ನೀವು ಪಾರ್ಟಿಗೆ ಹೋಗಲು ರೆಡಿಯಾಗಿರುತ್ತೀರಿ. ಆದರೆ ಮುಖ ಡಲ್ ಎನಿಸುತ್ತೆ. ಬ್ಯೂಟಿ ಪಾರ್ಲರ್‌ಗೆ  ಹೋಗೋವಷ್ಟು ಟೈಮ್ ಇರಲ್ಲ. ಹಾಗಾದರೆ ಏನು ಮಾಡೋದು? ನಿಮಗಾಗಿ ಸ್ಪೆಷಲ್ ಬ್ಯೂಟಿ ರೆಸಿಪಿ ಇಲ್ಲಿದೆ. ಇದನ್ನ ಟ್ರೈ ಮಾಡಿದರೆ ಮುಖ ಯಾವಾಗಲೂ ಫ್ರೆಶ್ ಆಗಿರುತ್ತೆ. ಅಲ್ಲದೆ ಮುಖದಲ್ಲಿ ಕಳೆ ಎದ್ದು ಕಾಣುತ್ತದೆ. 

ರೆಸಿಪಿ 1: ಮೂರು ಚಮಚ ಮೊಸರು, ಅರ್ಧ ಕಪ್ ಓಟ್ಸ್, ಎರಡು ಚಮಚ ಜೇನು, ಸ್ವಲ್ಪ ಲೆಮೆನ್ ಸ್ಕಿನ್ ಪೌಡರ್, ಚಿಟಿಕೆ ಕಿತ್ತಲೆ ರಸ ಸೇರಿಸಿ ಪೇಸ್ಟ್ ಮಾಡಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿಕೊಂಡು 25 ನಿಮಿಷ ಒಣಗಲು ಬಿಟ್ಟು ಬಳಿಕ ತೊಳೆಯಿರಿ. 

ನಿಂಬೂ ಪಾನಿ ಸೇವನೆಯಿಂದ ಏನೆಲ್ಲಾ ಲಾಭ?

ಪ್ರಯೋಜನ: ಓಟ್ಸ್ ಮುಖದಲ್ಲಿರುವ ಸತ್ತ ಕೋಶಗಳನ್ನು ನಿವಾರಿಸಿದರೆ, ಕಿತ್ತಲೆ ಮತ್ತು ಲೆಮೆನ್ ಪೌಡರ್ ಚರ್ಮವನ್ನು ಬಿಗಿಗೊಳಿಸುತ್ತದೆ. ಜೇನು ಮುಖದಲ್ಲಿ ತೇವಾಂಶ ತುಂಬುತ್ತದೆ. ಈ ಮೂಲಕ ಮುಖದಲ್ಲಿ ಫ್ರೆಶ್‌ನೆಸ್ ಕಂಗೊಳಿಸುತ್ತದೆ.
 
ರೆಸಿಪಿ 2: ಲಿಂಬೆ ರಸಕ್ಕೆ ಆಲ್ಮಂಡ್ ಎಣ್ಣೆ ಮತ್ತು ಸ್ವಲ್ಪ ಉಪ್ಪು ಬೆರೆಸಿ ಮುಖಕ್ಕೆ ಹತ್ತಿಯಿಂದ ಹಚ್ಚಿ. ಸ್ವಲ್ಪ ಹೊತ್ತಾದ ಬಳಿಕ ನೀರಿನಿಂದ ತೊಳೆಯಿರಿ. 
ಪ್ರಯೋಜನ: ಇದು ಚರ್ಮದಲ್ಲಿರುವ ಸತ್ತ ಕೋಶಗಳನ್ನು ನಿವಾರಿಸುತ್ತದೆ.  ಮುಖದಲ್ಲಿ ಫ್ರೆಶ್‌ನೆಸ್ ಉಳಿದುಕೊಳ್ಳುತ್ತದೆ. 

ಮುಖದ ಮೇಲೆ ಮ್ಯಾಜಿಕ್ ಮಾಡುತ್ತೆ ಮೂಸಂಬಿ ಹಣ್ಣು

ರೆಸಿಪಿ 3: ಕಡ್ಲೆ ಹಿಟ್ಟು, ಅರಿಶಿನ ಪುಡಿ ಮತ್ತು ತೆಂಗಿನ ಹಾಲನ್ನು ಜೊತೆಯಾಗಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ. 15 ನಿಮಿಷ ಬಿಟ್ಟು ತಣ್ಣೀರಿನಿಂದ ಮುಖ ತೊಳೆಯಿರಿ. 
ಪ್ರಯೋಜನ : ಈ ಆಯುರ್ವೇದಿಕ್ ವಿಧಾನದಿಂದ ಮುಖ ಮತ್ತು ತ್ವಚೆ ಹೊಳೆಯುತ್ತದೆ. ಇದರಿಂದ ಸ್ಕಿನ್ ಮೇಲಿರುವ ಎಲ್ಲಾ ಕಲೆ ತೊಲಗುತ್ತದೆ.