'ಬ್ರೈನ್ ಪವರ್‌ಅನ್ನು ಹೆಚ್ಚಿಸೋದು ಹೇಗೆ?’

ಮಿ ಓಮ್ ಅವರಲ್ಲಿ ಒಬ್ಬಾತ ಹೀಗೊಂದು ಪ್ರಶ್ನೆ ಕೇಳಿದ. ಸ್ವಾಮಿ ಅವರು ಆತನ ಪ್ರಶ್ನೆಯನ್ನು ವಿಸ್ತರಿಸುತ್ತ ಒಂದು ಕತೆ ಹೇಳಿದರು. ಇದು ಪ್ಲೇಟೋ ತನ್ನ ‘ರಿಪಬ್ಲಿಕ್’ ಕೃತಿಯಲ್ಲಿ ಹೇಳಿದ್ದು. ಒಂದು ಗುಹೆಯಲ್ಲಿ ಒಂದಿಷ್ಟು ಜನರನ್ನು ಸರಪಳಿ ಹಾಕಿ ಬಂಧಿಸಿಡಲಾಗಿತ್ತು. ಆ ಗುಹೆಗೆ ಒಂದು ಕಿಟಕಿ ಇತ್ತು. ಬೆಳಕು ಬಿದ್ದಾಗ ಅದರ ನೆರಳು ಗುಹೆಯ ಒಂದು ಜಾಗಕ್ಕೆ ಬೀಳುತ್ತಿತ್ತು. ಅದು ಸೆರೆಮನೆಯ ಕಂಬಿಗಳ ಹಾಗೆ ಕಾಣುತ್ತಿತ್ತು. ಸೆರೆಯಾಳುಗಳಾಗಿದ್ದ ಜನ ಅದನ್ನು ಕಂಡು ಈಗ ಜಗತ್ತೇ ಹೀಗೆ, ಸೆರೆಮನೆಯಂತಿದೆ ಅಂದುಕೊಂಡಿದ್ದರು. ಒಬ್ಬಾತ ಹೇಗೋ ಆ ಸೆರೆಯಿಂದ ತಪ್ಪಿಸಿಕೊಂಡು ಹೊರಬಂದ. ಜಗತ್ತು ಬೇರೆಯೇ ಥರ ಇತ್ತು. ವಿಶಾಲ ಆಕಾಶ. ಕಣ್ಣು ಕುಕ್ಕುವಂಥಾ ಬೆಳಕು, ಹಚ್ಚ ಹಸಿರಿನ ಪ್ರಕೃತಿ!

ಆತನಿಗೆ ಖುಷಿ ತಡೆಯಲಾಗದೇ ಅಳುವೇ ಬಂತು!

‘ನಾವು ನಾವೇ ಹಾಕಿಕೊಂಡ ಬಂಧನದಿಂದ ಹೊರಬರದೇ ನಮ್ಮ ಬುದ್ಧಿಮತ್ತೆ ವಿಸ್ತರಿಸಲು ಸಾಧ್ಯವೇ ಇಲ್ಲ. ಎಷ್ಟೋ ಸಲ ಗುಹೆಯೊಳಗಿದ್ದ ಸೆರೆಯಾಳುಗಳಂತೆ ಇಷ್ಟೇ ಜಗತ್ತು ಅಂದುಕೊಂಡು ಬಿಡುತ್ತೇವೆ. ಆದರೆ ನಿಜ ಜಗತ್ತಿನ ವ್ಯಾಪ್ತಿ ನಮ್ಮ ಊಹೆಗೂ ಮೀರಿ ಇರುತ್ತದೆ.’ ಎನ್ನುತ್ತಾರೆ ಓಂ ಸ್ವಾಮಿ.

ಮೊದಲ ನೋಟಕ್ಕೇ ಬೆಸ್ಟ್ ಅನಿಸಿಕೊಳ್ಳೋದು ಹೇಗೆ?

ದೃಷ್ಟಿ ವಿಶಾಲವಾಗಲಿ

ಸವಾಲುಗಳು ನಮ್ಮ ಮುಂದೆ ಬರುವುದು ನಮ್ಮ ಅನುಭವದ ವ್ಯಾಪ್ತಿ ಹೆಚ್ಚಿಸಲಿಕ್ಕೆ. ಇದನ್ನು ನಮ್ಮಲ್ಲಿ ಹೆಚ್ಚಿನವರು ನಂಬುವುದಿಲ್ಲ. ಅವರು ತಮಗೆ ತಿಳಿದಿರುವ ವಿಷಯಗಳನ್ನೇ ಮುಖ್ಯವಾಗಿಸಿ ಇದು ತನ್ನಿಂದ ಸಾಧ್ಯವಿಲ್ಲ ಅಂತ ಕೈಕಟ್ಟಿ ಕೂತಿರುತ್ತಾರೆ. ವಿಷಯ ಗೊತ್ತಿಲ್ಲ ಅಂದರೆ ಕಲಿಯಬಹುದಲ್ಲ, ಜ್ಞಾನದ ಪರಿಧಿ ವಿಸ್ತರಿಸಬಹುದಲ್ಲಾ, ಎಂಬೆಲ್ಲ ಯೋಚನೆಗಳೂ ಬಂದರೂ ಅದಕ್ಕೆ ಮಹತ್ವ ಕೊಡಲ್ಲ.

ಸರಿಪಡಿಸೋದು ಹೇಗೆ?

ಈ ಪ್ರಶ್ನೆಯನ್ನು ನಮಗೆ ನಾವೇ ಕೇಳಿಕೊಳ್ಳಬೇಕು. ದೈಹಿಕ, ಮಾನಸಿಕ, ಔದ್ಯೋಗಿಕ ಅಥವಾ ಆಧ್ಯಾತ್ಮಿಕ ತಡೆಗೋಡೆಗಳು ನಮ್ಮ ಸುತ್ತ ಇದ್ದೇ ಇರುತ್ತವೆ. ಈ ಅಡ್ಡಿಯನ್ನು ನಿವಾರಿಸುವುದು ಹೇಗೆ ಅಂತ ಚಿಂತಿಸಬೇಕು. ಗಾಢವಾಗಿ ಮನಸ್ಸನ್ನು ತೆರೆದಿಟ್ಟು ಯೋಚಿಸಿದರೆ ಉತ್ತರ ಸಿಕ್ಕೇ ಸಿಗುತ್ತದೆ. ಅದು ಮನಸ್ಸಿನ ಶಕ್ತಿ. ಎಂಥಾ ಸಂಕಷ್ಟದಿಂದಲೂ ಹೊರಬರುವ ತಾಕತ್ತು ಅದಕ್ಕಿದೆ. ಆದರೆ ನಾವು ಮಾತ್ರ ಸೆರೆಯಾಳುಗಳ ಹಾಗೆ ಆ ಶಕ್ತಿಯ ಎಲ್ಲೆಯನ್ನು ವಿಸ್ತರಿಸುವುದೇ ಇಲ್ಲ.

ಆಯಾಸವು ಗಂಭೀರ ಆರೋಗ್ಯ ಸಮಸ್ಯೆಯಂತೆ!

ಒಳ್ಳೆಯದನ್ನೇ ಯೋಚಿಸಿದರೆ ಒಳ್ಳೆಯದೇ ಆಗುತ್ತಾ?

ಒಂದು ವೇಳೆ ಕೆಟ್ಟದಾದರೆ? ಅದನ್ನು ನಾವು ಸರಿಯಾಗಿ ಗ್ರಹಿಸಿದರೆ ಆ ಕೆಟ್ಟದೂ ಒಳ್ಳೆಯದೇ ಆಗುತ್ತದೆ. ರಾಮಕೃಷ್ಣರಿಗೆ ಒಬ್ಬ ಶಿಷ್ಯನಿದ್ದ. ಆತ ಮಹಾ ಕಳ್ಳ. ಅವರು ಆತನಿಗೆ ಏನನ್ನೂ ಹೇಳುತ್ತಿರಲಿಲ್ಲ. ಆದರೆ ಸದಾ ತಮ್ಮ ಬಳಿಯೇ ಇಟ್ಟುಕೊಳ್ಳುತ್ತಿದ್ದರು. ಶಿಷ್ಯಂದಿರಿಗೆ ಸಿಟ್ಟು ಬರುತ್ತಿತ್ತು. ಅವರ ಬಳಿಯಿದ್ದ ವಸ್ತುಗಳನ್ನೂ ಬಿಡದೆ ಆತ ಲಪಟಾಯಿಸುತ್ತಿದ್ದ. ಒಮ್ಮೆ ಅಸಮಧಾನದಲ್ಲಿ ಶಿಷ್ಯನೊಬ್ಬ ಪರಮಹಂಸರಲ್ಲಿ ಹೇಳಿದ,‘ಸ್ವಾಮೀ, ಆ ಕಳ್ಳ ನಿಮ್ಮ ಜೊತೆಗಿದ್ದರೆ, ನಾವು ನಿಮ್ಮೊಂದಿಗಿರುವುದಿಲ್ಲ. ನೀವೇ ಯೋಚನೆ ಮಾಡಿ, ಕಳ್ಳ ಬೇಕೋ ನಾವು ಬೇಕೋ..’ ‘ನನ್ನ ಅವಶ್ಯಕತೆ ನಿಮಗಿಂತ ಆತನಿಗೇ ಹೆಚ್ಚಿದೆ. ಆತನಿಗೆ ತನ್ನ ಮಿತಿಯಿಂದ ಹೊರಬರಲು ನನ್ನ ಸಹಾಯ ಬೇಕಿದೆ’ ಅಂದು ಸುಮ್ಮನಾದರು ರಾಮಕೃಷ್ಣರು. ಇದನ್ನೆಲ್ಲ ಕದ್ದು ಕೇಳಿಸಿಕೊಳ್ಳುತ್ತಿದ್ದ ಆ ಶಿಷ್ಯನಿಗೆ ತನ್ನ ಮೇಲೇ ನಾಚಿಕೆ ಯುಂಟಾಗಿ ಆತ ಆಮೇಲೆ ಮಹಾನ್ ಸಾಧುವಾಗಿ ಬದಲಾದ. ಇಲ್ಲಿ ರಾಮಕೃಷ್ಣರು ಕಳ್ಳನನ್ನು ಹಾಗೇ ಬಿಡುತ್ತಿದ್ದರೆ ಆತನಲ್ಲಿ ಈ ಪಾಸಿಟಿವ್ ವ್ಯತ್ಯಾಸ ಆಗುತ್ತಿರಲಿಲ್ಲ. ಹಾಗೆ ಕಳ್ಳನ ಬಗ್ಗೆಯೂ ಒಳ್ಳೆಯದು ಯೋಚಿಸುವುದು ರಾಮಕೃಷ್ಣ ಪರಮಹಂಸ ರಂಥವರಿಗೆ ಶಿಸ್ತಿಲ್ಲದ ಲೈಫು ಮತ್ತು

 ಶಿಸ್ತಿಲ್ಲದ ಲೈಫು ಮತ್ತು ಅಸ್ತವ್ಯಸ್ತ ಬಂಗಲೆ

ನೀವು ಹನ್ನೆರಡಂತಸ್ತಿನ ಬಿಲ್ಡಿಂಗ್‌ನ ಓನರ್ ಆಗಿರಬಹುದು, ಹೊತ್ತು ಕೂಳಿಗೂ ಗತಿಯಿಲ್ಲದ ವ್ಯಕ್ತಿಯಾಗಿರಬಹುದು ಅಥವಾ ಆತ್ಮಜ್ಞಾನ ಪಡೆದವರಾಗಿರಬಹುದು. ಪ್ರತಿಯೊಬ್ಬರಿಗೂ ಮಾನಸಿಕ ಶಿಸ್ತು ಇರಲೇಬೇಕು. ಬಂಗಲೆಯೇ ಆಗಿರಲಿ, ಗುಡಿಸಲೇ ಆಗಿರಲಿ, ಕಸ ಗುಡಿಸಿ ಎಲ್ಲವನ್ನೂ ವ್ಯವಸ್ಥಿತವಾಗಿಡದಿದ್ದರೆ ಅದು ವಾಸಕ್ಕೆ ಯೋಗ್ಯವಾಗಿರುವುದಿಲ್ಲ. ಹಾಗೇ ಸೆಲ್ಫ್ ಡಿಸಿಪ್ಲಿನ್
ಇಲ್ಲದ ಒಬ್ಬನೇ ಒಬ್ಬ ವ್ಯಕ್ತಿಯೂ ಯಶಸ್ವಿ ಅನಿಸಿಕೊಂಡ ಉದಾಹರಣೆ ಇಲ್ಲ. ಶಿಸ್ತಿನ ವ್ಯಕ್ತಿಯಾಗಿದ್ದರೆ ಅವನಿಗೆ ಮೇಲ್ವಿಚಾರಕನೊಬ್ಬನ ಅಗತ್ಯವೇ ಬೀಳುವುದಿಲ್ಲ. ಮುಂದೊಂದು ದಿನ ಆತನೇ ಬೆಸ್ಟ್ ಬಾಸ್ ಅನಿಸಿಕೊಳ್ಳುತ್ತಾನೆ. ಸಾಧ್ಯವಿತ್ತು. 

ಮಾನಸಿಕ ಶಿಸ್ತು ಹೇಗೆ ಸಾಧ್ಯ?

ಅಸ್ತವ್ಯಸ್ತ ಆಲೋಚನೆಗಳು, ಆಲಸ್ಯ ತುಂಬಿದ ಮನಸ್ಸಿಗೆ ಶಿಸ್ತಿನ ಪಾಠ ಹೇಳಲು ಧ್ಯಾನವೇ ಬೆಸ್ಟ್. ‘ನಾನು ಹಿಮಾಲಯದಲ್ಲಿ ಸಾಧನೆ ಮಾಡುತ್ತಿದ್ದೆ. ನನ್ನ ಬಳಿ ಗಂಟೆ ತೋರಿಸುವ ಗಡಿಯಾರವೂ ಇರಲಿಲ್ಲ. ಆಗ ನನಗೆ ಬಂದಿದ್ದು ಒಂದು ಯೋಚನೆ. ಟಿಕ್ ಟಿಕ್ ಎನ್ನುತ್ತ ಗಡಿಯಾರ ತನ್ನ ಪಾಡಿಗೆ ಚಲಿಸುತ್ತಿರುತ್ತದೆ. ನಾನೂ ನನ್ನ ಕೆಲಸ ನನ್ನ ಪಾಡಿಗೆ ಮಾಡುತ್ತಿರುತ್ತೇನೆ. ನಾನು ಜಾಗೃತವಾಗಿದ್ದರೆ ಆ ಗಂಟೆಯ ಅವಶ್ಯಕತೆಯೇ ನನಗೆ ಬರುವುದಿಲ್ಲ. ಅದು ನಿಜವಾಯ್ತು. ನನ್ನ ಬಗ್ಗೆ ನನಗೆ ಎಚ್ಚರವಿದ್ದರೆ, ಕಂಟ್ರೋಲ್ ಇದ್ದರೆ ಯಾವ ಗಡಿಯಾರ,
ಅಲರಾಂನ ಅವಶ್ಯಕತೆಯೂ ಬೀಳುವುದಿಲ್ಲ. ಈ ಎಚ್ಚರ ಶಿಸ್ತು ಹಾಗೂ ಸಾಧನೆಯಿಂದ ಮಾತ್ರ ಬರಲು ಸಾಧ್ಯ.

ನಿಮ್ಮ ಮಕ್ಕಳಿಗೆ ಈ ಗುಣಗಳನ್ನು ಹೇಳಿಕೊಟ್ಟಿದ್ದೀರಾ?

ಯೋಚನೆ ಒಳ್ಳೆಯದರತ್ತ ತಿರುಗಿಸುವುದು ಹೇಗೆ?

ಕೆಟ್ಟ ಯೋಚನೆಗಳನ್ನೂ ಒಳ್ಳೆಯದರತ್ತ ತಿರುಗಿಸುವ ಸಾಮರ್ಥ್ಯ ನಮಗಿದೆ. ಪ್ರಜ್ಞಾಪೂರ್ವಕವಾಗಿಯೇ ಆ ಕೆಲಸ ಮಾಡಬೇಕು. ಜೊತೆಗಿರುವವನಲ್ಲಿ ಕೆಟ್ಟದ್ದರ ಜೊತೆಗೆ ಒಳ್ಳೆಯತನಗಳೂ
ಇರುತ್ತವೆ. ನಾವು ಅವನ್ನೇ ಹುಡುಕಿ ಆ ಬಗ್ಗೆ ಗಮನ ಹರಿಸಿದರೆ ಆತ ನಮ್ಮ ಪಾಲಿಗೆ ಒಳ್ಳೆಯವನೇ ಆಗಿರುತ್ತಾನೆ. ಬುದ್ಧನಿಗೆ ಅಂಗುಲಿಮಾಲನಂಥ ಕಟುಕನಲ್ಲೂ ಜೀವದಯೆ
ಮೂಡಿಸುವುದು ಸಾಧ್ಯವಾದದ್ದು ಈ ಗುಣದಿಂದಲೇ.