ಹೀಗೂ ಇದ್ದ ಪಿ.ಲಂಕೇಶ್ ಕಾರು ಕೊಂಡಿದ್ದು ಯಾವಾಗ?

life | Monday, May 28th, 2018
Suvarna Web Desk
Highlights

ಪಿ. ಲಂಕೇಶ್ ಎರಡು ದಶಕಗಳ ಕಾಲ ಕನ್ನಡ ಮನಸ್ಸುಗಳನ್ನು ಪ್ರಸ್ತಾವಿಸಿದರು. ಪ್ರಖರ ಚಿಂತನೆ ಮತ್ತು ನಿಷ್ಠುರ ನೋಟದಿಂದಾಗಿ ಸಾಹಿತ್ಯ, ರಾಜಕಾರಣ ಮತ್ತು ಸಾಂಸ್ಕೃತಿಕ ಜಗತ್ತನ್ನು ಆಳಿದವರು. ಅವರ ಕುರಿತು ಇಲ್ಲಿಯ ತನಕ ಎಂಟು ಪುಸ್ತಕಗಳು ಪ್ರಕಟವಾಗಿವೆ. ಒಬ್ಬ ಲೇಖಕ ಕಣ್ಮರೆಯಾಗುತ್ತಿದ್ದಂತೆ ಅಷ್ಟೊಂದು ಸಂಖ್ಯೆಯ ಪುಸ್ತಕಗಳು ಬಂದದ್ದು ಕನ್ನಡದಲ್ಲಿ ಇದೇ ಮೊದಲು. ಇದೀಗ ಅವರ ಆಪ್ತ ಒಡನಾಡಿ, ಜೊತೆಗಾರ, ಲಂಕೇಶ್ ಪತ್ರಿಕೆಯ ಆರಂಭದಲ್ಲಿ ಅವರ ಜೊತೆಗೇ ಇದ್ದ ಎನ್ ಕೆ ಮೋಹನರಾಮ್ ಲಂಕೇಶರ ಕುರಿತು ವಿಸ್ತಾರವಾಗಿ ಬರೆದಿದ್ದಾರೆ. 'ಈ ಮೋಹನರಾಮ್ ಒಬ್ಬ ಜೊತೆಗಿದ್ದರೆ ಇಡೀ ಜಗತ್ತನ್ನೇ ಅಲ್ಲಾಡಿಸಬಲ್ಲೆ..' ಅಂತ ಲಂಕೇಶರು ಬರೆದುಕೊಂಡಿದ್ದರು. ಆ ಅನುಬಂಧದ ಕುರಿತು ಅವರಿಲ್ಲಿ ಕಟು ಮಧುರ ಆಖ್ಯಾನದೊಂದಿಗೆ ದಾಖಲಿಸಿದ್ದಾರೆ. ಅವರ ಪುಸ್ತಕದ ಆಯ್ದ ಭಾಗಗಳು ಇಲ್ಲಿವೆ.

ಪತ್ರಿಕೆಯ ಎರಡನೇ ಸಂಚಿಕೆಯಿಂದ ದುಡ್ಡು ಹರಿಯಲು ಆರಂಭವಾಯಿತು. ಪತ್ರಿಕೆಯ ಪ್ರತಿಯೊಂದಕ್ಕೆ ಇಡಬೇಕಾದ ಠೇವಣಿ ಎರಡು ರೂಪಾಯಿ ನಲವತ್ತು ಪೈಸೆ. ಅಂದರೆ ಏಜೆಂಟರು ಆರು ವಾರಗಳ ಮುಂಗಡ ಕೊಡಬೇಕಿತ್ತು. ಎರಡನೇ ಸಂಚಿಕೆ ಆರು ಸಾವಿರಕ್ಕೇರಿತ್ತು. ರಾಜ್ಯಾದ್ಯಂತ ಏಜೆಂಟರು ಕಳಿಸಿದ ಬ್ಯಾಂಕ್ ಡಿಡಿಗಳು ಬಂದು ಬೀಳಲು ಆರಂ'ವಾಯಿತು. ಮೂರನೇ ಸಂಚಿಕೆಯಿಂದ ಪ್ರತಿ ವಾರವೂ ಒಂದೆರೆಡು ಸಾವಿರದ ಪ್ರಸಾರ  ಏರತೊಡಗಿತ್ತು. ಬಂದು ಬೀಳುತ್ತಿದ್ದ ಬ್ಯಾಂಕ್ ಡಿಡಿಗಳನ್ನು ನೋಡಿ ಲಂಕೇಶರು ಕುಣಿದು ಕುಪ್ಪಳಿಸುವುದೊಂದೇ ಇದ್ದದ್ದು ಬಾಕಿ. ಎರಡನೇ, ಮೂರನೇ ವಾರದಿಂದ ನಾವು ಸೇವ್ ಆದೆವು ಕಣೋ ಎನ್ನುತ್ತಿದ್ದ ಲಂಕೇಶರು ನಾಲ್ಕು, ಐದನೇ ಸಂಚಿಕೆಯಿಂದ ಬಿಡಯ್ಯ ನಾವು ಗೆದ್ದು ಬಿಟ್ಟೆವು ಎನ್ನತೊಡಗಿದರು.

ಪುತ್ರ ವ್ಯಾಮೋಹಿ ಲಂಕೇಶ್

ಲೆಕ್ಕಾಚಾರದ ಕವಿಯಾಗಿದ್ದರು ಪಿ.ಲಂಕೇಶ್!

ಅಕ್ಷರ ಪ್ರೇಮಿ ಪಿ.ಲಂಕೇಶ್ ಅಂಕಿ ಪ್ರೇಮಿಯಾಗಿದ್ದು!

ಕವಿ, ಪತ್ರಕರ್ತ ಪಿ.ಲಂಕೇಶ್‌ರಿಗಿತ್ತು ರೇಸ್ ಹುಚ್ಚು!

ಪತ್ರಕರ್ತ ಲಂಕೇಶ್ ಹಿಂದಿದ್ದ ಪಿ ಅರ್ಥವೇನು?

ಸಹಾಯ ಮಾಡಿದವರ ಮೇಲೆ ದ್ವೇಷ ಸಾಧಿಸಿದ ಪಿ.ಲಂಕೇಶ್

ನೋಡನೋಡುತ್ತಿದ್ದಂತೆ ಲಂಕೇಶರಲ್ಲಿ ಬದಲಾವಣೆಗಳು ಕಂಡಬಂದವು. ಎರಡು ಪ್ಯಾಕ್ ಗೋಲ್ಡ್ ಪ್ಯಾಕ್‌ನಿಂದ ದಿನದ ಸಿಗರೇಟು ಪ್ಯಾಕುಗಳು ನಾಲ್ಕಕ್ಕೇರಿತು. ಹಿಂದೆ ಅವರು ಸೇದುತ್ತಿದ್ದ ವಿಲ್ಸ್ ಫಿಲ್ಟರ್ ಬಿಟ್ಟು ಐದಾರು ವರ್ಷಗಳಾಗಿತ್ತು. ಓಲ್ಡ್ ಮಾಂಕ್ ರಂ, ಮ್ಯಾಕ್‌ಡೊವೆಲ್ ವಿಸ್ಕಿಯ ಜಾಗದಲ್ಲಿ ಬೆಲೆ ಬಾಳುವ ವಿಸ್ಕಿ ಬಂದಿತು. ಸಂಜೆಯ ಕೂಟದ ಸಂಖ್ಯೆ ಆರೆಂಟು ಜನಕ್ಕೇರಿತು. ಲಂಕೇಶರ ಮನೆಯೇ ಸಂಜೆಯ ಬಾರ್ ಆಯಿತು. ಈ ದಿನಗಳಲ್ಲೇ ಲಂಕೇಶರು ತಮ್ಮ ಮನೆಯ ಕೆಳಗಿನ ಮನೆಯನ್ನು ಬಾಡಿಗೆಗೆ ಪಡೆದಿದ್ದರು. ಬಾಡಿಗೆ ಮನೆಯಲ್ಲೇ ಎರಡನೇ ಮಹಡಿಯನ್ನೂ ಕಟ್ಟಿಸಿದ್ದರು. ಪತ್ರಿಕೆಯ ಏಳನೆಯ ತಿಂಗಳಲ್ಲೇ ಅಂಬಾಸಡರ್ ಕಾರು ಬಂತು. ಆ ಕಾಲದ ತುಟ್ಟಿಯ ಕಾರೇ ಅದು.

Comments 0
Add Comment

  Related Posts

  Ram Gopal Varma Reaction After Watching Tagaru

  video | Thursday, March 29th, 2018

  Sandalwood Gossip About Rachita Ram

  video | Sunday, March 18th, 2018

  Ram Gopal Varma Reaction After Watching Tagaru

  video | Thursday, March 29th, 2018
  Nirupama K S