ಮೂಸಂಬಿ ಹಣ್ಣು ಹೆಚ್ಚು ಪೋಷಕಾಂಶಗಳನ್ನು ಹೊಂದಿರುವ ಸಿಟ್ರಸ್ ಹಣ್ಣು. ಇದನ್ನು ಡಯಟ್‌ನಲ್ಲಿ ಬಳಸಿದರೆ  ಅರೋಗ್ಯ ಗ್ಯಾರಂಟಿ. ಅಷ್ಟೇ ಅಲ್ಲ ಚರ್ಮದ ಸಮಸ್ಯೆಗಳನ್ನೂ ನಿವಾರಿಸುತ್ತದೆ. ಇದನ್ನು ಮುಖಕ್ಕೆ ಬಳಸಿ ಚರ್ಮದ ಸಮಸ್ಯೆಯನ್ನು ಸುಲಭವಾಗಿ ದೂರ ಮಾಡಬಹುದು. 

ಆರೋಗ್ಯ ಸಂಬಂಧಿ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಚರ್ಮ ಸಮಸ್ಯೆ ನಿವಾರಿಸಿ ಸಾಫ್ಟ್ ಮತ್ತು ಹೊಳೆಯುವ ತ್ವಚೆ ನಿಮ್ಮದಾಗಲು ಏನು ಮಾಡಬೇಕು?

ಮೂಸಂಬಿಯಲ್ಲಿ ವಿಟಮಿನ್ ಸಿ ಯಥೇಚ್ಛವಾಗಿರುತ್ತದೆ. ಇದರಲ್ಲಿರುವ ಸಿಟ್ರಿಕ್ ಜ್ಯೂಸ್ ಸ್ಕಿನ್ ಕ್ಲೀನ್ ಮಾಡಲು ಸಹಕರಿಸುತ್ತದೆ. ಮೂಸಂಬಿಯನ್ನು ನಡುವೆ ಕಟ್ ಮಾಡಿ, ಅದರಿಂದ ಮುಖವನ್ನು 7-8 ನಿಮಿಷ ಮಸಾಜ್ ಮಾಡಿ. 

ಟ್ಯಾನಿಂಗ್ ಸಮಸ್ಯೆಯಿಂದ ಬಳಲುತ್ತಿದ್ದರೆ, ಮೂಸಂಬಿ ಫೇಸ್ ಪ್ಯಾಕ್ ಬೆಸ್ಟ್ ಸೊಲ್ಯೂಷನ್. ಮೂಸಂಬಿಯನ್ನು ಪೇಸ್ಟ್ ಮಾಡಿ ಅದಕ್ಕೆ ಅರಿಶಿನ ಮತ್ತು 1 ಚಮಚ ಜೇನು ಬೆರೆಸಿ. ಈಗ ಈ ಪೇಸ್ಟನ್ನು ಮುಖದ ಮೇಲೆ ಹಚ್ಚಿ. 5-10 ನಿಮಿಷದ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ವಾರದಲ್ಲಿ ಎರಡು ಬಾರಿ ಇದನ್ನು ಟ್ರೈ ಮಾಡಿ. 

ಡಾರ್ಕ್ ಸರ್ಕಲ್‌ನಿಂದ ಮುಕ್ತಿ ಪಡೆಯಲು ಮೂಸಂಬಿ ರಸಕ್ಕೆ ಒಂದು ಚಮಚ ಬಾಳೆಹಣ್ಣಿನ ಪೇಸ್ಟ್, ಸೌತೆಕಾಯಿ ರಸ ಮತ್ತು ವಿಟಮಿನ್ 'ಈ' ಜೆಲ್ ಬೆರೆಸಿ ಕಣ್ಣಿನ ಸುತ್ತಲೂ ಮತ್ತು ಮುಖಕ್ಕೆ ಮಸಾಜ್ ಮಾಡಿ. ಐದು ನಿಮಿಷದ ನಂತರ ತಂಪಾದ ನೀರಿನಲ್ಲಿ ಮುಖ ತೊಳೆಯಿರಿ. ಡಾರ್ಕ್ ಸರ್ಕಲ್ ಮಾಯವಾಗುತ್ತದೆ.