ಸುಲಭವಾಗಿ ಸಿಗೋ ಈ ಹಣ್ಣು ಹಲವು ರೋಗಕ್ಕೆ ಮಹಾ ಮದ್ದು...!
ಗೋಡಂಬಿ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಬಡವರ ಕೈಗೆ ಎಟಕುವುದು ಕಷ್ಟ ಎನ್ನೋದು ಬಿಟ್ಟರೆ ಇದರ ರುಚಿಗೆ ಮಾರು ಹೋಗದವರು ಯಾರು ಹೇಳಿ? ಇಂಥ ಗೋಡಂಬಿಯ ಗೇರು ಹಣ್ಣಿನ ಮಹತ್ವ ಬಗ್ಗೆ ನಿಮಗೇನಾದರೂ ಗೊತ್ತಾ?
ಹಳ್ಳಿಗಳಲ್ಲಿ ಗೇರು ಹಣ್ಣು ಸಿಗುವುದು ಹೆಚ್ಚು. ಕೊಳ್ಳಲು ಸಿಗುವುದೂ ಕಡಿಮೆಯೇ. ಆದರೂ ಮಕ್ಕಳಿಂದ ಹಿಡಿದು ಎಲ್ಲರೂ ಇದನ್ನ ಇಷ್ಟ ಪಡುತ್ತಾರೆ. ಹಳ್ಳಿಗರು ಇದನ್ನು ತಿನ್ನೋದು ಕಾಮನ್. ಇದರಿಂದ ಎಷ್ಟೆಲ್ಲಾ ಉಪಯೋಗ ಇವೆ ಎಂಬುವುದು ಮಾತ್ರ ಎಲ್ಲರಿಗೂ ಗೊತ್ತಿರುವುದಿಲ್ಲ. ಅಷ್ಟಕ್ಕೂ ಎನೆಲ್ಲಾ ಬೆನಫಿಟ್ಸ್ ಇವೆ ಈ ಹಣ್ಣಿನಿಂದ?
- ಗೇರು ಹಣ್ಣಿನಲ್ಲಿರುವ ವಿಟಮಿನ್ ಬಿ 1, ಬಿ 3, ಕ್ಯಾಲ್ಷಿಯಂ, ಬೀಟಾ ಕ್ಯಾರೋಟಿನ್ ಅರೋಗ್ಯವನ್ನು ವರ್ಧಿಸುತ್ತದೆ. ಆದುದರಿಂದ ವಾರದಲ್ಲಿ ಮೂರು ಬಾರಿ ಈ ಹಣ್ಣಿನ ಜ್ಯೂಸ್ ಸೇವಿಸಿ.
- ಪ್ರತಿದಿನ ಗೇರು ಹಣ್ಣು ಸೇವಿಸಿದರೆ ಹೊಟ್ಟೆಯಲ್ಲಿರುವ ಜಂತು ಹುಳು ಸಾಯುತ್ತದೆ. ಇದು ಹೊಟ್ಟೆ ನೋವಿಗೆ ಮದ್ದು.
ನನ್ನ ನಂಬಿ, ಕೆಟ್ಟ ಫ್ಯಾಟ್ ಅಲ್ಲ ಗೋಡಂಬಿ!
- ದೇಹಕ್ಕೆ ಅಗತ್ಯವಾಗಿ ಬೇಕಾಗುವಂತಹ ಕಬ್ಬಿಣಾಂಶ ಈ ಹಣ್ಣಿನಲ್ಲಿದೆ. ಇದರಿಂದ ರಕ್ತ ಹೀನತೆ ಸಮಸ್ಯೆಯೂ ಕಾಡುವುದಿಲ್ಲ. ಕೆಂಪು ರಕ್ತ ಕಣ ಹೆಚ್ಚುತ್ತದೆ.
- ಗೇರುಹಣ್ಣಿನಲ್ಲಿ ಕಿತ್ತಳೆ ಹಣ್ಣಿನ ಜ್ಯೂಸ್‌ನಿಂದ ಸಿಗುವ ಸಿ ವಿಟಮಿನ್‌ನ ಶೇ.5ದಷ್ಟು ವಿಟಮಿನ್ ಸಿ ಸಿಗುತ್ತದೆ.
-ಜೀರ್ಣಕ್ರಿಯೆ ಉತ್ತಮಗೊಳಿಸಿ, ಹೊಟ್ಟೆಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ದೂರ ಮಾಡಲು ಈ ಹಣ್ಣು ಉತ್ತಮ.
- ಈ ಹಣ್ಣಿನಲ್ಲಿ ಗಾಯಗಳನ್ನು ಅತಿ ಬೇಗನೇ ವಾಸಿ ಮಾಡುವ ಗುಣವಿದೆ.
- ಗೇರು ಹಣ್ಣಿನಲ್ಲಿ ಆ್ಯಂಟಿ ಆಕ್ಸಿಂಡೆಂಟ್ಸ್ ಅಧಿಕವಾಗಿದ್ದು ಇದು ಕ್ಯಾನ್ಸರ್ ಬಾಧಿತವಾಗದಂತೆ ತಡೆಯಬಲ್ಲದು.
ಡ್ರೈ ಫ್ರೂಟ್ಸ್ ಮಾಡುತ್ತೆ ಮಕ್ಕಳನ್ನು ಸ್ಟ್ರಾಂಗ್....
- ಬಾಯಿ ಹುಣ್ಣು, ಹಲ್ಲಿನ ಹುಳುಕು ಇದ್ದರೆ ಈ ಹಣ್ಣನ್ನು ಸೇವಿಸಿ. ಇದರಲ್ಲಿರುವ ಅನಾಕಾರ್ಡಿಕ್ ಆಮ್ಲ ಹಲ್ಲಿನ ಸಮಸ್ಯೆ ನಿವಾರಿಸುತ್ತದೆ.
- ವಯಸ್ಸಾಗುತ್ತಿದ್ದಂತೆ ಮೂಳೆ ಸವೆತ ಕಂಡು ಬರುವುದು ಸಾಮಾನ್ಯ. ಇಂತಹ ಸಮಸ್ಯೆ ಕಂಡು ಬಂದರೆ ಈ ಹಣ್ಣನ್ನು ಯಥೇಚ್ಛವಾಗಿ ಸೇವಿಸಿ. ಹಣ್ಣಿನಲ್ಲಿರುವ ಕ್ಯಾಲ್ಸಿಯಂ, ಮೆಗ್ನೇಷಿಯಂ ಮತ್ತು ಪೊಟ್ಯಾಶಿಯಂ ಮೂಳೆ ಸವೆತವನ್ನು ನಿಯಂತ್ರಿಸುತ್ತದೆ.
- ವೈನಿಗೂ ಈ ಹಣ್ಣು ಬಳಸುತ್ತಾರೆ. ಇದು ಆರೋಗ್ಯಕ್ಕೆ ಉತ್ತಮ.