ಮನೆಯೊಳಗೇ ಸೈಕ್ಲಿಂಗ್ ಮಾಡುತ್ತೀರೋ, ಅಥವಾ ಸಿಟಿ  ರೋಡ್‌ಗಳಲ್ಲಿ, ಗುಡ್ಡಗಾಡುಗಳಲ್ಲಿ ಸೈಕ್ಲಿಂಗ್ ಮಾಡುವ ಹವ್ಯಾಸವೋ, ಒಟ್ಟಿನಲ್ಲಿ ಬಲ್ಲವನೇ ಬಲ್ಲ ಬೆಲ್ಲದ  ಸವಿಯ ಎಂಬಂತೆ ಸೈಕ್ಲಿಂಗ್‌ನ ಮಜಾ ಅನುಭವಿಸಿದವರಿಗೇ  ಗೊತ್ತು. ಆದರೆ ಸೈಕ್ಲಿಂಗ್ ಸಮಯದಲ್ಲಿ ಮಾಡುವ ಕೆಲ ತಪ್ಪುಗಳಿಂದಾಗಿ ನಿಮಗೆ ಅಥವಾ ಸೈಕಲ್‌ಗೆ ಡ್ಯಾಮೇಜ್ ಆಗಬಹುದು. ಸೈಕ್ಲಿಂಗ್  ಸಮಯದಲ್ಲಿ ಮಾಡಬಾರದ ತಪ್ಪುಗಳ ಬಗ್ಗೆ ಎಕ್ಸ್ಪರ್ಟ್ ಸೈಕ್ಲಿಸ್ಟ್‌ಗಳು ನೀಡಿದ ಸಲಹೆಗಳು ಇಲ್ಲಿವೆ.

1. ಹೆಲ್ಮೆಟ್ ಧರಿಸದಿರುವುದು

ಹೊರಾಂಗಣ ಸೈಕ್ಲಿಂಗ್‌ಗೆ ಹೆಲ್ಮೆಟ್ ಮಸ್ಟ್. ನಿಮ್ಮ ಅತಿಯಾದ ಆತ್ಮವಿಶ್ವಾಸ ಹೆಲ್ಮೆಟ್ ಧರಿಸುವುದಕ್ಕೆ ಅಡ್ಡಿ ಮಾಡುತ್ತಿರಬಹುದು. ಅಥವಾ ಸ್ಥಳೀಯ ಕಾನೂನು ಹೆಲ್ಮೆಟ್ ಕಡ್ಡಾಯ ಮಾಡಿಲ್ಲದಿರಬಹುದು. ಸ್ವಲ್ಪ ದೂರವಷ್ಟೇ ಹೋಗುತ್ತಿರಬಹುದು, ಹೇರ್‌ಸ್ಟೈಲ್ ಹಾಳಾಗುವ ಚಿಂತೆಯಿರಬಹುದು. ಕಾರಣ ಏನೇ ಇರಲಿ, ಯಾವುದೂ ಸಮರ್ಥನೀಯವಲ್ಲ, ಎಲ್ಲ ದಿನಗಳೂ ಒಂದೇ ರೀತಿ ಇರುವುದಿಲ್ಲ. ಹೆಲ್ಮೆಟ್ ಎಂಬುದು ನಿಮ್ಮ ರಕ್ಷಣೆಗಾಗಿಯೇ ಹೊರತು ಕಾನೂನಿಗಾಗಿ ಧರಿಸುವುದಲ್ಲ ಎಂಬುದನ್ನು ಮರೆಯಬೇಡಿ. ಸರಿಯಾದ ಫಿಟ್ಟಿಂಗ್ ಇಲ್ಲದ ಹೆಲ್ಮೆಟ್ ಧರಿಸಿದರೂ ಪ್ರಯೋಜನವಿಲ್ಲ. ಹೀಗಾಗಿ, ನಿಮ್ಮ ತಲೆಗೆ ಹೊಂದುವ ಉತ್ತಮ ಗುಣಮಟ್ಟದ ಹೆಲ್ಮೆಟ್ ಧರಿಸಿಯೇ ರೋಡಿಗಿಳಿಯಿರಿ.  ಇಷ್ಟಕ್ಕೂ ಹೆಲ್ಮೆಟ್ ನಿಮಗೆ ಎಕ್ಸ್‌ಪರ್ಟ್ ಸೈಕ್ಲಿಸ್ಟ್ ಲುಕ್ ಕೂಡಾ ನೀಡುತ್ತದೆ. 

ಯಾವ ಬಗೆಯ ನಡಿಗೆ ನಿಮ್ಮದು?

2. ಸೈಕಲ್ ಕಂಡೀಶನ್ ನೆಗ್ಲೆಕ್ಟ್ ಮಾಡುವುದು

ನೀವು ಸೈಕ್ಲಿಂಗನ್ನು ಗಂಭೀರವಾಗಿ ತೆಗೆದುಕೊಂಡಿದ್ದಲ್ಲಿ ಪ್ರತಿ 2000 ಮೈಲಿಗೂ ಹೊಸ ಸೈಕಲ್ ಖರೀದಿಸುವ ಅಭ್ಯಾಸ ಒಳ್ಳೆಯದು. ಮೂರು ವರ್ಷಕ್ಕೊಮ್ಮೆಯಾದರೂ ಸೈಕಲ್  ಬದಲಿಸಿ. ಕನಿಷ್ಠಪಕ್ಷ ಅದರ ಚೈನ್ ಬದಲಾಯಿಸಿ, ಕಾರ್ಬನ್ ಫ್ರೇಮ್ ಹೊಸತು ಹಾಕಿಸಿ, ಸರ್ವೀಸ್ ಮಾಡಿಸಿಕೊಳ್ಳಿ. ವಾರಕ್ಕೆ ಕನಿಷ್ಠ 2 ಬಾರಿ ಸೈಕ್ಲಿಂಗ್ ಮಾಡುತ್ತೀರಾದರೆ, 3 ತಿಂಗಳಿಗೊಮ್ಮೆ ಹತ್ತಿರದ ಬೈಕ್ ಶಾಪ್‌ನಲ್ಲಿ ಸೈಕಲ್‌ನ ಹೆಲ್ತ್ ಚೆಕಪ್ ಮಾಡಿಸಿ. ಟೈರ್ ಪ್ರೆಶರ್ ಪರಿಶೀಲಿಸಿ. ಹೆಚ್ಚು ಬಳಸದವರು ವರ್ಷಕ್ಕೆರಡು ಬಾರಿ ಸರ್ವೀಸ್ ಮಾಡಿಸಿ. ಆಗ ಧೀರ್ಘಕಾಲಕ್ಕೆ ಅದನ್ನು ಬಳಸಬಹುದು. 

3. ರಾಂಗ್ ಸೈಜ್ ಬೈಕ್ ಓಡಿಸುವುದು

ಸೈಕಲ್ ತೆಗೆದುಕೊಳ್ಳುವ ಮುನ್ನ ನಿಮಗೆ ಸರಿಯಾಗಿ ಫಿಟ್ ಆಗುವ ಸೈಜ್  ಯಾವುದು ಎಂಬುದರ ಕುರಿತು ತಜ್ಞರೊಂದಿಗೆ ಚರ್ಚಿಸಿ, ಓಡಿಸಿ ನೋಡಬೇಕು. ರಾಂಗ್ ಸೈಜ್ ತೆಗೆದುಕೊಳ್ಳುವುದರಿಂದಲೇ ಹಲವು ಆ್ಯಕ್ಸಿಡೆಂಟ್‌ಗಳು ಆಗುತ್ತವೆ ಎನ್ನುತ್ತಾರೆ ಸೈಕ್ಲಿಂಗ್ ಎಕ್ಸ್‌ಪರ್ಟ್ಸ್. ಸೈಕಲ್ ಫಿಟ್ಟಿಂಗ್ ಸರಿಯಾಗಿದ್ದರೆ ಆಗ ನೀವು ಸೈಕ್ಲಿಂಗ್ ಅನುಭವವನ್ನು ಹೆಚ್ಚು ಅನುಭವಿಸಲು ಸಾಧ್ಯ,  

ಫ್ರೀಯಾಗಿದ್ದೇ ಫಿಟ್ ಆಗಿರ್ಬೇಕಾ? ಜಿಮ್, ಜುಂಬಾ ಬಿಟ್ಹಾಕಿ...

4. ರೈಡ್‌ಗೂ ಮುನ್ನ ಹಾಗೂ ನಂತರ ಊಟ ಬಿಡುವುದು

ಸೈಕ್ಲಿಂಗ್‌ಗಿಂತ ಮುನ್ನ ಆಹಾರ ಸೇವನೆ ಮಾಡುವವರು ಕನಿಷ್ಠ ಪಕ್ಷ 45 ನಿಮಿಷ ಮುನ್ನ ಆಹಾರ ಸೇವಿಸಬೇಕು. ಸೈಕ್ಲಿಂಗ್ ಬಳಿಕ ಆಹಾರ ಸೇವಿಸುವುದು ಬಹಳ ಮುಖ್ಯ. ಪೌಷ್ಠಿಕಾಂಶಯುಕ್ತ ಸ್ಮೂತಿ, ಅಥವಾ ಲೀನ್ ಪ್ರೋಟೀನ್ ಹಾಗೂ ಹೆಚ್ಚು ಹಸಿರು ಸೊಪ್ಪು, ತರಕಾರಿಗಳನ್ನು ಹೊಂದಿರುವ ಆಹಾರ ಸೇವಿಸಿ. ರೈಡ್‌ಗೂ ಮುನ್ನ ಹಾಗೂ ನಂತರದಲ್ಲಿ ಸಾಕಷ್ಟು ನೀರು ಕುಡಿಯುವುದನ್ನು ಮರೆಯಬೇಡಿ. 

5. ಸ್ಟ್ರೆಚ್ ಮಾಡದಿರುವುದು

ನಿಮಗಿಷ್ಟವೋ ಕಷ್ಟವೋ‌, ಸೈಕ್ಲಿಂಗ್‌ಗೆ ಮುನ್ನ ಹಾಗೂ ನಂತರದಲ್ಲಿ ಸ್ಟ್ರೆಂಚಿಂಗ್ ಎಕ್ಸ‌ರ್ಸೈಸ್ ಮಾಡುವುದು ಕಡ್ಡಾಯ. ಇದು ಇಂಜುರಿ ತಡೆಯುವುದಲ್ಲದೆ, ಸೈಕ್ಲಿಂಗ್ ವೇಗವನ್ನು ಒಂದೇ ರೀತಿ ಮೇಂಟೇನ್ ಮಾಡಲು ಸಹಾಯಕ. ಜೊತೆಗೆ, ಸೈಕ್ಲಿಂಗ್ ಬಳಿಕ ಮೈಕೈ ನೋವು ಬಾರದಂತೆ ತಡೆಯುತ್ತದೆ. ಆಗಾಗ, ಮಸಾಜ್ ಮಾಡಿಸಿಕೊಳ್ಳುವುದರಿಂದ ಕೂಡಾ ಸ್ನಾಯುಗಳು ಸಡಿಲವಾಗಿರುತ್ತವೆ. 

6. ನಿಮಯ ಉಲ್ಲಂಘನೆ

ಸೈಕ್ಲಿಸ್ಟ್‌ಗಳಿಗೆ ಇತರೆ ವಾಹನಗಳ ಚಾಲಕರನ್ನು ನೋಡಿ ಸಿಟ್ಟು ಬರುವುದು ಸಾಮಾನ್ಯ. ಆದರೆ, ಆ ಚಾಲಕರಿಗೂ ಸೈಕ್ಲಿಸ್ಟ್‌ಗಳನ್ನು ನೋಡಿದರೆ ಬಯ್ದುಕೊಂಡು ಹೋಗಬೇಕೆನಿಸದದಿರದು. ಏಕೆಂದರೆ, ಊರಿಗೆಲ್ಲ ಒಂದು ನಿಯಮವಾದರೆ, ಅದ್ಯಾವ್ದೂ ನಮಗಿಲ್ಲ ಎನ್ನುವಂತೆ ವರ್ತಿಸುತ್ತಾರೆ ಸೈಕ್ಲಿಂಗ್ ಮಾಡುವವರು. ಸಿಗ್ನಲ್‌ನಿಂದ ಹಿಡಿದು, ರಸ್ತೆಯಲ್ಲಿ ಸಾಗುವಾಗ ಪಾಲಿಸಬೇಕಾದ ನಿಯಮಗಳೆಲ್ಲ ಬೇರೆ ವಾಹನದವರಿಗೆ ಮಾತ್ರವೆಂಬಂತೆ ಹೆಚ್ಚಿನ ಸೈಕ್ಲಿಸ್ಟ್‌ಗಳು ವರ್ತಿಸುತ್ತಾರೆ. ಟ್ರಾಫಿಕ್‌ನಲ್ಲೂ ಸುಯ್ ಎಂದು ನುಗ್ಗಿಸಿಕೊಂಡು ಹೋಗುವ ಸೈಕ್ಲಿಸ್ಟ್‌ಗಳನ್ನು ತಡೆಯುವುದೇ ಕಷ್ಟ ಕಷ್ಟ. ಆದರೆ, ಸೈಕ್ಲಿಸ್ಟ್‌ಗಳು ಕೂಡಾ ಎಲ್ಲ ರಸ್ತೆ ನಿಯಮಗಳನ್ನು ಪಾಲಿಸಬೇಕು. ನಗರರಗಳಲ್ಲಿ ಸೈಕ್ಲಿಂಗ್‌ಗಾಗಿಯೇ ಇರುವ ಬದಿಯ ಬೈಕ್ ಪಾತ್‌ಗಳಲ್ಲಷ್ಟೇ ಓಡಿಸಬೇಕು. ಪಾದಾಚಾರಿ ಮಾರ್ಗ ನಡೆಯುವವರಿಗೇ ಹೊರತು ನಿಮಗಲ್ಲ ಎಂಬುದನ್ನು ಅರಿತು ವರ್ತಿಸಬೇಕು. 

ನಡಿಗೆಯಲ್ಲಿ ವೇಗವಿದ್ದರೆ ಆಯಸ್ಸು ಹೆಚ್ಚಳ!

7. ಹೆ‌ಡ್‌ಫೋನ್ ಬಳಕೆ

ಬಹಳಷ್ಟು ಸೈಕ್ಲಿಸ್ಟ್‌ಗಳು ರೈಡ್ ಮಾಡುವಾಗ ಹೆಡ್‌ಫೋನ್ಸ್ ಧರಿಸುವುದನ್ನು ನೋಡಿದ್ದೇವೆ. ನಗರಗಳೇ ಆಗಲಿ, ಹಳ್ಳಿ ಬದಿಯೇ ಆಗಲಿ, ಈ ಅಭ್ಯಾಸ ಖಂಡಿತಾ ಒಳ್ಳೆಯದಲ್ಲ. ಏನನ್ನು ಮಾಡುತ್ತಿದ್ದೀರೋ ಅದನ್ನು ಎಂಜಾಯ್ ಮಾಡಿ. ಸಂಪೂರ್ಣ ಕಾನ್ಶಿಯಸ್ ಆಗಿ ಸೈಕ್ಲಿಂಗ್ ಮಾಡಿ. ಸುತ್ತಲೂ ಏನು ನಡೆಯುತ್ತಿದೆ, ಹೇಗಿದೆ ಎಂಬುದನ್ನೇ ಮರೆತು ರೈಡಿಂಗ್ ಮಾಡುವುದು ಸರಿಯಲ್ಲ. ಹೆಡ್‌ಫೋನ್ಸ್ ಬಳಕೆ, ಮೆಸೇಜ್ ಮಾಡುವುದು ಮುಂತಾದ ಚಟುವಟಿಕೆಗಳಿಂದ  ಹಿಂದಿನಿಂದ ಬರುವ ವಾಹನ ಹಾರ್ನ್ ಮಾಡಿದರೂ ತಿಳಿಯುವುದಿಲ್ಲ, ಸೈರನ್ ಕೂಗಿದರೂ ತಿಳಿಯುವುದಿಲ್ಲ. ಅಲ್ಲದೆ, ಔಟ್‌ಡೋರ್ ಹೋಗುವಾಗ ಸುತ್ತಮುತ್ತಲೂ ಎಂಜಾಯ್ ಮಾಡುತ್ತಾ ಸಾಗುವುದು ಯಾವತ್ತಿಗೂ ಬೆಸ್ಟ್ ಅನುಭವ.