ಕೂದಲು ಉದುರುವ ಸಮಸ್ಯೆ ಈಗ ಎಲ್ಲರಲ್ಲೂ ಕಾಮನ್. ಆದರೆ ಮಹಿಳೆಯರಿಗೆ ಹೋಲಿಸಿದಲ್ಲಿ ಪುರುಷರಲ್ಲಿ ಈ ಸಮಸ್ಯೆ ಹೆಚ್ಚು. ವಯಸ್ಸು, ಹಾರ್ಮೋನ್ಸ್ ಮತ್ತು ಜೆನೆಟಿಕ್ಸ್ ಸಮಸ್ಯೆಯಿಂದ ಪುರುಷರ ತಲೆ ಬೊಕ್ಕವಾಗುತ್ತದೆ. ಇದಲ್ಲದೆ ಸ್ಮೋಕಿಂಗ್, ಡ್ರಿಂಕ್ಸ್ ಮತ್ತು ಸರಿಯಾಗಿ ಡಯಟ್ ಮಾಡದಿದ್ದರೂ ಕೂದಲು ವಿರಳವಾಗುತ್ತೆ. ಅಲ್ಲದೇ ಇನ್ನೇನಿವೆ ಕಾರಣಗಳು?

ವಾಶ್ ಮಾಡದಿರುವುದು

ಕೂದಲು ಉದುರುವ ಸಮಸ್ಯೆ ದೂರ ಮಾಡಲು ಪ್ರತಿದಿನ ಅಥವಾ ನಿಯಮಿತವಾಗಿ ಕೂದಲನ್ನು ತೊಳೆಯಬೇಕು. ಪ್ರತಿದಿನ ತಲೆಗೆ ಸ್ನಾನ ಮಾಡಿದರೆ ಕೂದಲಿನ ಕೊಳೆ ನಿವಾರಣೆಯಾಗುತ್ತದೆ. ಯಾವುದೇ ರೀತಿಯ ಇನ್ಫೆಕ್ಷನ್ ಆಗುವ ಸಾಧ್ಯತೆಯೂ ಇರೋಲ್ಲ. ಜೊತೆಗೆ ಕೂದಲು ದಟ್ಟವಾಗಿ ಬೆಳೆಯುತ್ತದೆ. 

ಸೊಂಪಾದ ಕೂದಲಿಗೂ ಬೇಕು 'ಯೋಗ'!

ವಿಟಮಿನ್ ಕೊರತೆ

ವಿಟಮಿನ್  ದೇಹದೊಂದಿಗೆ ಕೂದಲಿಗೂ ಅತ್ಯಗತ್ಯ. ಸ್ಕಾಲ್ಪ್ ಆರೋಗ್ಯವಾಗಿಡುವ ವಿಟಮಿನ್ ಇ ಹೆಲ್ದಿ ಸೀರಮ್ ಉತ್ಪಾದಿಸುತ್ತದೆ. ಅಲ್ಲದೇ ರಕ್ತ ಪರಿಚಲನೆಗೂ ಇದು ಬೇಕು. ಬಣ್ಣ ಕಪ್ಪಾಗಿರುವಂತೆ ಮಾಡಿ, ಕೂದಲು ಸಮೃದ್ಧವಾಗಿ ಬೆಳೆಯಲು ಕೂದಲಿಗೆ ಅಗತ್ಯ ಪೋಷಕಾಂಶಗಳು ಬೇಕೇ ಬೇಕು.

ಡಯಟ್

ಕೂದಲು ಉದುರುವುದಕ್ಕೆ ಮಸಾಲೆ ಹೆಚ್ಚಾಗಿರುವ ಆಹಾರ ಅಥವಾ ಜಂಕ್ ಫುಡ್ ಸೇವನೆಯೂ ಆಗಬಹುದು ಕಾರಣ. ಇವುಗಳನ್ನು ಡಯಟ್ ಲಿಸ್ಟ್‌ನಿಂದ ತೆಗೆದು ಬಿಡಿ. ಬದಲಾಗಿ ಸೋಯಾಬಿನ್, ತರಕಾರಿ, ಮಾಂಸ ಹೆಚ್ಚು ಸೇವಿಸಿ. 

ಹೇರ್ ಮಸಾಜ್ 

ಸ್ಕಾಲ್ಪ್ ಡ್ರೈ ಆಗುವುದನ್ನು ತಡೆಯಲು ನಿಯಮಿತವಾಗಿ ಕೂದಲಿಗೆ ಎಣ್ಣೆ ಮಸಾಜ್ ಮಾಡಿ. ಇದು ರಕ್ತ ಪರಿಚಲನೆಯನ್ನು  ಸುಸೂತ್ರವಾಗಿಸುತ್ತದೆ. ಇದಕ್ಕೆ ತೆಂಗಿನ ಎಣ್ಣೆ, ಲ್ಯಾವೆಂಡರ್, ಬಾದಾಮಿ ಎಣ್ಣೆ ಬಳಸಬಹುದು.

ದಪ್ಪನೆಯ ಕೂದಲು ಹೊಂದಲು ಇಲ್ಲಿವೆ ಉಪಾಯ!

ಒದ್ದೆ ಕೂದಲನ್ನು ಬಾಚುವುದು

ಒದ್ದೆ ಕೂದಲನ್ನು ಯಾವತ್ತೂ ಬಾಚಬೇಡಿ. ತುಂಬಾ ಅವಶ್ಯಕತೆ ಇದ್ದರೆ ದೊಡ್ಡ ಹಲ್ಲುಗಳುಳ್ಳ ಬಾಚಣಿಕೆ ಬಳಸಿ. ಇಲ್ಲವಾದರೆ ಬೆರಳುಗಳ ಸಹಾರದಿಂದ ಕೂದಲನ್ನು ಬಾಚಿ. ಇಲ್ಲವಾದರೆ ಕೂದಲು ಉದುರುತ್ತದೆ. 

ಸ್ಮೋಕಿಂಗ್/ ಆಲ್ಕೋಹಾಲ್ 

ಹೆಚ್ಚು ಹೆಚ್ಚು ಸ್ಮೋಕಿಂಗ್, ಮದ್ಯಪಾನ ಮಾಡಿದರೂ ತಲೆ ಭಾಗಕ್ಕೆ ಸೂತ್ರ ರಕ್ತ ಸಂಚಾರವಾಗದೇ ಕೂದಲು ಉದುರುತ್ತದೆ.