ಗುರುತಿಸಲು ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಗಳಂತೆ ಯಾವುದೇ ಹಾವಿನ ವಿಷ-ನಿಶ್ಚಿತ ಆಂಟಿಬಾಡಿಗಳನ್ನು ಬಳಸುವುದಿಲ್ಲ. ಕೇವಲ ದ್ರವ ಹರಳುಗಳ ಭೌತಿಕ ಬದಲಾವಣೆಗಳ ಆಧಾರದ ಮೇಲೆ ಕೆಲಸ ಮಾಡುತ್ತದೆ.
ಪಾಲಿವೆಲೆಂಟ್ ಚಿಕಿತ್ಸೆಯ ಅಡ್ಡಪರಿಣಾಮಗಳಿಗೆ ಬ್ರೇಕ್!
ಪ್ರಸ್ತುತ ಯಾವ ಹಾವು ಕಚ್ಚಿದೆ ಎಂದು ತಿಳಿಯದಿದ್ದಾಗ ವೈದ್ಯರು ಸಾಮಾನ್ಯ ಆಂಟಿ-ವೆನಮ್ ನೀಡುತ್ತಾರೆ, ಇದು ಕೆಲವೊಮ್ಮೆ ರೋಗಿಗಳಲ್ಲಿ ತೀವ್ರ ಅಲರ್ಜಿ ಅಥವಾ ಅಡ್ಡಪರಿಣಾಮಗಳನ್ನು ಉಂಟುಮಾಡುತ್ತದೆ. ಆದರೆ ಈ ಸೆನ್ಸರ್ ನಿರ್ದಿಷ್ಟ ಹಾವನ್ನು ಪತ್ತೆ ಹಚ್ಚುವುದರಿಂದ ಸೂಕ್ತ ಚಿಕಿತ್ಸೆ ನೀಡಿ ಅಡ್ಡಪರಿಣಾಮಗಳನ್ನು ಕಡಿಮೆ ಮಾಡಬಹುದು.
