ನೋಡಿದ ಕೂಡಲೇ ಬಾಯಲ್ಲಿ ನೀರೂರಿಸುತ್ತೆ ಮಾವಿನ ಹಣ್ಣು.  ಮಾವಿನ ಹಣ್ಣಿನ ಸೀಸನ್ ಮುಗೀತಾ ಬಂದಿದೆ. ನಿಮಗೂ ಇದನ್ನು ತಿನ್ನಲು ಇಷ್ಟವಿರಬಹುದು. ಆದರೆ ಇದನ್ನು ಬಳಸಿ ಕೂದಲಿನ ಸಮಸ್ಯೆ ದೂರ ಮಾಡುವ ಬಗ್ಗೆ ನಿಮಗೆ ತಿಳಿದಿದೆಯೇ? 

ಕೂದಲಿಗೆ ಪೋಷಣೆ 

ಉದ್ದ ಕೂದಲು ಬೇಕೆಂದರೆ ಮಾವಿನ ಹಣ್ಣಿನ ಹೇರ್‌ಪ್ಯಾಕ್‌ ಮಾಡಿ. ಇದರಿಂದ  ಕೂದಲು ಸದೃಢವಾಗುತ್ತದೆ ಜೊತೆಗೆ ಉದ್ದವಾದ ಕೂದಲು ನಿಮ್ಮದಾಗುತ್ತದೆ.

ಸೊಂಪಾದ ಕೂದಲಿಗೂ ಬೇಕು 'ಯೋಗ'!

ರೇಷ್ಮೆಯಂತಹ ಕೂದಲು

ನಿಮಗೆ ರೇಷ್ಮೆಯಂಥ  ಕೂದಲು  ಬೇಕೆಂದರೆ ಮಾವಿನ ಹಣ್ಣಿನ ತಿರುಳು ಮತ್ತು ಆಲೀವ್ ಆಯಿಲ್ ಮಿಕ್ಸ್ ಮಾಡಿ ಅದನ್ನು ತಲೆಗೆ ಹಚ್ಚಿ. ಅರ್ಧ ಗಂಟೆ ನಂತರ ತೊಳೆಯಿರಿ. ಇದರಿಂದ ಕೂದಲು ಸಿಲ್ಕಿ ಆಗುತ್ತದೆ. 

ತಲೆಹೊಟ್ಟು

ತಲೆಹೊಟ್ಟು ಸಮಸ್ಯೆಯೇ ಇದ್ದರೆ ಮಾವು ಬಳಸಿ. ಮಾವಿನ ಹಣ್ಣಿನಲ್ಲಿರುವ ಆ್ಯಂಟಿಸೆಪ್ಟಿಕ್‌ ಗುಣದಿಂದಾಗಿ ತಲೆಹೊಟ್ಟು ನಿವಾರಣೆಯಾಗುತ್ತದೆ. ಅದಕ್ಕಾಗಿ ನೀವು ಮಾವಿನಹಣ್ಣಿನ ಜೊತೆ ಯಾವುದೆ ನ್ಯಾಚುರಲ್‌ ಎಣ್ಣೆ ಬೆರೆಸಿ ತಲೆಗೆ ಹಚ್ಚಿ. ಅರ್ಧ ಗಂಟೆ ಬಿಟ್ಟು ಸ್ನಾನ ಮಾಡಿ. 

ನೀವು ಹೀಗೇ ಮಾಡುತ್ತಿದ್ದರೆ, ತಲೆ ಬೋಳಾಗುತ್ತೆ ಅಷ್ಟೇ...

ಕೂದಲಿನ ಬೆಳವಣಿಗೆ

ಕೂದಲಿನ ಬೆಳವಣಿಗೆಗೆ ಒಂದು ಮಾವಿನ ಹಣ್ಣಿಗೆ ಎರಡು ಮೊಟ್ಟೆ ಬೆರೆಸಿ, ಅದಕ್ಕೆ ಮೊಸರು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಕೂದಲಿನ ಬುಡಕ್ಕೆ ಹಚ್ಚಬೇಕು. 45 ನಿಮಿಷಗಳ ನಂತರ ಶ್ಯಾಂಪೂ ಬಳಸಿ ಕೂದಲು ತೊಳೆಯಿರಿ. 

ಬಿಳಿ ಕೂದಲು ನಿವಾರಣೆ 

ಮಾವಿನ ಹಣ್ಣಿನಲ್ಲಿರುವ ವಿಟಾಮಿನ್‌ ಎ ಮತ್ತು ಸಿ ಕೂದಲು ಬಿಳಿಯಾಗುವುದನ್ನು ನಿವಾರಿಸುತ್ತದೆ. ಇದಕ್ಕಾಗಿ ನೀವು ವಾರಕ್ಕೆ ಒಂದು ಬಾರಿ ಹಣ್ಣಾದ ಮಾವನ್ನು ತಲೆಗೆ ಹಚ್ಚಬೇಕು.  

ಕೂದಲು ತುಂಡಾಗುವುದು

ಈ ಸಮಸ್ಯೆ ನಿವಾರಿಸಲು ಮಾವಿನ ಹಣ್ಣಿನ ಪ್ಯಾಕ್ ಮಾಡಿ ತಲೆಗೆ ಹಚ್ಚಿಕೊಳ್ಳಿ. ಅದಕ್ಕಾಗಿ ಮಾವಿನ ಹಣ್ಣಿಗೆ, ಅಲೋವೆರಾ ಮತ್ತು ಹರಳೆಣ್ಣೆ ಬೆರೆಸಿ ಮಿಕ್ಸ್ ಮಾಡಿ ಕೂದಲಿಗೆ ಹಚ್ಚಬೇಕು. 

ಸಧೃಢ ಕೂದಲು

ಮುಲ್ತಾನಿ ಮಿಟ್ಟಿ ಮತ್ತು ಮಾವಿನ ಹಣ್ಣನ್ನು ಬೆರೆಸಿ ಪೇಸ್ಟ್ ತಯಾರಿಸಿ ಕೂದಲಿಗೆ ಹಚ್ಚಿದರೆ ಕೂದಲು ಸದೃಢವಾಗುತ್ತದೆ.