Asianet Suvarna News Asianet Suvarna News

ನಿಮಗೆ ಗೊತ್ತಾಗದೆ ಮಕ್ಕಳು ಹೇಳಿಕೊಡುವ ತಿನ್ನೋ ಪಾಠ!

ಮಕ್ಕಳು ಅತ್ತರೆ ಸಾಕು, ಇಲ್ಲವಾದರೆ ತುಸು ತುಸು ಕಿರಿ ಕಿರಿ ಮಾಡಿದರೂ ಹಸಿವೆಂದು ಬಾಯಿಗೆ ತುರುಕುತ್ತೇವೆ. ಅವು ಏನೇ ಕಾರಣಕ್ಕೂ ಅತ್ತರೂ ಹಸಿವೆಗೆ ರಗಳೆ ಎಂದು ತಿನ್ನಲು ಒತ್ತಾಯಿಸುತ್ತೇವೆ. ಆದರೆ, ಆ ಮುಗ್ಧ ಮಕ್ಕಳಿಂದ ನಾವು ಕಲಿಯುವಂಥದ್ದೂ ಇವೆ. ಏನವು?

5 things that a toddler can teach you about eating
Author
Bangalore, First Published Apr 29, 2019, 3:53 PM IST

ಕಲಿಯುವ ಮನಸ್ಸಿದ್ದರೆ ಮಕ್ಕಳಿಂದಲೂ ಕಲಿಯಬಹುದು. ಅದರಲ್ಲಿಯೂ ತಿನ್ನುವ ವಿಚಾರದಲ್ಲಿ ಮಕ್ಕಳಿಂದ ಕಲಿಯುವಂತದ್ದು ತುಂಬಾ ವಿಷಯಗಳಿವೆ. ಟಿವಿ ನೋಡುವಾಗ, ಹೋಯಿತು, ಬಂತು ಬಾಯಿಯಲ್ಲಿ ಸದಾ ಏನಾದರೂ  ಮುಕ್ಕುತ್ತಲೇ ಇರುವವರಿಗೆ ಮಕ್ಕಳು ಕಲಿಸುವ ಪಾಠವಿದು...

  • ಹಸಿವಾದಾಗ ಮಾತ್ರ ತಿನ್ನಬೇಕು. ಪದೇ ಪದೇ ತಿಂದರೆ ಅನಾರೋಗ್ಯ ಕಟ್ಟಿಟ್ಟ ಬುತ್ತಿ.
  • ಪೋಷಕಾಂಶವಿರುವ ಆಹಾರವನ್ನು ಮಾತ್ರ ತಿನ್ನಬೇಕು, ದೊಡ್ಡವರು ಕೆಲಸದ ಒತ್ತಡ ಹಾಗು ಖಿನ್ನತೆಗೆ ಹೆಚ್ಚು ಫ್ಯಾಟ್ ಇರುವ ಆಹಾರ ಪದಾರ್ಥಗಳನ್ನೇ ತಿನ್ನುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಇದು ಒಳ್ಳೆಯದಲ್ಲ. 
  • ತಿನ್ನುವ ಆಹಾರವನ್ನು ಅನುಭವಿಸಿಕೊಂಡು ತಿನ್ನಬೇಕು. ಗಡಿ-ಬಿಡಿ ಮಾಡಿಕೊಂಡು ಅಥವಾ ಫೋನ್, ಟಿವಿ ನೋಡಿಕೊಂಡು ತಿಂದರೆ ದೆಹಕ್ಕೆ ಒಗ್ಗಲ್ಲ. 
  • ಹೊಸ ತಿನಿಸನ್ನು ನಿರಾಯಾಸವಾಗಿ ಟೇಸ್ಟ್ ಮಾಡುತ್ತಾರೆ. ನಾಲಿಗೆಗೆ ರುಚಿಸಿದರೆ ತಿನ್ನುತ್ತಾರೆ. ಇಲ್ಲವೇ ಬಿಟ್ಟು ಬಿಡುತ್ತಾರೆ. ಆದರೆ, ಸ್ವಲ್ಪ ದೊಡ್ಡವರಾದ ಮೇಲೆ ನೋಡಿಯೇ ತಿನ್ನಬೇಕೋ, ಬೇಡವೋ ಎಂಬುದನ್ನು ನಿರ್ಧರಿಸುತ್ತಾರೆ. ಇದು ತಪ್ಪು.
  • ನಿಧಾನವಾಗಿ ತಿನ್ನುವುದರಿಂದ ಆಹಾರ ರುಚಿಸುವುದಲ್ಲದೇ, ಸುಲಭವಾಗಿಯೂ ಜೀರ್ಣವಾಗುತ್ತದೆ. 

ತುಂಟ ಮಕ್ಕಳನ್ನು ಬೈಯದೇ ಸಂಭಾಳಿಸಬಹುದಾ!

ಅದಕ್ಕೆ ಮಕ್ಕಳಿಗೆ ತಾವಾಗಿಯೇ ತಿನ್ನೋ ಅಭ್ಯಾಸ ಮಾಡಿಸಬೇಕು. ಎಷ್ಟು ಬೇಕೋ ಅಷ್ಟು ತಿಂದು ಸುಮ್ಮನಾಗುತ್ತವೆ. ಒತ್ತಾಯವಾಗಿ ತಿನಿಸಿದರೆ ವಾಂತಿ, ಬೇಧಿಯಂಥ ಅನಾರೋಗ್ಯ ಸದಾ ಕಾಡುತ್ತದೆ. ಅಲ್ಲದೇ ಆರೋಗ್ಯವಾಗಿರಲು ಒಳ್ಳೊಳ್ಳೆ ಅಭ್ಯಾಸಗಳನ್ನು ಕಲಿಸಬೇಕು. 

Follow Us:
Download App:
  • android
  • ios