Asianet Suvarna News Asianet Suvarna News

ಮಗುವಿನ ಪಾಲನೆಯಲ್ಲಿ ತಂದೆಯ ಪಾಲೇನು?

 ದಂಪತಿಗಳು ಸದಾ ಕಿಚ್ಚಾಡುತ್ತಿರುತ್ತಾರೆ. ಆದರೆ, ಬಹಳಷ್ಟು ವೇಳೆ ಸಕಾರಣವಿಲ್ಲದೇ ಕಿಚ್ಚಾಡುತ್ತಾರೆ ಎಂಬುವುದು ದುರಂತದ ವಿಷಯ. ಅಷ್ಟಕ್ಕೂ ಸಾಮಾನ್ಯವಾಗಿ ಜಗಳಕ್ಕೆ ಮೂಲ ಕಾರಣವೇನು?

5 common things new parents fight about
Author
Bengaluru, First Published Sep 18, 2018, 4:20 PM IST

ಪೋಷಕರಾಗುವುದೆಂದರೆ ಸುಮ್ಮನೆಯಲ್ಲ. ಏಕೆಂದರೆ ಎಲ್ಲಾ ಜವಾಬ್ದಾರಿಗಳನ್ನೂ ಗಂಡ-ಹೆಂಡತಿ ಹಂಚಿಕೊಂಡು ಮಾಡಬೇಕು. ಆಗ ಮನೆಯವರ ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಬಹುದು. ಅದರಲ್ಲಿಯೂ ಮಕ್ಕಳ ವಿಷಯದಲ್ಲಿ ಇಬ್ಬರೂ ಅನೇಕ ರೂಲ್ಸ್ ಫಾಲೋ ಮಾಡಲೇಬೇಕು.

ಆದರೆ, ಈ ಟಾಸ್ಕ್ ಪೂರ್ಣಗೊಳಿಸಲು ಪತಿ-ಪತ್ನಿಯಿಬ್ಬರೂ ತಾಳ್ಮೆ ಹಾಗೂ ಸಹನೆ ಇರಬೇಕು. ಎಲ್ಲವಕ್ಕೂ ಹೆಚ್ಚಾಗಿ ಬದ್ಧತೆ ಮುಖ್ಯ. ಅತ್ತರೆ ಸಮಾಧಾನ ಮಾಡಿ, ಹಸಿದರೆ ಉಣಿಸಿ, ಸುಸು ಮಾಡಿದರೆ, ಚಡ್ಡಿ ಬಿಚ್ಚಿ...ಅಬ್ಬಾ ಮುಗಿಯದ ಸವಾಲುಗಳು.

  • ಮಕ್ಕಳನ್ನು ನೋಡಿಕೊಳ್ಳಲು ಯಾರು ಕೆಲಸ ಬಿಡಬೇಕು? ಅಕಸ್ಮಾತ್ ಕೆಲಸಕ್ಕೆ ಹೋದರೂ ಯಾರು, ಯಾವ ಟೈಮಿಗೆ ಸೆಟ್ ಮಾಡಿಕೊಳ್ಳಬೇಕೆಂಬುವುದು ಇಬ್ಬರಿಂದಲೂ ನಿರ್ಧಾರವಾಗಬೇಕು.
  • ಆರ್ಥಿಕ ಹೊಣೆಯನ್ನು ಪತಿ-ಪತ್ನಿಯಿಬ್ಬರೂ ಹಂಚಿಕೊಳ್ಳುವಾಗ ಮನೆಗೆಲಸವನ್ನೂ ಇಬ್ಬರೂ ಶೇರ್ ಮಾಡಿಕೊಳ್ಳಬೇಕು. ಯಾರಿಗೆ, ಯಾವುದೇ ತೊಂದರೆಯೂ ಆಗದಂತೆ, ಇಬ್ಬರೂ ಒಟ್ಟಿಗೆ ಹಾಸಿಗೆಗೆ ಹೋಗುವಂತೆ ಕೆಲಸಗಳನ್ನು ಹಂಚಿಕೊಂಡರೆ, ಜಗಳಕ್ಕೆ ಮುಕ್ತಿ ಹಾಡಬಹುದು.
  • ಸದಾ ಮನೆಯಲ್ಲಿ ಒಬ್ಬರೇ ಮಗುವನ್ನು ನೋಡಿಕೊಳ್ಳುವ ಬದಲು, ಟೈಂ ಮಾಡಿಕೊಂಡು ಇಬ್ಬರೂ ಜತೆಯಾಗಿಯೇ ಸೋಷಿಯಲ್ ಲೈಫ್ ನಿಭಾಯಿಸಲು ಯತ್ನಿಸಿ. ಆಗ, ಇಬ್ಬರಿಗೂ ಅಭದ್ರತಾ ಭಾವನೆ ಕಾಡೋದೇ ಇಲ್ಲ.
  • ಸುಸು, ಕಕ್ಕ ಎಂದು ಸದಾ ಮಕ್ಕಳು ಮಾಡಿಕೊಳ್ಳುತ್ತಲೇ ಇರುತ್ತವೆ. ಆದರೆ, ಸ್ವಲ್ಪವೂ ಬೇಜಾರು ಮಾಡಿಕೊಳ್ಳದೇ ಡೈಪರ್ ಬದಲಾಯಿಸುವುದರಿಂದ ಹಿಡಿದು, ಎಲ್ಲ ಸ್ವಚ್ಛತೆಯ ಹೊಣೆ ಹೊರಬೇಕು.
  • ಸದಾ ಮಕ್ಕಳನ್ನು ನೋಡಿಕೊಳ್ಳುವುದೇ ಆಗುತ್ತದೆ. ಅಬ್ಬಾ, ಲೈಫ್ ಹೆಕ್ಟಿಕ್ ಎನಿಸಿಬಿಡುತ್ತದೆ. ಆದರೆ, ಒಬ್ಬರಿಗಾಗಿ ಮತ್ತೊಬ್ಬರು ಸ್ವಲ್ಪ ಹೊತ್ತು, ಕೆಲವು ದಿನಗಳಾದರೂ ಮಗುವಿನ ಸಂಪೂರ್ಣ ಹೊಣೆ ಹೊರಬೇಕು. ತಮ್ಮ ಆಶಯಕ್ಕೆ ತಕ್ಕಂತೆ ನಡೆದುಕೊಳ್ಳಲು ಅವಕಾಶ ಮಾಡಿಕೊಳ್ಳಬೇಕು.
  • ಸಾಧನೆ, ಕೆಲಸ, ಕೆರಿಯರ್...ಇವೇ ಮಗುವಿಗಿಂತ ಮುಖ್ಯ ಎನಿಸಿದಲ್ಲಿ, ಮಗು ಹೆರುವ ಯೋಚನೆಯನ್ನೇ ಕೈ ಬಿಡುವುದು ಒಳಿತು. ನಿಮ್ಮಿಂದ ಮಗು ಅನುಭವಿಸದಂತಾಗಬಾರದು.
Follow Us:
Download App:
  • android
  • ios