ಕಡಿಮೆ ಬಜೆಟ್, ವರ್ಲ್ಡ್ ಟೂರ್: ಇಲ್ಲಿವೆ ಬೆಸ್ಟ್ ಪ್ಲೇಸ್
ಈಗೀಗ ಎಲ್ಲರಿಗೂ ಟೂರ್ ಮಾಡೋದು ಎಂದರೆ ಇಷ್ಟ. ಅದರಲ್ಲಿಯೂ ವಿದೇಶ ಪ್ರವಾಸ ಮಾಡುವುದೆಂದರೆ ಅಚ್ಚುಮೆಚ್ಚು. ಅದಕ್ಕೆ ಇಲ್ಲಿವೆ ಕಡಿಮೆ ಖರ್ಚಿನಲ್ಲಿ ಭೇಟಿ ನೀಡಬಹುದಾದ ಕೆಲವು ದೇಶಗಳಿವು...
ಭಾರತೀಯ ಕರೆನ್ಸಿ ಬೆಲೆ ಕಡಿಮೆಯಾಗಿರೋದರಿಂದ ವಿದೇಶಕ್ಕೆ ಟೂರ್ ಮಾಡುವುದು ಎಂದರೆ ಭಯ. ಇದಕ್ಕೂ ಇದೆ ಸೊಲ್ಯೂಷನ್. ಏಕೆಂದರೆ ವಿಶ್ವದಲ್ಲಿ ಹಲವು ದೇಶಗಳಿದ್ದು, ಭಾರತೀಯ ರುಪಾಯಿ ಮೌಲ್ಯಗಿಂತಲೂ ಕಡಿಮೆ ಮೌಲ್ಯದ ಕೆರನ್ಸಿಗಳಿವೆ. ಅಂಥ ಕೆಲವು ದೇಶಗಳಲ್ಲಿ ಇವು...
ವಿಯೆಟ್ನಾಮ್: ಟಾಪ್ ಟೂರಿಸ್ಟ್ ತಾಣವಾದ ಇಲ್ಲಿ ಪ್ರಾಚೀನ ನಗರಗಳಾದ ಹಾಲೊಂಗ್ ಬೇ, ವಾರ್ ಮ್ಯೂಸಿಯಂ, ಲೇಡಿ ಬುದ್ಧ ಹೀಗೆ ಹಲವಾರು ಸುಂದರ ತಾಣಗಳಿವೆ. ಭಾರತದ ಒಂದು ರೂಪಾಯಿ ಎಂದರೆ 333 ವಿಯೆಟ್ನಾಮೀಸ್ ಡಾಂಗ್.
ಬೆಲಾರಸ್: ಇಲ್ಲಿನ ಪ್ರಮುಖ ತಾಣಗಳೆಂದರೆ ಮಿನ್ಸ್ಕ್, ಬ್ರೆಸ್ಟ್, ಗೋಮೆಲ್, ಮೂಗಿಲೆವ್, ನವರ್ಹಾಡಕ್, ಲಿಡಾ ಮುಂತಾದವು. ಭಾರತದ ಒಂದು ರೂಪಾಯಿ ಎಂದರೆ 242. 24 ಬೆಲಾರುಷಿಯನ್ ರೂಬಲ್ .
ಇಂಡೋನೇಷ್ಯಾ: ಭಾರತೀಯ ಜನರು ಹೆಚ್ಚಾಗಿ ಇಲ್ಲಿಗೆ ಭೇಟಿ ನೀಡುತ್ತಾರೆ. ಲೇಕ್ ಟೋಬಾ, ತಂಜುಂಗ್ ಪ್ಯೂಟಿಂಗ್, ಬಲಿಂ ವ್ಯಾಲಿ, ಮೌಂಟ್ ಬ್ರೋಮೋ, ಬುನಾಕೇನ್, ಟಾರ್ಜಲೆಂಡ್, ಗಿಲಿ ಐಲ್ಯಾಂಡ್, ಕೋಮೊಂಡಾ ನ್ಯಾಷನಲ್ ಪಾರ್ಕ್ ಮುಂತಾದವು ಇಲ್ಲಿನ ಪ್ರಸಿದ್ಧ ತಾಣಗಳು. ಭಾರತದ ಒಂದು ರೂಪಾಯಿ ಎಂದರೆ 209. 88 ಇಂಡೋನೇಷಿಯನ್ ರುಪೈಯ್ಯ.
ಕಾಂಬೋಡಿಯಾ: ಇಲ್ಲಿ ನೋಡಲೇಬೇಕಾದ ತಾಣಗಳು ಸಾಕಷ್ಟು ಇದ್ದು, ಪ್ರಾಚೀನ ಪ್ರಸಿದ್ಧ ದೇವಸ್ಥಾನಗಳು ಸಾಕಷ್ಟಿವೆ. ಅಂಗ್ಕೋರ್ ವಾಟ್, ಬಯೋನ್ ಮಂದಿರ, ತಾ ಪ್ರಾಹ್ಮ್, ಅಂಗ್ಕೋರ್ ಅರ್ಚಿಯೊಲೊಜಿಕಲ್ ಪಾರ್ಕ್, ಹೀಗೆ ಹಲವು ತಾಣಗಳಿವೆ. ಭಾರತದ ಒಂದು ರೂಪಾಯಿ ಎಂದರೆ 61 ಕಾಂಬೋಡಿಯಾನ್ ರಿಯೆಲ್.
ಮೊಂಗೋಲಿಯಾ : ಗೋರಖಿ ತೆರೆಜ್, ನ್ಯಾಷನಲ್ ಪಾರ್ಕ್, ಗಂಡಂತೇಜಿ ಚೆಂಲಿಂಗ್ ಮೋನಿಸ್ತ್ರ್ಯ, ಹುಸ್ಥಾಯಿ ನ್ಯಾಷನಲ್ ಪಾರ್ಕ್, ಯೋನ್ ವ್ಯಾಲಿ, ಒಪೇರಾ ಮತ್ತು ಬ್ಯಾಲೆಟ್ ಅಕಾಡೆಮಿಕ್ ಥಿಯೇಟರ್ ಇಲ್ಲಿನ ಪ್ರಮುಖ ಆಕರ್ಷಣೆಗಳು. ಭಾರತದ ಒಂದು ರೂಪಾಯಿ ಎಂದರೆ 30 ಮೊಂಗೋಲಿಯಾನ್ ಟ್ಯುಗ್ರಿಕ್.
ಕೋಸ್ಟಾರಿಕಾ: ಪ್ರೋಎಕ್ಟೋ ಆಸೀಸ್, ಪುರ ಅವೆಂಟುರ, ಲ ಫಾರ್ಚುನ ಜಲಪಾತ, ಕ್ಯಾಹುಇಟ ನ್ಯಾಷನಲ್ ಪಾರ್ಕ್, ಅಲ್ತುರಸ್ ಪ್ರಾಣಿಧಾಮ, ಬಟರ್ ಫ್ಲೈ ಪಾರ್ಕ್ ಎಲ್ಲವೂ ಇಲ್ಲಿವೆ. ಭಾರತದ ಒಂದು ರೂಪಾಯಿ ಎಂದರೆ 8 ಕೋಸ್ಟಾರಿಕ ಕೋಲನ್.
ಹಂಗೇರಿ: ಇಲ್ಲಿನ ಮುಖ್ಯ ಆಕರ್ಷಣೆ ಎಂದರೆ ಪಾರ್ಲಿಮೆಂಟ್, ಫಿಷರ್ ಮೆನ್ಸ್ ಬ್ಯಾಸ್ಟನ್, ಕ್ಯಾಸಲ್ ಹಿಲ್, ಸ್ಟೇಟ್ ಒಪೇರಾ ಹೌಸ್, ಪಿನ್ ಬಾಲ್ ಮ್ಯೂಸಿಯಂ, ಮಾರ್ಗರೇಟ್ ಐಲ್ಯಾಂಡ್ ಮತ್ತು ಮ್ಯೂಸಿಕ್ ಫೌಂಟೇನ್. ಭಾರತದ ಒಂದು ರೂಪಾಯಿ ಎಂದರೆ 4 ಹಂಗೇರಿಯನ್ ಫಾರಿಂಟ್.