ಮಹಿಳೆಯರಿಗೆ ಯಾವ ಗುಟ್ಟನ್ನೂ ಗುಟ್ಟಾಗಿಡಲು ಬರುವುದಿಲ್ಲ ಎಂಬ ಪ್ರಸಿದ್ಧ ಮಾತಿದೆ. ಆದರೆ, ಈ ನಂಬಿಕೆಗೆ ತದ್ವಿರುದ್ಧವಾಗಿ ಪ್ರತಿ ಯುವತಿಯ ಬಳಿಯೂ ಒಂದಿಷ್ಟು ಸೀಕ್ರೆಟ್ಸ್‌ಗಳಿರುತ್ತವೆ. ಆಕೆ ಅದನ್ನು ಕೆಲವೊಮ್ಮೆ ತನ್ನದೇ ಡೈರಿಗೆ ಕೂಡಾ ಹೇಳಲಾರಳು! ಸಂಬಂಧದ ವಿಷಯಕ್ಕೆ ಬಂದರೆ ಕೆಲವೊಂದು ಸಣ್ಣ ಪುಟ್ಟ ಸೀಕ್ರೆಟ್‌ಗಳು ಸೀಕ್ರೆಟ್ ಆಗಿಯೇ ಉಳಿಯುವುದರಿಂದ ಸಂಬಂಧ ಉಳಿಯುತ್ತದೆ. ಇದೇ ಕಾರಣಕ್ಕೆ ಪತ್ನಿ ಹಲವು ವಿಷಯಗಳನ್ನು ತನ್ನ ಪತಿಯಿಂದ ಮುಚ್ಚಿಡುತ್ತಾಳೆ. ನಮ್ಮಿಬ್ಬರ ಮಧ್ಯೆ ಯಾವುದೇ ಗುಟ್ಟಿಲ್ಲ ಎಂದು ನಂಬಿರುವ ಪತಿ ಪತ್ನಿಯರ ನಡುವೆಯೂ ಒಂದಾದರೂ ರಹಸ್ಯ ವಿಷಯ ಇದ್ದೇ ಇರುತ್ತದೆ. ಸಾಮಾನ್ಯವಾಗಿ ಪತ್ನಿಯರು ತಮ್ಮ ಪತಿಯಿಂದ ಯಾವೆಲ್ಲ ವಿಷಯಗಳನ್ನು ಮುಚ್ಚಿಡುತ್ತಾರೆ ಗೊತ್ತಾ? 

ಪ್ರಪೋಸ್ ಮಾಡುವಾಗ ಮೊಣಕಾಲಿನ ಮೇಲೆ ಕೂರುವುದೇಕೆ?

1. ಮದುವೆಯಾಗಿ ತನ್ನ ಪತಿಯ ಜೊತೆ ಸಂತೋಷದಿಂದ ಇರುವಾಗಲೂ, ಆಕೆ ರಹಸ್ಯವಾಗಿ ತನ್ನ ಎಕ್ಸ್ ಬಾಯ್‌ಫ್ರೆಂಡ್‌ ಪ್ರೊಫೈಲನ್ನು ಸೋಷ್ಯಲ್ ಮೀಡಿಯಾದಲ್ಲಿ ಆಗಾಗ ತಡಕಾಡುತ್ತಿರುತ್ತಾಳೆ. ಆತನಿಗೆ ಹೊಸ ಗರ್ಲ್‌ಫ್ರೆಂಡ್ ದೊರೆತಳಾ, ನಾನಿಲ್ಲದೆ ಆತ ದೇವದಾಸನಾಗಿದ್ದಾನಾ ಅಥವಾ ಖುಷಿಯಾಗಿದ್ದಾನಾ, ಏನೇನು ಮಾಡುತ್ತಿದ್ದಾನೆ, ನೋಡಲು ಹೇಗಾಗಿದ್ದಾನೆ, ಏನು ಸ್ಟೇಟಸ್ ಹಾಕಿದ್ದಾನೆ, ಇದರ ಅರ್ಥ ಬೇರೇನೋ ಇರಬಹುದಾ ಎಂದೆಲ್ಲಾ ದುರ್ಬೀನು ಹಾಕಿ ಹುಡುಕುತ್ತಿರುತ್ತಾಳೆ. ನಿಮ್ಮಿಬ್ಬರನ್ನೂ ಹೋಲಿಸಿ ನೋಡುತ್ತಿರುತ್ತಾಳೆ. ಚಿಂತೆ ಬೇಡ, ಹೆಚ್ಚಿನ ಬಾರಿ ನೀವೇ ಗೆಲ್ಲುತ್ತೀರಿ. ಆದರೆ, ಇದನ್ನು ಯಾವತ್ತೂ ತನ್ನ ಪತಿಗೆ ಆಕೆ ಹೇಳಲಾರಳು. ಹಾಗೆಂದು ಎಕ್ಸ್ ಮೇಲೆ ಪ್ರೀತಿ ಇದೆ ಎಂದಲ್ಲ, ಈಗಿನ ಪತಿ ಮೇಲೆ ಪ್ರೀತಿ ಕಡಿಮೆಯಿದೆ ಎಂದೂ ಅಲ್ಲ. ಇದೊಂದು ಅಪಾಯರಹಿತ ಅಭ್ಯಾಸವೆಂದು ತಿಳಿದು, ಅದರಿಂದ ಹೊರಬರಲಾಗದೆ ಚಟದಂತೆ ನಡೆಸುತ್ತಿರುತ್ತಾಳಷ್ಟೆ. 

2. ಮದುವೆಗೂ ಮುಂಚೆ ಪತಿಯಾಗುವವನ ಪ್ರಾಮಾಣಿಕತೆ ಪರೀಕ್ಷಿಸಲು ಬೇರೆ ಸಂಖ್ಯೆಯಿಂದ ಮತ್ತೊಬ್ಬಳು ಯುವತಿಯಂತೆ ಪ್ರಚೋದಿಸಲು ಅಥವಾ ಗೆಳತಿಗೆ ನಂಬರ್ ಕೊಟ್ಟು ಪರೀಕ್ಷಿಸಲು ಕೆಲ ಹುಡುಗಿಯರು ಪ್ರಯತ್ನಿಸಿರುತ್ತಾರೆ. ಆ ಅಗ್ನಿಪರೀಕ್ಷೆಯಲ್ಲಿ ತನ್ನ ಹುಡುಗ ಗೆದ್ದ ಮೇಲೆಯೇ ವಿವಾಹವಾಗಿರುತ್ತಾರೆ. ಆದರೆ, ತಾವೇ ಇಂಥ  ಪರೀಕ್ಷೆ ನಡೆಸಿದ್ದೆಂದು ಮಾತ್ರ ಪತಿಗೆ ಹೇಳಲು ಹೋಗುವುದಿಲ್ಲ. 

3. ಮದುವೆಗೂ ಮುಂಚೆ ಟ್ರಿಪ್ ಹೋದಾಗ ಕೆಲ ಹುಡುಗಿಯರು ಗೆಳೆಯನ ಮನೆಯಲ್ಲಿ ಉಳಿದಿರಬಹುದು. ಅವರ ನಡುವೆ ನಿಜವಾಗಿಯೂ ಏನೂ ಸಂಭವಿಸಿರುವುದಿಲ್ಲ. ಆದರೂ ಇದನ್ನು ಪತಿ ಮಹಾಶಯ ನಂಬದಿದ್ದರೆ ಎಂಬ ಭಯದಲ್ಲಿ ಇಂಥ ವಿಷಯಗಳನ್ನು ಯುವತಿಯರು ಪತಿಗೆ ಹೇಳಲು ಹೋಗುವುದಿಲ್ಲ.

4. ಬಹಳಷ್ಟು ಯುವತಿಯರಿಗೆ ಶಾಪಿಂಗ್ ಎಂದರೆ ಎಲ್ಲಿಲ್ಲದ ಖುಷಿ. ಆದರೆ, ಬಹಳಷ್ಟು ಪತಿಯಂದಿರಿಗೆ ಪತ್ನಿಯ ಈ ಅಭ್ಯಾಸವೆಂದರೆ ಅಲರ್ಜಿ. ಹೀಗಾಗಿ, ಬಹುತೇಕ ಹುಡುಗಿಯರು ತಮ್ಮ ಶಾಪಿಂಗ್ ಬಿಲ್‌ಗಳನ್ನು ಮುಚ್ಚಿಟ್ಟು ಕೊಂಡದ್ದಕ್ಕೆ ಕಡಿಮೆ ಬೆಲೆ ಹೇಳುವುದೋ ಅಥವಾ ಯಾರೋ ಕೊಡಿಸಿದರೆಂದು ಹೇಳುವುದೋ ಇಲ್ಲವೇ ಪತಿ ಅಷ್ಟು ಗಮನಿಸುವುದಿಲ್ಲವೆಂದರೆ ಶಾಪಿಂಗ್ ಮಾಡಿರುವುದನ್ನೇ ಹೇಳದೆ ಮುಚ್ಚಿಡುವ ಅಭ್ಯಾಸ ಹೊಂದಿರುತ್ತಾರೆ. 

ಸಂಗಾತಿಗೆ ಸಾರಿ ಕೇಳಿದ್ರೆ ಎಲ್ಲ ಸರಿ ಹೋಗತ್ತಾ?

5. ಹೆಚ್ಚಿನ ಸಂದರ್ಭದಲ್ಲಿ ಪತ್ನಿಯು ತನ್ನ ಸೇವಿಂಗ್ಸ್ ಕುರಿತು ಪತಿಗೆ ಹೇಳಲು ಹೋಗುವುದಿಲ್ಲ. ಆಕೆಯ ಖಾತೆಯಲ್ಲಿ ಎಷ್ಟು ಹಣವಿದೆ ಎಂಬುದು ಅವಳಿಗಷ್ಟೇ ಗೊತ್ತಿರುತ್ತದೆ. ಕಷ್ಟ ಕಾಲಕ್ಕಾಗುತ್ತದೆ ಎಂದೋ, ಅಥವಾ ಮನೆ ಕೊಳ್ಳಬೇಕೆಂದೋ ಮುಂತಾದ ರಹಸ್ಯ ಆಸೆಗಳಿಗಾಗಿ ಆಕೆ ಇದನ್ನು ಕೂಡಿಡುತ್ತಿರುತ್ತಾಳೆ.

6. ಕೆಲ ಯುವತಿಯರು ಮದುವೆಯಾದ ಬಳಿಕ ಹಳೆಯ ಬಾಯ್‌ಫ್ರೆಂಡ್ ಜೊತೆ ಸ್ನೇಹಿತರಾಗಿ ಇರುತ್ತಾರೆ. ಅವರೊಂದಿಗೆ ಚಾಟಿಂಗ್, ಅಪರೂಪಕ್ಕೊಮ್ಮೆ ಭೇಟಿಯೂ ಇರುತ್ತದೆ. 
ಆದರೆ, ಅಪ್ಪಿತಪ್ಪಿಯೂ ಈ ಬಗ್ಗೆ ಪತಿಗೆ ತಿಳಿಯದಂತೆ ಎಚ್ಚರ ವಹಿಸುತ್ತಾರೆ. 

7. ಅದೆಷ್ಟೋ ಯುವತಿಯರಿಗೆ ದಿನಚರಿ ಬರೆಯುವ ಅಭ್ಯಾಸವಿರುತ್ತದೆ. ಆದರೆ, ಸದಾ ಯಾರಾದರೂ ಅದನ್ನು ತೆರೆದು ನೋಡಿದರೆ ಎಂಬ ಭಯವೂ ಕಾಡುತ್ತಿರುತ್ತದೆ. ಅದರಲ್ಲಿ ಅಂಥ ಸೀಕ್ರೆಟ್ ಏನೂ ಇರದಿದ್ದರೂ ಅದು ಆಕೆಯ ಖಾಸಗಿ ಸಂಗಾತಿ. ಹೀಗಾಗಿ, ಆಕೆ ತನ್ನ ಪತಿಗೆ ಕೂಡಾ ತಾನು ಡೈರಿ ಬರೆಯುವ ವಿಷಯವನ್ನು ಹೇಳಲಾರಳು. 

8. ನಿಮ್ಮಿಬ್ಬರ ಖಾಸಗಿ ಬದುಕು ಖಾಸಗಿಯಾಗಿದೆ ಎಂಬ ನಂಬಿಕೆ ನಿಮ್ಮದಾಗಿರಬಹುದು. ಆದರೆ, ಆಕೆಯ ಬೆಸ್ಟ್ ಫ್ರೆಂಡ್‌ಗೆ ಎಲ್ಲವೂ ಗೊತ್ತಿರುತ್ತದೆ. ಎಲ್ಲ ಎಂದರೆ ಎಲ್ಲ. ಅವರಿಬ್ಬರ ನಡುವೆ ಫಸ್ಟ್‌ನೈಟ್‌ನಿಂದ ಹಿಡಿದು ನಿಮ್ಮ ಖಾಸಗಿ ವಿಷಯಗಳೆಲ್ಲ ಖುಲ್ಲಂಖುಲ್ಲಾ. ಹಾಗಂತ ಅವಳಿಗೆ ಎಲ್ಲವನ್ನೂ ಹೇಳಿರುವ ವಿಷಯವನ್ನು ಪತ್ನಿ ನಿಮ್ಮೊಡನೆ ಬಾಯ್ಬಿಡಲಾರಳು.

9. ನಿಮ್ಮ ಮದುವೆಗೂ ಮುನ್ನ ಪರಿಚಯವಾದ ಆರಂಭದ ಹಂತದಲ್ಲಿ ಆಕೆ ನಿಮ್ಮೊಂದಿಗೆ ಕಳೆವ ಖಾಸಗಿ ಕ್ಷಣಗಳ ಬಗ್ಗೆ ನೂರು ಬಾರಿಯಾದರೂ ಕನಸು ಕಂಡಿರುತ್ತಾಳೆ. ಪದೇ ಪದೆ ಕನಸಿಗೆ ಹೊಸ ಹೊಸ ಆಯಾಮಗಳನ್ನು  ಕೊಟ್ಟು ಖುಷಿ ಅನುಭವಿಸಿರುತ್ತಾಳೆ. ಆದರೆ, ತಾನೇನೇನು ಕನಸು ಕಂಡಿದ್ದೆ ಎಂಬ ಬಗ್ಗೆ ಮಾತ್ರ ತುಟಿಕ್ ಪಿಟಿಕ್ ಎನ್ನಲಾರಳು.

10. ನಿಮ್ಮ ಎಕ್ಸ್ ಗರ್ಲ್‌ಫ್ರೆಂಡ್ಸ್ ಪ್ರೊಫೈಲ್‌ಗಳನ್ನು ನೂರು ಬಾರಿಯಾದರೂ ತಡಕಾಡಿರುತ್ತಾಳೆ. ಎಕ್ಸ್ ಹುಡುಗಿಯ ಫೋಟೋವನ್ನು ನೋಡಿ ತನ್ನೊಂದಿಗೆ ಹೋಲಿಸಿಕೊಳ್ಳುತ್ತಿರುತ್ತಾಳೆ. ಆಕೆಯ ಸ್ಟೇಟಸ್‌ಗಳನ್ನೆಲ್ಲ ತಡಕಾಡಿರುತ್ತಾಳೆ. ಆದರೆ, ನಿಮ್ಮೆದುರು ಮಾತ್ರ ನಿಮ್ಮ ಪಾಸ್ಟ್ ಬಗ್ಗೆ ತನಗೆ ಆಸಕ್ತಿ ಇಲ್ಲ ಎಂಬಂತೆ ವರ್ತಿಸುತ್ತಿರುತ್ತಾಳೆ. 

11. ಆಕೆಯ ದೇಹ ಪ್ರಾಕೃತಿಕವಾಗಿಯೇ ಇಷ್ಟೊಂದು ಕೂದಲು ರಹಿತವಾಗಿ ಕೋಮಲವಾಗಿರುವುದಿಲ್ಲ. ಆದರೆ, ವ್ಯಾಕ್ಸಿಂಗ್, ಶೇವಿಂಗ್, ಟ್ವೀಜಿಂಗ್ ಮುಂತಾದ ಕುರಿತ ವಿಷಯಗಳನ್ನು ನಿಮ್ಮಿಂದ ಮುಚ್ಚಿಟ್ಟು, ನೀವಿಲ್ಲದ ಸಂದರ್ಭದಲ್ಲಿ ಅವನ್ನು ಮಾಡಿಕೊಳ್ಳುತ್ತಿರುತ್ತಾಳೆ. ಮತ್ತು ತನ್ನ ದೇಹವೇ ಇಷ್ಟು ಕೋಮಲ ಎಂದು ತೋರಿಸಿಕೊಳ್ಳುತ್ತಿರುತ್ತಾಳೆ. 

12. ನಿಮಗೆ ತಿಳಿದಿರುವುದಕ್ಕೂ ಹೆಚ್ಚು ಬಾರಿ, ಬಹುಷಃ 10 ಪಟ್ಟು ಎಂದರೂ ಸರಿ, ಆಕೆ ನಿಮ್ಮಿಂದ ಅತ್ತಿರುತ್ತಾಳೆ. ಯಾವ ಯಾವುದೋ ಹಳೆಯ ವಿಷಯಗಳನ್ನು ನೆನೆಸಿಕೊಂಡು, ಇಲ್ಲವೇ ನಿಮ್ಮ ಒಂದು ನೋಟದಲ್ಲಿ ಅದೇನೋ ಕೋಪ, ನೆಗ್ಲಿಜೆನ್ಸ್ ಕಂಡಿದ್ದನ್ನು ನೆನೆಸಿಕೊಂಡು ಆಕೆ ಪದೇ ಪದೆ ಅತ್ತಿರುತ್ತಾಳೆ. ಬೆಡ್‌ಶೀಟ್‌ಗಳು, ಬಾತ್‌ರೂಂ ಗೋಡೆಗಳು, ಅಡಿಗೆ ಮನೆಯ ಸ್ಟೌಗೆ ಮಾತ್ರ ಆಕೆ ಅದೆಷ್ಟು ಬಾರಿ ಅತ್ತಿರಬಹುದೆಂಬ ಲೆಕ್ಕ ಸಿಗುತ್ತದೆ.