ಡೈಮಂಡ್ ರಿಂಗ್ ಹಿಡಿದ ಯುವಕ ಮೊಣಕಾಲಿನಲ್ಲಿ ಕುಳಿತು, ಆಕೆಯ ಬಳಿ ತನ್ನ ಪ್ರೀತಿ ಹೇಳಿಕೊಳ್ಳುವುದು, ಆಕೆ ಒಪ್ಪಿದಾಗ ರಿಂಗ್ ತೊಡಿಸಿ ಎದ್ದು ನಿಲ್ಲುವುದು - ಪ್ರಪೋಸ್ ಮಾಡುವುದೆಂದ ಕೂಡಲೇ ನಮ್ಮ ಕಣ್ಣೆದುರು ಬರುವ ಚಿತ್ರ. ಇನ್ಸ್ಟಾಗ್ರಾಂನಲ್ಲಿ ಹುಡುಕಿದರೆ ಇಂಥ ಸಾಕಷ್ಟು ಫೋಟೋ ಫ್ರೆಂಡ್ಲಿ ಪ್ರಪೋಸಲ್ಸ್ ಕಾಣಸಿಗುತ್ತವೆ. ಹೌ ಕ್ಯೂಟ್ ಎಂಬ ಒಂದಿಷ್ಟು ಕಾಮೆಂಟ್‌ಗಳಿರುತ್ತವೆ. ಯಾರಾದರೂ ನಿಮಗೆ ಈ ರೀತಿ ಪ್ರಪೋಸ್ ಮಾಡಿದರೆ ಅಲ್ಲಿಗೆ ಬದುಕಿನ ಬಣ್ಣವೇ ಬದಲಾಗಿಬಿಡುತ್ತದೆ. ಕೆಂಪು ಹಾರ್ಟ್ ಶೇಪಿನ ಬಲೂನುಗಳು, ಡಿಮ್ ಲೈಟ್, ಪ್ರೀತಿಯ ಹೊಸತೊಂದು ಲೋಕ ಅನಾವರಣಗೊಳ್ಳುತ್ತದೆ. ಆದರೆ ಮೊಣಕಾಲಿನಲ್ಲಿ ಕುಳಿತು ಪ್ರಪೋಸ್ ಮಾಡುವುದರ ಕುರಿತು ವಿವರವಾಗಿ ಯೋಚಿಸಿದರೆ ಆಡ್ ಎನಿಸುವುದಿಲ್ಲವೇ? 

ಅವಳನ್ನು ಮೊದಲು ಮೀಟ್ ಆಗುತ್ತಿದ್ದೀರಾ? ಹೀಗಿರಲಿ ನಿಮ್ಮ ನಡೆ...

ಅದೇಕೆ ಹಾಗೆಯೇ ಪ್ರಪೋಸ್ ಮಾಡಬೇಕು? ಮೊಣಕಾಲಿನಲ್ಲಿ ಕೂರದಿದ್ದರೆ ಹುಡುಗಿ ಒಪ್ಪುವುದಿಲ್ಲವೇ? ಅಥವಾ ನಾಚಿ ನೀರಾಗಿ ತಲೆ ತಗ್ಗಿಸುವ ಆಕೆಯ ಮುಖ ಸರಿಯಾಗಿ ಕಾಣದಿದ್ದರೆ ಎಂಬ ಅನುಮಾನವೋ? ಪ್ರೀತಿಯಲ್ಲಿ ಇಬ್ಬರೂ ಸಮಾನವೆಂದ ಮೇಲೆ ಆತ ಅವಳ ಮುಂದೆ ಮಂಡಿಯೂರುವ ಅಗತ್ಯವಾದರೂ ಏನು? ಮೊಣಕಾಲಿನ ಮೇಲೆ ಕುಳಿತು ಪ್ರೀತಿ ಹೇಳುವ, ಮದುವೆಗೆ ಒಪ್ಪಿಗೆ ಕೇಳುವ ಸಂಪ್ರದಾಯ ಬೆಳೆದದ್ದೆಲ್ಲಿಂದ? ಅದಕ್ಕೆ ಇದೇ ಶೈಲಿ ಏಕೆ ಬೇಕು? 

ಎಂಗೇಜ್‌ಮೆಂಟ್ ರಿಂಗ್ ಬೈಬಲ್ ಪ್ರಕಾರ, 12ನೇ ಶತಮಾನದಲ್ಲಿ ಯೋಧರು, ವಿಶೇಷವಾಗಿ ಅಶ್ವದಳದ ಅಪ್ರತಿಮ ಹೋರಾಟಗಾರ ತನ್ನ ರಾಜನಿಗೆ ಗೌರವ, ವಿದೇಯತೆ ಹಾಗೂ ಪ್ರಾಮಾಣಿಕತೆ ಪ್ರದರ್ಶಿಸುವ ಸಲುವಾಗಿ ಅವರ ಮುಂದೆ ಮೊಣಕಾಲಿನಲ್ಲಿ ಕೂರುತ್ತಿದ್ದರು. ಜೊತೆಗೆ, ರಾಜನಿಂದ ನೈಟ್‌ಹುಡ್ ಗೌರವ ಸ್ವೀಕರಿಸುವಾಗ ಹೀಗೆ ಕೂರುತ್ತಿದ್ದರು. ಇನ್ನು ಒಬ್ಬ ರಾಜ ಇನ್ನೊಂದು ರಾಜ್ಯ ಗೆದ್ದಾಗ, ಆ ರಾಜ್ಯದ ಸೈನಿಕರು ಮೊಣಕಾಲಿನಲ್ಲಿ ಕುಳಿತು ಶರಣಾಗತಿ ಸೂಚಿಸುತ್ತಿದ್ದರು. 'ಗೇಮ್ ಆಫ್ ಥ್ರೋನ್ಸ್' ಅಭಿಮಾನಿಗಳು 'ಬೆಂಡಿಂಗ್ ದ ನೀ' ಪದವನ್ನು ಮತ್ತೆ ಮತ್ತೆ ಕೇಳಿರಬಹುದು. ಅಲ್ಲಿ ರಾಜನಿಗೆ ತಮ್ಮ ಬೆಂಬಲ ಹಾಗೂ ಸಹಾಯ ನೀಡಿ ಸದಾ ಆತನ ರಕ್ಷಣೆಯನ್ನು ಕರ್ತವ್ಯವಾಗಿಸಿಕೊಳ್ಳುವ ವ್ಯಾಖ್ಯಾನವಾಗಿ ಈ ಪದ ಕೇಳಿಸುತ್ತದೆ. 

ಮೊದಲ ನೋಟದಲ್ಲೇ ಹುಡುಗಿ ಗಮನಿಸುವುದೇನು?

ಚರ್ಚಿನ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಕೂಡಾ ಯೇಸುವಿನ ಶಿಲುಬೆಯೆದುರು ಮೊಣಕಾಲಿನಲ್ಲಿ ಕೂತು ಶರಣಾಗತಿ ಪ್ರದರ್ಶಿಸುವ, ಬೇಡಿಕೊಳ್ಳುವ ಈ ನಡುವಳಿಕೆ ಕಾಣಬಹುದು. ಆ ದಿನಗಳಲ್ಲಿ ಧಾರ್ಮಿಕತೆ ಹಾಗೂ ಮದುವೆ ಒಂದಕ್ಕೊಂದು ಬೆಸೆದುಕೊಂಡೇ ಬಂದಿದೆ ಎಂದು ನಿಮಗೂ ಗೊತ್ತು. ಹಾಗಾಗಿ, ಪ್ರಾಮಾಣಿಕ ವ್ಯಕ್ತಿಯೊಬ್ಬ ತನ್ನ ಪರಿಶುದ್ಧ ಪ್ರೀತಿಯನ್ನು ವ್ಯಕ್ತಪಡಿಸುವಾಗ ಅವಳಿಗೆ ಜೀವನಪೂರ್ತಿ ಪ್ರಾಮಾಣಿಕವಾಗಿ ಪ್ರೀತಿಸುತ್ತಾ, ಗೌರವದಿಂದ ನಡೆಸಿಕೊಳ್ಳುತ್ತೇನೆಂದು ಹೇಳಿಕೊಳ್ಳಲು ಮಂಡಿ ಮಡಚಿ ಕೂತರೆ ಸಾಕು, ಬಾಡಿ ಲಾಂಗ್ವೇಜ್ ಎಲ್ಲವನ್ನೂ ಹೇಳಿಬಿಡುತ್ತದೆ. ಆದ್ದರಿಂದಲೇ ಪ್ರಪೋಸ್ ಮಾಡುವಾಗ ಮೊಣಕಾಲಿನಲ್ಲಿ ಕೂರುವುದು ಬೆಳೆದುಬಂದಿದೆ. 

ಇನ್ನೊಂದು ಊಹೆಯ ಪ್ರಕಾರ, ಮಂಡಿಯೂರುವುದು ಎಂದರೆ ನಾನು ನಿನ್ನ ದಾಸ, ನಿನಗೆ ಮರುಳಾಗಿದ್ದೇನೆ, ಸಂಪೂರ್ಣ ಶರಣಾಗಿದ್ದೇನೆ ಎಂದು ಹೇಳುವ ರೀತಿ ಇದು. ಸಾಮಾನ್ಯವಾಗಿ ಯುವತಿಯು ತಮಗಿಂತ ಬಹು ಎತ್ತರದಲ್ಲಿದ್ದಾಳೆ ಎಂದು ಭಾವಿಸಿದ ಯುವಕರು ಪ್ರೀತಿಯ ಪರಾಕಾಷ್ಠೆಯಲ್ಲಿ ಇದನ್ನುಆರಂಭಿಸಿರಬೇಕು. 

ವೆಡ್ಡಿಂಗ್ ಉಂಗುರ ಎಡಕೈಯ ಮೂರನೇ ಬೆರಳಿಗೆ ತೊಡಿಸುವುದೇಕೆ? 

ಏಕೆಂದರೆ, ಪ್ರಾಚೀನ ಈಜಿಪ್ಟಿಯನ್ನರು ಈ ಬೆರಳಿನಿಂದ ಹರಿವ ರಕ್ತನಾಳ ನೇರ ಹೃದಯಕ್ಕೆ ಸಂಪರ್ಕ ಸಾಧಿಸುತ್ತದೆ ಎಂದು ನಂಬಿದ್ದರು. ಹಾಗಾಗಿ, ತಮ್ಮ ಪ್ರೀತಿಯನ್ನು ಸಂಗಾತಿಯ ಹೃದಯಕ್ಕೆ ನೇರ ಮುಟ್ಟುವಂತೆ ಮಾಡಲು ಅವರು ನಿಶ್ಚಿತಾರ್ಥ ಹಾಗೂ ಮದುವೆಯ ಉಂಗುರಗಳನ್ನು ಎಡಗೈಯ ಮೂರನೇ ಬೆರಳಿಗೆ ತೊಡಿಸುತ್ತಿದ್ದರು. ಉದ್ಯೋಗ ಪಾಲುದಾರಿಕೆ ಇರಬಹುದು, ಪ್ರೀತಿ ಇರಬಹುದು ಅಥವಾ ಸೇವಕತ್ವ ಇರಬಹುದು- ಈಜಿಪ್ಟಿಯನ್ಸ್ ಹಾಗೂ ಇತರೆ ಪ್ರಾಚೀನ ನಾಗಗರಿಕತೆಗಳು ಇನ್ನೊಬ್ಬ ವ್ಯಕ್ತಿಗೆ ತಮ್ಮ ಬದ್ಧತೆ ಪ್ರದರ್ಶಿಸಲು ಹೀಗೆ ಮಾಡುತ್ತಿದ್ದರು. ಎಷ್ಟು ರೊಮ್ಯಾಂಟಿಕ್ ಅಲ್ಲವೇ?