ನಮ್ಮ ಬಾಲ್ಯದಲ್ಲಿ ನಮಗೆ ಸಿಗುವ ಸಂಸ್ಕಾರವೇ ಭವಿಷ್ಯದಲ್ಲಿ ನಮ್ಮ ಖುಷಿ, ದುಃಖವನ್ನು ಆಳುವುದು. ನಾವು ಇನ್ನೊಬ್ಬರ ನಡುವೆ ಎಷ್ಟು ಪ್ರಭಾವಿಗಳಾಗಿರುತ್ತೇವೆ ಎನ್ನುವುದಕ್ಕಿಂತಲೂ ನಮ್ಮನ್ನು ನಾವು ಗೆಲ್ಲಲು ಈ ಸಂಸ್ಕಾರ ಅತ್ಯಗತ್ಯ. 

ಕೆಲವು ವಿಷಯಗಳನ್ನು ಮಕ್ಕಳಿಗೆ ಬಾಲ್ಯದಲ್ಲಿಯೇ ತಿಳಿಸಿ ಹೇಳಬೇಕು. ಅವಾಗ ಅವರು ದೊಡ್ಡವರಾದಂತೆ ಅದನ್ನೇ ಮುಂದುವರೆಸಿಕೊಂಡು ಹೋಗಿ, ಮುಂದೊಬ್ಬ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳುತ್ತಾರೆ. ಆರಂಭದಲ್ಲಿ ಈ ಸಣ್ಣ ಪುಟ್ಟ ಮಾಹಿತಿಗಳನ್ನು ಅವರಿಗೆ ತಿಳಿಸಿ ಹೇಳಿ. ಮುಂದೆ ಅದೇ ವಿಷಯಗಳು ಜೀವನದ ಮೌಲ್ಯವನ್ನು ಮಕ್ಕಳಿಗೆ ತಿಳಿಸಿಕೊಡುತ್ತವೆ.. ಸರಿ ತಪ್ಪು ಯಾವುದು ಎಂದು ಸರಿಯಾಗಿ ಮಕ್ಕಳಿಗೆ ತಿಳಿ ಹೇಳಿ. ಅವುಗಳ ಅಂತರದ ಬಗ್ಗೆ ಅರಿವು ಮೂಡಿಸಿ. ಇದರಿಂದ ಅವರಿಗೆ ನಿರ್ಧಾರ ತೆಗೆದುಕೊಳ್ಳಲು ಸುಲಭವಾಗುತ್ತದೆ. 

ಈಗಿನ ಅಪ್ಪಅಮ್ಮಂದ್ರಿಗೆ ಮಗು ಅಂದ್ರೆ ಮಂಡೆಬಿಸಿ ಅಂತೆ!

- ಹಿರಿಯರ ಜೊತೆ ಹೇಗೆ ಮಾತನಾಡುವುದು ಅನ್ನೋದನ್ನು ಕಲಿಸಿರಿ. ಹಿರಿಯರಿಗೆ ಗೌರವ ಕೊಡುವ ರೀತಿಯನ್ನು ಕಲಿಸಿಕೊಡಿ. 

- ಈಗಿನ ಮಕ್ಕಳಲ್ಲಿ ಧೈರ್ಯ ಕಡಿಮೆ. ಅವರಿಗೆ ಧೈರ್ಯದಿಂದ ಜೀವನವನ್ನು ಹೇಗೆ ಎದುರಿಸುವುದು ಅನ್ನೋದನ್ನು ತಿಳಿಸಿ. 

- ಹಂಚಿಕೊಂಡು ಬಾಳುವ  ಅಭ್ಯಾಸ ಕಲಿಸಿಕೊಡಿ. ಇದರಿಂದ ಮಕ್ಕಳಿಗೆ ಇತರರ ಭಾವನೆ ಮತ್ತು ಅಗತ್ಯತೆ ಬಗ್ಗೆ ತಿಳಿಯುತ್ತದೆ. ಯಾವುದೇ ವಸ್ತು ತನಗೆ ಸೇರಿದ್ದಲ್ಲ, ಬೇರೆಯವರ ಜೊತೆ ಹಂಚಿ ತಿನ್ನುವುದನ್ನು ತಿಳಿಸಿ. 

- ಯಾರಿಗಾದರೂ ಸಹಾಯ ಬೇಕಾದರೆ ಕೂಡಲೇ ಮಾಡುವಂತೆ ತಿಳಿಸಿ. ಜೊತೆಗೆ ಅವರಿಗೆ ಕಾಣುವಂತೆ ನೀವೇ ಇತರರಿಗೆ ಸಹಾಯ ಮಾಡಿ, ಯಾಕೆಂದರೆ ಮಕ್ಕಳು ನೋಡುತ್ತಾ ಬೇಗನೆ ಕಲಿತು ಬಿಡುತ್ತಾರೆ. 

ಮಕ್ಕಳ ತಪ್ಪಿಗೆ ಶಿಕ್ಷೆ, ಹೇಗಿರಬೇಕು ಪೋಷಕರ ನಿರೀಕ್ಷೆ?

- ಸಮಯ ಪರಿಪಾಲನೆ ಮಹತ್ವ ತಿಳಿಸಿಕೊಡಿ.  ಯಾಕೆಂದರೆ ಜೀವನದಲ್ಲಿ ಮುಂದೆ ಬರಲು ಸಮಯದ ಪರಿಪಾಲನೆ ತುಂಬಾನೇ ಮುಖ್ಯ. 

- ಇದು ಮಕ್ಕಳಿಗೆ ಕಲಿಸಲೇಬೇಕಾದ ಮುಖ್ಯ ವಿಷಯ ಎಂದರೆ ಥಾಂಕ್ಯೂ ಮತ್ತು ಸಾರಿ ಹೇಳೋದು. ಯಾರಾದರೂ ಯಾವುದೇ ವಿಧದ ಸಹಾಯ ಮಾಡಿದರೆ ಥಾಂಕ್ಯೂ ಹೇಳಲು ಹಾಗೂ ಯಾರಿಗಾದರೂ ತಮ್ಮಿಂದ ಬೇಜಾರಾದರೆ ಕ್ಷಮೆ ಕೇಳಲೇಬೇಕು ಎಂಬುದನ್ನು ಹೇಳಿಕೊಡಿ. 

- ಪ್ರತಿದಿನ ಪ್ರಾರ್ಥಿಸುವ ಅಭ್ಯಾಸ ಮಾಡಿಸಿದರೆ, ನಿಮಗೂ, ಮಕ್ಕಳಿಗೂ ಉತ್ತಮ. ಇದರಿಂದ ಮಕ್ಕಳ ಆತ್ಮವಿಶ್ವಾಸ ಹೆಚ್ಚುತ್ತದೆ. 

- ಪ್ರಾಮಾಣಿಕವಾಗಿರುವುದನ್ನೂ ಮಕ್ಕಳಿಗೆ ಗೊತ್ತಿರಲಿ.  ಯಾವತ್ತೂ ಸುಳ್ಳು ಹೇಳಲೇಬಾರದು ಅನ್ನೋದನ್ನು ತಿಳಿಸಿ. ಸುಳ್ಳು ಹೇಳೋದು ಎಷ್ಟು ತಪ್ಪು ಅನ್ನೋದನ್ನೂ ಮನವರಿಕೆ ಮಾಡಿಕೊಡಿ. 

ಈ ವಿಷಯಗಳನ್ನು ನೀವು ಮಕ್ಕಳಿಗೆ ಸರಿಯಾಗಿ ಮನವರಿಕೆ ಮಾಡಿದರೆ ಮಕ್ಕಳು ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳುವುದು ಖಂಡಿತಾ.