ಎಲ್ಲೋ ಉದ್ಯಾನದಲ್ಲಿ ಕುಳಿತಾಗ ಜೇನು ಗುಯ್‌ಗುಟ್ಟಿದರೆ ಚೆನ್ನಾಗೆನಿಸಬಹುದು. ಆದರೆ, ಅವು ನಿಮ್ಮ ಮನೆಯೊಳಗೇ ಗುಯ್ ಎಂದಾಗ ಮಾತ್ರ ಎದೆ ಧಸಕ್ ಎಂದೀತು. ಏಕೆಂದರೆ ಜೇನು ಕಚ್ಚುತ್ತದೆ. ಅವೇನಾದರೂ ಕೆರಳಿ ಗುಂಪಿನಲ್ಲಿ ದಾಳಿ ನಡೆಸಿದರೆ ಆಸ್ಪತ್ರೆ ಸೇರುವ ಅಥವಾ ಯಮಲೋಕವನ್ನೇ ಸೇರುವ ಸಾಧ್ಯತೆಗಳೂ ಇವೆ. ಹೀಗಾಗಿ, ಮನೆಯೊಳಗೆ ಅಥವಾ ಸುತ್ತಮುತ್ತ ಅವು ಗೂಡು ಕಟ್ಟತೊಡಗಿದರಂತೂ ಮಕ್ಕಳು, ಸಾಕುಪ್ರಾಣಿಗಳಿದ್ದವರು ಹೆದರಲೇ ಬೇಕು.

ಹಾಗಂತ ಅವುಗಳನ್ನು ಕೊಲ್ಲುವುದು ಮಾನವೀಯತೆಯಲ್ಲ. ಏಕೆಂದರೆ ಈ ಭೂಮಿಯಲ್ಲಿ ಎಲ್ಲಿ ಬೇಕಾದರೂ ಜೀವಿಸಲು ಅವೂ ನಮ್ಮಷ್ಟೇ ಅರ್ಹ ಜೀವಿಗಳು. ಜೊತೆಗೆ, ಜೀವವೈವಿಧ್ಯತೆ ಕಾಪಾಡಲು, ಎಕೋ ಸಿಸ್ಟಂ ಬ್ಯಾಲೆನ್ಸ್ ಮಾಡುವಲ್ಲಿ ಜೇನು ಪ್ರಮುಖ ಪಾತ್ರ ವಹಿಸುತ್ತವೆ. ಅಲ್ಲದೆ, ಇತರೆ ಕೀಟಗಳಂತೆ ಅವು ನಿಮಗೆ ಕಾಯಿಲೆ ತರುವವೂ ಅಲ್ಲ. ಹಾಗಿದ್ದರೆ ನಿಮ್ಮ ಬಳಿ ಇನ್ನೇನು ಆಯ್ಕೆಗಳಿವೆ. ಅವನ್ನು ಮನೆಯಿಂದ ದೂರ ಓಡಿಸುವುದು ಹೇಗೆ? 

ಖಾಲಿ ಬಾಟಲಿಗಳ ಮೇಲೆ ಮ್ಯಾಜಿಕ್‌ ಮಾಡಿದ ಮಂಗಳೂರಿನ ಹುಡುಗಿ!

1. ವಿನೆಗರ್ ಮಿಕ್ಸ್ಚರ್
ಎಲ್ಲರ ಅಡುಗೆಮನೆಯಲ್ಲೂ ವಿನೆಗರ್ ಇದ್ದೇ ಇರುತ್ತದೆ. ಅದರಲ್ಲಿ ಒಂದು ಚಮಚ ವಿನೆಗರ್ ತೆಗೆದುಕೊಂಡು 2 ಲೋಟ ನೀರಿಗೆ ಬೆರೆಸಿ. ಇದನ್ನು ಸ್ಪ್ರೇ ಬಾಟಲ್‌ಗೆ ಹಾಕಿ ಜೇನುಗೂಡಿಗೆ ಸ್ಪ್ರೇ ಮಾಡಿ. ಆದರೆ, ಇದನ್ನು ಜೇನುಗೂಡಿನ ಬಳಿ ನಿಂತು ಮಾಡಬೇಕಿರುವುದರಿಂದ ನೀವು ನಿಮ್ಮ ಮೇಲೆ ದಾಳಿಯಾಗದಂತೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವುದು ಅಗತ್ಯ. ಜೊತೆಗೆ, ಈ ಮಿಕ್ಸ್ಚರ್ ಕಾನ್ಸಂಟ್ರೇಶನ್ ಹೆಚ್ಚಾದರೆ ಅವು ಜೇನುಹುಳುಗಳನ್ನು ಸಾಯಿಸಲೂ ಶಕ್ತ. ಹೀಗಾಗಿ, ಸಾಧ್ಯವಾದಷ್ಟು ಡೈಲ್ಯೂಟ್ ಮಾಡಿದ ನೀರನ್ನು ಸ್ಪ್ರೇ ಮಾಡಿ.

2. ನುಸಿಗುಳಿಗೆ
ನುಸಿಗುಳಿಗೆಗಳು ಸಣ್ಣಪುಟ್ಟ ಕೀಟಗಳಿಗಷ್ಟೇ ಅಲ್ಲದೆ, ಜೇನನ್ನು ದೂರವಿಡುವಲ್ಲೂ ಪರಿಣಾಮಕಾರಿ. ಮೂರ್ನಾಲ್ಕು ನುಸಿಗುಳಿಗೆಗಳನ್ನು ಸಾಕ್ಸ್‌ನೊಳಗೆ ಹಾಕಿ ಗೂಡಿನ ಬಳಿ ನೇತುಹಾಕಿ. ನಿಧಾನವಾಗಿ ಜೇನು ಆ ಸ್ಥಳ ಖಾಲಿ ಮಾಡುವುದನ್ನು ನೀವೇ ಗಮನಿಸಿ ನೋಡಿ.

3. ಗಾರ್ಲಿಕ್ ಪೌಡರ್
ಜೇನುಹುಳಗಳಿಗೆ ತೀಕ್ಷ್ಣವಾದ ವಾಸನೆಗಳೆಂದರೆ ಆಗುವುದಿಲ್ಲ. ಹೀಗಾಗಿ, ಬೆಳ್ಳುಳ್ಳಿ ನಿಮ್ಮ ಸಹಾಯಕ್ಕೆ ಬರಬಹುದು. ಒಂದು ಬೌಲ್ ಗಾರ್ಲಿಕ್ ಪೌಡರನ್ನು ಜೇನುಗೂಡಿನ ಮೇಲೆ ಹಾಕಿ. 

ತೀವ್ರ ಆತಂಕಕ್ಕೊಂದು ಸ್ಟೈಲಿಶ್ ಪರಿಹಾರ ಫಿಡ್ಜೆಟ್ ಜ್ಯುವೆಲ್ಲರಿ!

5. ಸಿಹಿ ಪರಿಮಳದ ಹಣ್ಣು
ಸಿಹಿಯಾಗಿರುವ ವಸ್ತುಗಳಿಗೆ ಜೇನುಹುಳುಗಳು ಆಕರ್ಷಿತವಾಗುತ್ತವೆ. ಅಲ್ಲದೆ, ಸಿಹಿವಸ್ತುಗಳೆಡೆಗೆ ಅವುಗಳ ವಾಸನಾಗ್ರಂಥಿಯೂ ಸ್ಟ್ರಾಂಗ್ ಆಗಿರುತ್ತದೆ. ಹೀಗಾಗಿ, ಮಾವುನಹಣ್ಣು ಅಥವಾ ಹಲಸನ್ನು ಪೀಸ್ ಮಾಡಿ ಜೇನುಗೂಡಿನಿಂದ 20ರಿಂದ 30 ಅಡಿಗಳಷ್ಟು ದೂರವಿಡಿ. ಅದರ ಬಳಿ ಜೇನು ಸುಳಿಯುವುದನ್ನು ನೀವು ಕಾಣುತ್ತೀರಿ. ಮರುದಿನ ಮತ್ತೆ 30 ಅಡಿ ದೂರಕ್ಕೆ ಹಣ್ಣನ್ನಿಡಿ. ಹೀಗೆಯೇ ಪ್ರತಿದಿನ ಸ್ವಲ್ಪ ಸ್ವಲ್ಪವೇ ದೂರ ಜೇನನ್ನು ಕರೆದುಕೊಂಡು ಹೋಗಿ ಅವು ಬೇರೆಡೆ ಗೂಡನ್ನು ಕಟ್ಟುವಂತೆ ಮಾಡಬಹುದು.

6. ಸಿಟ್ರೋನೆಲ್ಲಾ ಕ್ಯಾಂಡಲ್ಸ್
ಇದು ಜೇನುಹುಳುಗಳನ್ನು ಓಡಿಸಲು ಪರಿಣಾಮಕಾರಿ ವಿಧಾನ. ಅವುಗಳ ಗೂಡಿನ ಸುತ್ತ ಸಿಟ್ರೋನೆಲ್ಲಾ ಕ್ಯಾಂಡಲ್ಸ್ ಹಚ್ಚಿಡಿ. ಅವುಗಳ ವಾಸನೆಗೆ ನಿಧಾನವಾಗಿ ಜೇನುಹುಳುಗಳು ಗೂಡು ಬಿಟ್ಟು ಹೋಗಲಾರಂಭಿಸುತ್ತವೆ. 
ಜೇನುಹುಳುಗಳು ಗೂಡು ಬಿಟ್ಟವೆಂದು ಪಕ್ಕಾ ಆದ ಬಳಿಕ, ಗೂಡನ್ನು ತೆಗೆದು ಸ್ಥಳ ಸ್ವಚ್ಛಗೊಳಿಸಿ. 

ಮನೆ ಬಳಿ ಜೇನುಗೂಡು ಕಂಡಾಗ ಹೀಗೆ ಮಾಡಿ; 

- ಜೇನು ಹುಳಗಳು ಗುಯ್‌ಗುಡುತ್ತಾ ಮನಯ ಬಳಿ ಹಾರಲಾರಂಭಿಸಿದಾಗ ಅವುಗಳನ್ನು ಫಾಲೋ ಮಾಡಿ ಗೂಡೆಲ್ಲಿದೆ ಎಂದು ಹುಡುಕಿ. ಅದನ್ನು ಮುಚ್ಚಿಹಾಕುವ ಯತ್ನ ಬೇಡ. ಇದರಿಂದ ಮನೆಯಲ್ಲೇ ಇನ್ನೊಂದೆಡೆಗೆ ಹೋಗಿ ಅವು ಗೂಡು ಕಟ್ಟಬಹುದು. 

- ಮೂರ್ತಿ ಚಿಕ್ಕದಾದರೂ ಜೇನುಹುಳುಗಳು ಕೆರಳಿದರೆ ಕೆಂಡವಾದಾವು. ಹೀಗಾಗಿ, ಅವನ್ನು ಕೆರಳಿಸುವ ಯಾವುದೇ ಪ್ರಯತ್ನ ಬೇಡ. ಗೂಡಿಗೆ ಕಲ್ಲು ಹೊಡೆಯುವುದು, ಗೂಡಿನ ಬಳಿ ಜೇನುಹುಳಗಳನ್ನು ಕೊಲ್ಲುವುದು ಮಾಡಬೇಡಿ. 

ಹಾರ್ಟ್ ಅಟ್ಯಾಕ್ ಆದಾಗ ಎದೆನೋವು ಬಂದೇ ಬರುತ್ತಾ?

- ಜೇನುಹುಳಗಳನ್ನು ಕೊಲ್ಲಲು ಕೀಟನಾಶಕಗಳನ್ನು ಬಳಸಬೇಡಿ. ತಾಳ್ಮೆಯಿಂದ ಅವುಗಳು ಸ್ಥಳಾಂತರವಾಗುವಂತೆ ನೋಡಿಕೊಳ್ಳುವುದು ಆದ್ಯತೆಯಾಗಲಿ. 

- ಮಕ್ಕಳು ಹಾಗೂ ಸಾಕುಪ್ರಾಣಿಗಳು ಜೇನಿನ ಸಿಟ್ಟಿಗೆ ಗುರಿಯಾಗುವ ಸಾಧ್ಯತೆಗಳು ಹೆಚ್ಚು. ಹೀಗಾಗಿ ಅವರನ್ನು ಗೂಡಿನಿಂದ ದೂರವಿರಿಸಿ. 

- ಗೂಡು ಚಿಕ್ಕದಾದರೆ ಮೇಲೆ ಹೇಳಿದ ಮನೆಮದ್ದುಗಳನ್ನು ಬಳಸಿ ನೀವೇ ಜೇನನ್ನು ಜಾಗ ಖಾಲಿ ಮಾಡಿಸಬಹುದು. ಆದರೆ, ದೊಡ್ಡ ಗೂಡಾದರೆ, ಸುಮ್ಮನೇ ಅಪಾಯವನ್ನು ಮೈಮೇಲೆಳೆದುಕೊಳ್ಳುವ ಬದಲು ಈ ಸಂಬಂಧ ಪ್ರೊಫೆಶನಲ್ಸ್ ಸಹಾಯ ಪಡೆಯಿರಿ. 

- ಗೂಡನ್ನು ತೆಗೆದ ಬಳಿಕ ಅದರ ಎಲ್ಲ ಗುರುತನ್ನೂ ಅಳಿಸಿ ಹಾಕಿಬಿಡಿ. ಇಲ್ಲದಿದ್ದಲ್ಲಿ ಬೇರೆ ಹುಳುಹುಪ್ಪಟೆಗಳು ಗೂಡಿನ ಕುರುಹಿಗೆ ಆಕರ್ಷಿತವಾಗುವ ಸಾಧ್ಯತೆಗಳಿರುತ್ತವೆ.