ವಾಸ್ತು ಶಾಸ್ತ್ರವನ್ನು ವಿಜ್ಞಾನವೆನ್ನುತ್ತಾರೆ. ಸಣ್ಣ ಮನೆಯಿಂದ ಹಿಡಿದು ದೊಡ್ಡ ಸಂಸ್ಥೆಯವರೆಗೆ ಎಲ್ಲಾ ಕಡೆಯೂ ವಾಸ್ತು ಮುಖ್ಯ. ಪ್ರಕೃತಿಯ ಐದು ತತ್ವಗಳಾದ ಭೂಮಿ, ಅಗ್ನಿ, ವಾಯು, ಆಕಾಶ ಮತ್ತು ನೀರನ್ನು ಸಮತೋಲನ ಮಾಡುವ ವಿಜ್ಞಾನವೇ ವಾಸ್ತು. ಸೂಕ್ತ ದಿಕ್ಕಿನಲ್ಲಿ ವಸ್ತುಗಳನ್ನು ಇಡುವುದು ಮತ್ತು ಅದರಿಂದ ಬಿಡುಗಡೆಯಾಗುವ ಶಕ್ತಿ ಸಕಾರಾತ್ಮಕ ಪ್ರಭಾವ ಬೀರುವಂತೆ ನೋಡಿಕೊಳ್ಳುವುದು ಈ ವಿಜ್ಞಾನದ 

ಉದ್ದೇಶ 

ಹೆಚ್ಚಾಗಿ ವಾಸ್ತು ಸಲಹೆಗಾರರು ಮನೆಯಲ್ಲಿ ಕಾರಂಜಿ, ಜಲಪಾತ ಅಥವಾ ನೀರಿಗೆ ಸಂಬಂಧಿಸಿದ ಯಾವುದಾದರೂ ಶೋ ಪೀಸ್ ಅಥವಾ ಫೋಟೋ ಇಡಲು ಸಲಹೆ ನೀಡುತ್ತಾರೆ. ಮನೆಯಲ್ಲಿ ಜಲ ತತ್ವವನ್ನು ಸಮತೋಲನ ಮಾಡಿ, ಸಕಾರಾತ್ಮಕ ಶಕ್ತಿ ಹೆಚ್ಚಿಸುವುದು ಈ ಸಲಹೆಯ ಹಿಂದಿರುವ ಉದ್ದೇಶ. ನೀರಿನ ಚಿತ್ರ, ಶೋ ಪೀಸ್  ಯಾವ ದಿಕ್ಕಿನಲ್ಲಿ ಇಡಬೇಕು ಅನ್ನೋದು ಮುಖ್ಯ. 

ಆರೋಗ್ಯ ಭಾಗ್ಯಕ್ಕಾಗಿ ಆಮೆ ವಾಸ್ತು!

ಬಾಲ್ಕನಿಯಲ್ಲಿ 

ಮನೆಯ ಸದಸ್ಯರನ್ನು , ಫ್ಯಾಮಿಲಿ ಬಿಜಿನೆಸ್ ಅನ್ನು ಬ್ಯಾಡ್‌ಲಕ್‌ನಿಂದ ರಕ್ಷಿಸಲು ಹಾಗೂ ಕೆಟ್ಟ ದೃಷ್ಟಿ ಬೀಳದಿರಲು ಮನೆ ಬಾಲ್ಕನಿಯಲ್ಲಿ ನೀರಿಗೆ ಸಂಬಂಧಿಸಿದ ಯಾವುದಾದರೂ ಫೋಟೋ ಅಥವಾ ಶೋ ಪೀಸನ್ನಿಡಿ. 
 
ಈಶಾನ್ಯ ದಿಕ್ಕಿನಲ್ಲಿ 

ಮನೆಯ ಉತ್ತರ ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿ ಮಣ್ಣಿನ ಮಡಕೆಯಲ್ಲಿ ನೀರು ಹಾಕಿ ಇಡಬೇಕು. ಹೀಗೆ ಮಾಡುವುದರಿಂದ ಮನೆಯ ಜನರ ದುರ್ಭಾಗ್ಯ ದೂರವಾಗುತ್ತದೆ. ಅಲ್ಲದೆ ಎಲ್ಲಾ ಕೆಲಸದಲ್ಲೂ ಸಫಲತೆ ಸಿಗುತ್ತದೆ. 

ನಲ್ಲೀಲಿ ಹನಿ ನೀರು, ಪರಿಸರಕ್ಕೂ ಹಾನಿ, ಮನೆಗೂ ಅಶುಭ

ಅಡುಗೆ ಮನೆ

ನೀರಿಗೆ ಸಂಬಂಧಿಸಿದ ಯಾವುದೇ ಚಿತ್ರ ಅಥವಾ ಶೋ ಪೀಸನ್ನು ಅಡುಗೆ ಮನೆಯಲ್ಲಿಡಬಾರದು. ಕಿಚನ್‌ನಲ್ಲಿ ಅಡುಗೆಗೆ ಬೇಕಾದ ನೀರಿನ ಹೊರತು ಬೇರೆ ಯಾವುದೇ ಸಂಬಂಧಿಸಿದ ವಸ್ತುವನ್ನೂ ಇಡುವುದು ಅಶುಭ. 
 
ಜಲಧಾರೆ 

ಮನೆಯಲ್ಲಿ ಗಾರ್ಡನ್ ಏರಿಯಾವಿದ್ದರೆ ಅಲ್ಲಿ ಜಲಧಾರೆಯನ್ನು ನಿರ್ಮಿಸಿ. ಜಲಧಾರೆ ಮಾಡುವಾಗ ನೀರು ಹರಿಯುವ ದಿಕ್ಕು ಮನೆ ಕಡೆಗೆ ಇರಬೇಕು. ಅದು ಹೊರಗಡೆಗೆ ಇರಲೇಬಾರದು. 

ಧನ ಲಾಭ ತರೋ ಫೆಂಗ್ ಶ್ಯೂ ಗಿಡಗಳಿವು...

ಕಾರಂಜಿ 

ಮನೆಯಲ್ಲಿ ಕಾರಂಜಿ ಹಾಕುವುದಾದರೆ ಮನೆಯ ಉತ್ತರ ಅಥವಾ ನೈಋತ್ಯ ದಿಕ್ಕಿನಲ್ಲಿ ನಿರ್ಮಿಸಬೇಕು. ಹೀಗೆ ಮಾಡಿದರೆ ಗುಡ್ ಲಕ್ ನಿಮ್ಮದಾಗುತ್ತದೆ.