ಚಾಳೀಸ್ - 40ಕ್ಕೆ ಕನ್ನಡಕ ಬರುತ್ತದೆ ಎಂಬುದು ಸಾಮಾನ್ಯ ಆಡು ಮಾತು. ನಲವತ್ತೆಂದರೆ ಮಧ್ಯವಯಸ್ಕತೆ ಶುರು. ಯೌವನ ಗತಕಾಲ ವೈಭವ. ಈ ಸಂದರ್ಭದಲ್ಲಿ ಮೆನೋಪಾಸ್ ನಿಮ್ಮ ವಯಸ್ಸು ಏರುತ್ತಿರುವುದನ್ನು ನೆನಪಿಸುತ್ತದೆ. ದೇಹ ಬೇರೆ ಬೇರೆ ರೀತಿಯಲ್ಲಿ ಇದನ್ನು ಸಾರಬಯಸುತ್ತದೆ. ತಕ್ಷಣ ಎಚ್ಚೆತ್ತು ನಿಮ್ಮ ಆರೋಗ್ಯಕ್ಕಾಗಿ ಹೆಚ್ಚಿನ ಕಾಳಜಿ ವಹಿಸಲು ಎಚ್ಚರಿಸುತ್ತದೆ. ಹಾಗಿದ್ದರೆ ಮಾತ್ರ ಮೊಮ್ಮಕ್ಕಳ ಪಾಲಿಗೆ ಪ್ರೀತಿಯ ಅಜ್ಜ ಅಜ್ಜಿಯಾಗಿ ಕೆಲ ವರ್ಷಗಳನ್ನು ಕಳೆದು ನೆಮ್ಮದಿ ಪಡಬಹುದು. 
ವಯಸ್ಸನ್ನು ಒಪ್ಪಿಕೊಳ್ಳಿ

40 ವರ್ಷಕ್ಕೆ ಕಾಲಿಟ್ಟ ಮೇಲೆ ಆರೋಗ್ಯದಲ್ಲಿ ಕೆಲ ಬದಲಾವಣೆಗಳಾಗಬಹುದು. ನಿದ್ರಿಸಲು ಸಮಸ್ಯೆಗಳು ಎದುರಾಗಬಹುದು, ಇಮೇಲ್ ಟೈಪ್ ಮಾಡುವಾಗ ಅಕ್ಷರ ಸರಿ ಕಾಣದೆ ಫಾಂಟ್ ಸೈಜ್ ಹೆಚ್ಚಿಸುವ ಅಗತ್ಯ ಬೀಳಬಹುದು- ಇದಕ್ಕೆಲ್ಲ ದುಃಖಿಸುವ ಅಥವಾ ಕಿರಿಕಿರಿ ಮಾಡಿಕೊಳ್ಳುವ ಬದಲು ಬದುಕಿನ ಬದಲಾವಣೆಗಳನ್ನು ಒಪ್ಪಿಕೊಳ್ಳಿ. ಮುಂದಿನ ಜೀವನ ಸುಗಮವಾಗಿರುವಂತೆ ಜೀವನಶೈಲಿ ಸ್ವಲ್ಪ ಬದಲಿಸಿ. ವಯಸ್ಸಿಗೆ ಅಗತ್ಯವಾದ ವಿಟಮಿನ್‌ಗಳನ್ನು ತೆಗೆದುಕೊಳ್ಳಿ.

ದೇಹ ಬೆಳೆದ್ರೆ ಸಾಲಲ್ಲ, ಬುದ್ಧೀನೂ ಬೆಳೀಬೇಕು ಸ್ವಾಮಿ, ಮೆದುಳಿಗೂ ಬೇಕು ವರ್ಕೌಟ್!

ಚೆನ್ನಾಗಿ ನಿದ್ರಿಸಿ

ಇದುವರೆಗಿಗಿಂತಾ ಈಗ ದಿನಕ್ಕೆ 7ರಿಂದ 9 ಗಂಟೆಗಳ ನಿದ್ರೆ ಅಗತ್ಯ. ಉತ್ತಮ ನಿದ್ರೆಯಿಂದ ಉತ್ಪಾದಕತೆ ಹೆಚ್ಚುವುದಷ್ಟೇ ಅಲ್ಲ. ಆಹಾರಾಭ್ಯಾಸವನ್ನೂ ಸರಿಪಡಿಸುತ್ತದೆ. ನಿದ್ರಾಹೀನತಂಯು ನಮ್ಮ ಹಸಿವಿನ ಹಾರ್ಮೋನ್‌ಗಳ ಏರುಪೇರಿಗೆ ಕಾರಣವಾಗಿ ಸುಮ್ಮನೆ ಹೆಚ್ಚು ಹಸಿವಾಗುವಂತೆ ಮಾಡುತ್ತದೆ. ಹೀಗಾಗಿ, ನಿದ್ರೆ ಉತ್ತಮಗೊಳಿಸುವ ಲೈಫ್‌ಸ್ಟೈಲ್ ಅಪ್ಪಿಕೊಳ್ಳಿ. ಮಲಗುವ 3 ಗಂಟೆಗೂ ಮುನ್ನ ವರ್ಕೌಟ್ ಮುಗಿದಿರಲಿ, 1 ಗಂಟೆಗೂ ಮುನ್ನ ಎಲೆಕ್ಟ್ರಾನಿಕ್ ಡಿವೈಸ್‌ಗಳಿಂದ ದೂರ ಬನ್ನಿ. ಒತ್ತಡಕ್ಕೆ ನೂಕುವ ಸಂಗತಿಗಳಿಂದ ದೂರವಿರಿ. ಮಲಗುವಾಗ ಪುಸ್ತಕ ಓದುವುದು, ಬೆಚ್ಚಗಿನ ನೀರಿನ ಸ್ನಾನ ಕೂಡ ಉತ್ತಮ ನಿದ್ರೆಗೆ ಸಹಾಯಕ. 

ನೀರು ನೀರು ನೀರು

ವಯಸ್ಸಾದಂತೆಲ್ಲ ನೀರಿನ ಆರೋಗ್ಯ ಲಾಭಗಳು ಮತ್ತಷ್ಟು ಹೆಚ್ಚು. ನಿಮ್ಮ ಎನರ್ಜಿ ಕಾಯ್ದುಕೊಳ್ಳಲು, ಕಿಡ್ನಿಗಳು ಸರಿಯಾಗಿ ಕೆಲಸ ಮಾಡುವಂತೆ ನೋಡಿಕೊಳ್ಳಲು ನೀರು ಅಗತ್ಯ. 40ರ ನಂತರ ಮೆಟಾಬಾಲಿಸಂ ನಿಧಾನವಾಗುತ್ತದೆ. ದೇಹದ ಪ್ರತಿ ಕೆಲಸಕ್ಕೂ ನೀರು ಬೇಕು. ಹಾಗಾಗಿ, ಮೆಟಾಬಾಲಿಸಂ ಪರಿಣಾಮಕಾರಿಯಾಗಿ ಕೆಲಸ ಮಾಡಲು ಹೆಚ್ಚು ನೀರು ಕುಡಿಯುವುದು ಮುಖ್ಯ. ಜೊತೆಗೆ ನೀರು ಹೆಚ್ಚಿರುವಂತ ಸಿಟ್ರಸ್, ಬೆರೀಸ್, ಟೊಮ್ಯಾಟೋ, ಕಲ್ಲಂಗಡಿ, ಸೌತೆಕಾಯಿ ಇತ್ಯಾದಿ ಹಣ್ಣು ತರಕಾರಿಗಳ ಸೇವನೆ ಹೆಚ್ಚಿಸಿ. 

ವ್ಹೈಟ್ ಲಿಫ್ಟಿಂಗ್

ವಾರಕ್ಕೆ ಕನಿಷ್ಠ 2 ದಿನವಾದರೂ ಭಾರ ಎತ್ತುವುದರಿಂದ ಮೂಳೆ ಹಾಗೂ ಮಸಲ್ ಮಾಸ್ ನಿರ್ವಹಣೆ ಮಾಡಬಹುದು. 35 ವರ್ಷ ದಾಟುತ್ತಿದ್ದಂತೆ ಮಸಲ್ ಮಾಸ್ ಕಡಿಮೆಯಾಗುತ್ತದೆ. ಇದರಿಂದ ಮೆಟಾಬಾಲಿಸಂ ವೀಕ್ ಆಗುತ್ತದೆ.  ಹಾಗಾಗಿ ಅವನ್ನ ಸ್ಟ್ರಾಂಗಿ ಆಗಿ ಉಳಿಸಿಕೊಳ್ಳಲು ವ್ಯಾಯಾಮ ಅತ್ಯಗತ್ಯ, ಇದಕ್ಕೆ ವ್ಹೈಟ್ ಟ್ರೇನೀಂಗ್ ಉತ್ತಮ. 

ಪದೆ ಪದೇ ನೀರು ಕುಡೀಬೇಕೆನಿಸುತಿದ್ಯಾ? ನಿಮ್ಮಗಿರ ಬಹುದು ದೊಡ್ಡ ರೋಗ

ಪ್ರೋಟೀನ್ ಸೇವನೆ ಹೆಚ್ಚಿಸಿ

30ರಲ್ಲೇ ನಮ್ಮ ಲೀನ್ ಮಸಲ್ ಮಾಸ್ ಕಳೆದುಕೊಳ್ಳತೊಡಗುತ್ತೇವೆ. 40ರ ಹೊತ್ತಿಗೆ ಅದು ಮುಂದುವರೆದಿರುತ್ತದೆ. ಹಾಗಾಗಿ ಪ್ರೋಟೀನ್ ಸೇವನೆ ಹೆಚ್ಚಿಸಬೇಕು. ಮೊಟ್ಟೆಗಳು, ಚಿಕನ್, ವೆಜಿಟೇಬಲ್ ಪ್ರೋಟೀನ್ ಮುಂತಾದವನ್ನು ಸೇವಿಸಬಹುದು.  ಇದು ಲೀನ್ ಮಸಲ್ ಮಾಸ್ ಉಳಿಸಿ ಕ್ಯಾಲೋರಿ ಹೆಚ್ಚು ಬರ್ನ್ ಆಗುವಂತೆ ನೋಡಿಕೊಳ್ಳುತ್ತದೆ.  

ಎದೆಯ ಆರೋಗ್ಯ ನೋಡಿಕೊಳ್ಳಿ

ಪ್ರತಿ 8ರಲ್ಲಿ ಒಬ್ಬ ಮಹಿಳೆಗೆ ಸ್ತನ ಕ್ಯಾನ್ಸರ್ ಬರುತ್ತದೆ. ಆರಂಭದಲ್ಲೇ ಗುರುತಿಸುವುದು ಮುಖ್ಯ. 40 ವರ್ಷಕ್ಕೆ ಕಾಲಿಟ್ಟ ಮೇಲೆ ಪ್ರತಿ ವರ್ಷಕ್ಕೊಮ್ಮೆ ಮ್ಯಾಮೋಗ್ರಾಂ ಟೆಸ್ಟ್ ಮಾಡಿಸಿ. 

ಹೃದಯವನ್ನು ಪ್ರೀತಿಸಿ

ಈ ದಿನಗಳಲ್ಲಿ ಹಾರ್ಟ್ ಡಿಸೀಸ್ ಸಾಮಾನ್ಯವಾಗಿರುವುದರಿಂದ ಹೃದಯದ ಆರೋಗ್ಯ ಕಾಪಾಡಿಕೊಳ್ಳುವುದ ಮುಖ್ಯ. ಆಗಾಗ ಕೊಲೆಸ್ಟೆರಾಲ್, ಬಿಪಿ, ಶುಗರ್ ಟೆಸ್ಟ್ ಮಾಡಿಸಿ. ದೇಹ ತೂಕ ಹೆಚ್ಚಾಗದಂತೆ ನೋಡಿಕೊಳ್ಳಿ.