ಹಣ್ಣುಗಳು ಪ್ರತಿಯೊಬ್ಬರ ಅರೋಗ್ಯ ಕಾಪಾಡಲು ಬೇಕು. ಹಣ್ಣುಗಳಲ್ಲಿ ಇರುವ ವಿಟಮಿನ್‌ಗಳು, ಖನಿಜಾಂಶಗಳು ಮತ್ತು ಆ್ಯಂಟಿ ಆ್ಯಂಟಿ ಕ್ಸಿಡೆಂಟ್ ಅರೋಗ್ಯ ಮತ್ತು ಸೌಂದರ್ಯಕ್ಕೂ ಉತ್ತಮ. ಅದರಲ್ಲಿ ಕರ್ಬೂಜವೂ  ಒಂದು. ಇದನ್ನು ಸೇವಿಸೋದ್ರಿಂದ ಒಂದೆರಡಲ್ಲ ಹತ್ತು ಹಲವು ಪ್ರಯೋಜನಗಳಿವೆ... - ಕರ್ಬೂಜ ಹಣ್ಣಿನ ರಸ ಮಧುಮೇಹಿ ರೋಗಿಗಳಿಗೆ ಉತ್ತಮ. ಇದು ಮಧುಮೇಹಿಗಳ ದೇಹದಲ್ಲಿರುವ ಸಕ್ಕರೆಯಂಶವನ್ನು ಕಡಿಮೆ ಮಾಡುತ್ತದೆ.

- ಕರ್ಬೂಜ ಹಣ್ಣಿನಲ್ಲಿ ಕೊಲೆಸ್ಟ್ರಾಲ್ ಮತ್ತು ಕ್ಯಾಲರಿ ಕಡಿಮೆ ಇರೋದ್ರಿಂದ ತೂಕ ಇಳಿಸಲು ಬಯಸಿದವರಿಗೆ ಇದು ಬೆಸ್ಟ್. 

- ಇದು ಮೂತ್ರ ವರ್ಧಕವಾಗಿದ್ದು, ಕಿಡ್ನಿ ಸಮಸ್ಯೆಯನ್ನು ತಡೆಯುತ್ತದೆ. 

ಸುಲಭವಾಗಿ ಸಿಗೋ ಈ ಹಣ್ಣು ಹಲವು ರೋಗಕ್ಕೆ ಮಹಾ ಮದ್ದು...!

- ತ್ವಚೆಯನ್ನು ಒತ್ತಡ ಮತ್ತು ಬಿಸಿಲಿನಿಂದ ಹಾಳಾಗದಂತೆ ಕಾಪಾಡುತ್ತದೆ. ಇದರಲ್ಲಿರುವ ಎಂಜಿಮಿನ್ ತ್ವಚೆಯಲ್ಲಿ ನೆರಿಗೆ ಬಾರದಂತೆ ನೋಡಿಕೊಳ್ಳುತ್ತದೆ. 

- ಜೀರ್ಣಕ್ರಿಯೆ ಸಮಸ್ಯೆ ಉಳ್ಳವರು ಈ ಹಣ್ಣನ್ನು ನಿಯಮಿತವಾಗಿ ಸೇವಿಸಬೇಕು. ಇದರಿಂದ ಪಚನ ಕ್ರಿಯೆ ಉತ್ತಮವಾಗಿ, ಅರೋಗ್ಯ ಉತ್ತಮವಾಗುತ್ತದೆ. 

- ಇದರಲ್ಲಿರುವ ವಿಟಮಿನ್ ಸಿ ಹೆಚ್ಚಿನ ಪ್ರಮಾಣದ ಬಿಳಿ ರಕ್ತ ಕಣಗಳನ್ನು ಉತ್ಪಾದಿಸುತ್ತದೆ. ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. 

- ಈ ಹಣ್ಣಿನಲ್ಲಿ ನೀರು ಮತ್ತು ನಾರಿನ ಅಂಶ ಇರುವುದರಿಂದ ಮಲಬದ್ಧತೆ ಸಮಸ್ಯೆ ಸಂಪೂರ್ಣವಾಗಿ ನಿವಾರಣೆಯಾಗುತ್ತದೆ. 

- ಮಾಸಿಕ ಋತುಸ್ರಾವದ ಸಂದರ್ಭದಲ್ಲಿ ಕೆಳಹೊಟ್ಟೆ ಸೆಳೆತ ಮತ್ತು ನೋವು ಹೆಚ್ಚಾಗಿದ್ದರೆ ಕರ್ಬೂಜ ಹಣ್ಣನ್ನು ಸೇವಿಸಬೇಕು. 

ಸೆಲಬ್ರಿಟಿಗಳ ಸೌಂದರ್ಯದ ಹಿಂದಿದೆ ಇಷ್ಟೆಲ್ಲಾ ಕಷ್ಟನಷ್ಟ!

- ಕೆಲವೊಂದು ಹೃದ್ರೋಗಗಳಿಗೂ ಕರ್ಬೂಜದಿಂದ ಉಪಯೋಗವಿದೆ. ಇದರಲ್ಲಿ ವಿಟಮಿನ್‌ ‘ಸಿ’ಅಂಶ ಹೇರಳವಾಗಿ ಇರುವ ಕಾರಣ, ಹೃದ್ರೋಗಗಳನ್ನು ದೂರ ಇಡುತ್ತದೆ.

- ಕರ್ಬೂಜವನ್ನು ತಿನ್ನುತ್ತಿದ್ದರೆ, ತ್ವಚೆಯು ಒರಟಾಗಿ ಮತ್ತು ಒಣಗಿದಂತೆ ಕಾಣುವುದಿಲ್ಲ. ಮೃದುವಾಗುತ್ತದೆ. ಕರ್ಬೂಜದಲ್ಲಿರುವ ಕೊಲೆಜಿನ್ ಅಂಶ ಸ್ಕಿನ್ ಉತ್ತಮವಾಗಿರುವಂತೆ ನೋಡಿಕೊಳ್ಳುತ್ತದೆ. 

- ಮಸ್ಕ್ ಮೆಲನ್ ತ್ವಚೆಯ ಕಾಂತಿ ಹಾಗೂ ಬಣ್ಣವನ್ನು ವೃದ್ಧಿಸುತ್ತದೆ. ಇದರ ತಿರುಳು ಅಥವಾ ಜ್ಯೂಸ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ. ಕಲೆರಹಿತ ಕಾಂತಿಯುಕ್ತ ತ್ವಚೆ ಪಡೆಯಿರಿ.