ತನ್ನ ಬಾಳ ಸಂಗಾತಿ ಆಯ್ಕೆಯಲ್ಲಿ ಹುಡುಗ ಹುಡುಗಿಯ ಬ್ಯೂಟಿಗೆ ಹೆಚ್ಚು ಪ್ರಾಮುಖ್ಯತೆ ಕೊಟ್ಟರೆ, ಹುಡುಗಿ ಬ್ಯುಟಿಯೊಂದಿಗೆ ಮತ್ತೇನ್ನೇನೋ ಗಮನಿಸಿರುತ್ತಾಳೆ. ತಾನು ನಿರೀಕ್ಷಿಸಿದ ಗುಣಗಳಿವೆ ಎಂದಾದಲ್ಲಿ ಮಾತ್ರ ಓಕೆ ಹೇಳುತ್ತಾಳೆ. ಅಷ್ಟಕ್ಕೂ ಮೊದಲ ನೋಟ ಅಥವಾ ಭೇಟಿಯಲ್ಲಿಯೇ ಹುಡುಗಿ ಹುಡುಗನಲ್ಲಿ ಏನನ್ನು ಕಂಡು ಕೊಂಡಿರುತ್ತಾಳೆ?

ಪ್ರೀತಿ ಕುರುಡು, ವಿಜ್ಞಾನ ಏನು ಹೇಳುತ್ತೆ?

- ಮೊದಲನೆಯದಾಗಿ ಹುಡುಗನ ವ್ಯಕ್ತಿತ್ವ ನೋಡುತ್ತಾರೆ. ಅವನು ಹ್ಯಾಂಡ್‌ಸಂ ಆಗಿರದಿದ್ದರೂ, ವ್ಯಕ್ತಿತ್ವ ಹೇಗಿದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸತ್ತಾರೆ.
- ಪುರುಷರ ಸ್ಮೈಲನ್ನೂ ಹುಡುಗಿಯರು ನೋಡುತ್ತಾರೆ. ತುಂಟ ನಗುವಿನಲ್ಲಿಯೇ ಕಳೆದು ಹೋಗುವ ಸಾಧ್ಯತೆಯೂ ಇದೆ. 
- ಎಲ್ಲ ಹುಡುಗಿಯರು ಹುಡುಗರ ಸ್ಸ್ಟ್ರಾಂಗ್ ಮೈಕಟ್ಟಿಗೆ ಫಿದಾ ಆಗುತ್ತಾರೆ ಅನ್ನೋದು ಸುಳ್ಳು. ಆಕರ್ಷಕವಾಗಿದ್ದರೆ ಸಾಕೆಂದು ಕೊಳ್ಳುತ್ತಾರೆ. 
- ಮಹಿಳೆ ಗಮನಿಸುವ ಮತ್ತೊಂದು ಅಂಶವೆಂದರೆ ಆತನ ಕಣ್ಣುಗಳು. ಪುರುಷರ ಕಣ್ಣುಗಳು ಸಾಕಷ್ಟು ವಿಷಯಗಳನ್ನು ಹೊರ ಸೂಸಬಲ್ಲದು. ಆದುದರಿಂದ  ಹುಡುಗರಿಯರು ಹುಡುಗರ ಕಣ್ಣುಗಳನ್ನೇ ನೇರವಾಗಿ ನೋಡುತ್ತಾರೆ. 
- ಹುಡುಗಿಯರಿಗೆ ಹುಡುಗರ ಡ್ರೆಸ್ ಸೆನ್ಸ್ ಇಷ್ಟವಾಗುತ್ತದೆ. ಮೊದಲಿಗೆ ಭೇಟಿಯಾದಾಗ ಅದನ್ನೂ ಗಮನಿಸುತ್ತಾರೆ. 


- ಹುಡುಗರು ಹಾಸ್ಯ ಪ್ರವೃತ್ತಿ ಹೊಂದಿದ್ದರೆ ಹುಡುಗಿಯರು ಫಿದಾ ಆಗೋದು ಗ್ಯಾರಂಟಿ. ಗಂಭೀರವಾಗಿರೋ ಹುಡಗರು ಕೆಲವರಿಗೆ ಇಷ್ಟವಾದರೂ, ನಗು ಮೊಗದ ಸುಂದರಾಂಗನಿಗೆ ಬೋಲ್ಡ್ ಆಗುತ್ತಾರೆ ಬೆಡಗಿಯರು.
- ಸಭ್ಯವಾಗಿ ನಡೆದುಕೊಳ್ಳುವ ಹಾಗೂ ಸಾಫ್ಟ್ ಸ್ಪೋಕನ್ ಹುಡುಗನೆಂದರೆ ಹುಡುಗಿಗೆ ಅಚ್ಚು ಮೆಚ್ಚು.

ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸುವುದು ಹೇಗೆ?